ವರ್ಷದ ಹಿನ್ನೋಟ| ಸ್ನೇಹ ಮುನಿಸು ಕನಸು

Latest News

ಚೀನಾದ ಸೇತುವೆ ನಿರ್ಮಾಣಕ್ಕೆ ತಗುಲಿದ್ದು 3,000 ಕೋಟಿ ರೂಪಾಯಿ ಅಲ್ಲ 10,000 ಕೋಟಿ ರೂ

ನವದೆಹಲಿ: ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದೆ. ಪೋಟೋದ ಒಂದು ಭಾಗದಲ್ಲಿ ಗುಜರಾತ್ನಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭಬಾಯ್ ಪಟೇಲರ ಸ್ಟ್ಯಾಚು...

ಗುಜರಿ ಸೇರುವ ನೂರು ಕೋಟಿಗೂ ಅಧಿಕ ಹಳೆಯ ಟೈರ್​ಗಳ ಕಥೆಯೇನು?: ರಬ್ಬರ್ ಮರುಬಳಕೆಗೆ ಹೊಸ ತಂತ್ರಜ್ಞಾನ ಆವಿಷ್ಕಾರ

ಕೋಲ್ಕತ: ಪ್ರತಿವರ್ಷ ನೂರು ಕೋಟಿಗೂ ಅಧಿಕ ಹಳೆಯ ಟೈರ್​ಗಳು ಗುಜರಿಗೆ ಸೇರುತ್ತವೆ. ಇವುಗಳನ್ನು ಮರುಬಳಕೆ ಮಾಡುವುದು ತುಸು ವೆಚ್ಚದಾಯಕ ಹಾಗೂ ಪೂರ್ಣ ಪ್ರಮಾಣದಲ್ಲಿ...

ಮೈತ್ರಿ ಸರ್ಕಾರ ಪತನದ ಮೂಲ ಪುರುಷ ನಾನಲ್ಲ, ಮೂಲ ಪುರುಷನ ಪತ್ತೆಗೆ ಎಚ್​ಡಿಕೆ ತನಿಖೆ ನಡೆಸಲಿ : ಡಾ.ಸುಧಾಕರ್​

ಚಿಕ್ಕಬಳ್ಳಾಪುರ: ಮೈತ್ರಿ ಸರ್ಕಾರದ ಪತನಕ್ಕೆ ನಾನು ಮೂಲ ಪುರುಷನಲ್ಲ. ಆ ಮೂಲ ಪುರುಷನ ಪತ್ತೆಗೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ತನಿಖೆ ನಡೆಸಲಿ ಎಂದು...

ಚನ್ನರಾಯಪಟ್ಟಣ ತಾಲೂಕಿನ ಮತಿಘಟ್ಟ ಬಳಿ ಸೇತುವೆ ಡಿಕ್ಕಿಯಾದ ಕಾರು, ಐವರಿಗೆ ಗಾಯ

ಚನ್ನರಾಯಪಟ್ಟಣ: ತಾಲೂಕಿನ ಮತಿಘಟ್ಟ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆ ಏರಿ ಮೇಲಿನ ಸೇತುವೆಗೆ ಗುದ್ದಿರುವ ಪರಿಣಾಮ ಐವರು ಗಾಯಗೊಂಡಿದ್ದಾರೆ. ಬೆಂಗಳೂರು ಮೂಲದವರಾದ ಐವರು...

ಒಂಬತ್ತನೇ ವಯಸ್ಸಿಗೇ ಪದವಿ ಪಡೆದು ವಿಶ್ವದಾಖಲೆಗೆ ಪಾತ್ರವಾದ ಮಗು

ಆ್ಯಮ್​ಸ್ಟರ್​ಡ್ಯಾಮ್: ಬುದ್ಧಿವಂತ ಮಗುವೊಂದು ಒಂಬತ್ತನೇ ವಯಸ್ಸಿಗೆ ಪದವಿ ಪೂರ್ಣಗೊಳಿಸುವ ಮೂಲಕ ವಿಶ್ವದ ಅತ್ಯಂತ ಕಿರಿಯ ಪದವೀಧರ ಎಂಬ ಖ್ಯಾತಿಗೆ ಪಾತ್ರವಾಗಿದೆ. ನೆದರ್ಲೆಂಡ್ ರಾಜಧಾನಿ...

ಹಲವು ರಾಜಕೀಯ ಏಳುಬೀಳುಗಳಿಗೆ 2018 ಸಾಕ್ಷಿಯಾಯಿತು. ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದಿದ್ದರಿಂದ ಮೈತ್ರಿ ಸರ್ಕಾರ ರಚನೆಯಾಗಿ, ಆಡಳಿತರಥ ಸಾಗುತ್ತಿದ್ದರೂ, ಅಲ್ಲಲ್ಲಿ ಅಡೆತಡೆಗಳು ಎದುರಾಗುತ್ತಲೇ ಇವೆ. ಮತ್ತೊಂದೆಡೆ, ಭೀಕರ ಬರದೊಂದಿಗೆ ವರ್ಷಕ್ಕೆ ವಿದಾಯ ಹೇಳಬೇಕಾದ ವಿಷಾದಕರ ಸನ್ನಿವೇಶವೂ ನಿರ್ಮಾಣವಾಯಿತು.

2018ರ ಆರಂಭದಲ್ಲಿ ರಾಜ್ಯ ರಾಜಕೀಯ ವಿಧಾನಸಭಾ ಚುನಾವಣೆಯ ಮೂಡ್​ಗೆ ತಿರುಗಿದ್ದರೆ, ಈಗ ಲೋಕಸಭಾ ಚುನಾವಣೆಯ ಕಾವು ನಿಧಾನಕ್ಕೆ ಏರತೊಡಗಿದೆ. ಹಾಗೆನೋಡಿದರೆ ಈ ಇಡೀ ವರ್ಷದಲ್ಲಿ ರಾಜಕೀಯ ಮೇಲಾಟ ಕಂಡುಬಂತು. ಜನವರಿ ತಿಂಗಳಿಂದ ರಾಜ್ಯ ಮುಖಂಡರ ಜತೆಗೆ ರಾಷ್ಟ್ರೀಯ ಮುಖಂಡರು ಸಹ ರಾಜ್ಯದಲ್ಲಿಯೇ ಬೀಡುಬಿಟ್ಟರು. ಪ್ರಧಾನಿ ನರೇಂದ್ರ ಮೋದಿ 23ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಿದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾವಿರಾರು ಕಿಲೋಮೀಟರ್ ಸಂಚರಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರಿನಲ್ಲಿಯೇ ಮನೆ ಮಾಡಿದ್ದರು. ಅನೇಕ ಕೇಂದ್ರ ಸಚಿವರು ಇಲ್ಲಿದ್ದು ಚುನಾವಣೆ ಉಸ್ತುವಾರಿ ನೋಡಿಕೊಂಡರು.

ಯಾರಿಗೂ ಬಹುಮತವಿಲ್ಲ: ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ. ಅಧಿಕಾರದಲ್ಲಿದ್ದ ಕಾಂಗ್ರೆಸ್ 80 ಸ್ಥಾನಗಳಿಗೆ ತೃಪ್ತಿಪಟ್ಟರೆ, ಬಿಜೆಪಿ 104 ಸ್ಥಾನಗಳನ್ನು ಪಡೆಯಿತು. ಜೆಡಿಎಸ್ ಹಾಗೂ ಬಿಎಸ್​ಪಿ ಮೈತ್ರಿಕೂಟ 37 ಸ್ಥಾನ ಪಡೆಯಿತು. ಇದೇ ಮೊದಲ ಬಾರಿಗೆ ಬಿಎಸ್​ಪಿ ವಿಧಾನಸಭೆ ಪ್ರವೇಶಿಸಿತು. ಇಬ್ಬರು ಪಕ್ಷೇತರರು ಗೆದ್ದರು.

ಮೂರು ದಿನಕ್ಕೆ ಬಿಜೆಪಿ ಸರ್ಕಾರ: ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆ ಮಾಡಿತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಕೋರ್ಟ್ ಒಂದೇ ದಿನದಲ್ಲಿ ಬಹುಮತ ಸಾಬೀತಿಗೆ ಸೂಚನೆ ನೀಡಿತು. ಬಿಜೆಪಿ ಆಪರೇಷನ್ ಕಮಲ ನಡೆಸುವ ಉದ್ದೇಶ ಈಡೇರಲಿಲ್ಲ. ಆದ್ದರಿಂದ ವಿಶ್ವಾಸಮತಕ್ಕೂ ಹೋಗದ ಸಿಎಂ ಯಡಿಯೂರಪ್ಪ ರಾಜೀನಾಮೆ ನಿರ್ಧಾರ ಪ್ರಕಟಿಸಿದರು.

ಮೈತ್ರಿ ಸರ್ಕಾರ ರಚನೆ

ಫಲಿತಾಂಶ ಪ್ರಕಟವಾದ ದಿನದಂದೆ ಕ್ಷಿಪ್ರ ಕ್ರಮಕ್ಕೆ ಮುಂದಾದ ಕಾಂಗ್ರೆಸ್​ನ ವರಿಷ್ಠರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನವೊಲಿಸಿದರು. ಬಿಜೆಪಿ ನಾಯಕರು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸುವುದಕ್ಕೆ ಮುನ್ನವೇ ಜೆಡಿಎಸ್​ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ದೇವೇಗೌಡರು ಕಾಂಗ್ರೆಸ್​ಗೆ ಬೆಂಬಲ ನೀಡಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹಾಗೂ ಡಾ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಆಪರೇಷನ್ ಕಮಲದ ಸದ್ದು

ಸರ್ಕಾರ ರಚನೆಯಾಗಿ ಏಳು ತಿಂಗಳಾಗುತ್ತ ಬಂದಿದ್ದರೂ ಆಪರೇಷನ್ ಕಮಲದ ಸದ್ದು ಇನ್ನೂ ನಿಂತಿಲ್ಲ. ಇಂದಲ್ಲ ನಾಳೆ ಸರ್ಕಾರ ರಚನೆ ಮಾಡಲೇಬೇಕೆಂದು ಬಿಜೆಪಿ ತೆರೆಮರೆ ಪ್ರಯತ್ನ ಮುಂದುವರಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಹ ತಂತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಮಾಡುತ್ತಿವೆ.

ಜಾರಿದ ಮಾತು…

ಸಿಎಂ ಎಚ್.ಡಿ. ಕುಮಾರಸ್ವಾಮಿ ಪದೇಪದೆ ತಮ್ಮನ್ನು ತಾವು ಸಾಂರ್ದಭಿಕ ಶಿಶು ಎಂದು ಕರೆದುಕೊಂಡಿದ್ದು ಟೀಕೆಗೂ ಕಾರಣವಾಯಿತು. ಇದಲ್ಲದೆ, ಹಲವು ಸಂದರ್ಭಗಳಲ್ಲಿ ಅವರಾಡಿದ ಮಾತು ವಿವಾದಕ್ಕೂ ಈಡಾಗಿದೆ. ರೈತ ಮಹಿಳೆಯೊಬ್ಬರ ಮಾತಿಗೆ ಉತ್ತರ ನೀಡುವ ಭರದಲ್ಲಿ ಅವರು ಬಳಸಿದ ಮಾತು, ಮದ್ದೂರಿನ ಜೆಡಿಎಸ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಹಂತಕರಿಗೆ ಶೂಟೌಟ್ ಮಾಡುವಂತೆ ಹೇಳಿದ್ದು… ಹೀಗೆ.

ಉಪ ಚುನಾವಣೆಯಲ್ಲಿ ದೋಸ್ತಿ ನಗೆ

ಸಂಸದರಾಗಿದ್ದ ಬಿ.ಎಸ್. ಯಡಿಯುರಪ್ಪ, ಬಿ. ಶ್ರೀರಾಮುಲು ಹಾಗೂ ಸಿ.ಎಸ್. ಪುಟ್ಟರಾಜು ವಿಧಾನಸಭೆಗೆ ಆಯ್ಕೆಯಾದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಹಾಗೂ ಕುಮಾರಸ್ವಾಮಿ ರಾಜೀನಾಮೆ ಕೊಟ್ಟ ರಾಮನಗರ ಹಾಗೂ ಸಿದ್ದು ನ್ಯಾಮಗೌಡರ ನಿಧನದಿಂದ ತೆರವಾದ ಜಮಖಂಡಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಯಶಸ್ವಿಯಾದವು. ಶಿವಮೊಗ್ಗ ಹೊರತುಪಡಿಸಿ ಉಳಿದೆಡೆ ಮೈತ್ರಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದರು. ರಾಮನಗರದಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಗೆದ್ದರು. ಆ ಮೂಲಕ ಮುಖ್ಯಮಂತ್ರಿ ಹಾಗೂ ಪತ್ನಿ ಒಂದೇ ಸಂದರ್ಭದಲ್ಲಿ ವಿಧಾನಸಭಾ ಸದಸ್ಯರಾಗಿದ್ದು ವಿಶೇಷ.

ಮೇಲೆ ಮೈತ್ರಿ ಇಲ್ಲಿ ಮುನಿಸು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿವೆಯಾದರೂ ಸ್ಥಳೀಯ ಮಟ್ಟದಲ್ಲಿ ಈ ಮೈತ್ರಿ ಗಟ್ಟಿಯಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ಮನಸ್ಸು ಒಂದಾಗಿಲ್ಲ. ಅದೇ ಸ್ಥಿತಿ ಅನೇಕ ಜಿಲ್ಲೆಗಳಲ್ಲಿ ಇದೆ.

ಎರಡು ಕ್ಷೇತ್ರದ ಸ್ಪರ್ಧೆ

ಈ ಬಾರಿ ಚುನಾವಣೆಯಲ್ಲಿ ಮೂವರು ಮುಖಂಡರು ಎರಡು ಕ್ಷೇತ್ರದಲ್ಲಿ ಜಯಗಳಿಸಿದ್ದು ವಿಶೇಷವಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸ್ಪರ್ಧೆ ಮಾಡಿ, ಚಾಮುಂಡೇಶ್ವರಿಯಲ್ಲಿ ಸೋತರು. ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಸ್ಪರ್ಧಿಸಿ ಎರಡೂ ಕಡೆ ಗೆದ್ದು, ಚನ್ನಪಟ್ಟಣ ಉಳಿಸಿಕೊಂಡರು. ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಮೊಳಕಾಲ್ಮೂರು ಹಾಗೂ ಬಾದಾಮಿಯಲ್ಲಿ ಸ್ಪರ್ಧಿಸಿ ಬಾದಾಮಿಯಲ್ಲಿ ಸೋತರು. ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ನಿಧನರಾದ್ದರಿಂದ ಚುನಾವಣೆ ಮುಂದೂಡಲ್ಪಟ್ಟಿತು. ಮತದಾರರ ಗುರುತಿನ ಚೀಟಿಗಳು ಸಿಕ್ಕವೆಂಬ ಕಾರಣಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಮುಂದೂಡಲ್ಪಟ್ಟಿತ್ತು. ನಂತರ ನಡೆದ ಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲುವು ಸಾಧಿಸಿತು. ಜಮಖಂಡಿಯಲ್ಲಿ ಗೆದ್ದಿದ್ದ ಕಾಂಗ್ರೆಸ್​ನ ಸಿದ್ದು ನ್ಯಾಮಗೌಡ ಅಪಘಾತದಲ್ಲಿ ನಿಧನರಾದರು.

ಫ್ರೆಂಡ್ಲಿ ಫೈಟ್

ಸರ್ಕಾರ ರಚನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದರು ಸಹ ಸೆಪ್ಟೆಂಬರ್​ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾತ್ರ ದೋಸ್ತಿಯಾಗಲಿಲ್ಲ. ಪ್ರತ್ಯೇಕವಾಗಿಯೇ ಸ್ಪರ್ಧೆ ಮಾಡಿದವು. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನಸಭೆಗೆ ನಡೆದ ಚುನಾವಣೆಯಲ್ಲೂ ಫ್ರೆಂಡ್ಲಿ ಫೈಟ್ ಮುಂದುವರಿಯಿತು. ಆದರೆ ಬಿಬಿಎಂಪಿ, ಮೈಸೂರು ಪಾಲಿಕೆಯಲ್ಲಿ ಅಧಿಕಾರದ ಹಂಚಿಕೆಯಾಯಿತು.

ಸಿದ್ದು ನಡೆ-ನುಡಿ ಒಗಟು

ಸರ್ಕಾರ ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ ಸಮನ್ವಯ ಸಮಿತಿ ರಚಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷರು. ಆದರೆ ಖುದ್ದು ಅವರೇ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಆಡಿದ ಮಾತುಗಳು ಸರ್ಕಾರದ ಭವಿಷ್ಯದ ಚಿಂತೆ ಮೂಡಿಸಿದ್ದವು. ಸರ್ಕಾರಕ್ಕೆ ಏಳು ತಿಂಗಳು ಮುಗಿಯುತ್ತ ಬಂದರೂ ಭದ್ರತೆಯ ಭಾವನೆ ಮೂಡದೇ ಇರಲು ಶಾಂತಿವನದಲ್ಲಿನ ಮಾತುಗಳೇ ಕಾರಣವೆಂಬುದು ರಾಜಕೀಯಾಸಕ್ತರ ಅಭಿಪ್ರಾಯ. ಇದಲ್ಲದೆ, ಬೇರೆ ಬೇರೆ ಅನೇಕ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ನಡೆ-ನುಡಿ ಚರ್ಚೆಗೂ ಕಾರಣವಾಗಿದೆ. ಆದರೆ ಅವರಿಗೆ ಮೂರು ಪ್ರಮುಖ ಹುದ್ದೆಗಳನ್ನು ಯಾವ ಕಾರಣಕ್ಕೆ ನೀಡಲಾಗಿದೆ ಎಂಬುದು ಕಾಂಗ್ರೆಸ್​ನಲ್ಲಿಯೇ ಉತ್ತರ ಸಿಗದ ಪ್ರಶ್ನೆಯಾಗಿದೆ.

ಜಾರಕಿಹೊಳಿಗೆ ಪಾಠ: ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮುಖಂಡರಿಗೆ ಸವಾಲು ಹಾಕುವ ರೀತಿಯಲ್ಲಿ ರಮೇಶ್ ಜಾರಕಿಹೊಳಿ ನಡೆದುಕೊಂಡಿದ್ದರಿಂದ ಸಚಿವ ಸ್ಥಾನ ತಪ್ಪಿಸಲಾಯಿತು. ಆ ಮೂಲಕ ಅಶಿಸ್ತು ಸಹಿಸುವುದಿಲ್ಲವೆಂಬ ಸಂದೇಶವನ್ನು ನೀಡಿ ಹೈಕಮಾಂಡ್ ಗಟ್ಟಿ ಎಂದು ಸಾರಿದೆ. ಸಚಿವ ಸ್ಥಾನ ಜವಾಬ್ದಾರಿಯನ್ನು ಸರಿಯಾಗಿ ಚಲಾಯಿಸದೇ, ಸಂಪುಟ ಸಭೆಗಳಿಗೆ ಗೈರು ಹಾಜರಾಗುತ್ತ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ತಳುಕು ಹಾಕುತ್ತಿದ್ದ ಜಾರಕಿಹೊಳಿ ಬೆಲೆ ತೆತ್ತಿದ್ದಾರೆ.

ಸಂಪುಟ ಪುನಾರಚನೆ: ವರ್ಷದ ಕೊನೆಯಲ್ಲಿ ಸಂಪುಟ ಪುನಾರಚನೆ ನಡೆಯಿತು. ಕಾಂಗ್ರೆಸ್ ತನ್ನ ಪಾಲಿನ ಆರು ಸ್ಥಾನಗಳನ್ನು ಮಾತ್ರ ಭರ್ತಿ ಮಾಡುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಅಶಿಸ್ತಿನ ಪರಮಾವಧಿತನ ತೋರಿದ್ದ ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಸದಸ್ಯತ್ವ ಪಡೆಯದ ಆರ್. ಶಂಕರ್ ಅವರನ್ನು ಬದಲಿಸಿ ಪಕ್ಷದ ಎಂಟು ಜನರಿಗೆ ಅವಕಾಶ ನೀಡಲಾಗಿದೆ. ಖಾತೆ ಹಂಚಿಕೆಯ ಹೊಣೆಯನ್ನೂ ನಿಭಾಯಿಸುವ ಮೂಲಕ ಹೈಕಮಾಂಡ್ ಮತ್ತೆ ಪ್ರಭಾವಿಯಾಗುತ್ತಿದೆ.

ಅಧ್ಯಕ್ಷರ ಬದಲಾವಣೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಕಡೆ ಅಧ್ಯಕ್ಷರ ಬದಲಾವಣೆ ಆಗಿದ್ದು ಈ ವರ್ಷದ ವಿಶೇಷ. ಎಂಟು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿ ಆಗಿದ್ದರಿಂದ ಅಧ್ಯಕ್ಷ ಹುದ್ದೆ ತ್ಯಜಿಸಿದರು. ಆ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಸ್ಥಾನಕ್ಕೆ ಈಶ್ವರ ಖಂಡ್ರೆ ನೇಮಕವಾದವರು. ಜೆಡಿಎಸ್ ಅಧ್ಯಕ್ಷರಾಗಿದ್ದ ಕುಮಾರಸ್ವಾಮಿ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಸೇರ್ಪಡೆಯಾದ ಅಡಗೂರು ಎಚ್. ವಿಶ್ವನಾಥ್ ನೇಮಕವಾದರು. ಇದೀಗ ವಿಶ್ವನಾಥ್ ಆರೋಗ್ಯದ ಕಾರಣ ಹೇಳಿ ಹುದ್ದೆ ತ್ಯಜಿಸುವ ಸುಳಿವು ನೀಡಿದ್ದಾರೆ.

ಪ್ರತ್ಯೇಕ ಧರ್ಮ ವಿವಾದ: ವಿಧಾನಸಭಾ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಹಿಂದಿನ ಸರ್ಕಾರ 2017ರ ಡಿಸೆಂಬರ್​ನಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈ ವಿಚಾರದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆ ನಡೆದಿದ್ದವು. ಸರ್ಕಾರ ಹಿಂದೂಧರ್ಮವನ್ನು ವಿಭಜಿಸುತ್ತಿದೆ ಎಂಬ ಆರೋಪ ಸಹ ಕೇಳಿಬಂದಿತ್ತು. ಆದರೆ ಕೇಂದ್ರ ಸರ್ಕಾರ ಈ ಪ್ರಸ್ತಾವನೆ ಒಪ್ಪಲು ಸಾಧ್ಯವಿಲ್ಲವೆಂದು ಡಿಸೆಂಬರ್ 10ರಂದು ಹೈಕೋರ್ಟ್​ಗೆ ತಿಳಿಸುವ ಮೂಲಕ ವಿಷಯ ರ್ತಾಕ ಅಂತ್ಯಕ್ಕೆ ಬಂದಂತಾಯಿತು. ಪ್ರತ್ಯೇಕ ಧರ್ಮದ ವಿಚಾರದಲ್ಲಿನ ನಡೆ ತಪ್ಪಾಯಿತೆಂಬುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡರು.

2 ಬಜೆಟ್ ರೈತರ ಸಾಲಮನ್ನಾ

ಈ ವರ್ಷ ಎರಡು ಬಜೆಟ್ ಮಂಡನೆಯಾದವು. ಆ ವಿಚಾರದಲ್ಲಿ ದೋಸ್ತಿ ಪಕ್ಷಗಳ ನಡುವೆ ಸಣ್ಣ ವಿವಾದವೂ ಉಂಟಾಯಿತು. ಕುಮಾರಸ್ವಾಮಿ ಬಜೆಟ್ ಮಂಡಿಸಲೇಬೇಕೆಂದರೆ, ಸಿದ್ದರಾಮಯ್ಯ ಅಗತ್ಯವಿಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೊನೆಗೆ ಸಣ್ಣ ಪ್ರಮಾಣದ ಬಜೆಟನ್ನು ಕುಮಾರಸ್ವಾಮಿ ಮಂಡಿಸಿದರು. 44 ಸಾವಿರ ಕೋಟಿ ರೂ.ಗಳ ಮೊತ್ತದ ರೈತರ ಸಾಲಮನ್ನಾ, ಮೀಟರ್ ಬಡ್ಡಿಕೋರರನ್ನು ಮಟ್ಟ ಹಾಕುವ ‘ಬಡವರ ಬಂಧು’, ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ‘ಕಾಯಕ’, ಕುಡಿಯುವ ನೀರಿನ ‘ಜಲಧಾರೆ’ ಮೊದಲಾದ ಯೋಜನೆಗಳನ್ನು ಘೋಷಿಸಿದರು.

ಕಾಡಿದ ಬರ

ರಾಜ್ಯದಲ್ಲಿ 156 ತಾಲೂಕುಗಳು ಬರಕ್ಕೆ ತುತ್ತಾಗಿವೆ. ಮಳೆ ಕೊರತೆಯಿಂದ ಸುಮಾರು 20 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬೆಳೆ ನಷ್ಟವಾಗುತ್ತಿದೆ. ಅಕ್ಕಿ ಹಾಗೂ ಇತರೆ ಆಹಾರ ಧಾನ್ಯಗಳ ಕೊರತೆಯಿಂದ ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಅದೇ ಕಾಲಕ್ಕೆ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿ ಪ್ರವಾಹ ಉಂಟಾಗಿತ್ತು.

ಸ್ವರ್ಗದಲ್ಲಿ ಕಂಪನ

ಆಗಸ್ಟ್ ತಿಂಗಳಿನಲ್ಲಿ ಕೊಡಗಿನ ಇತಿಹಾಸದಲ್ಲಿ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಧಾರಾಕಾರವಾಗಿ ಸುರಿದ ಮುಂಗಾರು ಮಳೆ ಅಬ್ಬರಕ್ಕೆ ಬೆಟ್ಟಕ್ಕೆ ಬೆಟ್ಟವೇ ಕುಸಿಯಲಾರಂಭಿಸಿದ್ದರಿಂದ ಕೊಡಗಿನ ಜನತೆ ಸಂಕಷ್ಟಕ್ಕೆ ಸಿಲುಕಿದರು. 20 ಜನ ಜೀವ ಕಳೆದುಕೊಂಡಿದ್ದು, ಇಬ್ಬರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ರಕ್ಷಿಸಲು ಭಾರತೀಯ ಯೋಧರು ಹಾಗೂ ವಾಯದಳದ ಹೆಲಿಕಾಪ್ಟರ್ ಬಳಸಲಾಗಿತ್ತು. ರಾಜ್ಯದಿಂದ ಎನ್​ಡಿಆರ್​ಎಫ್ ತಂಡ ಕೂಡ ಆಗಮಿಸಿತ್ತು. 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ 40 ಗ್ರಾಮಗಳು ತೀವ್ರ ಹಾನಿಗೀಡಾಗಿವೆ.

ಹಾರಂಗಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ (85 ಸಾವಿರ ಕ್ಯೂಸೆಕ್) ಏಕಾಏಕಿ ನೀರು ಹರಿಯಬಿಟ್ಟಿದ್ದರಿಂದ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನತೆ ಭಾರಿ ಕಷ್ಟ ನಷ್ಟಕ್ಕೆ ಸಿಲುಕುವಂತಾಯಿತು. 275 ಮನೆಗಳಿಗೆ ಹಾನಿಯುಂಟಾಯಿತು.

ಪ್ರಕೃತಿ ವಿಕೋಪಕ್ಕೆ ಜಿಲ್ಲೆಯಲ್ಲಿ ಸಹಸ್ರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವುಂಟಾಗಿದೆ. 840 ಜನ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಕಾಫಿ ಬೆಳೆಯುತ್ತಿದ್ದ 4 ಸಾವಿರ ಎಕರೆಯಷ್ಟು ಭೂಪ್ರದೇಶ ಕೊಚ್ಚಿಕೊಂಡು ಹೋಗಿದೆ. 10 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ಫಸಲಿಗೆ ಹಾನಿಯುಂಟಾಗಿದೆ. ಶೇ.50ರಷ್ಟು ಕಾಫಿ ಫಸಲು ನೆಲಕಚ್ಚಿದೆ. ಮಡಿಕೇರಿ- ಮಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾರ ಪ್ರಮಾಣದ ಭೂಕುಸಿತ ಉಂಟಾಗಿರುವುದರಿಂದ ಮೂರು ತಿಂಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದ ಸಾವಿರಾರು ಜನರಿಗೆ ಜಿಲ್ಲೆಯಲ್ಲಿ ತೆರೆಯಲಾಗಿದ್ದ 55 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಯಿತು. ಸ್ಥಳೀಯ ಸಂಘ- ಸಂಸ್ಥೆಗಳು, ಸಮಾಜಗಳು ಹೆಚ್ಚಿನ ಮುತುವರ್ಜಿ ವಹಿಸಿ ಪರಿಹಾರ ಕೇಂದ್ರಗಳನ್ನು ನಡೆಸಿದವು. ರಾಜ್ಯದ ವಿವಿಧೆಡೆಯಿಂದ ಅಪಾರ ಪ್ರಮಾಣದಲ್ಲಿ ಪರಿಹಾರ ಸಾಮಗ್ರಿ ಹರಿದು ಬಂತು. ವಿವಿಧೆಡೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕವನ್ನು ದಾನಿಗಳು ಭರಿಸಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 200 ಕೋಟಿ ರೂ. ಸಂದಾಯವಾಯಿತು. ರಾಜ್ಯ ಸರ್ಕಾರ ಜಿಲ್ಲೆಗೆ 180 ಕೋಟಿ ರೂ. ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ 546 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರದ ಅನುದಾನದ ಪೈಕಿ ಬಹುತೇಕ ಹಣ ಕೊಡಗಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಪರಿಹಾರ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಯೂ ನಡೆದಿದೆ. 9.85 ಲಕ್ಷ ರೂ. ವೆಚ್ಚದಲ್ಲಿ ಸಂತ್ರಸ್ತರಿಗೆ ಮನೆ ನಿರ್ವಿುಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೂಮಿಪೂಜೆ ನೆರವೇರಿಸಿದ್ದಾರೆ.

ಹೆಚ್ಚಿದ ಸಕ್ರಿಯತೆ

ವಿವಾದಗಳ ಸರಣಿ, ಫಟಾಫಟ್ ತೀರ್ಪ, ಸುಪ್ರೀಂ ಕೋರ್ಟ್​ಗೆ ಹೊಸ ಸಿಜೆಐ… ಹೀಗೆ ಇಡೀ ವರ್ಷ ಹಲವು ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾದ ನ್ಯಾಯಾಂಗ ಕ್ರಮಿಸಿದ ಹಾದಿ ಕುತೂಹಲಕರ. 2019ರಲ್ಲಿ ರಾಮಮಂದಿರ ಪ್ರಕರಣ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳು ವಿಚಾರಣೆಗೆ ಬರಲಿವೆ.

2018ರ ಜನವರಿಯಲ್ಲಿ ಬಂಡಾಯವೆದ್ದ ಸುಪ್ರೀಂಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳ ನಡೆ ವ್ಯಾಪಕ ಚರ್ಚೆ ಹುಟ್ಟುಹಾಕಿತು. ‘ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸುವಂತಿಲ್ಲ’ ಎಂಬ ನಿಯಮದ ಹೊರತಾಗಿಯೂ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ರಂಜನ್ ಗೊಗೊಯ್, ಮದನ್ ಬಿ.ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಪತ್ರಿಕಾಗೋಷ್ಠಿ ನಡೆಸಿ, ಆಗಿನ ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯ ನ್ಯಾಯಮೂರ್ತಿಗಳಾಗಿದ್ದ ದೀಪಕ್ ಮಿಶ್ರಾ ಅವರು, ತಮ್ಮ ನಿವೃತ್ತಿಯ ಅಂಚಿನಲ್ಲಿ ವಿಭಿನ್ನ ತೀರ್ಪಗಳನ್ನು ನೀಡಿದರು. ಇನ್ನೊಂದೆಡೆ, ರಾಮ ಜನ್ಮಭೂಮಿ ಪ್ರಕರಣದ ತೀರ್ಪು ಈ ವರ್ಷ ಹೊರಬೀಳಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಸುಪ್ರೀಂಕೋರ್ಟ್ ಜನವರಿ 4ರಿಂದ ವಿಚಾರಣೆ ನಡೆಸುವುದಾಗಿ ಹೇಳಿದೆ.

ವಿವಾದದ ಗೂಡಾದ ‘ಶಬರಿಮಲೆ’

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷದೊಳಗಿನ ಸ್ತ್ರೀಯರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಆದರೆ ‘ಎಲ್ಲ ಮಹಿಳೆಯರು ದೇಗುಲ ಪ್ರವೇಶ ಮಾಡಬಹುದು’ ಎಂದು ಸೆ.28ರಂದು ಕೋರ್ಟ್ ತೀರ್ಪನೀಡಿತು. ಆದರೆ ತೀರ್ಪಿನ ವಿರುದ್ಧ ಅನೇಕ ಮಹಿಳೆಯರು ಸೇರಿದಂತೆ ಭಕ್ತಾದಿಗಳು ದನಿಯೆತ್ತಿದರು. ತೀರ್ಪನ್ನು ಮರುಪರಿಶೀಲಿಸಿ, ಮಹಿಳೆಯರ ಪ್ರವೇಶಕ್ಕೆ ಪುನಃ ನಿಷೇಧ ಹೇರುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಮರುಪರಿಶೀಲನೆಯ ಹಲವು ಅರ್ಜಿ ಸಲ್ಲಿಕೆಯಾಗಿವೆ.

ರಫೇಲ್ ತೀರ್ಪು

ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಅಕ್ರಮವಾಗಿರುವುದಾಗಿ ಕೇಂದ್ರ ಸರ್ಕಾರದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು.14ರಂದು ಕೋರ್ಟ್ ವಜಾಗೊಳಿಸಿತು. ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆಯಾಗಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ 126 ಯುದ್ಧವಿಮಾನ ಖರೀದಿ ಮಾಡಿದ್ದಕ್ಕಿಂತಲೂ ಹೆಚ್ಚು ಹಣವನ್ನು ಎನ್​ಡಿಎ 36 ವಿಮಾನಗಳ ಖರೀದಿಗೆ ವಿನಿಯೋಗಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್, ಬೆಲೆ ನಿರ್ಧಾರ ಎಂಬುದು ಮಾರಾಟಗಾರರಿಗೆ ಬಿಟ್ಟ ವಿಚಾರವೇ ಹೊರತು ಸರ್ಕಾರದ ತೀರ್ವನವಾಗಿರುವುದಿಲ್ಲ ಎಂದಿದೆ.

ಮೊದಲ ಬಾರಿಗೆ ದೇಶವು ಮೂವರು ಮಹಿಳಾ ಮುಖ್ಯ ನ್ಯಾಯಮೂರ್ತಿಗಳನ್ನು ಕಂಡಿದೆ. ಜಮ್ಮು-ಕಾಶ್ಮೀರ ಹೈಕೋರ್ಟ್​ನಲ್ಲಿ ಗೀತಾ ಮಿತ್ತಲ್, ಮದ್ರಾಸ್ ಹೈಕೋರ್ಟ್​ನಲ್ಲಿ ವಿ.ಕೆ. ತಾಹಿಲ್​ರಮಣಿ ಮತ್ತು ಸಿಕ್ಕಿಂ ಹೈಕೋರ್ಟ್​ನಲ್ಲಿ ಮೀನಾಕ್ಷಿ ಮದನ್ ರೈ ಅವರು ಮುಖ್ಯನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ತೆರವು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ‘ಮಹಾನಗರಿಯಲ್ಲಿ ಒಂದು ಸಣ್ಣ ಫ್ಲೆಕ್ಸ್ ಕಾಣಿಸಿದರೂ ಅದಕ್ಕೆ ನಗರ ಪೊಲೀಸ್ ಆಯುಕ್ತರೇ ಹೊಣೆಗಾರರು’ ಎಂದು ಎಚ್ಚರಿಸಿದ್ದರ ಜತೆಗೆ, ಅಕ್ರಮ ಜಾಹೀರಾತು, ಫ್ಲೆಕ್ಸ್ ಹಾಗೂ ಬ್ಯಾನರ್​ಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ಆಗಸ್ಟ್ 31ರವರೆಗೆ ಗಡುವು ನೀಡಿತು.

ಗುಲ್ಲೆಬ್ಬಿಸಿದ ಅನೈತಿಕ ಸಂಬಂಧ

‘ಅನೈತಿಕ ಸಂಬಂಧ ಅಪರಾಧವಲ್ಲ’ ಎಂಬುದಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತು. (ಸೆ.27) ತೀರ್ಪಿನಲ್ಲಿ ಉಲ್ಲೇಖಗೊಂಡ ನೈಜ ಅಂಶಗಳೇನು ಎಂದು ತಿಳಿದುಕೊಳ್ಳದೆ ‘ಇದು ಪುರುಷರಿಗೆ ಇನ್ನಷ್ಟು ಕೆಟ್ಟದ್ದನ್ನು ಮಾಡಲು ಅನುವು ಮಾಡಿಕೊಡುತ್ತದೆ’ ಎಂದೇ ಸುದ್ದಿ ಹರಿದಾಡಿತು. ಆದರೆ ‘ಮಹಿಳೆ ಪುರುಷನ ಸ್ವತ್ತು, ಆಕೆ ಆತನ ಅಧೀನಳು’ ಎಂದು ಅಕ್ರಮ ಸಂಬಂಧದ ಕುರಿತಾಗಿ ಇರುವ ಕಾನೂನಿನ ಅಂಶಗಳನ್ನು ಕೋರ್ಟ್ ತೆಗೆದುಹಾಕಿದೆ. ಜತೆಗೆ, ಇದುವರೆಗೆ ಅನೈತಿಕ ಸಂಬಂಧ ಹೊಂದಿರುವುದು ಸಾಬೀತಾದರೂ ಅವರಿಗೆ ‘ಅಪರಾಧಿಕ’ ಶಿಕ್ಷೆ ಆಗಿರದ ಕಾರಣ, ಅದು ‘ಕ್ರಿಮಿನಲ್ ಅಪರಾಧ’ ಅಲ್ಲ, ಬದಲಿಗೆ ‘ಸಿವಿಲ್ ಅಪರಾಧ’ದ ಅಡಿ ಶಿಕ್ಷೆ ನೀಡಬಹುದು ಎನ್ನುವುದು ಸುಪ್ರೀಂಕೋರ್ಟ್​ನ ವ್ಯಾಖ್ಯಾನವಾಗಿದೆ.

ಆಧಾರ್​ ಗೋಜಲು

‘ಆಧಾರ್’ ಕಾರ್ಡ್​ನ ಸಿಂಧುತ್ವ ಪ್ರಶ್ನಿಸಿ ಕೆಲವರು 2009ರಲ್ಲಿ ಸುಪ್ರೀಂ ಮೆಟ್ಟಿಲೇರಿದರು. ಒಂಭತ್ತು ವರ್ಷಗಳ ನಂತರ ಸುಪ್ರೀಂಕೋರ್ಟ್ ಸೆ.26ರಂದು ‘ಆಧಾರ್’ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿಯಿತು. ‘ಸಮಾಜದ ಕಟ್ಟಕಡೆಯ ವರ್ಗದ ಅಭ್ಯುದಯಕ್ಕೆ ಇದು ನೆರವಾಗುತ್ತಿದೆ. ಅವರಿಗೊಂದು ಗುರುತು ನೀಡಿದೆ’ ಎಂದು ಅಭಿಪ್ರಾಯಪಟ್ಟ ಕೋರ್ಟ್, ಇದನ್ನು ಶಾಲೆ, ಮೊಬೈಲ್ ಕಂಪನಿಗಳಿಗೆ ಮತ್ತು ಯುಜಿಸಿ, ಎನ್​ಇಇಟಿ, ಸಿಬಿಎಸ್​ಇ ಪರೀಕ್ಷೆಗೆ ಕಡ್ಡಾಯ ಮಾಡುವಂತಿಲ್ಲ’ ಎಂದಿತು.

ಗಮನ ಸೆಳೆದ ತೀರ್ಪುಗಳು

ದಯಾಮರಣಕ್ಕೆ ಅನುಮತಿ: ‘ಪ್ರತಿಯೊಬ್ಬ ವ್ಯಕ್ತಿಗೂ ನೆಮ್ಮದಿಯಿಂದ ಜೀವಬಿಡುವ ಹಕ್ಕಿದೆ’ ಎನ್ನುವ ಮೂಲಕ ಮಾರ್ಚ್ 10ರಂದು ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್, ದಯಾಮರಣಕ್ಕೆ ಅನುಮತಿ ನೀಡಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವ್ಯಕ್ತಿ, ಜೀವರಕ್ಷಕ ಯಂತ್ರಗಳ ನೆರವಿನಿಂದ ಬದುಕಿದ್ದರೆ ಅಥವಾ ಆತ ಗುಣಮುಖವಾಗಲು ಸಾಧ್ಯವಿಲ್ಲದ ಪರಿಸ್ಥಿತಿಗೆ ತಲುಪಿದ್ದರೆ ಆತನಿಗೆ ಸಾಯಲು ಅವಕಾಶ ಕಲ್ಪಿಸಿಕೊಡಬಹುದು ಎಂದು ಹೇಳಿದೆ.

ವಿವಾಹ-ವಿವಾದ: ಕೇರಳದ 24 ವರ್ಷದ ಅಖಿಲಾ ಅಶೋಕನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ‘ಹಾದಿಯಾ’ ಆಗಿ ಶಾಫಿನ್ ಜಹಾನ್ ಎಂಬಾತನನ್ನು ಮದುವೆಯಾದ ಸುದ್ದಿ 2017ರ ವರ್ಷಾಂತ್ಯದಲ್ಲಿ ಚರ್ಚೆಗೆ ಗ್ರಾಸವಾಯಿತು. ಇದು ‘ಲವ್ ಜಿಹಾದ್’ ಎಂದು ಆಕೆಯ ತಂದೆ ದೂರು ದಾಖಲಿಸಿದ್ದರು. ಅಖಿಲಾ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಮಾಡಿದ ಕೇರಳ ಹೈಕೋರ್ಟ್ ಇವರ ವಿವಾಹವನ್ನು ರದ್ದುಗೊಳಿಸಿತು. ಅದನ್ನು ಪ್ರಶ್ನಿಸಿ ಶಾಫಿನ್ ಸುಪ್ರೀಂಕೋರ್ಟ್ ಮೊರೆ ಹೋದರು. ಕಳೆದ ಮಾರ್ಚ್ 15ರಂದು ಕೇರಳ ಹೈಕೋರ್ಟ್ ತೀರ್ಪನ್ನು ರದ್ದುಮಾಡಿದ ಸುಪ್ರೀಂ, ಅವರ ದಾಂಪತ್ಯ ಮುಂದುವರಿಸುವಂತೆ ಆದೇಶಿಸಿತು.

ಲಿಂಚಿಂಗ್ ತಡೆಗೆ ಕಾನೂನು: ಗೋಹಂತಕರು ಹಾಗೂ ಮಕ್ಕಳ ಕಳ್ಳರು ಎಂಬ ವದಂತಿ ದೇಶವ್ಯಾಪಿ ಹರಿದಾಡಿದ ಹಿನ್ನೆಲೆಯಲ್ಲಿ ಹತ್ತಾರು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್, ಈ ರೀತಿಯ ಪ್ರಕರಣಗಳನ್ನು ತಡೆಯಲು ಸಂಸತ್ತು ಹೊಸ ಕಾನೂನು ರಚಿಸಬೇಕೆಂದು ಹೇಳಿತು.

ಪಟಾಕಿಗೆ ಲಗಾಮು: ವಾಯುಮಾಲಿನ್ಯದ ಕಾರಣ ನೀಡಿ ಹಬ್ಬದ ವೇಳೆ ಪಟಾಕಿ ಹೊಡೆಯುವುದನ್ನು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿತ್ತು. ಕೆಲವು ಷರತ್ತುಗಳನ್ನು ವಿಧಿಸಿ, ದೇಶಾದ್ಯಂತ ಪಟಾಕಿ ಮಾರಾಟ ಮಾಡಲು ಅಸ್ತು ಎಂದ ಸುಪ್ರೀಂಕೋರ್ಟ್, ದೀಪಾವಳಿ ಸಮಯದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆ ಹಾಗೂ ಕ್ರಿಸ್​ವುಸ್ ಮತ್ತು ಹೊಸವರ್ಷ ಸಂಭ್ರಮಾಚರಣೆ ವೇಳೆ ಮಧ್ಯರಾತ್ರಿ 11:55ರಿಂದ 12:30ರವರೆಗೆ ಮಾತ್ರ ಪಟಾಕಿ ಹೊಡೆಯಬೇಕು ಎಂದಿದೆ.

ಎಸ್​ಸಿ, ಎಸ್​ಟಿ ಮೀಸಲಾತಿ: ಮುಂಬಡ್ತಿ

ನೀಡುವ ವೇಳೆ ಎಸ್​ಸಿ ಹಾಗೂ ಎಸ್​ಟಿ ಮೀಸಲಾತಿ ನೀಡುವುದು ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೆ.26ರಂದು ತೀರ್ಪು ನೀಡಿತು. ಪ್ರಾತಿನಿಧ್ಯದ ಕೊರತೆ ಮತ್ತು ಒಟ್ಟು ಹಿಂದುಳಿದಿರುವಿಕೆಯ ದತ್ತಾಂಶಗಳ ಆಧಾರದಲ್ಲಿ ಬಡ್ತಿ ಮೀಸಲಾತಿ ನೀಡಬೇಕು ಎಂಬುದಾಗಿ 2006ರಲ್ಲಿ ನೀಡಿರುವ ತೀರ್ಪನ್ನು ಮಾರ್ಪಾಟುಮಾಡಲು ಬರುವುದಿಲ್ಲ, ಅದೇ ಮುಂದುವರಿಯಲಿದೆ ಎಂದು ಹೇಳಿತು.

‘ಮಾಜಿ’ಗಳಿಗೆ ಬಂಗಲೆ ಬೇಡ: ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರಿ ಬಂಗಲೆ ಕೊಡುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆಗಸ್ಟ್ 1ರಂದು ತೀರ್ಪು ನೀಡಿತು. ಅವರಿಗೆ ಜೀವಮಾನಪೂರ್ತಿ ಸರ್ಕಾರದ ಸೌಕರ್ಯ ಪಡೆಯುವ ಅರ್ಹತೆ ಇಲ್ಲ ಎಂದ ಕೋರ್ಟ್, 2 ತಿಂಗಳೊಳಗೆ ಎಲ್ಲರನ್ನೂ ತೆರವುಮಾಡಿಸುವಂತೆ ಆದೇಶಿಸಿತು.

ಕಳಂಕಿತರ ಸ್ಪರ್ಧೆ ಕುರಿತಾದ ಗಮನಾರ್ಹ ನಿಲುವು

ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತಾಗಬಾರದು ಎಂಬ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ಇಂಥದೊಂದು ನಿರ್ಬಂಧವನ್ನು ಹೇರಲಾಗದು ಎಂದು ಅಭಿಪ್ರಾಯಪಟ್ಟ ಸವೋಚ್ಚ ನ್ಯಾಯಾಲಯ, ಈ ಕುರಿತಾದ ಕಾನೂನನ್ನು ರೂಪಿಸುವುದು ಸಂಸತ್ತಿನ ಹೆಗಲಮೇಲಿನ ಹೊಣೆ ಎಂದಿತು. ಪ್ರಜಾತಂತ್ರದ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವತ್ರಿಕ ಚುನಾವಣಾ ಕಣದಲ್ಲಿರುವ ಆರೋಪಿತ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಕುರಿತಾಗಿ, ಅವರಿಗೆ ಸ್ಪರ್ಧೆಗೆ ಟಿಕೆಟ್ ನೀಡಿದ ರಾಜಕೀಯ ಪಕ್ಷಗಳು ಕನಿಷ್ಠಪಕ್ಷ 3 ಬಾರಿ ಪ್ರಮುಖ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು ಎಂದೂ ನ್ಯಾಯಾಲಯ ಸೂಚಿಸಿತು.

ಕೋರ್ಟ್ ಕಲಾಪ ನೇರಪ್ರಸಾರ

ಸಾಂವಿಧಾನಿಕ ಮಹತ್ವವುಳ್ಳ ಪ್ರಕರಣಗಳ ವಿಚಾರಣೆಯ ನೇರಪ್ರಸಾರ ಮಾಡಲು ಸೆಪ್ಟೆಂಬರ್ 26ರಂದು ಕೋರ್ಟ್ ಅನುಮತಿ ನೀಡಿತು. ಕೋರ್ಟ್ ಕಲಾಪದಲ್ಲಿ ಪಾರದರ್ಶಕ ವ್ಯವಸ್ಥೆ ಬೇಕು ಎಂಬ ಜನಸಾಮಾನ್ಯರ ಮಾತಿಗೆ ಕೋರ್ಟ್ ಸ್ಪಂದಿಸಿ ಈ ತೀರ್ಪು ನೀಡಿತು.

ಸಲಿಂಗಿಗಳಿಗೆ ಸಿಕ್ಕಿತು ಹಸಿರು ನಿಶಾನೆ

‘ಸಲಿಂಗಕಾಮ ಅಪರಾಧವಾಗಿದ್ದು, ಅದರಲ್ಲಿ ಪಾಲ್ಗೊಳ್ಳುವವರು ಶಿಕ್ಷಾರ್ಹರು’ ಎಂದು ಉಲ್ಲೇಖಿತವಾಗಿದ್ದ ಭಾರತೀಯ ದಂಡ ಸಂಹಿತೆ (ಐಪಿಸಿ)377ನೇ ಕಲಮನ್ನು ಸೆ. 6ರಂದು ಅನೂರ್ಜಿತಗೊಳಿಸಿದ ಸುಪ್ರೀಂಕೋರ್ಟ್, ವಯಸ್ಕರು ಪರಸ್ಪರ ಒಪ್ಪಿ ನಡೆಸುವ ಸಲಿಂಗ ಲೈಂಗಿಕತೆ ಅಪರಾಧವಲ್ಲ ಎಂದು ಹೇಳಿತು. ಇದು ಕೂಡ ಹಲವು ರೀತಿಯ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಕಲ್ಪಿಸಿತು.

ಸುಖಾಸುಮ್ಮನೆ ಆರೋಪ ಮಾಡುವಂತಿಲ್ಲ

ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಬಾರದು ಎಂದು ಸುಪ್ರೀಂಕೋರ್ಟ್ ಸೆ.14ರಂದು ಹೇಳಿತು. ಅದೇ ರೀತಿ, ತಾನು ನೀಡಿದ ತೀರ್ಪನ್ನು ಸಿಟ್ಟು ಹಾಗೂ ಸೇಡನ್ನು ಹಿನ್ನೆಲೆಯಾಗಿಟ್ಟುಕೊಂಡು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಂತಿಲ್ಲ ಎಂದೂ ಅದು ಎಚ್ಚರಿಸಿದೆ. ಸೆಕ್ಷನ್ 498ಎ ಅಡಿಯಲ್ಲಿನ ‘ಕಿರುಕುಳ’ ಎನ್ನುವ ಶಬ್ದ ಅತ್ಯಂತ ಸೂಕ್ಷ್ಮ ಪದವಾಗಿದ್ದು ಪೊಲೀಸರ ಉತ್ಪ್ರೇಕ್ಷೆಯ ಕಾರಣದಿಂದ ವಿನಾಕಾರಣ ಗಂಡಂದಿರು ಜೈಲುಪಾಲಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ ಕೋರ್ಟ್, ಮಹಿಳೆ ಹಾಗೂ ಅವರ ಕಡೆಯವರು ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂದು ಎಚ್ಚರಿಸಿ ಗಂಡಂದಿರ ಮೇಲೆ ಕೌಟುಂಬಿಕ ದೌರ್ಜನ್ಯ ತಡೆಯುವುದಕ್ಕೆ ಹಾಗೂ ಪುರುಷರಿಗೆ ರಕ್ಷಣೆ ಒದಗಿಸಲು ಹೊಸ ಕಾನೂನು ಅಗತ್ಯವಿದೆ ಎಂದು ಹೇಳಿತು.

ನಿರ್ವಹಣೆ: ನಾಗರಾಜ ಇಳೆಗುಂಡಿ ವಿಜಯವಾಣಿ ಟೀಂ: ರುದ್ರಣ್ಣ ಹರ್ತಿಕೋಟೆ, ಸುಚೇತನಾ ನಾಯ್ಕ, ರವೀಂದ್ರ ಎಸ್.ದೇಶಮುಖ್ ವಿನ್ಯಾಸ: ಅಶ್ವತ್ಥ ಕೃಷ್ಣ

- Advertisement -

Stay connected

278,471FansLike
563FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...