ಗ್ರಾಪಂ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ

ಸುಂಟಿಕೊಪ್ಪ: ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಗ್ರಾಮ ಪಂಚಾಯಿತಿ ಸದಸ್ಯ ಗೌತಮ್ ಶಿವಪ್ಪ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಬೇಕು ಎಂದು ಒತ್ತಾಯಿಸಿ, ಗ್ರಾಮಸ್ಥರು ಸಮೀಪದ ಹರದೂರು ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹರದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಲಿ ಕಾರ್ವಿುಕರು ಅಧಿಕ ಸಂಖ್ಯೆಯಲ್ಲಿದ್ದು, ಜಲಪ್ರಳಯದ ನಂತರ ಕೆಲಸವಿಲ್ಲದೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಈ ಕá-ರಿತು ಗ್ರಾ.ಪಂ. ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಿರಾಶ್ರಿತರನ್ನು ತಲá-ಪಬೇಕಿದ್ದ ಆಹಾರ ಸಾಮಗ್ರಿಗಳನ್ನು ಗ್ರಾ.ಪಂ. ಸದಸ್ಯರೇ ಇಟ್ಟುಕೊಂಡಿದ್ದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿದ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಮತ್ತು ಸುಂಟಿಕೊಪ್ಪ ಕಂದಾಯ ಪರಿವೀಕ್ಷಕ ಎಚ್.ಎಸ್.ಶಿವಪ್ಪ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಪಕೃತಿ ವಿಕೋಪದಿಂದ ಮನೆ, ಆಸ್ತಿ ಕಳೆದುಕೊಂಡವರಿಗೆ ಆಹಾರ ಒದಗಿಸಲಾಗಿದೆ. ಕೆಲವೆಡೆ ಕಾರ್ವಿುಕರಿಗೆ ಕೂಲಿ ಕೆಲಸವಿಲ್ಲದೆ ತೊಂದರೆಯಾಗಿದೆೆ. ಈ ಬಗ್ಗೆ ಪರಿಶೀಲಿಸಿ ಆಹಾರ ಪೂರೈಸಲಾಗುವುದು. ಅಲ್ಲದೆ, ಅಕ್ರಮವಾಗಿ ದಾಸ್ತಾನು ಮಾಡಿದ್ದ ಆಹಾರ ಸಾಮಗ್ರಿಗಳನ್ನು ವಶಪಡಿಸಿಕೊಂಡು ನಿರಾಶ್ರಿತರಿಗೆ ಹಂಚಲಾಗಿದೆ ಎಂದು ತಿಳಿಸಿದರು.

ಸಮಾಜ ಸೇವಕ ಸುರೇಶ ಮತ್ತು ಮೊಗೇರ ಸಂಘದ ಹೋಬಳಿ ಸಂಘಟನಾ ಕಾರ್ಯದರ್ಶಿ ಪೂವಪ್ಪ ಮಾತನಾಡಿ, ನಿರಾಶ್ರಿತರಿಗೆ ಸೇರಿದ ಆಹಾರ ಪದಾರ್ಥಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಮೂಲಕ ಗ್ರಾ.ಪಂ. ಸದಸ್ಯ ಗೌತಮ್ ಶಿವಪ್ಪ ಮೊಗೇರ ಸಂಘಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಗೌತಮ್ ಶಿವಪ್ಪ, ಸಕಲೇಶಪುರ ಮೊಗೇರ ಸಮಾಜದಿಂದ ನಿರಾಶ್ರಿತರಿಗೆ ಅಕ್ಕಿ ಮತ್ತಿತರ ಸಾಮಗ್ರಿಗಳು ಬಂದಿದ್ದವು. ಆದರೆ, ಕಾಂಡನಕೊಲ್ಲಿಗೆ ಸಾಗಿಸಲು ಸಾಧ್ಯವಾಗದ ಕಾರಣ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದು ನಿಜ. ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ ಎಂದರು. ಇದರಿಂದ ಸಮಾಧಾನಗೊಂಡ ಪ್ರತಿಭಟನಾಕಾರರು ಪ್ರತಿಭಟನೆ ಹಿಂದಕ್ಕೆ ಪಡೆದರು.

ಗ್ರಾ.ಪಂ. ಅಧ್ಯಕ್ಷೆ ಸುಮಾ, ಪಿಡಿಒ ಬಾಲಕೃಷ್ಣ ರೈ, ಗ್ರಾಮ ಲೆಕ್ಕಾಧಿಕಾರಿ ನಾಗೇಶ್​ರಾವ್, ಗ್ರಾಮಸ್ಥರಾದ ಸಾವಿತ್ರಿ, ಕಮಲಾ, ಲವಕುಮಾರ್, ಬೇಬಿ, ಸá-ಮಿತ್ರಾ, ಕೆ.ಟಿ.ಗೋಪಾಲ, ಯಾಕೂಬ್, ಪ್ರೇಮಾ, ನೇತ್ರಾ, ಸುಶೀಲಾ, ಕಾಂಡನಕೊಲ್ಲಿ ಗ್ರಾಮಸ್ಥರು ಹಾಜರಿದ್ದರು. ಠಾಣಾಧಿಕಾರಿ ಎಸ್.ಎನ್.ಜಯರಾಮ್ ಎಎಸ್​ಐ ಪಾರ್ಥ ಮತ್ತು ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.