More

    ವಿಜಯವಾಣಿ ವಿಜಯೋತ್ಸವದ ಅದೃಷ್ಟಶಾಲಿಗಳ ಆಯ್ಕೆ; ರಾಜ್ಯಾದ್ಯಂತ 2300 ಅದೃಷ್ಟವಂತರಿಗೆ ಬಹುಮಾನ

    ಬೆಂಗಳೂರು:  ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ವಿಜಯವಾಣಿ ದಿನಪತ್ರಿಕೆ ವತಿಯಿಂದ ಏರ್ಪಡಿಸಲಾಗಿದ್ದ ವಿಜಯವಾಣಿ ವಿಜಯೋತ್ಸವದ ಬೆಂಗಳೂರು ಆವೃತ್ತಿಯ ಅದೃಷ್ಟಶಾಲಿ ವಿಜೇತರನ್ನು ಹಿರಿಯ ಚಿತ್ರನಟ ದೊಡ್ಡಣ್ಣ ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಿದರು.

    ರಾಜ್ಯಾದ್ಯಂತ ವಿಜಯವಾಣಿಯ 10 ಆವೃತ್ತಿಗಳ ವ್ಯಾಪ್ತಿಯಲ್ಲೂ ವಿಜಯೋತ್ಸವ ನಡೆಸಲಾಗಿದ್ದು, ಆಯಾ ಆವೃತ್ತಿ ವ್ಯಾಪ್ತಿಯ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ವಿಜಯೋತ್ಸವದ ಭಾಗಿದಾರರಾದ 65 ಮಳಿಗೆಗಳಲ್ಲಿ ಖರೀದಿ ಮಾಡಿದ ಸಾವಿರಾರು ಜನರ ಪೈಕಿ 265 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.

    ವಿಜೇತರಲ್ಲಿ ಒಬ್ಬರಿಗೆ ಬಂಪರ್ ಬಹುಮಾನವಾಗಿ ಕಾರು ನೀಡಲಾಗುತ್ತದೆ. ಇನ್ನುಳಿದಂತೆ ತಲಾ ಒಂದು ದ್ವಿಚಕ್ರ ವಾಹನ, ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಎಲ್​ಇಡಿ ಟಿವಿ, ಸೇಫ್ ಲಾಕರ್, ಬೈಸಿಕಲ್ ಮತ್ತು ಗೀಜರ್ ಸೇರಿ 265 ಬಹುಮಾನಗಳನ್ನು ನೀಡಲಾಗುತ್ತಿದೆ. ಎಲ್ಲ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ. ವಿಜಯವಾಣಿಯ 10 ಆವೃತ್ತಿಗಳ ವ್ಯಾಪ್ತಿಯಲ್ಲಿ 2,300 ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ. ಬೆಂಗಳೂರು ಕಾರ್ಯಕ್ರಮದಲ್ಲಿ ಹಿರಿಯ ವಕೀಲ ರೇವಣಸಿದ್ದಯ್ಯ, ವಿಆರ್​ಎಲ್ ಮೀಡಿಯಾ ಉಪಾಧ್ಯಕ್ಷ ಕೆ.ಆರ್.ಅರುಣ್, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಉಪಸ್ಥಿತರಿದ್ದರು.

    ಬಂದಿದ್ದು 11 ಲಕ್ಷ ಕೂಪನ್​ಗಳು

    ವಿಜಯವಾಣಿ ಪತ್ರಿಕೆ ಜನರೊಟ್ಟಿಗೆ ಕೂಡಿಕೊಂಡು ಕೆಲಸ ಮಾಡುವ ನಿಟ್ಟಿನಲ್ಲಿ ಈ ವಿಜಯೋತ್ಸವ ಕಾರ್ಯಕ್ರಮವನ್ನು ಸಂಸ್ಥೆಯ ಎಂಡಿ ಆನಂದ ಸಂಕೇಶ್ವರ ಆರಂಭಿಸಿದರು. ಪ್ರತಿ ವರ್ಷ ಮಳಿಗೆಗಳಲ್ಲಿ ಆಚರಿಸುವ ವಿಜಯವಾಣಿ ವಿಜಯೋತ್ಸವದಲ್ಲಿ ಅತಿ ಹೆಚ್ಚು ಜನರು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ 973 ಮಳಿಗೆಗಳು ಭಾಗವಹಿಸಿದ್ದು, 11 ಲಕ್ಷ ಕೂಪನ್​ಗಳು ಲಕ್ಕಿಡಿಪ್ ಆಯ್ಕೆಗೆ ಬಂದಿವೆ. ಅದರಲ್ಲಿ 2,300 ಅದೃಷ್ಟವಂತರಿಗೆ ವಿವಿಧ ಬಹುಮಾನಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ವಿವರಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಓದುಗರು, ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅವರು ಧನ್ಯವಾದಗಳನ್ನು ತಿಳಿಸಿದರು.

    ಕೈಕಟ್ಟಿ ಕುಳಿತರೆ ಸಾಧನೆ ಸಾಧ್ಯವಿಲ್ಲ

    ವಿಜಯವಾಣಿ ವಿಜಯೋತ್ಸವದ ಅದೃಷ್ಟಶಾಲಿಗಳ ಆಯ್ಕೆ; ರಾಜ್ಯಾದ್ಯಂತ 2300 ಅದೃಷ್ಟವಂತರಿಗೆ ಬಹುಮಾನಚಿತ್ರರಂಗದಲ್ಲಿ ಬೆಳೆಯಲು ನಿರ್ದೇಶಕ ಸಿದ್ದಲಿಂಗಯ್ಯ ಅವರೇ ಕಾರಣ. ಅವರ ಕಂಪನಿಯ 11 ಚಿತ್ರಗಳಲ್ಲಿ ನನಗೆ ಅವಕಾಶ ಮಾಡಿಕೊಟ್ಟು, ಆಶ್ರಯ ನೀಡಿ ಬೆಳೆಸಿದ್ದಾರೆ. ಪ್ರತಿನಿತ್ಯ ದೇವರು, ತಂದೆ- ತಾಯಿಗಳ ಜತೆಗೆ ಗುರು ಸಿದ್ದಲಿಂಗಯ್ಯ ಹಾಗೂ ಮೊದಲ ಅಣ್ಣ ಬಸವರಾಜು ಅವರನ್ನೂ ನೆನೆಯುತ್ತೇನೆ ಎಂದು ನಟ ದೊಡ್ಡಣ್ಣ ಹೇಳಿದರು.

    ಬಂಗಾರದ ಮನುಷ್ಯ ಚಿತ್ರದ ‘ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಸಾಲುಗಳು ಡಾ.ವಿಜಯ ಸಂಕೇಶ್ವರ ಅವರಿಗೆ ಅನ್ವಯಿಸುತ್ತದೆ. ನಿರಂತರ ಶ್ರಮವಿದ್ದರೆ ಎಂತಹ ಕೆಲಸದಲ್ಲಿಯೂ ವಿಜಯಶಾಲಿಗಳಾಗಬಹುದು ಎಂಬುದಕ್ಕೆ ವಿಜಯ ಸಂಕೇಶ್ವರ ಅವರೇ ಸೂಕ್ತ ಉದಾಹರಣೆ. ಕೈಗೆತ್ತಿಕೊಂಡ ಕೆಲಸದಲ್ಲಿ ಯಶಸ್ಸು ಸಿಗುವವರೆಗೂ ಅವರು ವಿಶ್ರಮಿಸುವುದಿಲ್ಲ. ಉದ್ಯಮ ಆರಂಭಿಸುವವರು ಸಂಕೇಶ್ವರರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.

    ಭದ್ರಾವತಿ ಉಕ್ಕು- ಕಬ್ಬಿಣ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನ್ನ ಕೆಲಸವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಎಲ್ಲರೂ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಸಲಹೆಯಿತ್ತರು.

    ಲಕ್ಷಾಂತರ ಚೀಟಿಗಳಲ್ಲಿ ಕೆಲವೇ ಅದೃಷ್ಟಶಾಲಿಗಳನ್ನು ಲಕ್ಕಿಡಿಪ್ ಮೂಲಕ ಆರಿಸಿದ್ದೇನೆ. ಕಾರನ್ನು ಬಂಪರ್ ಬಹುಮಾನವಾಗಿ ಪಡೆದ ವಿಜೇತರು ಅದರ ಮೇಲೆ ವಿಜಯ ಸಂಕೇಶ್ವರ ಹಾಗೂ ವಿಆರ್​ಎಲ್ ಮೀಡಿಯಾ ಹೆಸರನ್ನು ಹಾಕಿಸಿಕೊಂಡರೆ ಸಂಸ್ಥೆಗೆ ಗೌರವ ಸೂಚಿಸಿದಂತಾಗುತ್ತದೆ.

    | ದೊಡ್ಡಣ್ಣ ಹಿರಿಯ ನಟ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts