ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಗೆದ್ದ ವಿನೇಶ್ ಪೋಗಟ್

ನೂರ್-ಸುಲ್ತಾನ್(ಕಜಾಕ್​ಸ್ತಾನ): ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನ 53 ಕೆ.ಜಿ. ಫ್ರೀಸ್ಟೈಲ್​ ವಿಭಾಗದಲ್ಲಿ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್​ ಚಾಂಪಿಯನ್ ವಿನೇಶ್ ಪೋಗಟ್ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ.

ಬುಧವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ವಿನೇಶ್​ ಪೋಗಟ್​ ಗ್ರೀಸ್​ನ ಕುಸ್ತಿಪಟು ಮರಿಯಾ ಪ್ರಿವೊಲಾರ್ಕಿ ಅವರನ್ನು 4-1 ಅಂತರದಿಂದ ಸೋಲಿಸಿದರು. ಈ ಮೂಲಕ ವಿಶ್ವಚಾಂಪಿಯನ್​ಷಿಪ್​ನಲ್ಲಿ ಪದಕ ಜಯಿಸಿದ ನಾಲ್ಕನೇ ಮಹಿಳಾ ಕುಸ್ತಿಪಟು ಎಂಬ ಗೌರವಕ್ಕೆ ಪಾತ್ರರಾದರು.

ವಿನೇಶ್ ಪೋಗಟ್ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಎರಡನೇ ಸುತ್ತಿನಲ್ಲೇ ಎಡವಿದ್ದರು. ಆದರೆ ಅವರನ್ನು ಸೋಲಿಸಿದ ಹಾಲಿ ಚಾಂಪಿಯನ್ ಜಪಾನ್​ನ ಮಾಯು ಮುಕೈಡಾ ಫೈನಲ್​ಗೇರಿದ್ದರಿಂದ ರಿಪಷಾಷ್​ನಲ್ಲಿ ವಿನೇಶ್ ಕಂಚಿನ ಪದಕಕ್ಕಾಗಿ ಹೋರಾಡುವ ಅವಕಾಶ ಪಡೆದಿದ್ದರು. (ಏಜೆನ್ಸೀಸ್​)

ವಿನೇಶ್ ಕಂಚಿನ ಪದಕಕ್ಕೆ ಹೋರಾಟ

Leave a Reply

Your email address will not be published. Required fields are marked *