21 C
Bengaluru
Wednesday, January 22, 2020

ತಿದ್ದಿಕೊಳ್ಳುವ ಅವಕಾಶಗಳನ್ನು ಕೈಚೆಲ್ಲಿದರು…

Latest News

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸ್​ ವಿಚಾರಣೆ ವೇಳೆ ಆರೋಪಿ ಆದಿತ್ಯರಾವ್ ಹೇಳಿದ್ದೇನು?​

ಬೆಂಗಳೂರು: ಸಮಾಜದ ವ್ಯವಸ್ಥೆಗೆ ಬೇಸತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದಾಗಿ ಆರೋಪಿ ಆದಿತ್ಯರಾವ್​ ಪೊಲೀಸ್​ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ವಿಐಪಿ ಗೆಸ್ಟ್ ಹೌಸ್​ನಲ್ಲಿ...

ನೇಪಾಳದ ಹೋಟೆಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದ 8 ಕೇರಳ ಪ್ರವಾಸಿಗರ ಸಾವಿಗೆ ಕಾರಣವೇನು?: ಕುಟುಂಬದವರಿಗೆ ಮೃತದೇಹ ಹಸ್ತಾಂತರ

ಕಾಠ್ಮಂಡು: ನೇಪಾಳದ ಹೋಟೆಲ್​ವೊಂದರಲ್ಲಿ ಕೇರಳ ಮೂಲದ 8 ಪ್ರವಾಸಿಗರು ಶವವಾಗಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ. ರೂಮಿನೊಳಗೆ ಇಡಲಾಗಿದ್ದ ಔಟ್​ಡೋರ್​ ಹೀಟರ್​ನ ವಿಷಕಾರಿ ಕಾರ್ಬನ್​...

ಪಿ.ವಿ ನರಸಿಂಹರಾಯರು ಆರ್ಥಿಕ ಸುಧಾರಣೆಯನ್ನು ತಂದು ಜನಮನ್ನಣೆ ಗಳಿಸಿದರು. ಇದು ಪರಿವಾರದ ಹೊರತಾಗಿಯೂ ಅಧಿಕಾರ ನಡೆಸುವ ಸಾಮರ್ಥ್ಯ ಬೇರೆಯವರಲ್ಲಿದೆ ಎಂಬ ವಿಶ್ವಾಸವನ್ನು ಜನರೊಳಗೆ ತುಂಬಲು ಸಾಕಷ್ಟಾಗಿತ್ತು. ಆಗಲೇ ಕಾಂಗ್ರೆಸ್ಸು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿದ್ದರೆ ಇಂದು ಪ್ರಾದೇಶಿಕ ಪಕ್ಷಗಳೆದುರಿಗೆ ಕೈಚಾಚುವ ಪರಿಸ್ಥಿತಿ ಇರುತ್ತಿರಲಿಲ್ಲ.

ಬಹಳ ಜನರಿಗೆ ಗೊತ್ತೇ ಇಲ್ಲ. ಇಂದಿರಾ ಗಾಂಧಿ ಪ್ರಧಾನಿಯಾಗಿರುವಾಗಲೂ ಅವರ ಮಗ ಸಂಜಯ್ ಆರ್ಭಟ ಜೋರಾಗಿಯೇ ಇತ್ತು. ಕಾಂಗ್ರೆಸ್ಸನ್ನು ಬಲವಾಗಿ ನಿಯಂತ್ರಿಸುತ್ತಿದ್ದುದೇ ಆತ. ಸಂಜಯ್ಗಿದ್ದ ಏಕೈಕ ಅರ್ಹತೆ ಇಂದಿರೆಯ ಮಗ ಎನ್ನುವುದು ಮಾತ್ರ. 1975ರಲ್ಲಿ ಸ್ವತಃ ಇಂದಿರಾ ಮಗನನ್ನು ಮಹತ್ವದ ನಿರ್ಣಯ ಕೈಗೊಳ್ಳುವ ಸ್ಥಾನದಲ್ಲಿ ಕೂರಿಸಿಬಿಟ್ಟಿದ್ದರು. ಆನಂತರ ಎಮರ್ಜೆನ್ಸಿಯ ರಾದ್ಧಾಂತ ಈ ಪರಿವಾರದ ಕಥೆಯನ್ನೇ ಮುಗಿಸಿಬಿಡುತ್ತದೆ ಎಂಬ ಪರಿಸ್ಥಿತಿ ನಿರ್ವಣವಾಗಿಬಿಟ್ಟಿತ್ತು. ಆ ಹೊತ್ತಿನಲ್ಲೂ ಇವರನ್ನು ಬಿಡದೇ ಬಲವಾಗಿ ಆತುಕೊಂಡ ಅಂತರಂಗದ ಸದಸ್ಯರು 1980ರ ವೇಳೆಗೆ ಇಂದಿರಾ ಮರುಅಧಿಕಾರ ಸ್ಥಾಪಿಸಿದಾಗ ಆಳುವ ಸಹಜ ಸಾಮರ್ಥ್ಯ ಈ ಪರಿವಾರಕ್ಕೆ ಮಾತ್ರ ಎಂಬುದನ್ನು ಜನರಿಗೆ ನಂಬಿಸಿಬಿಟ್ಟಿದ್ದರು. ಅದರರ್ಥ ಸಂಜಯ ಮುಂದಿನ ಪ್ರಧಾನಿ ಅಂತ. ಅನೇಕ ಹಿರಿತಲೆಗಳಿಗೆ ಇದು ಇರಿಸುಮುರಿಸೆನ್ನಿಸಿತಾದರೂ ಮಾತನಾಡುವಂತಿರಲಿಲ್ಲ. ಮಾತನಾಡಿದವರು ಮೂಲೆಗುಂಪಾದರು. ದೇಶಕ್ಕೇ ಎಮರ್ಜೆನ್ಸಿ ಹೇರಿ ಜೀರ್ಣಿಸಿಕೊಂಡವರಿಗೆ ಪಕ್ಷದೊಳಗಿನವರನ್ನು ತುಳಿದು ಕುಪ್ಪಳಿಸುವುದು ಯಾವ ಲೆಕ್ಕ! ಪಿ.ವಿ ನರಸಿಂಹರಾಯರ ಕುರಿತಂತೆ ವಿಶೇಷ ಕೃತಿ ಬರೆದಿರುವ ಸಂಜಯ್ ಬಾರು ಪ್ರಕಾರ ಈ ವೇಳೆಗೆ ಹೊಸ ನಾಯಕರ ತಂಡ ಚಿಮ್ಮಿ ಬಂದಿದ್ದು. ಅವರಲ್ಲಿ ಜಗದೀಶ್ ಟೈಟ್ಲರ್, ರುಕ್ಸಾನಾ ಸುಲ್ತಾನಾ, ಕಮಲ್​ನಾಥ್, ಅಂಬಿಕಾ ಸೋನಿ, ಗುಂಡೂರಾವ್ ಇವರೆಲ್ಲ ಪ್ರಮುಖರು. ಅಂದರೆ ಪರಿವಾರಕ್ಕೆ ನಿಷ್ಠರಾಗಿರುವವರು ನಾಯಕರಾಗಿ ಬೆಳೆಯುತ್ತಾರೆ; ವಿರೋಧಿಸಿದವರು ಮಣ್ಣು ಮುಕ್ಕುತ್ತಾರೆ ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಯ್ತು.

ಕಾಂಗ್ರೆಸ್ಸಿನ ಕೊನೆಯ ಹಂತದ ಕಾರ್ಯಕರ್ತರಲ್ಲೂ ಪರಿವಾರದ ಸೇವೆಮಾಡಿದರೆ ಬೆಳೆದುನಿಲ್ಲುತ್ತೇವೆಂಬ ಭಾವನೆ ಬಲವಾಗಿದ್ದು ಆಗಲೇ. ಅದು ಅಸಹಜವೇನಲ್ಲ. ವಿರೋಧ ಪಕ್ಷಗಳಿಗೆ ಆಳುವಷ್ಟು ಒಗ್ಗಟ್ಟಿಲ್ಲ; ಇಂದಿರೆಗೆ ಅಧಿಕಾರವನ್ನೇ ಮಣಿಸಿಕೊಳ್ಳುವ ಕಲೆ ಗೊತ್ತು. ಅವರೊಂದಿಗೆ ನಿಂತರೆ ಅಧಿಕಾರದ ಏಣಿ ಏರುವುದು ಬಲು ಸುಲಭ. ಹೀಗಿರುವಾಗ ಯಾರು ತಾನೆ ಆ ಪಾಳಯ ಬಿಟ್ಟು ಬರಲಿಚ್ಛಿಸುತ್ತಾರೆ ಹೇಳಿ. ರಾಜಕಾರಣದ ಪಡಸಾಲೆಗಳಲ್ಲಿ ಯಾರ ಮಾತು ಚಲಾವಣೆಯಲ್ಲಿರುವುದೋ ಅವರಿಗೇ ಬೆಲೆ. ಗ್ರಾಮಪಂಚಾಯಿತಿ ಸೀಟೂ ಕೊಡಿಸಲಾಗದವನನ್ನು ಯಾರು ಯಾಕಾದರೂ ಗೌರವಿಸುತ್ತಾರೆ ಹೇಳಿ. ಹಾಗಂತ ಇದು ಕಾಂಗ್ರೆಸ್ಸಿಗೆ ಮಾತ್ರವಲ್ಲ, ಎಲ್ಲ ಪಕ್ಷಗಳಿಗೂ ಅನ್ವಯಿಸುವಂಥದ್ದು. ಜನತಾದಳದಲ್ಲಿ ಅಣ್ಣನ ಮಾತು ನಡೆದರೆ ಅವರ ಸುತ್ತ ಕೈಕಟ್ಟಿ ನಿಲ್ಲುತ್ತಾರೆ. ತಮ್ಮನ ಮಾತು ನಡೆದರೆ ಅವರ ಸುತ್ತ, ಅದಕ್ಕಾಗಿಯೇ ಎಲ್ಲ ಬಗೆಯ ಕದನಗಳೂ ನಡೆಯೋದು.

80ರ ದಶಕದಲ್ಲಿ ಕಾಂಗ್ರೆಸ್ಸು ಹಳ್ಳ ಹಿಡಿಯುವ ಲಕ್ಷಣಗಳನ್ನು ತೋರಿದ್ದು ಆಗಲೇ. ಹಾಗೆ ನೋಡಿದರೆ ಮೋತಿಲಾಲರು ತಮ್ಮ ಕಂದನಿಗೆ ಅಧಿಕಾರ ಬಿಟ್ಟುಕೊಟ್ಟಾಗಲೇ ಕಾಂಗ್ರೆಸ್ಸು ನಿರ್ಲಜ್ಜತೆಯ ಎಲ್ಲ ಎಲ್ಲೆ ಮೀರಿತ್ತು. ಇಂದಿರಾ ಅದನ್ನು ಪರಾಕಾಷ್ಠೆಗೇರಿಸಿದರು ಅಷ್ಟೇ. ಏಕೆಂದರೆ ಅಲ್ಲಿಯವರೆಗೂ ಯಾವ ಪಕ್ಷಗಳೂ ತಮ್ಮ ನಂತರದ ಅಧಿಕಾರವನ್ನು ಮಕ್ಕಳಿಗೆ ವಹಿಸಿಕೊಡುವ ಕುರಿತು ಯೋಚಿಸಿರಲಿಲ್ಲ ಮತ್ತು ಆ ದಿಕ್ಕಿನತ್ತ ಹೆಜ್ಜೆಯನ್ನೂ ಇಟ್ಟಿರಲಿಲ್ಲ. ಆನಂತರ ಇಂದಿರೆಯ ಈ ಸಾರ್ವಭೌಮತೆಯ ವಿರುದ್ಧ ಹೋರಾಡಿದವರೂ ತಾವು ಕಟ್ಟಿದ ಪಕ್ಷಕ್ಕೆ ತಮ್ಮ ಮಕ್ಕಳನ್ನೇ ತಂದು ಅಧಿಕಾರವನ್ನು ಕ್ರೋಡೀಕರಿಸಿಕೊಳ್ಳುವ ಪರಂಪರೆ ಜಾರಿಗೆ ತಂದರು. ಪ್ರಜಾಪ್ರಭುತ್ವದ ನಾಶದ ಮೊದಲ ಹಂತ ಇದು. ಇಂದು ಎಲ್ಲರೂ ಪಕ್ಷಭೇದ ಮರೆತು ಅಪ್ಪ-ಮಕ್ಕಳ ಈ ಪರಂಪರೆಯನ್ನು ಎಗ್ಗಿಲ್ಲದೇ ಮುಂದುವರಿಸಿಕೊಂಡು ಬಂದಿದ್ದಾರೆ. ಎಲ್ಲಾ ಕೊಡುಗೆ ಇಂದಿರಮ್ಮನದೇ. ಕಾಂಗ್ರೆಸ್ಸಿನಲ್ಲಿ ಆಂತರಿಕ ಚುನಾವಣೆಗಳು ಮಹತ್ವ ಕಳೆದುಕೊಳ್ಳಲಾರಂಭಿಸಿದ ಹೊತ್ತು ಅದು!

ಸಂಜಯ್ ವಿಮಾನಾಪಘಾತದಲ್ಲಿ ತೀರಿಕೊಂಡಾಗ ಕಾಂಗ್ರೆಸ್ಸು ದಿಗ್ಭ›ಮೆಗೊಳಗಾಗಿತ್ತು. ಮುಂದೇನೆಂದು ತೋಚದೇ ರಾಜೀವ್​ರನ್ನು ಎಳತಂದು ಕಾಂಗ್ರೆಸ್ಸಿನ ಅಧ್ಯಕ್ಷಗಾದಿಗೇರಿಸಿತ್ತು. ಸಹಜವಾಗಿಯೇ ಮುಂದಿನ ಪ್ರಧಾನಿ ಕೂಡ! ಹೌದು. ಅಂದಿನ ಹಿರಿಯ ಕಾಂಗ್ರೆಸ್ ನಾಯಕ ಪೋತೇದಾರ್, ವಂಶಪರಂಪರೆಯ ಹಿನ್ನೆಲೆಯಿಂದ ಅವರಿಗೇ ಎಲ್ಲ ಅವಕಾಶಗಳು ಮೀಸಲು ಎಂದೂ ಹೇಳಿಬಿಟ್ಟಿದ್ದರು. ಆಳುವ ಅನುಭವವಿಲ್ಲದ ಕೊನೆಗೆ ಆಸ್ಥೆಯೂ ಇಲ್ಲದ ರಾಜೀವ್ ಅನಿವಾರ್ಯವಾಗಿ ಪ್ರಧಾನಿ ಗಾದಿಯತ್ತ ದಬ್ಬಲ್ಪಟ್ಟರು. 2014ರಲ್ಲಿ ನರೇಂದ್ರ ಮೋದಿಯಲ್ಲದೇ ಮತ್ತಾ್ಯರು ಪ್ರಧಾನಿ ಅಭ್ಯರ್ಥಿಯಾಗಿದ್ದರೂ ಪರಿವಾರದ ಭಜಕರು ರಾಹುಲ್​ರನ್ನೇ ಪ್ರಧಾನಿಯಾಗಿಸಿಯೇ ಬಿಡುತ್ತಿದ್ದರು. ಹೇಳಿದೆನಲ್ಲ. ಪರಿವಾರದ ಜಾಲ ಹೇಗಿದೆಯೆಂದರೆ ಅನೇಕ ಪತ್ರಕರ್ತರು ರಾಹುಲ್​ರನ್ನೂ ಬುದ್ಧಿವಂತನೆಂದು ಬಿಂಬಿಸಲು ತಿಪ್ಪರಲಾಗ ಹೊಡೆದರು. ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿದ್ದರಿಂದ ಅವರ ಯಾವ ಚಟುವಟಿಕೆಯೂ ಯಶಕಾಣಲಿಲ್ಲ. ಇಲ್ಲವಾದರೆ ಈ ವೇಳೆಗಾಗಲೇ ಇಂದಿರಾ, ರಾಜೀವ್ ಸಾಲಿಗೆ ರಾಹುಲ್​ರನ್ನೂ ಸೇರಿಸಿ ಪರಿವಾರದ ಆಳುವ ಹಕ್ಕನ್ನು ಮರುಸ್ಥಾಪನೆಗೊಳಿಸಿಬಿಡುತ್ತಿದ್ದರು.

ಈ ಪರಿವಾರ ತಮಗಿಂತ ಸಮರ್ಥರನ್ನು ಮುಂದೆ ಬರಲು ಬಿಡಲೇ ಇಲ್ಲ. ಈ ರೀತಿ ಸತತವಾಗಿ ಮೂಲೆಗುಂಪಾಗುತ್ತಾ ಬದುಕನ್ನೇ ಕಳೆದುಕೊಂಡವರಲ್ಲಿ ಪ್ರಣಬ್ ಮುಖರ್ಜಿಯೂ ಒಬ್ಬರು. ಇಂದಿರೆಯ ತಂಡದಲ್ಲಿ ಸಮರ್ಥರೆಂದು ಗುರುತಿಸಿಕೊಂಡ ವ್ಯಕ್ತಿ ಪ್ರಣಬ್​ದಾ. ಅನೇಕ ಬಾರಿ ಸಭೆಗಳಲ್ಲಿ ಭಾಗವಹಿಸಲಾಗದಿದ್ದರೆ ಅದರ ಹೊಣೆಗಾರಿಕೆ ಪ್ರಣಬ್​ರ ಮೇಲೆಯೇ ಇರುತ್ತಿತ್ತು. ಒಂದು ಹಂತದಲ್ಲಿ ಇಂದಿರೆಯ ನಂತರದ ಪ್ರಭಾವೀ ನಾಯಕ ತಾನೇ ಎಂಬ ಭ್ರಮೆ ಅವರನ್ನು ಆವರಿಸಿಕೊಂಡುಬಿಟ್ಟಿತ್ತು. ಇದು ಇಂದಿರಾಗೆ ಅರಿವಾದರೆ ಪ್ರಣಬ್ ರಾಜಕೀಯ ಭವಿಷ್ಯವೇ ಮುಗಿದಂತೆ ಎಂದು ಅನೇಕರು ಅವಡುಗಚ್ಚಿಯೇ ಕುಳಿತಿದ್ದರು. ಇಂಥದ್ದನ್ನು ಅರಿಯುವ ಕಲೆ ಇಂದಿರಾಗೆ ಇದ್ದುದರಿಂದ ಕೊನೆಗೂ ಪ್ರಣಬ್ ಮೂಲೆಗುಂಪಾದರು. ಸ್ವಸಾಮರ್ಥ್ಯದ ಕಾರಣದಿಂದ ಅವರು ಒಂದಷ್ಟು ಪ್ರಮುಖ ಹುದ್ದೆಗಳಲ್ಲಿ ಉಳಿದದ್ದು ನಿಜವಾದರೂ ದಕ್ಕಬೇಕಾದ್ದು ಮಾತ್ರ ಕೊನೆಯವರೆಗೂ ಸಿಗಲೇ ಇಲ್ಲ. ಮನಮೋಹನ ಸಿಂಗ್​ರು ಅದೊಮ್ಮೆ ವೇದಿಕೆಯ ಮೇಲೆ ಪ್ರಣಬ್​ರನ್ನು ಅಭಿನಂದಿಸುತ್ತಾ ‘ಪ್ರಧಾನಿಯಾಗುವ ಎಲ್ಲ ಅರ್ಹತೆ ಅವರಿಗಿದ್ದರೂ ನಾನು ಆಕ್ಸಿಡೆಂಟಲಿ ಪ್ರಧಾನಿಯಾಗಿಬಿಟ್ಟೆ’ ಎಂದಿದ್ದರು. ಅದರರ್ಥ ಈ ಪರಿವಾರದ ಪ್ರಣಬ್​ದ್ವೇಷ ಎರಡೆರಡು ಪೀಳಿಗೆವರೆಗೂ ಹರಿದುಬಂತು. ರಾಹುಲ್ ಪ್ರಧಾನಿ ಗದ್ದುಗೆಗೆ ಪ್ರಣಬ್ ಅಡ್ಡಗಾಲಾಗಬಹುದೆಂದೇ ಅವರನ್ನು ರಾಷ್ಟ್ರಪತಿಯೆಂಬ ಸ್ಥಾನಕ್ಕೇರಿಸಿ ಕೂರಿಸಿಬಿಡಲಾಯ್ತು. ಕೊನೆಗೂ ಅವರ ಅರ್ಹತೆ, ಸಾಮರ್ಥ್ಯಕ್ಕೆ ತಕ್ಕ ಹುದ್ದೆ ಸಿಗಲಿಲ್ಲ. ಅವರಿಗೆ ವ್ಯಾಪಕವಾದ ಜನಮನ್ನಣೆ ಸಿಕ್ಕಿದ್ದೇ ನರೇಂದ್ರ ಮೋದಿ ಪ್ರಧಾನಿಯಾದ ನಂತರ. ಪ್ರಣಬ್​ದಾ ಕೂಡ ಮೋದಿಯವರನ್ನು ಅತ್ಯಂತ ಪ್ರಮುಖ ಸಂದರ್ಭಗಳಲ್ಲಿ ಹೊಗಳಿ ಕಾಂಗ್ರೆಸ್ಸಿನ ವಿರುದ್ಧದ ತನ್ನೆಲ್ಲ ಆಕ್ರೋಶವನ್ನು ತೀರಿಸಿಕೊಂಡುಬಿಟ್ಟರು. ಅವರು ಸಂಘದ ಕಾರ್ಯಕ್ರಮಕ್ಕೆ ಹೋಗಿಬಂದದ್ದಂತೂ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿಬಿಟ್ಟಿತ್ತಲ್ಲ ಇವೆಲ್ಲದರ ಬೀಜ ಇಂದಿರಾರ ದ್ವೇಷದಲ್ಲಡಗಿದೆ ಅಥವಾ ಕಾಂಗ್ರೆಸ್ಸಿನ ಪ್ರಜಾಪ್ರಭುತ್ವ ವಿರೋಧಿ ಚಿಂತನೆಗಳಲ್ಲಿ!

2014ರಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ಸು ಪರಿವಾರದ ಕಪಿಮುಷ್ಟಿಯಿಂದ ಪಕ್ಷವನ್ನು ಹೊರತಂದು ರಾಹುಲ್ ಬದಲು ಪ್ರಣಬ್​ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿಬಿಟ್ಟಿದ್ದರೆ ಇಂದು ಕಥೆಯೇ ಬೇರೆಯಾಗುತ್ತಿತ್ತು. ಮೋದಿಯವರಿಗೆ ಖಂಡಿತ ಅಂದುಕೊಂಡಷ್ಟು ಸೀಟುಗಳು ಬರುತ್ತಿರಲಿಲ್ಲ. ಜೊತೆಗೆ ಅವರೆಣಿಸಿದ ವಿಕಾಸದ ಹಾದಿ ಕ್ರಮಿಸುವುದು ಸಾಧ್ಯವಾಗುತ್ತಿರಲಿಲ್ಲ. ನೆನಪಿರಲಿ. ತಾಯಿಯ ಕೊಲೆಯ ನಂತರ ರಾಜೀವ್ ಪ್ರಧಾನಿಗಾದಿ ಏರಿದರಲ್ಲ ಅವರು ತಮ್ಮ ಕ್ಯಾಬಿನೆಟ್​ನಲ್ಲಿ ಪ್ರಣಬ್​ರಿಗೆ ಸ್ಥಾನವನ್ನು ಕೊಟ್ಟಿರಲಿಲ್ಲ. ಪರಿವಾರ ಬಲವಾಯ್ತು, ಕಾಂಗ್ರೆಸ್ಸು ಸಾವಿಗೆ ಸಿದ್ಧವಾಯ್ತು.

1991ರಲ್ಲಿ ರಾಜೀವ್ ಹತ್ಯೆಯ ನಂತರ ಪಿ.ವಿ ನರಸಿಂಹರಾಯರು ಮತ್ತೆ ಕಾಂಗ್ರೆಸ್ಸನ್ನು ಹಳಿಗೆ ತರುವ ಯತ್ನ ಮಾಡಿದರು. ಸಮರ್ಥ ನಾಯಕರನ್ನೇ ಕಾರ್ಯಕರ್ತರೇ ಆರಿಸುವ ಪರಿಪಾಠ ಮತ್ತೆ ಬರಲೆಂದು ಆಶಯಪಟ್ಟರು. ವಾಸ್ತವವಾಗಿ ನರಸಿಂಹರಾಯರ ಜನಮನ್ನಣೆ ತೀವ್ರವಾಗಿಲ್ಲವಾದುದರಿಂದ ಅವರು ಬಲುಬೇಗ ಸರ್ಕಾರ ಸಂಭಾಳಿಸಲಾಗದೇ ಕೈಚೆಲ್ಲಿ ಮತ್ತೆ ಜನ ಆಸೆ ಕಂಗಳಿಂದ ಪರಿವಾರದತ್ತ ಹೊರಳುತ್ತಾರೆಂದು ಭಜಕರೆಲ್ಲ ಭಾವಿಸಿಬಿಟ್ಟರು.

ನರಸಿಂಹರಾಯರು ಕಾಂಗ್ರೆಸ್ಸಿಗೆ ಚುನಾವಣೆಗಳನ್ನು ಘೊಷಿಸುವ ಮೂಲಕ ಒಳವಲಯದಲ್ಲಿ ತಲ್ಲಣ ಹುಟ್ಟಿಸಿಬಿಟ್ಟಿದ್ದರು. ಚುನಾವಣೆಗಳ ನಂತರ ಹಿಂದೂ ಪತ್ರಿಕೆ ‘ಇತ್ತೀಚೆಗೆ ನಡೆದ ಸಂಘಟನಾತ್ಮಕ ಚುನಾವಣೆಗಳು ನರಸಿಂಹರಾಯರ ಮೇಲಿನ ವಿಶ್ವಾಸವನ್ನು ಬಲಗೊಳಿಸಿದೆಯಲ್ಲದೇ ಅವರು ಪ್ರಬಲ ಮುತ್ಸದ್ದಿ ಎಂದು ಸಾಬೀತುಪಡಿಸಿದೆ’ ಎಂದು ಬರೆದಿತ್ತು. ಇದು ಪರಿವಾರಕ್ಕೆ ತಲ್ಲಣಗಳನ್ನು ಹುಟ್ಟಿಸಲು ಸಾಕಿತ್ತು. ಈ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಕಾಂಗ್ರೆಸ್ ಸದಸ್ಯರು ಪಕ್ಷದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದರು. ಚುನಾವಣೆಗಳ ನಂತರ ಅರ್ಜುನ್ ಸಿಂಗ್, ಎ.ಕೆ. ಆಂಟನಿ, ಜಿತೇಂದ್ರಪ್ರಸಾದ್, ಶರದ್ ಪವಾರ್, ಆರ್.ಕೆ. ಧವನ್, ಗುಲಾಂ ನಬಿ ಆಜಾದ್, ಬಲರಾಮ್ ಜಾಖಡ್, ರಾಜೇಶ್ ಪೈಲಟ್, ಅಹ್ಮದ್ ಪಟೇಲ್, ವಿಜಯ ಭಾಸ್ಕರ್ ರೆಡ್ಡಿ ಇಷ್ಟೂ ಜನ ಭಿನ್ನ ಭಿನ್ನ ಸ್ಥಾನಗಳಲ್ಲಿ ಗೆದ್ದು ಬಂದರು. ಆದರೆ, ಚುನಾವಣೆಗಳು ನರಸಿಂಹರಾಯರು ಅಂದುಕೊಂಡಂತಹ ಫಲಿತಾಂಶವನ್ನು ಕೊಟ್ಟಿರಲಿಲ್ಲ. ಬಹುತೇಕರು ಅವರ ವಿರೋಧಿಗಳಾಗಿದ್ದು ಪರಿವಾರದ ಸಮರ್ಥಕರಾಗಿದ್ದವರೇ ಗೆದ್ದು ಬಂದಿದ್ದರು. ನರಸಿಂಹರಾಯರ ನಿರ್ಣಯಗಳನ್ನು ಎಲ್ಲ ಕಾಲಗಳಲ್ಲೂ ಸಮರ್ಥಿಸಿಕೊಂಡು ಬಂದಿದ್ದ ಕರುಣಾಕರನ್ ಮತ್ತು ಪ್ರಣಬ್ ಮುಖರ್ಜಿಯವರೇ ಸೋಲುಂಡಿದ್ದರು. ಆದರೆ, ನರಸಿಂಹರಾಯರು ಸಾಮಾನ್ಯವಾದ ವ್ಯಕ್ತಿಯಲ್ಲ. ಈ ಇಡೀ ಚುನಾವಣೆಯಲ್ಲಿ ಬಲಿಷ್ಠರು ಪ್ರಭಾವ ಬೀರಿ ಗೆದ್ದು ಬಂದುದನ್ನು ಅರಿತಿದ್ದ ಅವರು ಅದಕ್ಕೊಂದು ಪ್ರತಿದಾಳ ಸಿದ್ಧಪಡಿಸಿಕೊಂಡೇ ಇದ್ದರು. ಇಡಿಯ ಚುನಾವಣೆಯಲ್ಲಿ ಒಬ್ಬ ದಲಿತ ನಾಯಕನಾಗಲೀ ಹೆಣ್ಣುಮಗಳಾಗಲೀ ಗೆಲ್ಲದಿರುವುದನ್ನು ಬಲವಾಗಿ ವಿರೋಧಿಸಿ ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ಸಿನ ಹಳೆಯ ದಾಳವನ್ನು ಅದನ್ನು ಪ್ರಯೋಗಿಸಲು ಕಲಿಸಿಕೊಟ್ಟವರ ಮೇಲೆಯೇ ಪ್ರಯೋಗಿಸಿದರು. ಮೇಲ್ವರ್ಗದವರೆಲ್ಲ ಸೇರಿ ಚುನಾವಣಾ ಅಕ್ರಮ ನಡೆಸಿ ದಲಿತರನ್ನು ಶೋಷಿಸಿದ್ದೀರಾ ಎಂದು ಆರೋಪಿಸಿ ಚುನಾಯಿತ ಪ್ರತಿನಿಧಿಗಳೆಲ್ಲರಿಗೂ ರಾಜಿನಾಮೆ ಕೊಡುವಂತೆ ಹೇಳಿದರು. ದಲಿತ ಮತ್ತು ಸ್ತ್ರೀ ಪ್ರತಿನಿಧಿಗಳನ್ನು ಒಳತರಲು ಈ ಕ್ರಮ ಅಗತ್ಯ ಎಂದು ನರಸಿಂಹರಾಯರು ಮುಲಾಜಿಲ್ಲದೇ ತಮ್ಮ ಮಿತ್ರ ಕರುಣಾಕರನ್, ಸುಶೀಲ್​ಕುಮಾರ್ ಶಿಂಧೆ ಮತ್ತು ಒಮನ್ ದೇವ್ರಿ ಎಂಬ ಈಶಾನ್ಯ ರಾಜ್ಯದ ಮಹಿಳೆಯೊಬ್ಬರನ್ನು ಒಳತಂದರು. ಹಾಗೆಯೇ ಚುನಾವಣೆಯಲ್ಲಿ ಗೆದ್ದಿದ್ದ ಎಲ್ಲರನ್ನೂ ತಾವೇ ನಾಮನಿರ್ದೇಶನ ಮಾಡಿ ಅವರೆಲ್ಲರ ಸಂವಿಧಾನಾತ್ಮಕ ಅಧಿಕಾರವನ್ನು ಮೊಟಕುಗೊಳಿಸಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡರು. ಇದು ಪರಿವಾರದ ನಿಷ್ಠರಿಗೆ ಇರಿಸುಮುರಿಸು ಉಂಟುಮಾಡಿತ್ತಾದರೂ ಕಾಂಗ್ರೆಸ್ಸು ಸಮರ್ಥ ದಾರಿಯನ್ನು ಹಿಡಿಯುವ ಹೊತ್ತು ಬಂದಿತ್ತು. ಪಿ.ವಿ ನರಸಿಂಹರಾಯರು ತಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಸುಧಾರಣೆಯನ್ನು ತಂದು ಜನಮನ್ನಣೆ ಗಳಿಸಿದರು. ಹಳ್ಳ ಸೇರುತ್ತಿದ್ದ ಭಾರತದ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಿ ಅದಕ್ಕೊಂದು ಸ್ವರೂಪವನ್ನು ಕೊಟ್ಟರು. ಇದು ಪರಿವಾರದ ಹೊರತಾಗಿಯೂ ಅಧಿಕಾರ ನಡೆಸುವ ಸಾಮರ್ಥ್ಯ ಬೇರೆಯವರಲ್ಲಿದೆ ಎಂಬ ವಿಶ್ವಾಸವನ್ನು ಜನರೊಳಗೆ ತುಂಬಲು ಸಾಕಷ್ಟಾಗಿತ್ತು. ಆಗಲೇ ಕಾಂಗ್ರೆಸ್ಸು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿದ್ದರೆ ಇಂದು ಪ್ರಾದೇಶಿಕ ಪಕ್ಷಗಳೆದುರಿಗೆ ಕೈಚಾಚಿಕೊಂಡು ನಿಲ್ಲುವ ಪರಿಸ್ಥಿತಿ ಇರುತ್ತಿರಲಿಲ್ಲ. ಆದರೇನು, ಮರುಚುನಾವಣೆಗಳಲ್ಲಿ ಅಧಿಕಾರ ನಡೆಸುವಷ್ಟು ಪೂರ್ಣ ಬಹುಮತ ನರಸಿಂಹರಾಯರಿಗೆ ಬರದೇ ಹೋದಾಗ ಅವರು ಉಳಿದೆಲ್ಲ ಪಕ್ಷಗಳನ್ನು ಒಲಿಸಿ ಸಮ್ಮಿಶ್ರ ಸರ್ಕಾರ ನಡೆಸುವ ಪ್ರಯತ್ನ ಆರಂಭಿಸಿದ್ದಾಗಲೇ ಕಾಂಗ್ರೆಸ್ಸಿನ ಪರಿವಾರಭಜಕರು ಪತ್ರಿಕಾಗೋಷ್ಠಿ ಕರೆದು ತಮಗೆ ಅಧಿಕಾರ ನಡೆಸುವ ಇರಾದೆ ಇಲ್ಲವೆಂದೂ, ಯಾರಾದರೂ ಇಚ್ಛೆಪಟ್ಟರೆ ಅವರಿಗೆ ಬೆಂಬಲ ಕೊಡುವೆವೆಂದೂ ಹೇಳಿಕೆಕೊಟ್ಟು ನರಸಿಂಹರಾಯರನ್ನು ಹೊರದಬ್ಬುವ ತಮ್ಮ ಯೋಜನೆಗಳನ್ನು ಸಾಕಾರಗೊಳಿಸಿಕೊಂಡರು. ಅದು ಅಕ್ಷರಶಃ ಅವರ ರಾಜಕೀಯ ಅಂತ್ಯವೇ ಆಗಿತ್ತು. ಹಾಗಂತ ಕಾಂಗ್ರೆಸ್ಸು ಇಲ್ಲಿಗೇ ನಿಲ್ಲಲಿಲ್ಲ. ನರಸಿಂಹರಾಯರು ತೀರಿಕೊಂಡಾಗ ಅವರ ಪಾರ್ಥಿವಶರೀರಕ್ಕೆ ಕೊಡಬೇಕಾದ ಯಾವ ಗೌರವವನ್ನೂ ಕೊಡಲಿಲ್ಲ. ಒಂದು ಕಾಲದಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಅವರ ಪಾರ್ಥಿವ ಶರೀರಕ್ಕೆ ಪಕ್ಷದ ಕಚೇರಿಗೂ ಪ್ರವೇಶ ಕೊಡಲಿಲ್ಲ. ಕೊನೆಗೆ ಅವರ ಶವಸಂಸ್ಕಾರಕ್ಕೆ ದೆಹಲಿಯಲ್ಲೇ ಅವಕಾಶ ಕೊಡಬಾರದೆಂಬ ಹಠ ಕೂಡ ಮಾಡಲಾಯ್ತು. ಕಷ್ಟಕಾಲದಲ್ಲಿ ಪಕ್ಷದ ನಾಯಕನಾಗಿ, ದೇಶವನ್ನು ಮುನ್ನಡೆಸಿದ ತನ್ನ ಅಧ್ಯಕ್ಷನಿಗೆ, ಒಬ್ಬ ಪ್ರಧಾನಿಗೆ ಕಾಂಗ್ರೆಸ್ಸು ಕೊಟ್ಟ ಗೌರವ ಇದು.

ಬಿಡಿ, ಇದು ಬೇರೊಂದು ಚರ್ಚೆ. ಆದರೆ ಕೊನೆಯ ಪಕ್ಷ ನರಸಿಂಹರಾಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಛಾತಿಯನ್ನು ಕಾಂಗ್ರೆಸ್ಸಿಗರು ತೋರಿದ್ದರೂ ಕಾಂಗ್ರೆಸ್ಸುಮುಕ್ತ ಭಾರತದ ನಿರ್ವಣದ ಕನಸು ಕಾಣುವ ಪರಿಸ್ಥಿತಿ ದೇಶಕ್ಕಿರುತ್ತಿರಲಿಲ್ಲ. ಹಾಗಂತ ತಿದ್ದಿಕೊಳ್ಳುವ ಅವಕಾಶಗಳು ಮತ್ತೂ ಇತ್ತು..

ಕಾಂಗ್ರೆಸ್ಸಿನಲ್ಲಿ ಕಣ್ಣಿಗೆ ಕಾಣದೇ ಉರಿಯುವ ಪ್ರತೀಕಾರದ ಬೆಂಕಿ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...