ಬಿ.ಎಸ್.ಹರೀಶ್‌ಗೆ ರೋಟರಿ-ಸಿಲಿಕಾನ್ ಪತ್ರಿಕೋದ್ಯಮ ಪ್ರಶಸ್ತಿ

ಮೈಸೂರು: ‘ವಿಜಯವಾಣಿ’ಯ ಮುಖ್ಯ ಉಪಸಂಪಾದಕ ಬಿ.ಎಸ್.ಹರೀಶ್ ಅವರಿಗೆ ಪ್ರತಿಷ್ಠಿತ ‘ರೋಟರಿ-ಸಿಲಿಕಾನ್ ಪತ್ರಿಕೋದ್ಯಮ’ ಪ್ರಶಸ್ತಿ ದೊರೆತಿದೆ.

ಪತ್ರಿಕೋದ್ಯಮದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ರೋಟರಿ ಮೈಸೂರು ಮಿಡ್‌ಟೌನ್‌ನಿಂದ ಈ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು, ಈ ಬಾರಿ ಬಿ.ಎಸ್.ಹರೀಶ್ ಹಾಗೂ ಪ್ರಜಾವಾಣಿಯ ಛಾಯಾಗ್ರಾಹಕಿ ಬಿ.ಆರ್.ಸವಿತಾ ಅವರು ಆಯ್ಕೆಯಾಗಿದ್ದಾರೆ.

ಏ.24ರಂದು ಸಂಜೆ 6.30ಕ್ಕೆ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್‌ನ ಮುಖ್ಯ ಕಾರ್ಯನಿರ್ವಾಹಕ ಡಿ.ಸುಧನ್ವ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರೋಟರಿ ಅಧ್ಯಕ್ಷ ಡಾ.ಕೆ.ಎ.ಪ್ರಹ್ಲಾದ್, ಎಂ.ಪಿ.ಗೋಪಾಲಕೃಷ್ಣ, ಸಿಲಿಕಾನ್ ಕಂಟ್ರೋಲ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ಎಸ್.ರಾಘವೇಂದ್ರ, ಎಂ.ಎಸ್.ನವೀನ್‌ಚಂದ್ರ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *