ಮಾಧ್ಯಮಗಳು ಇಲ್ಲ ಅಂದಿದ್ರೆ… ಕ್ರೀಡಾಕೂಟದ ವೇದಿಕೆಯಲ್ಲೇ ಮಾರಾಮಾರಿ! ಸಿಡಿದೆದ್ದ ವಿದ್ಯಾರ್ಥಿಗಳು

blank

ಕೊಚ್ಚಿ: ಕೇರಳ ರಾಜ್ಯ ಶಾಲಾ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅಂಕ ನೀಡುವ ವಿಚಾರದಲ್ಲಿ ಲೋಪವಾಗಿದೆ ಎಂಬ ವಿವಾದ ಭುಗಿಲೆದ್ದಿದ್ದು, ಆರಂಭದಲ್ಲಿ ಶುರುವಾದ ಮಾತಿನ ಸಮರ, ನಂತರದಲ್ಲಿ ಕೈ-ಕೈ ಮೀಲಾಯಿಸುವ ಹಂತಕ್ಕೆ ತಲುಪಿ, ಹಿಂಸಾತ್ಮಕ ಘರ್ಷಣೆಗೆ ತಿರುಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವಿನ ವಾಗ್ವಾದ ವಿಕೋಪಕ್ಕೆ ಹೋದ ಹಿನ್ನಲೆ ಗುಂಪು ಘರ್ಷಣೆ ಉಂಟಾಗಿ, ತಳ್ಳಾಟ ಸಂಭವಿಸಿದೆ.

ಇದನ್ನೂ ಓದಿ: ಆರ್‌ಐ ಕಚೇರಿ ಮೇಜಿನ ಗಾಜು ಪುಡಿ – ಹಕ್ಕುಪತ್ರ ತಕರಾರು ಹಿನ್ನೆಲೆಯಲ್ಲಿ ಗುದ್ದಿದ ಬಿಜೆಪಿ ಮುಖಂಡ

ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಮತ್ತು ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗದ್ದಲದ ಹಿನ್ನೆಲೆಯಲ್ಲಿ, ಪೊಲೀಸರು ತಕ್ಷಣವೇ ಸಚಿವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು, ಅಲ್ಲಿಂದ ಅವರ ನಿವಾಸಕ್ಕೆ ಕಳಿಸಿದ್ದಾರೆ. ಅಧಿಕೃತ ಅಂಕಪಟ್ಟಿಯಲ್ಲಿ 80 ಅಂಕಗಳೊಂದಿಗೆ ಕಡಕಸ್ಸೆರಿ ಐಡಿಯಲ್ ಇಎಚ್‌ಎಸ್‌ಎಸ್ ಅಗ್ರಸ್ಥಾನದಲ್ಲಿದ್ದರೆ, ನವಮುಕುಂದ ಎಚ್‌ಎಸ್‌ಎಸ್ ತಿರುನ್ನವಾಯ (44 ಅಂಕ) ಮತ್ತು ಮಾರ್ ಬೇಸಿಲ್ ಹೈಸ್ಕೂಲ್ ಕೋತಮಂಗಲಂ (43 ಅಂಕ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದೆ ಎಂದು ತೋರಿಸಿದ ಕೆಲವೇ ಕ್ಷಣದಲ್ಲಿ ಈ ಸಂಘರ್ಷ ಭುಗಿಲೆದ್ದಿದೆ.

ಎರಡನೇ ಸ್ಥಾನವನ್ನು ಜಿ.ವಿ.ರಾಜ ಕ್ರೀಡಾ ಶಾಲೆಗೆ ನೀಡಿರುವುದು ವಿವಾದಾಸ್ಪದವಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಪ್ರತಿಭಟನೆ ಜೋರಾಗಿದೆ. ವಿದ್ಯಾರ್ಥಿಗಳು ಇಲ್ಲಿ ಮೋಸವಾಗಿದೆ. ಅಂಕ ನೀಡುವವರು ದ್ರೋಹ ಬಗೆದಿದ್ದಾರೆ. ಇದಕ್ಕೆ ನಮಗೆ ಉತ್ತರ ಬೇಕು. ಅಲ್ಲಿಯವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ ಎಂದು ಗುಡುಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ಪರದಾಡಿದ ಪೊಲೀಸರು ಏಕಾಏಕಿ ಲಾಠಿ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಗೆ ನ್ಯಾಯ ಒದಗಿಸಲು ಆಗ್ರಹಿಸಿ ಮನವಿ

ಪೊಲೀಸರ ಲಾಠಿ ಪ್ರಹಾರಕ್ಕೆ ಕಿಡಿಕಾರದ ಪ್ರತಿಭಟನಾಕಾರರು, ‘ಮಾಧ್ಯಮ ಇಲ್ಲದಿದ್ದರೆ ತೋರಿಸುತ್ತಿದ್ದೆವು’ ಎಂದು ಅವರು ಹಾಕಿದ ಬೆದರಿಕೆ ಮಾತುಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಓರ್ವ ವಿದ್ಯಾರ್ಥಿ ಹೇಳಿದ್ದಾರೆ. ಘಟನೆ ಬಗ್ಗೆ ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, “ಬಿಸಿಲು-ಮಳೆ ಎಂದು ನೋಡದೆ, ಕಳೆದ ಒಂದೂವರೆ ವರ್ಷದಿಂದ ತರಬೇತಿ ಪಡೆದಿದ್ದೇವೆ. ನಮಗೆ ಸಿಗಬೇಕಾದದ್ದನ್ನು ಪಡೆದ ನಂತರವೇ ನಾವು ಇಲ್ಲಿಂದ ಹೊರಡುತ್ತೇವೆ. ಇಲ್ಲಿ ನಾವು ಯಾರ ಬಳಿಯೂ ಭಿಕ್ಷೆ ಬೇಡ್ತಿಲ್ಲ, ನಾವು ಗಳಿಸಿದ್ದನ್ನು ಕೇಳ್ತಿದ್ದೇವೆ ಅಷ್ಟೇ. ಅಷ್ಟಕ್ಕೂ ಅವರು ನಮ್ಮ ಕೋಚ್ ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಜತೆಗೆ ಬೆದರಿಕೆ ಕೂಡ ಹಾಕಿದ್ದಾರೆ” ಎಂದು ಆರೋಪಿಸಿದರು,(ಏಜೆನ್ಸೀಸ್).

ಆಧಾರ್​ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ​! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ

 

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…