More

    ಉದ್ಯೋಗ ಕೊಡಿಸುವ ಆಮಿಷ: 1.48 ಕೋಟಿ ರೂ. ವಂಚನೆ

    ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿದ ವ್ಯಕ್ತಿ 13 ಜನರಿಂದ 1.48 ಕೋಟಿ ರೂ. ಪಡೆದು ವಂಚಿಸಿದ್ದಾನೆ. ವಂಚನೆಗೊಳಗಾದ ಗಂಗಾನಗರದ ನಿವಾಸಿ ತೌಫಿಕ್ ಮೊಹಮದ್ ಈ ಬಗ್ಗೆ ದೂರು ನೀಡಿದ್ದು, ಎಂ.ಜಿ. ರಸ್ತೆಯಲ್ಲಿರುವ ಓಷಿಯನ್ ಇಂಟರ್​ನ್ಯಾಷನಲ್ ನಾವೆಲ್ ಆಫೀಸರ್ಸ್ ಸೆಂಟರ್​ನ ನಿರ್ದೇಶಕನೆಂದು ಹೇಳಿಕೊಂಡಿದ್ದ ಆರೋಪಿ ಶರತ್​ಚಂದ್ರ ಎಂಬಾತನ ವಿರುದ್ಧ ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಉದ್ಯೋಗ ಇಲ್ಲದವರಿಗೆ ಸಿಂಗಾಪುರ, ಮಲೇಷ್ಯಾ, ಅರಬ್ ರಾಷ್ಟ್ರಗಳು, ಚೀನಾ ಮತ್ತಿತರ ದೇಶಗಳಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಶರತ್ಚಂದ್ರ ನಂಬಿಸುತ್ತಿದ್ದ. ಎಂಟು ಜನರಿಗೆ ಉದ್ಯೋಗ ಕೊಡಿಸುವುದಾಗಿ ತೌಫಿಕ್​ನಿಂದ 69.85 ಲಕ್ಷ ರೂ. ಹಾಗೂ ಐದು ಮಂದಿಗೆ ಉದ್ಯೋಗ ನೀಡುವುದಾಗಿ ಆತನ ಸ್ನೇಹಿತ ಅಬ್ದುಲ್ ಮುನೀರ್​ನಿಂದ 78.35 ಲಕ್ಷ ರೂ. ಪಡೆದಿದ್ದ. ಈ ಎಲ್ಲ ಹಣವನ್ನೂ ಗೂಗಲ್ ಪೇ ಮೂಲಕ ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. ಕಳೆದ ಆ.20ರಂದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದು ಎಲ್ಲ 13 ಮಂದಿಯ ಉದ್ಯೋಗ ನೇಮಕಾತಿ ಪತ್ರ, ಪಾಸ್​ಪೋರ್ಟ್, ವೀಸಾ ಪಡೆದುಕೊಳ್ಳುವಂತೆ ತೌಫಿಕ್​ಗೆ ಸೂಚಿಸಿದ್ದ. ಆದರೆ, ಅಂದು ತೌಫಿಕ್ ವಿಮಾನ ನಿಲ್ದಾಣಕ್ಕೆ ಹೋದಾಗ ಅಲ್ಲಿಗೆ ಆತ ಬಂದಿರಲಿಲ್ಲ. ಅಂದಿನಿಂದ ತಲೆಮರೆಸಿಕೊಂಡಿದ್ದು, ಮೊಬೈಲ್ ಆಫ್ ಮಾಡಿಕೊಂಡಿದ್ದಾನೆ. ಎಂ.ಜಿ. ರಸ್ತೆಯಲ್ಲಿದ್ದ ಆತನ ಕಚೇರಿಯನ್ನೂ ತೆರೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts