25.9 C
Bengaluru
Wednesday, January 22, 2020

ಭಗವದ್ಗೀತೆ ಪಠಣದಿಂದ ಅಜ್ಞಾನ ದೂರ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಚಿಕ್ಕಬಳ್ಳಾಪುರ: ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಹಾತ್ಮಗಾಂಧಿ ಸೇವಾಟ್ರಸ್ಟ್ ಸಂಸ್ಥಾಪಕ ಶ್ರೀ ವಿನಯ್ ಗುರೂಜಿ ಅಭಿಪ್ರಾಯಪಟ್ಟರು.
ತಾಲೂಕಿನ ಹೊಸಹುಡ್ಯದ ವಿಷ್ಣುಪ್ರಿಯ ಶಾಲೆಯಲ್ಲಿ ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ 22 ನೇ ಅಂತರಶಾಲಾ ಭಗವದ್ಗೀತೆ ಕಂಠಪಾಠ, ಅರ್ಥ ವಿವರಣೆ ಹಾಗೂ ಶ್ರೀ ಕೃಷ್ಣಾರ್ಜುನರ ವೇಷಸ್ಪರ್ಧೆ ಸಮಾರೋಪ ಉದ್ಘಾಟಿಸಿ ಮಾತನಾಡಿದರು.
ಮಹತ್ವದ ಉಪದೇಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ಏಕಾಗ್ರತೆಯಿಂದ ಪಠಿಸಬೇಕಿದೆ. ಇದರಿಂದ ಮನುಷ್ಯನಲ್ಲಿ ಅಜ್ಞಾನ ದೂರವಾಗಿ, ಆತ್ಮಸ್ಥೈರ್ಯ ಬರುತ್ತದೆ ಎಂದರು.
ಮತ್ತೆ ಧರ್ಮ ಸ್ಥಾಪಿಸಲು ವಿಷ್ಣು ಶ್ರೀಕೃಷ್ಣನಾಗಿ ಅವತರಿಸಿದ. ಲೋಕಪೀಡಕರಾದ ಕಂಸ, ಶಿಶುಪಾಲ ಸೇರಿ ಅನೇಕರನ್ನು ಸಂಹರಿಸಿದಲ್ಲದೇ ಪಾಂಡವರ ಮೂಲಕ ಅಧರ್ಮಿ ಕೌರವರನ್ನು ನಾಶಪಡಿಸಿದ. ಬಾಲಕೃಷ್ಣನಾಗಿ ತಾಯಿ ಮಗನ ಪ್ರೀತಿ, ಗೋಪಾಲನಾಗಿ ಗೋವು ಸಂರಕ್ಷಣೆ, ರಾಧೆಯ ಸಖನಾಗಿ ಆದರ್ಶ ಪ್ರೇಮಿ, ಸಂಕಷ್ಟದಲ್ಲಿದ್ದ ದ್ರೌಪದಿಯ ಮಾನ ಉಳಿಸುವ ಮೂಲಕ ಮಹಿಳಾ ರಕ್ಷಕ, ಭಗವದ್ಗೀತೆಯ ಮೂಲಕ ಮಾರ್ಗದರ್ಶಕನಾಗಿ ಗಮನ ಸೆಳೆದಿದ್ದು ಇಂತಹ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಬೇಕು ಎಂದರು.
ಆಧುನಿಕತೆಗೆ ಅನುಗುಣವಾಗಿ ಜೀವನ ಶೈಲಿ ಬದಲಾವಣೆಯಾಗುತ್ತಿದ್ದ ಮಾನವೀಯತೆ, ಪರೋಪಕಾರ, ಗುರು ಹಿರಿಯರಿಗೆ ಗೌರವಿಸುವುದನ್ನು ಮರೆಯಲಾಗುತ್ತಿದೆ. ಇವುಗಳೇ ಸಮಾಜದ ಅಶಾಂತಿಗೆ ಕಾರಣವಾಗುವ ಅಂಶಗಳು ಎಂದು ಹರಿದಾಸ ಸಂಘದ ಶ್ರೀ ಹಾ.ರ.ನಾಗರಾಜ್ ಅಭಿಪ್ರಾಯಪಟ್ಟರು.
ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 400 ವಿದ್ಯಾರ್ಥಿಗಳು ಕಂಠಪಾಠ ಹಾಗೂ ಶ್ರೀ ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ವಿ.ಗಿರೀಶ್‌ಚಂದ್ರ, ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ವೈ.ಎನ್.ರಾಮಚಂದ್ರಾರೆಡ್ಡಿ, ಕಾರ್ಯದರ್ಶಿ ಆರ್.ಶ್ಯಾಮಲಾ, ಲಯನ್ಸ್ ಕಬ್ಲ್ ಅಧ್ಯಕ್ಷ ಮಹೇಶ್, ಹಿರಿಯ ವಕೀಲ ಶ್ರೀನಿವಾಸ್‌ಬಾಬು, ಉದ್ಯಮಿ ಭೀಮೇಶ್, ಮುಖಂಡರಾದ ಆಂಜನೇಯರೆಡ್ಡಿ, ಸಿ.ಎಸ್.ನಾರಾಯಣ, ಮಂಚನಬಲೆ ಶ್ರೀನಿವಾಸ್, ವೈ.ಎನ್.ರಾಮಕೃಷ್ಣ, ಜಯಗೋಪಿ ಇತರರಿದ್ದರು.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...