Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ

Wednesday, 17.01.2018, 3:05 AM       No Comments

| ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಅಹಿಂದ ಹಣೆಪಟ್ಟಿಯೊಂದಿಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ದಲಿತರಿಗೆ ರಕ್ಷಣೆಯಿಲ್ಲ! ಅಚ್ಚರಿ ಆದರೂ ಇದು ಸತ್ಯ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಹಾಗೂ ಬಲವರ್ಧನೆ ಸಮಿತಿ ಮಾಡಿರುವ ವಿಶ್ಲೇಷಣೆ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿರುವ ಆಘಾತಕಾರಿ ಸಂಗತಿಯನ್ನು ಅನಾವರಣಗೊಳಿಸಿದೆ.

ಒಂದೆಡೆ ದಲಿತರ ಮೀಸಲಾತಿ ವರ್ಗೀಕರಣಕ್ಕಾಗಿ ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಸರ್ಕಾರಗಳ ನಿರ್ಲಕ್ಷ್ಯಂದ ದೌರ್ಜನ್ಯ ಹೆಚ್ಚುತ್ತಿರುವುದು ಆ ವರ್ಗದ ಜನರಲ್ಲಿ ಆತಂಕ ಮೂಡಿಸಿದೆ. ಪರಿಶಿಷ್ಟರ ಉಪ ಯೋಜನೆ ತಂದು ಅನೇಕ ಭಾಗ್ಯಗಳನ್ನು ಕರುಣಿಸಿರುವ ಸರ್ಕಾರ, ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಹಿಂದುಳಿದಿದೆ. ‘ನಮ್ಮದು ಹಿಂದುಳಿದ, ದಲಿತಪರ ಸರ್ಕಾರ’ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಆಡಳಿತಾವಧಿಯಲ್ಲೇ ಅತಿ ಹೆಚ್ಚು ಪ್ರಕರಣ ನಡೆದಿರುವುದು ವಿಪರ್ಯಾಸ.

ವಿಲೇವಾರಿ ಇಳಿಮುಖ: ಮತ್ತೊಂದೆಡೆ, ದೌರ್ಜನ್ಯ ಪ್ರಕರಣಗಳ ವಿಲೇವಾರಿ ಇಳಿಮುಖವಾಗಿದೆ. ನ್ಯಾಯಾಲಯದಲ್ಲಿ ಬಿ ವರದಿ ಸಲ್ಲಿಸಿ ಕೈ ತೊಳೆದುಕೊಳ್ಳುವುದು ಸಹ ಹೆಚ್ಚಾಗುತ್ತಿದೆ. ಇದರಿಂದ ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. 2015ರಲ್ಲಿ ಶೇ.21.22 ಇದ್ದ ವಿಲೇವಾರಿ ಪ್ರಮಾಣ, 2016ರಲ್ಲಿ ಶೇ.20.56ಕ್ಕೆ ಇಳಿದಿದೆ.

ಅಪರಾಧಿಗಳಿಗೆ ಆಗುತ್ತಿರುವ ಶಿಕ್ಷೆಯ ಪ್ರಮಾಣ ಸಹ ಕಡಿಮೆಯಾಗುತ್ತ ಸಾಗುತ್ತಿರುವುದು ಆತಂಕದ ವಿಷಯವೇ ಆಗಿದೆ. 2015ರಲ್ಲಿ ಶೇ. 5 ಪ್ರಕರಣಗಳಲ್ಲಷ್ಟೆ ಶಿಕ್ಷೆಯಾಗಿದ್ದರೆ, 2016ರಲ್ಲಿ ಶೇ. 4.83ಕ್ಕೆ ಇಳಿದಿದೆ. ಬೆಂಗಳೂರು ನಗರ, ಗ್ರಾಮಾಂತರ, ಬಳ್ಳಾರಿ, ದಕ್ಷಿಣ ಕನ್ನಡ, ಗದಗ, ರಾಯಚೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶಿಕ್ಷೆಗೆ ಒಳಪಡಿಸುತ್ತಿರುವ ಪ್ರಮಾಣ ಶೂನ್ಯ ಇರುವುದು ಅನುಮಾನಗಳಿಗೂ ಕಾರಣವಾಗಿದೆ.

ಜಾರಿಗೆ ಬಾರದ ಶಿಫಾರಸು: ಹಿಂದೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಕಾನೂನು ಹೋರಾಟದ ಸಲುವಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ನೇಮಕ ಮಾಡಬೇಕೆಂಬ ನಿರ್ಧಾರವಾಗಿತ್ತು. ಆದರೆ ಆ ನಿರ್ಣಯ ಜಾರಿಗೆ ಬಂದಿಲ್ಲ. ದೌರ್ಜನ್ಯ ಹೆಚ್ಚಿರುವ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಯಾಗಿಲ್ಲ.

ಶಿಫಾರಸುಗಳೇನು?

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿ ಹಲವು ಶಿಫಾರಸು ಮಾಡಿದೆ.

ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಅಸ್ಪೃಶ್ಯತೆ ಬಗ್ಗೆ ಸಮೀಕ್ಷೆ, ಅಧಿಕಾರಿಗಳಿಗೆ ತರಬೇತಿ, ಜಾಗೃತ ಹಾಗೂ ಉನ್ನತ ಸಮಿತಿ ಸಭೆಗಳನ್ನು ಸರಿಯಾಗಿ ನಡೆಸಬೇಕು, ಪೊಲೀಸ್ ಠಾಣೆಗಳಲ್ಲಿ ರಾಜೀ ಮಾಡಿಸುವ ಅಧಿಕಾರಿಗಳ ಅಮಾನತು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್​ಗಳ ನೇಮಕದಲ್ಲಿ ವಿಶೇಷ ಗಮನ, ಸಭೆ ನಡೆಸದ ಜಿಲ್ಲಾಧಿಕಾರಿಗಳ ಅಮಾನತು- ಇವು ಪ್ರಮುಖ ಶಿಫಾರಸುಗಳು.

ವಿಶ್ಲೇಷಣೆ ಏನು?

ದಲಿತರ ಮೇಲಿನ ದೌರ್ಜನ್ಯ ತಡೆಗಾಗಿ ಅಸ್ತಿತ್ವಕ್ಕೆ ಬಂದಿರುವ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಗಳು ಸರಿಯಾಗಿ ಸಭೆ ನಡೆಸುತ್ತಿಲ್ಲ, ಪೊಲೀಸ್ ಅಧಿಕಾರಿಗಳು ರಾಜಿ ಸಂಧಾನ ನಡೆಸಿ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ. ಇದರಿಂದಾಗಿ ಪ್ರಕರಣಗಳು ಹೆಚ್ಚುತ್ತಿವೆ ಎಂಬುದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಹಾಗೂ ಬಲವರ್ಧನೆ ಸಮಿತಿಯ ವಿಶ್ಲೇಷಣೆಯಲ್ಲಿರುವ ಅಂಶ.

 

ದೌರ್ಜನ್ಯ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರನ್ನು ಸದ್ಯದಲ್ಲಿಯೇ ನೇಮಕ ಮಾಡಲಾಗುವುದು. ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಸಭೆ ಕರೆಯುವ ಬಗ್ಗೆ ಚರ್ಚೆ ನಡೆಸಲಾಗುವುದು.

| ಎಚ್. ಆಂಜನೇಯ, ಸಮಾಜ ಕಲ್ಯಾಣ ಸಚಿವ

ಕೊಲೆ, ಅತ್ಯಾಚಾರ

ರಾಜ್ಯದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಲೆಕ್ಕ ಹಾಕಿದಾಗ, ಸರಾಸರಿ ಎರಡು ದಿನಕ್ಕೊಬ್ಬ ದಲಿತ ಮಹಿಳೆ ಅತ್ಯಾಚಾರಕ್ಕೊಳ ಗಾಗುತ್ತಿದ್ದಾಳೆ. 2016ರಲ್ಲಿ 164 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 2017ರಲ್ಲಿ ಈ ಸಂಖ್ಯೆ 200ರ ಹತ್ತಿರವಿದೆ. ಮೂರು ದಿನಕ್ಕೊಬ್ಬ ದಲಿತನ ಹತ್ಯೆ ನಡೆಯುತ್ತಿದ್ದು, 2016ರಲ್ಲಿ 78, 2017ರಲ್ಲಿ ಅಂದಾಜು 80 ದಲಿತರ ಹತ್ಯೆ ನಡೆದಿದೆ. ಅತ್ಯಾಚಾರ ಪ್ರಕರಣಗಳು ಶೇ.13, ಕೊಲೆ ಪ್ರಕರಣಗಳು ಶೇ.42 ಹೆಚ್ಚಾಗಿದೆ.

 

ಸರ್ಕಾರ ದಲಿತರ ಮೇಲಿನ ದೌರ್ಜನ್ಯ ತಡೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಿಕ್ಷೆಯ ಪ್ರಮಾಣ ಕಡಿಮೆ ಇರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ತಪ್ಪು ತಿದ್ದಿಕೊಳ್ಳದಿದ್ದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗುವುದು.

| ಯಶೋದಾ ಪಿ. , ಸಂಚಾಲಕರು ಪರಿಶಿಷ್ಟರ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿ

ಸಭೆ ನಡೆಸದ ಮುಖ್ಯಮಂತ್ರಿ

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಜಾಗೃತ ಸಮಿತಿ ಸಭೆಗಳನ್ನು ನಡೆಸದೇ ನಿರ್ಲಕ್ಷ್ಯ ಮಾಡಿದ್ದರೆ, ಇತ್ತ ಮುಖ್ಯಮಂತ್ರಿ ಅಧ್ಯಕ್ಷತೆಯ ರಾಜ್ಯ ಮಟ್ಟದ ಉನ್ನತ ಸಮಿತಿ ಸಹ ಕಳೆದ ಮೂರು ವರ್ಷಗಳಿಂದ ಸಭೆ ನಡೆಸುವಲ್ಲಿ ಉದಾಸೀನ ತೋರಿಸಿದೆ. ಸಮಿತಿ ವರ್ಷಕ್ಕೆರಡು ಸಭೆ ನಡೆಸಿ ಮೇಲ್ವಿಚಾರಣೆ ನಡೆಸಬೇಕೆಂದಿದ್ದರೂ, ಮೂರು ವರ್ಷಗಳಲ್ಲಿ ವರ್ಷಕ್ಕೆ ಕೇವಲ ಒಂದು ಸಭೆಯನ್ನಷ್ಟೇ ನಡೆಸುತ್ತಿದೆ. ಆ ಸಭೆಗಳಲ್ಲಿ ಕೂಡ ದೌರ್ಜನ್ಯಗಳನ್ನು ನಿಯಂತ್ರಿಸುವ ಕುರಿತ ಗಂಭೀರ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿಲ್ಲ ಎಂಬ ದೂರುಗಳಿವೆ.

15 ಜಿಲ್ಲೆಗಳಲ್ಲಿ ಅಧಿಕ

ಸರ್ಕಾರವೇ ಹೇಳುವ ಪ್ರಕಾರ ರಾಜ್ಯದ 30 ಜಿಲ್ಲೆಗಳ ಪೈಕಿ 15 ಜಿಲ್ಲೆಗಳಲ್ಲಿ ದಲಿತರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ. ಅದರಲ್ಲಿ ಮುಖ್ಯಮಂತ್ರಿ ತವರು ಮೈಸೂರು, ಗೃಹ ಸಚಿವರು ಪ್ರತಿನಿಧಿಸುವ ಬೆಂಗಳೂರು ಹಾಗೂ ಸಮಾಜ ಕಲ್ಯಾಣ ಸಚಿವರ ಚಿತ್ರದುರ್ಗ ಜಿಲ್ಲೆಗಳು ಸೇರಿರುವುದು ವಿಶೇಷ. ನಂತರದ ಸಾಲಿನಲ್ಲಿ ಧಾರವಾಡ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಶಿವಮೊಗ್ಗ, ಬಳ್ಳಾರಿ, ಕೋಲಾರ, ತುಮಕೂರು, ಮಂಡ್ಯ, ಹಾಸನ ಹಾಗೂ ಬೆಳಗಾವಿ ಜಿಲ್ಲೆಗಳಿವೆ.

Leave a Reply

Your email address will not be published. Required fields are marked *

Back To Top