21 C
Bengaluru
Thursday, January 23, 2020

ಆಧುನಿಕತೆಯಿಂದ ಮಾನಸಿಕ ನೆಮ್ಮದಿ ಹಾಳಾಗದಿರಲಿ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ನಾವು 21ನೇ ಶತಮಾನದಲ್ಲಿದ್ದೇವೆ. ವಿಜ್ಞಾನ-ತಂತ್ರಜ್ಞಾನದ ನಾಗಾಲೋಟದಲ್ಲಿ ಸಾಗುತ್ತಿದ್ದೇವೆ. ಅಭಿವೃದ್ಧಿ ಕ್ಷಿಪ್ರಗತಿಯಲ್ಲಿದೆ. ಆಧುನಿಕತೆ ಎಲ್ಲೆಡೆ ಹಾಸುಹೊಕ್ಕಾಗಿದೆ. ಇಡೀ ಜಗತ್ತು ಇಂದು ಸಂಕೀರ್ಣವಾಗಿದೆ. ಜತೆಗೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿರುವುದೂ ಅಷ್ಟೇ ಸತ್ಯ. ಯಾಂತ್ರಿಕ ಬದುಕು ಬಲವಾಗಿ ಕಾಡುತ್ತಿದೆ. ನೈಸರ್ಗಿಕ ಜೀವನಶೈಲಿಯ ವಿರುದ್ಧದ ನಡೆ ಮಾನವನ ಮಾನಸಿಕ ನೆಮ್ಮದಿಯನ್ನು ಹಾಳುಗೆಡವಿದೆ. ಹಗಲಿರುಳು ದುಡಿಮೆ ಖಾಸಗಿ ಬದುಕಿನ ಸಂತಸಗಳನ್ನು ಕಸಿಯುತ್ತಿದೆ. ಬದಲಾದ ಸನ್ನಿವೇಶದಲ್ಲಿ ಹಗಲಿರುಳು ದುಡಿಯುವ ಅನಿವಾರ್ಯತೆ ಮಾನವನಿಗೆ ಎದುರಾಗಿದೆ.

ಮೆಟ್ರೋನಗರಗಳಲ್ಲಂತೂ ಬೆಳ್ಳಂಬೆಳಗ್ಗೆಯೇ ಕಚೇರಿಗೆ ಹೊರಡಬೇಕು. ಮತ್ತೆ ರಾತ್ರಿ ತಡವಾಗಿ ಬರಬೇಕು. ವೀಕೆಂಡ್​ನಲ್ಲಿ ಬರೀ ನಿದ್ದೆಗೆ ಹಪಿಹಪಿಸುವಂತಾಗಿದೆ. ಕುಟುಂಬದ ಸದಸ್ಯರೊಡನೆ ಜತೆಗೂಡಿ ನೆಮ್ಮದಿಯಿಂದ ಕಾಲ ಕಳೆಯುವ ದಿನಗಳು ಕಣ್ಮರೆಯಾಗುತ್ತಿವೆ. ಕೆಲಸದ ಒತ್ತಡದಿಂದ ಮಕ್ಕಳ ಮುಖ ಸಹಿತ ನೋಡಲಾಗದಂತಹ ಸ್ಥಿತಿ ಎದುರಿಸದವರು ನಮ್ಮ ನಿಮ್ಮ ಮಧ್ಯೆ ಅನೇಕರು. ಇದು ಆಧುನಿಕತೆಯ ಕೊಡುಗೆ ಎಂದರೆ ತಪ್ಪಾಗದು. ಅಂದರೆ ನಾವು ದುಡಿದು ಗಳಿಸುವ ಹಣ ನಮಗೆ ಆರ್ಥಿಕ ಭದ್ರತೆ ಒದಗಿಸುತ್ತದೆ ಎಂಬುದೇನೋ ನಿಜ. ಆದರೆ ಕೌಟುಂಬಿಕ ಮೌಲ್ಯಗಳು, ಸಂಬಂಧಗಳು ಕ್ಷೀಣಿಸುತ್ತಿವೆ. ಕೆಲಸದ ಒತ್ತಡವು ಅನಿವಾರ್ಯವಾಗಿ ಮನುಷ್ಯನನ್ನು ದುಶ್ಚಟಗಳ ದಾಸನನ್ನಾಗಿಸುತ್ತಿವೆ. ಇದರಿಂದ ಮಾನಸಿಕ ಖಿನ್ನತೆ ಆವರಿಸುತ್ತದೆ, ಆರೋಗ್ಯವೂ ಹಾಳಾಗುತ್ತದೆ.

ಅದೊಂದು ಕಾಲವಿತ್ತು. ಮನೆಮಂದಿ ಎಲ್ಲರೂ ಸೇರಿ ನಾನಾ ವಿಷಯಗಳ ಬಗ್ಗೆ ರ್ಚಚಿಸುತ್ತ ಊಟ ಮಾಡುತ್ತಿದ್ದರು. ಮನೆಯಂಗಳದಲ್ಲಿ ಹಾಯಾಗಿ ಹರಟೆ ಹೊಡೆಯುತ್ತಿದ್ದರು. ಇಂತಹ ಚಟುವಟಿಕೆಗಳಿಂದ ಸಂಬಂಧಗಳು ಬಲವಾಗಿರುತ್ತಿದ್ದವು. ಇದು ಕೂಡುಕುಟುಂಬ ವ್ಯವಸ್ಥೆಯ ದೊಡ್ಡ ಶಕ್ತಿಯಾಗಿತ್ತು.

ಈಗ ಅದೆಲ್ಲ ಬರೀ ಕನಸಿನ ಮಾತು. ಹೀಗಿತ್ತು ನಮ್ಮ ಕೆಲಸದ ಶೈಲಿ ಎಂದು ಮನೆಯಲ್ಲಿನ ಹಿರಿಯರು ಕಥೆಯ ರೂಪದಲ್ಲಿ ಹೇಳುವಂತಾಗಿದೆ ನಮ್ಮೆಲ್ಲರ ಸ್ಥಿತಿ. ಒಂದೆಡೆ ಸೇರುವುದರಿಲಿ, ಉಭಯಕುಶಲೋಪರಿಯೂ ಗಗನಕುಸುಮವಾಗಿದೆ. ಮನೆಗೆ ಬಂದರೂ ಲ್ಯಾಪ್​ಟಾಪ್​ನಲ್ಲಿ ಕೆಲಸ ಇಲ್ಲವೇ ಮೊಬೈಲ್​ನಲ್ಲಿ ಸಂಭಾಷಣೆ. ಇವೆಲ್ಲ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಾಗಿದೆ. ಇದಕ್ಕೆ ನನ್ನ ಬಳಿ ಚಿಕಿತ್ಸೆ ಅರಸಿ ಬರುವವರ ಪ್ರಕರಣಗಳೇ ಉತ್ತಮ ನಿದರ್ಶನ.

ಹಾಗೆಂದು ಆಧುನಿಕತೆಯನ್ನು ದೂಷಿಸುತ್ತ ಕೂರುವುದರಲ್ಲಿ ಅರ್ಥವಿಲ್ಲ. ಅಭಿವೃದ್ಧಿಗೆ ಆಧುನಿಕತೆಯ ಕೊಡುಗೆಯೂ ಇದೆ. ಆದರೆ ನಾವು ಅದನ್ನು ಯಾವ ಮಟ್ಟದಲ್ಲಿ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅದರ ಸದ್ಬಳಕೆ ನಿರ್ಧಾರವಾಗುತ್ತದೆ. ಕೆಲಸದ ಜತೆಜತೆಗೆ ಹೆಂಡತಿ, ಮಕ್ಕಳು, ಅಪ್ಪ-ಅವ್ವಂದಿರ ಜತೆಯೂ ಒಡನಾಟ, ಪರಸ್ಪರ ಮಾತುಕತೆ, ಅವರಿಗೆಂದೇ ಒಂದಿಷ್ಟು ಸಮಯ ಮೀಸಲಿಡಬೇಕು. ಧ್ಯಾನ, ವ್ಯಾಯಾಮ, ಯೋಗದ ರೂಢಿ ಇದ್ದರಂತೂ ಇನ್ನೂ ಒಳ್ಳೆಯದು.

ಮನಸ್ಸಿನ ನಿಗ್ರಹದ ಅಭ್ಯಾಸವಿದ್ದರೆ ದುಶ್ಚಟಗಳಿಂದಲೂ ದೂರವಿರಬಹುದು. ಸಿಗುವ ಸಮಯದಲ್ಲೇ ಎಲ್ಲದಕ್ಕೂ ಅವಕಾಶ ಮಾಡಿಕೊಂಡು ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಇದರಿಂದ ಕೆಲಸವೂ ಒತ್ತಡವೆನಿಸುವುದಿಲ್ಲ. ಸಂಸಾರವೂ ಭಾರ ಎನಿಸುವುದಿಲ್ಲ. ಅದೆಷ್ಟೋ ಜನ ಕೆಲಸದ ಒತ್ತಡದಿಂದ ಕುಟುಂಬ ಸದಸ್ಯರೊಡನೆ ಬೆರೆಯಲಾಗದ್ದಕ್ಕೆ ಖಿನ್ನತೆಗೊಳಗಾಗುತ್ತಾರೆ. ಆಮೇಲೆ ಅದರಿಂದ ಹೊರಬರಲು ಒದ್ದಾಡುತ್ತಾರೆ.

ನಂತರ ಮನೋವೈದ್ಯರ ಬಳಿ ಬಂದು ಆಪ್ತ ಸಮಾಲೋಚನೆ ಮೊರೆಹೋಗುತ್ತಾರೆ. ಹದಿಹರೆಯದವರು ದುಷ್ಟ ಚಟಗಳ ದಾಸರಾಗುವುದು ಕೂಡ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ. ಈ ಎಲ್ಲ ಕಾರಣಗಳನ್ನು ಅವಲೋಕಿಸಿದರೆ – ನಮಗೆ ಇಂದು ಆಧುನಿಕತೆ ಅನಿವಾರ್ಯ. ಆದರೆ ಅದರಿಂದ ವೈಯಕ್ತಿಕ ಬದುಕು ಹಾಳಾಗದಂತೆ ಎಚ್ಚರ ವಹಿಸುವುದು ಕೂಡ ಅಷ್ಟೇ ಮುಖ್ಯ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...