Kaalaapatthar Review ; ಕಲ್ಲು ಹೃದಯಗಳ ನಡುವೆ, ಕಪ್ಪು ಕಲ್ಲಿಗೆ ಜೀವ ಬಂದಾಗ, ಭ್ರಮೆಯೋ? ವಾಸ್ತವವೋ?

ಚಿತ್ರ: ಕಾಲಾಪತ್ಥರ್​
ನಿರ್ದೇಶನ: ವಿಕ್ಕಿ ವರುಣ್​
ನಿರ್ಮಾಣ: ಸುರೇಶ್​, ನಾಗರಾಜ್​
ತಾರಾಗಣ: ವಿಕ್ಕಿ ವರುಣ್​, ಧನ್ಯಾ ರಾಮಕುಮಾರ್​, ಟಿ.ಎಸ್​. ನಾಗಾಭರಣ, ರಾಜೇಶ್​ ನಟರಂಗ, ದೇವ್​, ಅಚ್ಯುತ್​ ಕುಮಾರ್​, ಸಂಪತ್​ ಮೈತ್ರೇಯ ಮುಂತಾದವರು.

ನೋಡಿದ್ದು, ಕೇಳಿದ್ದು ಮಾತ್ರವಲ್ಲ ಖುದ್ದಾಗಿ ನಮಗೇ ಆದ ಅನುಭವಗಳೂ ಸುಳ್ಳಾಗಬಹುದಾ? ಇಂತಹ ಒಂದು ಪ್ರಶ್ನೆ ಮೂಡಿಸುವ, ಅದಕ್ಕೆ ಉತ್ತರವನ್ನೂ ನೀಡುವ ಸಿನಿಮಾ “ಕಾಲಾಪತ್ಥರ್​’. ಹಾಗಾದರೆ ಸತ್ಯನೇ ಸುಳ್ಳಾ? ಸುಳ್ಳೇ ಸತ್ಯನಾ? ಯಾವುದನ್ನು? ಯಾರನ್ನು ನಂಬುವುದು? ಎಂಬ ಕುತೂಹಲದೊಂದಿಗೆ ಕಥೆ ಸಾಗುತ್ತದೆ. ಕಲ್ಲು ಹೃದಯಿಗಳ ನಡುವೆ ಕಪ್ಪು ಕಲ್ಲಿಗೆ ಜೀವ ತುಂಬುವ ಕಥೆ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಡುತ್ತದೆ.

Kaalaapatthar Review ; ಕಲ್ಲು ಹೃದಯಗಳ ನಡುವೆ, ಕಪ್ಪು ಕಲ್ಲಿಗೆ ಜೀವ ಬಂದಾಗ, ಭ್ರಮೆಯೋ? ವಾಸ್ತವವೋ?
Kaalaapatthar Review ; ಕಲ್ಲು ಹೃದಯಗಳ ನಡುವೆ, ಕಪ್ಪು ಕಲ್ಲಿಗೆ ಜೀವ ಬಂದಾಗ, ಭ್ರಮೆಯೋ? ವಾಸ್ತವವೋ? 4

ಕಾಶ್ಮೀರದ ಸೇನಾ ಕ್ಯಾಂಪ್​ನಲ್ಲಿ ರಾತ್ರಿ ಪಾರ್ಟಿಗೆ ಬಜ್ಜಿ ಮಾಡುತ್ತಾ ಬಿಎಸ್​ಎ್​ನ ಕುಕ್​ ಶಂಕರ (ವಿಕ್ಕಿ ವರುಣ್​), “ನಮ್ಮೂರಲ್ಲಿ ನೋಡಿದ್ರೆ ನಮ್ಮುಡ್ಗ ಬಾರ್ಡರಲ್ಲಿ ಟೆರರಿಸ್ಟ್​ಗಳಿಗೆ ಗುಂಡ್​ ಹಾರಿಸ್ತಾವ್ನೆ ಅಂತ ಅಂದ್ಕೊಂಡಿದಾರೆ. ಆದರೆ, ಇಲ್ಲಿ ನೋಡಿದ್ರೆ ನಾನು ಗುಂಡ್​ ಹಾಕ್ತರೋರಿಗೆ ಬಜ್ಜಿ ಮಾಡ್ಕೊಡ್ತೀದಿನಿ’ ಅಂತ ಬೇಸರದಿಂದ ಹೇಳಿಕೊಳ್ಳುತ್ತಾನೆ. ಅದೇ ಸಮಯದಲ್ಲಿ ನುಸುಳಿ ಕ್ಯಾಂಪ್​ಗೆ ಬಂದಿರುವ ಕೆಲ ಉಗ್ರರು ಸೈನಿಕರ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಿರುವುದನ್ನು ನೋಡಿ, ಶಂಕರ ಅವರ ಮೇಲೆ ಮುಗಿಬೀಳುತ್ತಾನೆ. ಎಲ್ಲರನ್ನು ಬಡಿದು ತಾನೂ ಪೆಟ್ಟು ತಿಂದು ಆಸ್ಪತ್ರೆ ಸೇರುತ್ತಾನೆ. ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ರಾತ್ರೋರಾತ್ರಿ ಶಂಕರ ಹೀರೋ ಆಗುತ್ತಾನೆ. ಆತನ ಹುಟ್ಟೂರು ಮೂಡಲಪುರದ ಜನರೂ ಹೆಮ್ಮೆ ಪಡುತ್ತಾರೆ. ಊರ ಗೌಡ (ನಾಗಾಭರಣ) ಆತನ ಸಾಹಸದ ನೆನಪಿಗೆ ಶಂಕರನ ಮೂರ್ತಿ ಸ್ಥಾಪಿಸಲು ತೀರ್ಮಾನಿಸುತ್ತಾರೆ. ಅದಕ್ಕಾಗಿ ಊರ ಹೊರಗಿದ್ದ “ಕಾಲಾಪತ್ಥರ್​’ (ಕಪ್ಪು ಕಲ್ಲು) ಆಯ್ಕೆ ಮಾಡಿಕೊಳ್ಳುತ್ತಾರೆ. ಶಂಕರ ಚೇತರಿಸಿಕೊಂಡು ಊರು ಸೇರುವಷ್ಟರಲ್ಲಿ ಆತನ ಮೂರ್ತಿ ಎದ್ದು ನಿಂತಿರುತ್ತದೆ. ಆದರೆ, ಈ ಬೆಳವಣಿಗೆ ಅಲ್ಲಿನ ಶಾಸಕ ಪುಟ್ಟರಾಜು (ರಾಜೇಶ್​ ನಟರಂಗ) ಕೆಂಗಣ್ಣಿಗೆ ಗುರಿಯಾಗುತ್ತದೆ. ಈ ಮೂರ್ತಿಯ ಸುತ್ತ ನಾನಾ ಬೆಳವಣಿಗೆಗಳು ಆಗತೊಡಗುತ್ತವೆ. ತಮ್ಮದೇ ರೀತಿಯಲ್ಲಿ ಸ್ವಾರ್ಥಿಗಳು ಅದರ ಲಾಭ ಪಡೆದುಕೊಳ್ಳಲು ಮುಂದಾಗುತ್ತಾರೆ. ಅದರ ನಡುವೆಯೇ ಶಂಕರನ ಒಳಗೆ, ಹೊರಗೆ ತಲ್ಲಣಗಳು ಆರಂಭವಾಗುತ್ತವೆ. ಅದೆಲ್ಲದಕ್ಕೂ ಡಾ. ರಾಜಕುಮಾರ್​ ಅಂತ್ಯ ಹಾಡುತ್ತಾರೆ! ಅದು ಹೇಗೆ? ಸಿನಿಮಾ ನೋಡಿ.

Kaalaapatthar Review ; ಕಲ್ಲು ಹೃದಯಗಳ ನಡುವೆ, ಕಪ್ಪು ಕಲ್ಲಿಗೆ ಜೀವ ಬಂದಾಗ, ಭ್ರಮೆಯೋ? ವಾಸ್ತವವೋ?
Kaalaapatthar Review ; ಕಲ್ಲು ಹೃದಯಗಳ ನಡುವೆ, ಕಪ್ಪು ಕಲ್ಲಿಗೆ ಜೀವ ಬಂದಾಗ, ಭ್ರಮೆಯೋ? ವಾಸ್ತವವೋ? 5

“ಕೆಂಡಸಂಪಿಗೆ’, “ಕಾಲೇಜ್​ ಕುಮಾರ’ ಚಿತ್ರಗಳಿಗಿಂತ ನಾಯಕ ವಿಕ್ಕಿ ವರುಣ್​ “ಕಾಲಾಪತ್ಥರ್​’ನಲ್ಲಿ ನಟನಾಗಿ ಮತ್ತಷ್ಟು ಪಳಗಿದ್ದಾರೆ. ಒಂದು ಸವಾಲಿನ ಕಥೆಯನ್ನು ಉತ್ತಮ ಸಿನಿಮಾ ರೂಪದಲ್ಲಿ ನಿರೂಪಿಸುವಲ್ಲಿ ನಿರ್ದೇಶಕನಾಗಿ ವಿಕ್ಕಿ ಗೆದ್ದಿದ್ದಾರೆ. ಕಾಶ್ಮೀರ, ಮೂಡಲಪುರದ ಚಿತ್ರಣಗಳು, ಹಲವು ಹೊಸ ಹೊಸ ಟ್ವಿಸ್ಟ್​ಗಳೊಂದಿಗೆ ಸಾಗುವ 113 ನಿಮಿಷಗಳ ಕಥೆ ಎಲ್ಲಿಯೂ ಬೋರ್​ ಆಗದಂತೆ ನೋಡಿಸಿಕೊಂಡು ಹೋಗುತ್ತದೆ. ಶಂಕರನ ಪ್ರಿಯತಮೆ ಗಂಗಾ ಪಾತ್ರದಲ್ಲಿ ಧನ್ಯಾ ಗಮನ ಸೆಳೆಯುತ್ತಾರೆ. ಟಿ.ಎಸ್​. ನಾಗಾಭರಣ, ರಾಜೇಶ್​ ನಟರಂಗ ಅಭಿನಯ ನೋಡುವುದೇ ಚಂದ. ಉಳಿದಂತೆ ಎಲ್ಲರೂ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಹೇಳಿದಂತೆಯೇ ಹಾಡುಗಳು ಮತ್ತು ಹಿನ್ನೆಲೆ ಸಂಗೀತದಲ್ಲಿ ಅನೂಪ್​ ಸೀಳಿನ್​ 2.0 ದರ್ಶನವಾಗುತ್ತದೆ.

ಸ್ಟಾರ್​ : 3.5

Kaalaapatthar Review ; ಕಲ್ಲು ಹೃದಯಗಳ ನಡುವೆ, ಕಪ್ಪು ಕಲ್ಲಿಗೆ ಜೀವ ಬಂದಾಗ, ಭ್ರಮೆಯೋ? ವಾಸ್ತವವೋ?
Kaalaapatthar Review ; ಕಲ್ಲು ಹೃದಯಗಳ ನಡುವೆ, ಕಪ್ಪು ಕಲ್ಲಿಗೆ ಜೀವ ಬಂದಾಗ, ಭ್ರಮೆಯೋ? ವಾಸ್ತವವೋ? 6
Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…