ವಿಜಯವಾಣಿ ಸುದ್ದಿಜಾಲ ಇಟಗಿ
ಸಮೀಪದ ಅವರೊಳ್ಳಿ-ಬಿಳಕಿ ಗ್ರಾಮದಲ್ಲಿ ಮೇ 19 ರಿಂದ 23ರ ವರೆಗೆ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ರಸ್ತೆ ನಿರ್ಮಾಣ, ಸ್ವಚ್ಛತೆ ಹಾಗೂ ಬೀದಿ ದೀಪ ಅಳವಡಿಕೆ ಸೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯ ಕೈಗೊಂಡಿದೆ.
ವಿಠ್ಠಲ ರುಕ್ಮಾಯಿ ಮಂದಿರ, ಶಿವಾಜಿ ಮೂರ್ತಿ ಸೇರಿ ವಿವಿಧ ದೇವಸ್ಥಾನಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮನೆ ಮನೆಗಳು ಸುಣ್ಣ-ಬಣ್ಣಗಳಿಂದ ಸುಂದರಗೊಂಡಿವೆ.
ಪ್ರಮುಖ ಬೀದಿಗಳು ತಳೀರು ತೋರಣಗಳಿಂದ ಸಿಂಗಾರಗೊಂಡು ಗ್ರಾಮ ಮಧುವಣಗಿತ್ತಿಯಂತೆ ಸಜ್ಜುಗೊಂಡಿದೆ. ವಿವಿಧೆಡೆ ಬ್ಯಾನರ್ ರಾರಾಜಿಸುತ್ತಿದ್ದು, ಹೆಣ್ಣುಮಕ್ಕಳು ತವರೂರಿನ ಜಾತ್ರೆ ಸಂಭ್ರಮಿಸಲು ಆಗಮಿಸುತ್ತಿದ್ದಾರೆ. ಹೀಗಾಗಿ, ಮನೆ, ಮನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಮೇ 19 ರಂದು ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಮೇ 20 ರಂದು ಲ$್ಮ ದೇವಿಯರ ಉಡಿ ತುಂಬುವುದು, ವಿವಿಧ ವಾದ್ಯಗಳೊಂದಿಗೆ ದೇವಿಯರ ಹೊನ್ನಾಟ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ರಾತ್ರಿ ಸಿಡಿ ಮದ್ದು, ಹೊನ್ನಾಟ ಜರುಗಲಿದೆ.
ಮೇ 21 ರಂದು ವಿಠ್ಠಲ ರುಕ್ಮಿಣಿ ದೇವಸ್ಥಾನದ ಬಳಿ ಜಾತ್ರೆ ಮಂಟಪದಲ್ಲಿ ಶ್ರೀ ಲ್ಮ ದೇವಿಯರ ಪ್ರತಿಷ್ಠ್ಠಾಪಿಸಿ ಭಕ್ತರಿಗೆ ದರ್ಶನ ನೀಡಲಾಗುವುದು.
ಉಡಿ ತುಂಬುವ ಕಾರ್ಯ, ಹೊನ್ನಾಟ, ಶ್ರೀ ಲ$್ಮ ದೇವಿಯರ ಸೀಮೋಲ್ಲಂನ ಜರುಗಲಿದೆ. ಮೇ 22 ರಂದು ವಿವಿಧ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೇ 23 ರಂದು ಶ್ರೀ ಲ$್ಮ ದೇವಿಯರನ್ನು ಪುನ@ ಗದ್ದುಗೆಯಲ್ಲಿ ಅಲಂಕರಿಸಿ ಉಡಿ ತುಂಬುವ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಮುಖಂಡರಾದ ಜ್ಯೋತಿಬಾ ಭರಮಪ್ಪನವರ, ಅಶೋಕ ಕೊಡೊಳ್ಳಿ, ರುದ್ರಪ್ಪ ಶಿವಪ್ಪನವರ, ಯಶವಂತ ಕೊಡೊಳ್ಳಿ, ರಾಜುಗೌಡ ಪಾಟೀಲ ತಿಳಿಸಿದ್ದಾರೆ.