More

  ಇದು ಹೊಸ ಗ್ರಾಮಾಯಣ: ಅದೇ ನಾಯಕ, ಅದೇ ನಿರ್ದೇಶಕ – ಹೊಸ ಕಥೆ, ಹೊಸ ನಿರ್ಮಾಪಕರು

  ಬೆಂಗಳೂರು: ವಿನಯ್ ರಾಜಕುಮಾರ್ ನಾಯಕನಾಗಿರುವ ದೇವನೂರು ಚಂದ್ರು ನಿರ್ದೇಶಿಸುತ್ತಿರುವ ಚಿತ್ರ ‘ಗ್ರಾಮಾಯಣ’. 2018ರಲ್ಲಿಯೇ ಸೆಟ್ಟೇರಿದ್ದ ಸಿನಿಮಾ ಕರೊನಾದಿಂದಾಗಿ ಸ್ಥಗಿತಗೊಂಡಿತ್ತು. ಅದರ ನಡುವೆಯೇ ಚಿತ್ರದ ನಿರ್ಮಾಪಕ ಎನ್‌ಎಲ್‌ಎನ್ ಮೂರ್ತಿ 2020ರ ಜುಲೈ ತಿಂಗಳಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಳಿಕ ಸಿನಿಮಾ ತೆರೆಗೆ ಬರುವುದೇ ಅನುಮಾನ ಎಂಬಂತಾಗಿತ್ತು. ಇದೀಗ ಮೂರು ವರ್ಷಗಳ ಬಳಿಕ ‘ಗ್ರಾಮಾಯಣ’ ಚಿತ್ರಕ್ಕೆ ಮರುಜೀವ ದೊರೆತಿದೆ.

  ಸದ್ಯ ‘ಯುಐ’ ಚಿತ್ರವನ್ನು ನಿರ್ಮಿಸುತ್ತಿರುವ ಮನೋಹರ್ ನಾಯ್ಡು ಹಾಗೂ ಕೆ.ಪಿ. ಶ್ರೀಕಾಂತ್ ಇಬ್ಬರೂ ಜತೆ ಸೇರಿ, ಹಳೆಯ ‘ಗ್ರಾಮಾಯಣ’ಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ‘‘ಯುಐ’ ಬಳಿಕ ವೀನಸ್ ಎಂಟರ್‌ಟೇನರ್ಸ್ ಮತ್ತು ಲಹರಿ ಫಿಲಂಸ್ ನಿರ್ಮಿಸಲಿರುವ ಎರಡನೇ ಚಿತ್ರ ‘ಗ್ರಾಮಾಯಣ’ ಆಗಲಿದೆ. ಹಳೆಯ ಸಿನಿಮಾದ ಯಾವುದೇ ದೃಶ್ಯಾವಳಿಗಳನ್ನು ಬಳಸದೇ, ಹೊಸ ಕಥೆ ಮಾಡಿಕೊಂಡು ಮತ್ತೆ ಹೊಸದಾಗಿ ಚಿತ್ರೀಕರಿಸಲಿದ್ದೇವೆ. ನಿರ್ದೇಶಕ ದೇವನೂರು ಚಂದ್ರು ಅವರ ಕಂಟೆಂಟ್ ಇಷ್ಟವಾದ ಕಾರಣ ಈ ಸಿನಿಮಾ ನಿರ್ಮಿಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

  ಈ ಹೊಸ ‘ಗ್ರಾಮಾಯಣ’ ಚಿತ್ರದ ಮುಹೂರ್ತ ಇದೇ ಗುರುವಾರ (ಜೂ. 8) ನೆರವೇರಲಿದೆ. ಹೊಸ ‘ಗ್ರಾಮಾಯಣ’ವನ್ನು ದೇವನೂರು ಚಂದ್ರು ನಿರ್ದೇಶಿಸಲಿದ್ದು, ನಾಯಕನಾಗಿ ವಿನಯ್ ರಾಜಕುಮಾರ್ ಮುಂದುವರಿಯಲಿದ್ದಾರೆ. ಆದರೆ ಉಳಿದ ತಾರಾಗಣ ಹಾಗೂ ತಂತ್ರಜ್ಞರ ಕುರಿತು ಇನ್ನಷ್ಟೇ ಮಾಹಿತಿ ನೀಡಬೇಕಿದೆ.

  ಕೆ.ಪಿ. ಶ್ರೀಕಾಂತ್, ನಿರ್ಮಾಪಕ:
  ‘ಯುಐ’ ಚಿತ್ರೀಕರಣ ಶೇಕಡಾ 90ರಷ್ಟು ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಕಂಪ್ಲೀಟ್ ಆಗಲಿದೆ. ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಲಿವೆ. ದೇವನೂರು ಚಂದ್ರು ಕಂಟೆಂಟ್ ತುಂಬ ಚೆನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಎರಡನೇ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದೇವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts