ವಿನೇಶ್​ ಪೋಗಟ್​ ಅನರ್ಹ; ನನ್ನ ಪ್ರಕಾರ ಆಕೆಯದ್ದೆ ತಪ್ಪು ಎಂದ ಸೈನಾ ನೆಹ್ವಾಲ್​

ಹೈದರಾಬಾದ್: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಭಾರತದ ಕುಸ್ತಿಪಟು ವಿನೇಶ್​ ಪೋಗಟ್​ ಅನರ್ಹಗೊಂಡಿದ್ದರು. ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ವಿನೇಶ್ ಅವರು ಫೈನಲ್​ ಪ್ರವೇಶಿಸಿದ್ದರು. ಆದರೆ, ಫೈನಲ್​ಗೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದರಿಂದ ವಿನೇಶ್​ ಅವರನ್ನು ಅನರ್ಹಗೊಳಿಸಲಾಗಿದೆ. ಒಂದು ವೇಳೆ ಅರ್ಹತೆ ಪಡೆದಿದ್ದರೆ ನಿನ್ನೆ (ಆಗಸ್ಟ್​ 07) ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್ ವಿರುದ್ಧ ಆಡಬೇಕಿತ್ತು. ಆದರೆ, ಅನರ್ಹಗೊಂಡಿದ್ದರಿಂದ ಪದಕದ ಆಸೆ ಅಂತ್ಯಗೊಂಡಿತು. ಈ ಕುರಿತು ಮಾತನಾಡಿರುವ ಬ್ಯಾಡ್ಮಿಂಟನ್​ … Continue reading ವಿನೇಶ್​ ಪೋಗಟ್​ ಅನರ್ಹ; ನನ್ನ ಪ್ರಕಾರ ಆಕೆಯದ್ದೆ ತಪ್ಪು ಎಂದ ಸೈನಾ ನೆಹ್ವಾಲ್​