ಗಾಂಧೀಜಿ ಪ್ರಪಂಚ ಕಂಡ ಮಹಾನ್ ನಾಯಕ

ವಿಜಯಪುರ: ಗಾಂಧೀಜಿ ಪ್ರಪಂಚದ ಮಹಾನ್ ನೇತಾರ. ಅವರ ಶಾಂತಿಪಥ ಅನುಸರಿಸಿದ ಅನೇಕ ನಾಯಕರು ಜಗದ್ವಿಖ್ಯಾತರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪರಮಠ ಹೇಳಿದರು.

ಮಹಾತ್ಮ ಗಾಂಧೀಜಿ ಹುತಾತ್ಮ ದಿನಾಚರಣೆ ನಿಮಿತ್ತ ಬುಧವಾರ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಸಮಿತಿ, ವಿಜಯಪುರ ನಗರ ಬ್ಲಾಕ್ ಹಾಗೂ ಜಲನಗರ ಬ್ಲಾಕ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಗಾಂಧಿಯವರನ್ನು ಘೊಡಸೆ ಗುಂಡಿಕ್ಕಿ ಹುತಾತ್ಮರನ್ನಾಗಿಸಿರುವುದು ದುರದೃಷ್ಟಕರ ಸಂಗತಿ. ಅಂಥ ಮಹಾನ್ ನಾಯಕನನ್ನು ಕಳೆದುಕೊಂಡ ದೇಶ ಅಂದೇ ಬಡವವಾಯಿತು ಎಂದು ವಿಷಾದಿಸಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್​ಅಹಮ್ಮದ್ ಬಕ್ಷಿ, ಕೆಪಿಸಿಸಿ ಕಿಸಾನ್ ಘಟಕದ ಕಾರ್ಯದರ್ಶಿ ಡಿ.ಎಚ್. ಕಲಾಲ, ಗಾಂಧೀಜಿ ಬಗ್ಗೆ ಮಾತನಾಡಿದರು.

ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪುರ, ಜಿಲ್ಲಾ ಪ್ರಧಾನ ಕಾರ್ಯಾದರ್ಶಿ ವಸಂತ ಹೊನಮೊಡೆ, ಶಬ್ಬೀರ್ ಜಾಗೀರದಾರ್, ಚನ್ನಬಸಪ್ಪ ನಂದರಗಿ, ಇರ್ಫಾನ್ ಶೇಖ, ಕುಸುಮ ಪವಾರ, ಲಕ್ಷ್ಮಿ ಶಿವಣಗಿ, ಜಯಶ್ರೀ ಶಿವಣಗಿ, ದಿವ್ಯ ಶಹಾಪುರ, ಮತ್ತಿತರರು ಉಪಸ್ಥಿತರಿದ್ದರು.

ಜಾರ್ಜ್​ಗೆ ಸಂತಾಪ

ಕೇಂದ್ರ ಮಾಜಿ ರಕ್ಷಣಾ ಸಚಿವ, ಸಮಾಜವಾದಿ ನಾಯಕ ಜಾಜ್ ಫರ್ನಾಂಡಿಸ್ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಮುಖಂಡರು ಸಂತಾಪ ಸೂಚಿಸಿದರು.