ಚೈತ್ರಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್​ಸೂರ್ಯ

ಬೆಂಗಳೂರು: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ವಿಜಯ್​ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಜತೆ ಇಂದು ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿಜಯ್​ಸೂರ್ಯ ಅಗ್ನಿಸಾಕ್ಷಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿ ಮೂಲಕವೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಇವರ ಅಭಿನಯದ ಇಷ್ಟಕಾಮ್ಯ ಚಿತ್ರ ಬಂದು ಹೋಗಿದೆ. ಕದ್ದುಮುಚ್ಚಿ ಸಿನಿಮಾದಲ್ಲಿ ಕೂಡ ನಟಿಸಿದ್ದು ಮುಂದಿನ ದಿನಗಳಲ್ಲಿ ಇದು ಬಿಡುಗಡೆಯಾಗಲಿದೆ.

ಚೈತ್ರಾ ವಿಜಯ್​ ಅವರ ದೂರದ ಸಂಬಂಧಿಯೇ ಆಗಿದ್ದು, ಮನೆಯವರೆಲ್ಲ ಸೇರಿ ಮಾಡುತ್ತಿರುವ ಅರೆಂಜ್​ ಮ್ಯಾರೇಜ್​ ಆಗಿದೆ.