23.2 C
Bangalore
Saturday, December 14, 2019

ಆಸಿಡ್ ದಾಳಿಯ ಹೀನಾಯ ಕೃತ್ಯ

Latest News

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡಣೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡಣೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

16 ಯುವಕರ ಮೇಲೆ ಪ್ರಕರಣ ದಾಖಲು

ಬಾದಾಮಿ: ದ್ವಿಚಕ್ರ ವಾಹನಕ್ಕೆ ಹಾದು ಹೋಗಲು ಅವಕಾಶ ನೀಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಇಬ್ಬರು ಯುವಕರ ಮಧ್ಯೆ ಆರಂಭವಾದ ಜಗಳ ಶನಿವಾರ ವಿಕೋಪಕ್ಕೆ...

ಮೆಟ್ರೋಗೆ ಹಾರಿ ಗಂಡ ಮೃತಪಟ್ಟ ಒಂದು ಗಂಟೆಯಲ್ಲೇ ಮನೆಯಲ್ಲಿ ನೇಣು ಬಿಗಿದುಕೊಂಡ ಹೆಂಡತಿ, ಮಗಳು!

ನವದೆಹಲಿ: ಗಂಡ ಮೆಟ್ರೋಗೆ ಹಾರಿ ಮೃತಪಟ್ಟ ಗಂಟೆಯೊಳಗೆ ಮನೆಯಲ್ಲಿ ಹೆಂಡತಿ ಮತ್ತು ಮಗಳು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ದೆಹಲಿಯ ಜವಹರ ಲಾಲ್​ ನೆಹರು ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ...

ದೆಹಲಿ ಹೊರವಲಯದ ಸಹಕಾರಿ ಗೃಹನಿರ್ವಣ ಕಾಲನಿಯೊಂದರಲ್ಲಿ 23 ವರ್ಷದ ಪ್ರೀತಿ ರಾಠಿ ತನ್ನ ತಂದೆ ಅಮರ್ ಸಿಂಗ್, ತಾಯಿ ರೋಶನಿ ಮತ್ತು ಸೋದರ ಹಿತೇಶ್​ನ ಜೊತೆಯಲ್ಲಿ ವಾಸವಾಗಿದ್ದಳು. ಅವಳ ಪಕ್ಕದ ಮನೆಯಲ್ಲಿ ಪ್ರೀತಿಗಿಂತ ಎರಡು ವರ್ಷ ದೊಡ್ಡವನಾಗಿದ್ದ ಅಂಕುರ್ ಪವಾರ್ ಎನ್ನುವ ಯುವಕ ವಾಸವಾಗಿದ್ದ. ಆತ ತಂದೆತಾಯಿಗೆ ಒಬ್ಬನೇ ಮಗ. ಬಾಲ್ಯದಿಂದಲೂ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದ ಪ್ರೀತಿ ಮತ್ತು ಅಂಕುರ್ ಆಪ್ತಮಿತ್ರರಾಗಿದ್ದರು. ಪಿ.ಯು.ಸಿ ಪಾಸಾದ ನಂತರ ಪ್ರೀತಿ ಬಿ.ಎಸ್ಸಿ. ನರ್ಸಿಂಗ್ ಪದವಿ ಪಡೆದರೆ ಅಂಕುರ್ ದೆಹಲಿಯ ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್​ವೆುಂಟ್ ಪದವಿ ಪಡೆದ. ಇಬ್ಬರೂ ನೌಕರಿಗಾಗಿ ಹಲವಾರು ಕಡೆ ಅರ್ಜಿ ಹಾಕಿದರು.

ಪ್ರೀತಿಗೆ ಭಾರತೀಯ ನೌಕಾಸೇನೆಯ ಆಸ್ಪತ್ರೆಯೊಂದರಲ್ಲಿ ನರ್ಸ್ ಕೆಲಸಕ್ಕಾಗಿ ಸಂದರ್ಶನದ ಕರೆ ಬಂದು ಆಕೆ ಮೊದಲ ಪ್ರಯತ್ನದಲ್ಲೇ ಕೆಲಸಕ್ಕೆ ಆಯ್ಕೆಯಾದಳು. ಆಕೆಗೆ ಲೆಪ್ಟಿನೆಂಟ್ ಹುದ್ದೆಗೆ ನೇಮಕಾತಿ ದೊರೆತು ಮುಂಬೈನಲ್ಲಿರುವ ಆಸ್ಪತ್ರೆಗೆ ವರದಿ ಮಾಡಿಕೊಳ್ಳಲು ಆದೇಶ ದೊರೆಯಿತು. ಪ್ರೀತಿ ಹಾಗೂ ಕುಟಂಬದ ಆನಂದಕ್ಕೆ ಪಾರವೇ ಇರಲಿಲ್ಲ. ಮಗಳು ಕೇಂದ್ರ ಸರ್ಕಾರದ ಹುದ್ದೆ ಪಡೆದಳು ಎಂಬ ಖುಷಿಯಲ್ಲಿ ಅಮರ್ ಸಿಂಗ್ ರಾಠಿ ತನ್ನ ನೆರೆಯವರಿಗೆ, ಗೆಳೆಯರಿಗೆ, ಬಂಧುಮಿತ್ರರಿಗೆ ಸಿಹಿ ತಿನಿಸಿದರು.

ಆದರೆ ಪ್ರೀತಿಗೆ ನೌಕರಿ ಸಿಕ್ಕ ವಿಷಯ ಅಂಕುರ್​ಗೆ ಸ್ವಲ್ಪವೂ ಸಂತಸ ತರಲಿಲ್ಲ. ‘ನೀನೇಕೆ ದೂರದ ಮುಂಬೈಗೆ ಹೋಗಿ ವಾಸ ಮಾಡಬೇಕು? ದೆಹಲಿಯಲ್ಲಿಯೇ ನೂರಾರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಿವೆ, ಇಲ್ಲೇ ಇದ್ದು ನೌಕಾ ಸೇವೆಯ ಅವಕಾಶವನ್ನು ತಿರಸ್ಕರಿಸು’ ಎಂದು ಪ್ರೀತಿಗೆ ಆಗ್ರಹಿಸಿದ. ಆಕೆ ಅವನ ಮಾತಿಗೆ ಒಪ್ಪದೆ ‘ನನಗೆ ಮೊದಲನೆಯ ಪ್ರಯತ್ನದಲ್ಲಿಯೇ ಸರ್ಕಾರಿ ನೌಕರಿ ಸಿಕ್ಕಿರುವಾಗ ಅದನ್ನೇಕೆ ಬಿಡಲಿ? ಮುಂಬೈನಲ್ಲಿ ಇಲ್ಲಿಗಿಂತ ಹೆಚ್ಚು ಹೋಟೆಲುಗಳಿವೆ, ನೀನೂ ನೌಕರಿಗಾಗಿ ಅಲ್ಲಿಯೇ ಪ್ರಯತ್ನಿಸು’ ಎಂದಳು. ‘ನಾನು ದೆಹಲಿಯನ್ನು ಬಿಡಲು ಹೇಗೆ ಸಾಧ್ಯ? ನನ್ನ ತಂದೆ-ತಾಯಿ ಒಪ್ಪುವುದೇ ಇಲ್ಲವಲ್ಲ’ ಎಂದು ಅಂಕುರ್ ಕೇಳಿದಾಗ ‘ಹಾಗಾದರೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ’ ಎಂದು ಪ್ರೀತಿ ಖಡಾಖಂಡಿತವಾಗಿ ಉತ್ತರಿಸಿದಳು.

ಪ್ರೀತಿಯನ್ನು ಮದುವೆಯಾಗಿ ಅವಳ ಜೊತೆ ಸುಖೀಜೀವನ ಸಾಗಿಸುವ ತನ್ನ ಕನಸು ಭಗ್ನವಾಯಿತು ಎಂಬ ದುಃಖದಲ್ಲಿದ್ದ ಅಂಕುರ್​ಗೆ ತಂದೆ ‘ನಿನಗಿಂತ ಕಿರಿಯಳಾದ ಪ್ರೀತಿ ಮೊದಲ ಯತ್ನಕ್ಕೇ ಸರ್ಕಾರಿ ನೌಕರಿ ಗಳಿಸಿದ್ದಾಳೆ, ನೀನ್ಯಾವ ಕೆಲಸಕ್ಕೂ ಬಾರದೆ ದಂಡಪಿಂಡವಾಗಿರುವೆ’ ಎಂದು ಮೂದಲಿಸಿದ್ದು ಆತನನ್ನು ಖಿನ್ನತೆಯತ್ತ ದೂಡಿತು. ತಾನು ಎಲ್ಲ ರೀತಿಯಲ್ಲಿಯೂ ಆಕೆಗಿಂತ ಮುಂದೆ ಇರುವಾಗ ಏಕೆ ಹೀಗಾಯಿತು ಎಂದು ಚಿಂತಿಸುತ್ತ ಏನಾದರೂ ಮಾಡಿ ಪ್ರೀತಿ ಮುಂಬೈಗೆ ಹೋಗದೆ ದೆಹಲಿಯಲ್ಲಿಯೇ ಉಳಿಯುವಂತೆ ಮಾಡಬೇಕು ಎಂದು ಯೋಚಿಸತೊಡಗಿದ.

‘ಐ.ಎನ್.ಎಸ್ ಅಶ್ವಿನಿ’ ಆಸ್ಪತ್ರೆಗೆ ವರದಿ ಮಾಡಿಕೊಳ್ಳಲು ಪ್ರೀತಿ 2013ರ ಮೇ 1ರಂದು ತಂದೆ ಹಾಗೂ ಚಿಕ್ಕಮ್ಮ ಸುನಿತಾ ಜೊತೆಗೆ ರೈಲನ್ನೇರಿದಳು. ಅವರು ಮಾರನೆಯ ಮಧ್ಯಾಹ್ನ ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಇಳಿದರು. ಪ್ರೀತಿ ತನ್ನ ಕಿಟ್​ಬ್ಯಾಗ್ ಹಿಡಿದುಕೊಂಡು ತಂದೆ ಜತೆ ಸಂತಸದಿಂದ ಮುಂದೆ ಸಾಗುತ್ತಿದ್ದಾಗ ಹಿಂದಿನಿಂದ ಯಾರೋ ಅವಳ ಭುಜವನ್ನು ತಟ್ಟಿದ ಹಾಗಾಯಿತು. ಆಕೆ ಥಟ್ಟನೆ ಹಿಂತಿರುಗಿ ನೋಡಿದಾಗ ಮುಖಕ್ಕೆ ಯಾವುದೋ ದ್ರವ ಬಿದ್ದಂತಾಯಿತು. ಕೆಲವೇ ಕ್ಷಣಗಳಲ್ಲಿ ಅವಳ ಕಣ್ಣು, ಬಾಯಿ ಹಾಗೂ ಕತ್ತು ತೀವ್ರವಾಗಿ ಉರಿಯತೊಡಗಿದವು. ಪ್ರೀತಿ ಕೆಳಗೆ ಕುಳಿತು ನೋವಿನಿಂದ ಜೋರಾಗಿ ಚೀರತೊಡಗಿದಳು. ಅವಳ ಪಕ್ಕದಲ್ಲಿಯೇ ಸಾಗುತ್ತಿದ್ದ ತಂದೆ, ಚಿಕ್ಕಮ್ಮ ಮತ್ತು ಇತರ ಪ್ರಯಾಣಿಕರಾದ ಸುದೇಶಕುಮಾರಿ ಹಾಗೂ ಸಮೀರ್ ಶೇಖ್​ರಿಗೂ ಪ್ರೀತಿಯ ಮೇಲೆರಚಿದ್ದ ಆ ದ್ರವ ತಗುಲಿ ಎಲ್ಲರೂ ಗಾಬರಿಯಿಂದ ಕೂಗತೊಡಗಿದರು. ಕೂಡಲೇ

ಪ್ಲಾಟ್​ಫಾರ್ವಿುನಲ್ಲಿದ್ದ ಸಾರ್ವಜನಿಕರು ಅವರತ್ತ ಧಾವಿಸಿ ರೈಲ್ವೆ ಅಧಿಕಾರಿಗಳಿಗೆ ಸುದ್ದಿಮುಟ್ಟಿಸಿದರು. ಎಲ್ಲರನ್ನೂ ಗುರುನಾನಕ್ ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರು, ‘ಗಾಯಾಳುಗಳಿಗೆ ಆಸಿಡ್ ಎರಚಲಾಗಿದೆ’ ಎಂದು ಹೇಳಿದರು. ಪ್ರೀತಿಯ ಎರಡೂ ಕಣ್ಣುಗಳು ಇಂಗಿಹೋಗಿದ್ದಲ್ಲದೆ ಅವಳ ಕುತ್ತಿಗೆ ಮೇಲೆ ಬಿದ್ದಿದ್ದ ಆಸಿಡ್ ಪುಪು್ಪಸದವರೆಗೂ ಹರಿದಿತ್ತು. ಅವಳನ್ನು ಒಳರೋಗಿಯಾಗಿ ದಾಖಲಿಸಲಾಯಿತು. ಉಳಿದವರಿಗೆ ಪ್ರಥಮೋಪಚಾರ ಮಾಡಿ ಬಿಡುಗಡೆ ಮಾಡಲಾಯಿತು. ಬಾಂದ್ರಾ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದರು.

ದುರದೃಷ್ಟವಶಾತ್ ಆಸಿಡ್ ಎರಚಿದ ವ್ಯಕ್ತಿಯನ್ನು ಯಾರೂ ನೋಡಿರಲಿಲ್ಲ. ಪ್ರೀತಿಯೂ ತನಗೆ ಯಾರ ಮೇಲೆಯೂ ಅನುಮಾನವಿಲ್ಲ ಎಂದು ಹೇಳಿದ್ದರಿಂದ ಪೊಲೀಸರು ಪ್ಲಾಟ್​ಫಾರ್ವಿುನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಮೊರೆ ಹೋಗಬೇಕಾಯಿತು. ಯಾವುದೇ ಕುರುಹು ಸಿಗಲಿಲ್ಲ. ತನಿಖಾಧಿಕಾರಿ ದೆಹಲಿಗೆ ಹೋಗಿ ತನಿಖೆ ನಡೆಸಿದರು. ಪವನ್ ಎನ್ನುವವನನ್ನು ಸಂಶಯದ ಮೇಲೆ ಬಂಧಿಸಿ ಆತನ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಬಿಡುಗಡೆ ಮಾಡಿದರು. ಆರೋಪಿ ಪತ್ತೆಯಾಗದೆ ತನಿಖೆ ಸ್ಥಗಿತಗೊಂಡಿತು.

ಏತನ್ಮಧ್ಯೆ ಪ್ರೀತಿಯ ದೇಹಸ್ಥಿತಿ ಬಿಗಡಾಯಿಸಿ ಅವಳನ್ನು ಭಾಭಾ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 1ರಂದು ಆಕೆ ಅಸುನೀಗಿದಾಗ ಕೊಲೆ ಪ್ರಕರಣ ದಾಖಲಾಯಿತು. ‘ಆರೋಪಿಯನ್ನು ಪತ್ತೆಮಾಡುವಲ್ಲಿ ರೈಲ್ವೆ ಪೊಲೀಸರು ವಿಫಲರಾಗಿದ್ದಾರೆ’ ಎಂಬ ಸಾರ್ವಜನಿಕ ಟೀಕೆ ಮೇರೆಗೆ ಮುಂದಿನ ತನಿಖೆಯನ್ನು ಮುಂಬೈ ಪೊಲೀಸ್​ನ ಕ್ರೈಂ ಬ್ರಾಂಚ್​ಗೆ ಒಪ್ಪಿಸಲಾಯಿತು.

ಕ್ರೈಂ ಬ್ರಾಂಚ್ ಪೊಲೀಸರು ದೆಹಲಿಗೆ ಹೋಗಿ ಅಂಕುರ್​ನನ್ನು ಸಂಶಯದ ಮೇಲೆ ವಶಕ್ಕೆ ಪಡೆದು ತೀವ್ರರೀತಿಯಲ್ಲಿ ಪ್ರಶ್ನಿಸಿದಾಗ ಆತ ತಾನೇ ಪ್ರೀತಿಯ ಮೇಲೆ ಆಸಿಡ್ ಎರಚಿದ್ದಾಗಿ ಒಪ್ಪಿಕೊಂಡು ಆಸಿಡ್ ಖರೀದಿಸಿದ್ದ ಅಂಗಡಿಯನ್ನು ತೋರಿಸಿದ. ತನ್ನ ಪ್ರೇಮವನ್ನು ಧಿಕ್ಕರಿಸಿ ಪ್ರೀತಿ ಮುಂಬೈಗೆ ಹೋದದ್ದರಿಂದ ಅವಳ ಮೇಲೆ ಆಸಿಡ್ ಎರಚಿದೆ ಎಂದು ಹೇಳಿದ ಅಂಕುರ್, ‘ನನಗೆ ಅವಳನ್ನು ಮದುವೆಯಾಗುವ ಆಸೆಯಿತ್ತು. ಅವಳು ಮುಂಬೈಗೆ ಹೋದನಂತರ ನನ್ನನ್ನು ಮರೆತು ಬೇರೆಯವನನ್ನು ಲಗ್ನವಾಗಬಹುದು ಎಂಬ ಭಯದಿಂದಲೂ, ನನಗೆ ಸಿಗದ ನೌಕರಿ ಅವಳಿಗೆ ಸಿಕ್ಕ ಅಸೂಯೆಯಿಂದಲೂ ಹೀಗೆ ಮಾಡಿದೆ. ಅವಳ ಮುಖ ವಿರೂಪಗೊಂಡರೆ ಯಾರೂ ಅವಳನ್ನು ಮದುವೆಯಾಗುವುದಿಲ್ಲ ಮತ್ತು ಅವಳಿಗೆ ಕೆಲಸವೂ ಸಿಗುವುದಿಲ್ಲವೆಂದು ರ್ತಸಿದ್ದೆ. ಪ್ರೀತಿಗೆ ತಿಳಿಯದಂತೆ ನಾನೂ ಅವಳಿದ್ದ ರೈಲಿನಲ್ಲಿಯೇ ಮುಂಬೈಗೆ ಹೋದೆ. ಅವಳು ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಇಳಿದಾಗ ನಾನು ಅವಳನ್ನು ಹಿಂಬಾಲಿಸಿ ಆಸಿಡ್ ಎರಚಿ ಗುಂಪಿನಲ್ಲಿ ಮಾಯವಾದೆ. ಆನಂತರ ಮುಂದಿನ ರೈಲಿನಲ್ಲಿ ದೆಹಲಿಗೆ ವಾಪಸಾದೆ’ ಎಂದ. ‘ನನಗೆ ಅವಳನ್ನು ಕೊಲ್ಲುವ ಉದ್ದೇಶ ಇರಲಿಲ್ಲ’ ಎಂದ ಅಂಕುರ್​ನನ್ನು ಮುಂಬೈಗೆ ಕರೆತಂದು ನ್ಯಾಯಾಲಯದಲ್ಲಿ ಅವನ ಮೇಲೆ ಕೊಲೆ ಮೊಕದ್ದಮೆ ಹೂಡಲಾಯಿತು. ನ್ಯಾಯಾಲಯ ಅಂಕುರ್​ಗೆ ಮರಣದಂಡನೆ ವಿಧಿಸಿತು. ಆನಂತರ ಮುಂಬೈ ಉಚ್ಚ ನ್ಯಾಯಾಲಯ ಅವನ ಮೇಲ್ಮನವಿಯನ್ನು ಪುರಸ್ಕರಿಸಿ ಅಂಕುರ್​ಗೆ ಜೀವಾವಧಿ ಶಿಕ್ಷೆಯನ್ನು ಕೊಟ್ಟಿತು.

ಅಸೂಯೆ, ಹಗೆತನ ಹಾಗೂ ತಿರಸ್ಕಾರಗಳು ಆಸಿಡ್ ಎರಚುವಿಕೆಯ ಪ್ರಮುಖ ಕಾರಣಗಳು. ಮೊದಲಿಗೆ ಆಸಿಡ್ ದಾಳಿಗಳಿಗೆ ಹೆಚ್ಚಿನ ಶಿಕ್ಷೆಯಿರಲಿಲ್ಲ. ಆದರೆ ದೇಶದಲ್ಲಿ ಇಂತಹ ದಾಳಿಗಳು ಹೆಚ್ಚಾಗತೊಡಗಿದಾಗ ಭಾರತೀಯ ದಂಡ ಸಂಹಿತೆಗೆ ಎರಡು ವಿಶೇಷ ಕಲಂಗಳನ್ನು ಸೇರಿಸಲಾಯಿತು. ಆಸಿಡ್ ಎರಚಿ ಯಾರದ್ದಾದರೂ ಅಂಗ ಊನ ಮಾಡಿದರೆ ಕಲಂ 326 ಏ ಅಡಿಯಲ್ಲಿ ಕಡಿಮೆಯೆಂದರೆ 10 ವರ್ಷ ಶಿಕ್ಷೆ ನೀಡಿ ಆಜೀವ ಕಾರಾಗೃಹವಾಸವನ್ನೂ ನೀಡಬಹುದು. ಅಲ್ಲದೆ ಸಂತ್ರಸ್ತೆಯ ಔಷಧೋಪಚಾರದ ಶುಲ್ಕ ಭರಿಸಲು ದಂಡ ವಿಧಿಸಬಹುದು. ಮುಖ ಹಾಗೂ ಅಂಗಾಂಗಗಳ ಊನವಾದರೆ ಕಡಿಮೆಯೆಂದರೆ -ಠಿ; 7 ಲಕ್ಷ ಪರಿಹಾರವನ್ನೂ, 50% ಊನವಾದರೆ -ಠಿ; 5 ಲಕ್ಷ ಪರಿಹಾರವನ್ನೂ ನೀಡಲಾಗುತ್ತದೆ. ಅಂಗ ಊನ ಮಾಡುವ ಉದ್ದೇಶದಿಂದ ಆಸಿಡ್ ಎರಚುವ ಪ್ರಯತ್ನ ಮಾಡಿದರೂ ಕಲಂ 326 ಬಿ ಅಡಿಯಲ್ಲಿ ಕಡಿಮೆಯೆಂದರೆ 5 ವರ್ಷ ಶಿಕ್ಷೆ ನೀಡಿ ಇದನ್ನು 7 ವರ್ಷದವರೆಗೆ ವಿಸ್ತರಿಸಬಹುದು. ಈ ಅಪರಾಧಗಳು ಜಾಮೀನುರಹಿತವಾದವು.

ಆಸಿಡ್ ಮಾರಾಟಗಾರರು 19 ವರ್ಷ ವಯಸ್ಸಿನೊಳಗಿನವರಿಗೆ ಮಾರಬಾರದು, ಕೊಳ್ಳುವವರ ಪರಿಚಯ ಪತ್ರದ ಪ್ರತಿಯನ್ನು ಪಡೆಯಬೇಕು, ಖರೀದಿಯ ಕಾರಣವನ್ನು ಹಾಗೂ ಮಾರಾಟದ ಪ್ರಮಾಣವನ್ನು ವಿಶೇಷ ರಿಜಿಸ್ಟರ್​ನಲ್ಲಿ ನಮೂದಿಸಬೇಕು ಮುಂತಾದ ನಿಬಂಧನೆಗಳಿವೆ. ಇಷ್ಟೆಲ್ಲ ಕಟ್ಟುಪಾಡುಗಳಿದ್ದರೂ ಪ್ರತಿವರ್ಷ ಆಸಿಡ್ ದಾಳಿಯ ಸುಮಾರು 250 ಪ್ರಕರಣಗಳು ದೇಶದಲ್ಲಿ ನಡೆಯುತ್ತವೆ. ಇಂತಹ ದಾಳಿಗಳಿಂದ ಪಾರಾಗಬೇಕಾದಲ್ಲಿ ಗೆಳೆಯರನ್ನು ಮಾಡಿಕೊಳ್ಳುವ ಮುನ್ನ ಹಾಗೂ ನಂತರ ಎಚ್ಚರಿಕೆ ಅಗತ್ಯ. ಅಲ್ಲದೆ ತಮ್ಮನ್ನು ಸದಾಕಾಲವೂ ಹಿಂಬಾಲಿಸುವ ಸ್ಟಾಕರ್​ಗಳ ಬಗ್ಗೆ ಗಮನವಿಟ್ಟಿರಬೇಕು. ‘ಅತಿಯಾದ ಪ್ರೀತಿ ಯಾರಿಗೂ ಗೌರವವನ್ನಾಗಲಿ, ಯೋಗ್ಯತೆಯನ್ನಾಗಲಿ ತರುವುದಿಲ್ಲ’ ಎಂದಿದ್ದಾನೆ ಗ್ರೀಕ್ ನಾಟಕಕಾರ ಯೂರಿಪಿಡೀಸ್. ಮಾಧ್ಯಮಗಳಿಂದ ಪ್ರಭಾವಿತರಾಗುವ ಯುವಜನಾಂಗ ಈ ಸತ್ಯವನ್ನು ಅರಿತಾಗ ಮಾತ್ರ ಇಂತಹ ಅವಘಡಗಳು ಕಡಿಮೆಯಾಗುತ್ತವೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...