ಸಿಂಧನೂರು: ತಾಲೂಕಿನ ದಢೇಸುಗೂರಿನಲ್ಲಿ ವಿಮುಕ್ತ ದೇವದಾಸಿಯರಿಗೆ ಹಂಚಿಕೆ ಮಾಡಿದ್ದ ಭೂಮಿಯನ್ನು ಅಕ್ರಮವಾಗಿ ಪಡೆದಿರುವ ಮಾಜಿ ಶಾಸಕ ಬಸವರಾಜ ದಢೇಸುಗೂರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರಜಾ ಜಾಗೃತಿ ಸಂಘಟನೆ ತಾಲೂಕು ಸಮಿತಿ ಬುಧವಾರ ತಹಸಿಲ್ ಕಚೇರಿ ಶಿರಸ್ತೇದಾರ್ ಶಿವಾನಂದ ಪೂಜಾರಿಗೆ ಮನವಿ ಸಲ್ಲಿಸಿತು.
ಇದನ್ನೂ ಓದಿ: ಜೀತವಿಮುಕ್ತರಿಗೆ ಪ್ರಥಮ ಆದ್ಯತೆ ಸಿಗುವಂತಾಗಲಿ
ಗ್ರಾಮದಲ್ಲಿ ಸರ್ಕಾರದಿಂದ 1990-91ರಲ್ಲಿ ಸುಮಾರು 80 ಎಕರೆ ವಿಸ್ತೀರ್ಣ ಹೊಂದಿದ ಜಮೀನುಗಳನ್ನು ದೇವದಾಸಿ ಪುನರ್ವಸತಿ ಯೋಜನೆಯಡಿ ಶ್ರೇಯೋಭಿವೃದ್ಧಿಗೆ ಆರ್ಥಿಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವಿಮುಕ್ತ ದೇವದಾಸಿಯರಿಗೆ ಹಂಚಿಕೆ ಮಾಡಲಾಗಿತ್ತು. ಸಾಲಗುಂದ ಹೋಬಳಿ ವ್ಯಾಪ್ತಿಯಲ್ಲಿ 30 ಎಕರೆ ಜಮೀನನ್ನು ಕಬ್ಜಾ ಮಾಡಿಕೊಂಡು ಅನ್ಯಾಯ ಮಾಡಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ, ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಸಮಿತಿ ಗೌರವಾಧ್ಯಕ್ಷ ಜಾನಪ್ಪ ಜವಳಗೇರಾ, ಅಧ್ಯಕ್ಷ ಎಚ್.ಜಗದೀಶ ವಕೀಲ, ಕಾರ್ಯದರ್ಶಿ ಶ್ರೀನಿವಾಸ ವೈ., ಸಹ ಕಾರ್ಯದರ್ಶಿ ಬಸವರಾಜ, ಪ್ರಮುಖರಾದ ಗಂಗಮ್ಮ, ಆಲ್ಮಮ್ಮ, ಕನಕಮ್ಮ ಇದ್ದರು.