ಢವಳಗಿ: ಸಮೀಪದ ರೂಡಗಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಹಾಗೂ ಪ್ರತಿವರ್ಷ ನಡೆಯುವ ಕೊಡೆಕಲ್ಲ ಬಸವೇಶ್ವರ ಜಾತ್ರೆ ಮೇ 23 ರಿಂದ 27 ರವರೆಗೆ ಸಂಭ್ರಮದಿಂದ ಜರುಗಲಿದೆ.

ಶುಕ್ರವಾರ ಬೆಳಗ್ಗೆ 9ಕ್ಕೆ ಗ್ರಾಮದೇವತೆ ಸಕಲವಾದ್ಯದೊಂದಿಗೆ ಗಂಗಸ್ಥಳಕ್ಕೆ ಹೋಗಿ ಬರುವುದು. ರಾತ್ರಿ 10.30ಕ್ಕೆೆ ಮುಗಳಿಹಾಳದ ಮಾಳಿಂಗೇಶ್ವರ ಡೊಳ್ಳಿನ ಗಾಯನ ಸಂ ಹಾಗೂ ಕಲಗುರ್ಕಿಯ ಅಮೋಸಿದ್ದೇಶ್ವರ ಡೊಳ್ಳಿನ ಗಾಯನ ಸಂದ ಕಲಲಾವಿದರಿಂದ ಡೊಳ್ಳಿನ ಪದ ಕಾರ್ಯಕ್ರಮ ಜರುಗುವುದು.
24ರಂದು ಬೆಳಗ್ಗೆ 9ಕ್ಕೆ ರಾಜ್ಯ ಮಟ್ಟದ ತೇರಬಂಡಿ ಸ್ಪರ್ಧೆ ನಡೆಯಲಿದೆ. ಸ್ಪರ್ಧಾ ವಿಜೇತರಿಗೆ ಸೂಕ್ತ ಬಹುಮಾನ ವಿತರಿಸಲಾಗುವುದು. 25ರಂದು ಬೆಳಗ್ಗೆ 10ಕ್ಕೆ ಎತ್ತುಗಳಿಂದ ಭಾರವಾದ ಕಲ್ಲು ಜಗ್ಗುವ ಸ್ಪರ್ಧೆ ನೆಡಯಲಿದೆ. ಸ್ಥಳಿಯ ಎತ್ತುಗಳಿಗೆ ಸ್ಪರ್ಧೆಯಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ. 26ರಂದು ಬೆಳಗ್ಗೆ ಕೊಡೆಕಲ್ಲ ಬಸವೇಶ್ವರ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ ಜರುಗಲಿದೆ. ನಂತರ ಭಕ್ತರಿಂದ ಶಿವಭಜನೆ ನೆಡತಯುವುದು. ಪಾಲ್ಗೊಮಡ ಸಕಲ ಭಕ್ತರಿಗೆ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. 27ರಂದು ಬೆಳಗ್ಗೆ 9ಕ್ಕೆ ಭಾರವಾದ ಚೀಲ ಎತ್ತುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಪ್ರತಿದಿನ ಅನ್ನಸಂತರ್ಪಣೆೆ ನಡೆಯಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.