ಗದ್ಯ ಪದ್ಯದ ರೂಪದಲ್ಲಿ ಹಾಸ್ಯದ ರಸದೌತಣ

Latest News

ಉತ್ತರ ಕರ್ನಾಟಕದ ಪ್ರವಾಹ ಮರೆತೇ ಬಿಟ್ಟಿರಾ?!

ಪ್ರಕೃತಿ ವಿಕೋಪವೆಂಬುದು ನಮ್ಮ ನಡುವಿನ ಬಾಂಧವ್ಯವನ್ನು ಹೆಚ್ಚು ಗಟ್ಟಿಗೊಳಿಸಬೇಕು. ಸಮಸ್ಯೆ ಬಂದಾಗ ಪರಿಹಾರಕ್ಕೆ ಹುಡುಕಾಡುವುದು ಅತ್ಯಂತ ಸಾಮಾನ್ಯರ ಲಕ್ಷಣ. ಆದರೆ ಸಮಸ್ಯೆ ಬರುವ ಮುನ್ನವೇ ಅದಕ್ಕೆ...

ಪ್ರಾಣಾಯಾಮದಲ್ಲಿ ಮುದ್ರೆಗಳ ಅಭ್ಯಾಸದಿಂದ ಕುಂಡಲಿನೀ ಶಕ್ತಿಯ ಉದ್ದೀಪನ

ಪ್ರಾಣಾಯಾಮ ಅಭ್ಯಾಸದ ವೇಳೆ ವಿವಿಧ ಮುದ್ರೆಗಳನ್ನು ಬಳಸಲಾಗುತ್ತದೆ. ಮುದ್ರೆ ಎಂದರೇನು? ಮುದ ನೀಡುವುದು ಯಾವುದು ಅದೇ ಮುದ್ರಾ ಎನ್ನುವುದು ಈ ಪದದ ವ್ಯಾಖ್ಯೆ. ಮುದ್ರೆಗಳು ಆರೋಗ್ಯಕ್ಕೆ...

ನೀವು ನರ್ಸರಿ ಮಾಡಲು ನಿರ್ಧರಿಸಿದ್ದೀರಾ? ಇಲ್ಲಿದೆ ನೋಡಿ ಮಣ್ಣು ತುಂಬಲು ಸರಳ ಸಾಧನ

ಕಾಳುಮೆಣಸು, ಅಡಕೆ, ಅಲಂಕಾರಿಕ ಹೂವಿನ ಗಿಡ ಇಂಥ ಬಹುಬೇಡಿಕೆಯುಳ್ಳ ಸಸಿಗಳ ನರ್ಸರಿ ಮಾಡಲು ನಿರ್ಧರಿಸಿದ್ದರೆ, ಸಾವಿರಾರು ಕವರ್​ಗಳಿಗೆ ಮಣ್ಣು ತುಂಬುವುದು ಹೇಗಪ್ಪ ಎಂದು ಚಿಂತಿಸುತ್ತಿರಬಹುದು. ಅಂಥವರಿಗೆಲ್ಲ...

ಉಮಾಶಂಕರ ಗಡಿಪಾರಿಗೆ ಒತ್ತಾಯಿಸಿ ಪ್ರತಿಭಟನೆ

ಚಡಚಣ: ಡಾ.ಬಿ.ಆರ್. ಅಂಬೇಡ್ಕರರು ಸಂವಿಧಾನ ಬರೆದಿಲ್ಲ ಎಂದು ಅವಹೇಳನಕಾರಿಯಾಗಿ ಪ್ರಕಟಿಸಿದ್ದನ್ನು ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಮನ್ವಯ ತಾಲೂಕು ಸಮಿತಿ ವತಿಯಿಂದ ಶನಿವಾರ...

ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ- ಇಂದಿನ ಇಂಗ್ಲಿಷ್ ಪದಗಳು

Burrow (ಬರೋ) = ಹುಡುಕಾಡು ತನ್ನ ಕಾರ್​ನ ಚಾವಿಯ ಯಥಾಪ್ರತಿಗಾಗಿ ಆತ ಡ್ರಾವರ್​ನಲ್ಲಿದ್ದ ವಸ್ತುಗಳನ್ನು ಅಡಿಮೇಲಾಗಿಸಿ ಹುಡುಕಾಡಿದ. He burrowed through the things in the...

ಬರವಣಿಗೆ, ನಟನೆ ಯಾವುದೇ ಇರಲಿ, ಜನರ ಕಣ್ಣಲ್ಲಿ ನೀರು ತರಿಸುವುದು ಬಲು ಸುಲಭದ ಕೆಲಸ. ಗ್ಲಿಸರಿನ್ ಹಾಕಿಕೊಂಡೋ, ಮೊಸಳೆ ಕಣ್ಣೀರು ಸುರಿಸಿಯೋ ಇಲ್ಲವೇ ನಿಜವಾಗಿ ದುಃಖಪಟ್ಟೋ ಒಟ್ಟಿನಲ್ಲಿ ತಮ್ಮ ಕಣ್ಣಲ್ಲೂ ನೀರು ತರಿಸಿಕೊಂಡು, ಇತರರನ್ನೂ ಅಳಿಸುವುದು ಕಷ್ಟವೇನಲ್ಲ. ಒಂದೇ ದುಃಖದ ಕಥೆಯನ್ನು ಮತ್ತೆ ಮತ್ತೆ ಕೇಳಿದರೂ ಅಳುವವರು ಇದ್ದಾರೆ. ಆದರೆ ನಗುವಿನ ವಿಷಯ ಮಾತ್ರ ಹಾಗಲ್ಲ. ಖುದ್ದು ನಗುವುದೇ ಬಲು ಕಷ್ಟ, ಇನ್ನೊಬ್ಬರನ್ನು ನಗಿಸುವುದು ಇನ್ನೂ ಕಷ್ಟ ಎನ್ನುವ ಪರಿಸ್ಥಿತಿ. ಒಮ್ಮೆ ಕೇಳಿದ ಹಾಸ್ಯದ ವಿಷಯವನ್ನು ಇನ್ನೊಮ್ಮೆ ಕೇಳಿದರೆ ಅಥವಾ ಓದಿದರೆ ನಗು ಬರುವುದಿಲ್ಲ. ಆದರೆ ಆರೋಗ್ಯ ವೃದ್ಧಿಗೆ ನಗು ಬೇಕೇ ಬೇಕು ಎನ್ನುವುದೂ ಅಷ್ಟೇ ದಿಟ.

ಇಂಥ ಪರಿಸ್ಥಿತಿಯಲ್ಲಿ, ನಮ್ಮ ಕಣ್ಣೆದುರೇ ಕಾಣುವ, ದಿನನಿತ್ಯದ ಜೀವನದಲ್ಲಿ ನಾವು ನೋಡುವ ವಸ್ತುಗಳನ್ನು, ಹಾಸ್ಯ ಸಾಹಿತಿಗಳಿಗೆ ಇಷ್ಟವಾಗುವ ‘ದಂಪತಿ’ (ಹೆಚ್ಚಾಗಿ ಹೆಂಡತಿ!) ವಿಷಯವನ್ನು ಅಕ್ಷರಕ್ಕಿಳಿಸಿ ಗದ್ಯ-ಪದ್ಯದ ರೂಪದಲ್ಲಿ ನಗುವಿನ ರಸದೌತಣವನ್ನು ಉಣ ಬಡಿಸುತ್ತಿರುವವರು ಹಾಸ್ಯ ಸಾಹಿತಿ, ಹಾಸ್ಯ ಕವಿ, ನಾಟಕಕಾರ, ಅಂಕಣಕಾರ, ಲೇಖಕ ಮುಂತಾದ ಬಿರುದುಗಳಿಂದ ಪ್ರಸಿದ್ಧರಾಗಿರುವ ಎಚ್.ಡುಂಡಿರಾಜ್.

‘ವಿಜಯವಾಣಿ’ ಪತ್ರಿಕೆಯ ‘ವಿಜಯ ವಿಹಾರ’ ಪುರವಣಿಯಲ್ಲಿ ಪ್ರತಿವಾರ ಪ್ರಕಟಗೊಳ್ಳುತ್ತಿರುವ ‘ಪಂಚ್ ಕಾ ಜಾಯ್’ ಅಂಕಣದಲ್ಲಿನ 40 ಲಘು ಬರಹಗಳು ‘ಕರೆಗಳು ಸಾರ್ ಕರೆಗಳು’ ಹೆಸರಿನಲ್ಲಿ ಪುಸ್ತಕ ರೂಪ ಪಡೆದಿದೆ.

ಈ ಪುಸ್ತಕದಲ್ಲಿನ ಪ್ರತಿಯೊಂದು ಲೇಖನವೂ ನಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಪ್ರತಿ ಲೇಖನದಲ್ಲಿನ ವಿಷಯ ನಮಗೆ ತೀರಾ ಹತ್ತಿರ ಹಾಗೂ ತುಂಬಾ ಸಿಂಪಲ್ ಆಗಿರುವುದು ಬರಹಗಳು ತುಂಬಾ ಆಪ್ತ ಎನಿಸಲು ಪ್ರಮುಖ ಕಾರಣ. ಲೇಖನಗಳ ಜತೆ ಚುಟುಕುಗಳ ಮೂಲಕ ನೀಡುವ ‘ಪಂಚ್’ ಇವರ ಬರವಣಿಗೆಯ ಹೈಲೈಟ್. ದಾಂಪತ್ಯದ ಸೊಗಸನ್ನು ‘ಬ್ರೇಕಿಂಗ್ ನ್ಯೂಸ್ ಮತ್ತು ಶಾಕಿಂಗ್ ನ್ಯೂಸ್’ ಲೇಖನದಲ್ಲಿಯೂ, ಈಚೆಗೆ ಭಾರಿ ಸುದ್ದಿ ಮಾಡಿದ ‘ಮೀ-ಟೂ’ ಅಭಿಯಾನದ ಕುರಿತು ‘ಮೀ ಟೂ ಅಲ್ಲ ಮೀಯು ಅಭಿಯಾನ’ದ ಮೂಲಕವೂ, ನೆನಪಿಗೆ ಬಂದರೂ ಅದನ್ನು ತಕ್ಷಣಕ್ಕೆ ಹೇಳಲು ಪರದಾಡುವ ಪ್ರಸಂಗವನ್ನು ‘ಗಂಟಲಲ್ಲಿದೆ ಬಾಯಿಗೆ ಬರ್ತಾ ಇಲ್ಲ’ ಲೇಖನದಲ್ಲಿಯೂ, ಹೊಟ್ಟೆಯನ್ನೇ ಹಾಸ್ಯದ ವಸ್ತುವಾಗಿಟ್ಟುಕೊಂಡು ಬರೆದ ‘ಹೊಟ್ಟೆಯ ಸುತ್ತ ಒಂದು ಪುಟ್ಟ ಹರಟೆ’, ‘ಬಾಡಿ ಹಳೆಯದಾದರೂ ಶರ್ಟೂ ನವನವೀನ’ ಲೇಖನಗಳ ಮೂಲಕವೂ… ಹೀಗೆ ‘ಕರೆಗಳು ಸಾರ್ ಕರೆಗಳು’ ಪುಸ್ತಕದಲ್ಲಿ ಹಾಸ್ಯವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಕೃಷಿ ವಿಜ್ಞಾನ ವ್ಯಾಸಂಗ ಮಾಡಿ ನಂತರ ಬ್ಯಾಂಕ್ ಉದ್ಯೋಗಿಯಾಗಿದ್ದ ಡುಂಡಿರಾಜ್ ಅವರು ತಮ್ಮ ವೃತ್ತಿ ಜೀವನಕ್ಕೂ ಹಾಸ್ಯದ ಲೇಪನ ನೀಡಿದ್ದಾರೆ. ‘ಬ್ಯಾಂಕಿನ ‘ನಗದು’ ವ್ಯವಹಾರದ ನಡುವುದೆಯೂ ನಗುವುದು, ನಗಿಸುವುದು ನನಗೆ ಸಾಧ್ಯವಾಯಿತು. ‘ನೀವು ಬಿಡಿ ಸಕಲ ಕಲಾ ವಲ್ಲಭರು. ನಿಮ್ಮ ಶ್ರೀಮತಿಯವರಿಗೂ ಸಾಹಿತ್ಯದಲ್ಲಿ ಆಸಕ್ತಿ ಇದೆಯಾ?’ ಎಂದು ಯಾರೋ ಒಮ್ಮೆ ಕೇಳಿದಾಗ ನಾನು ಹೀಗೆ ಉತ್ತರಿಸಿದ್ದೆ, ‘ನನಗೆ ಸಾಹಿತ್ಯ, ಕಲೆ, ನಾಟಕ, ಸಂಗೀತದ ಬಗ್ಗೆ ವಿಪರೀತ ಆಸಕ್ತಿ ಇದೆ/ ನನ್ನವಳಿಗೂ ಅಷ್ಟೇ/ ಇದನ್ನೆಲ್ಲ ಸಹಿಸಿಕೊಳ್ಳುವ ಆ ಶಕ್ತಿ ಇದೆ…’ ಎನ್ನುವ ನವಿರಾದ ಹಾಸ್ಯದಿಂದ ನಕ್ಕು ನಗಿಸುತ್ತಾರೆ.

ಡುಂಡಿರಾಜ್ ಅವರ ಹಾಸ್ಯ ಬರಹಗಳಲ್ಲಿ ‘ಹೆಂಡತಿ’ ಹಾಗೂ ‘ಸಂಸಾರ’ಕ್ಕೆ ವಿಶೇಷ ಸ್ಥಾನಮಾನವಿದೆ! ‘ಆಕೆ ತುಂಬಾ ಜಾಣ ಹೆಣ್ಣು/ ಒಂದೇ ಕಲ್ಲಲ್ಲಿ ಬೀಳಿಸಿದ್ದಾಳೆ ಎರಡು ಹಣ್ಣು. ಪತಿ ನಿವೃತ್ತನಾದೊಡನೆ ತೆಗೆದು ಹಾಕಿದ್ದಾಳೆ ಕೆಲಸದಾಕೆಯನ್ನು’ ಎಂದೂ; ‘ಸಂಸಾರವೆಂಬ ಪರೀಕ್ಷೆಯಲ್ಲಿ ಪಾಸಾಗಬೇಕಾ?/ ಚೆನ್ನಾಗಿ ಓದಿ ಅರ್ಥ ಮಾಡಿಕೊಳ್ಳಿ ಮಡದಿ ಎಂಬ ದಪ್ಪ ಪುಸ್ತಕ!’ ಎಂದೂ; ‘ಹೊಸದರಲ್ಲಿ ಕೆಲವು ದಿನ ಕಚ್ಚುತ್ತದೆ ಚಪ್ಪಲಿ/ ಸರಿ ಹೋಗುತ್ತದೆ ನಿಧಾನ ಆಗುತ್ತದೆ ಮೆತ್ತಗೆ ಗಂಡಂದಿರ ಹಾಗೆ!’ ಎಂದೂ ‘ಹೆಣ್ಣು ತನ್ನ ಗಂಡನನ್ನು ತಾನೇ ಆರಿಸಿಕೊಳ್ಳುವುದು ಸ್ವಯಂವರ/ ಗಂಡು ಹಾಗೆ ಮಾಡಿದರೆ ಅದು ಸ್ವಯಂ-ವರಿ (ಡಿಟ್ಟ್ಟ)’ ಎಂದೂ; ‘ಹೆಂಡತಿಯ ಜತೆಗೆ ಹೋರಾಡಲು ಕೆಲವರಿಗೆ ಇರುವುದಿಲ್ಲ ತ್ರಾಣ/ ಅಂಥವರು ಮನೆಯೊಳಗೆ ಕಡ್ಡಾಯವಾಗಿ ತೊಡಬೇಕು ಶಿರಸ್ತ್ರಾಣ!…’ ಹೀಗೆ ನೂರಾರು ಚುಟುಕು ಕವಿತೆಗಳಿಂದ ಓದುಗರನ್ನು ಹಾಸ್ಯದ ಕಡಲಿನಲ್ಲಿ ತೇಲಿಸಿದ್ದಾರೆ.

ಡುಂಡಿರಾಜ್ ಅವರ ಬಹುತೇಕ ಲೇಖನಗಳ ಕೊನೆಯಲ್ಲಿ ‘ಮುಗಿಸುವ ಮುನ್ನ’ ಎಂಬ ಉಲ್ಲೇಖವಿದ್ದು, ಅದರಲ್ಲೊಂದು ಹಾಸ್ಯದ ಚುಟುಕುಗಳು ಇಣುಕಿ ಹಾಕುತ್ತವೆ. ಹಾಗೆಯೇ, ಈ ಪುಸ್ತಕದಲ್ಲಿನ ‘ಆಕಳಿಕೆ ಎಂಬ (ಅ)ಭಾವಗೀತೆ’ಲೇಖನದ ತುಣುಕು ಚುಟುಕು ಹೀಗಿದೆ:

ಈ ಲೇಖನ ನಿಮಗೆ

ಇಷ್ಟವಾದರೆ ಒಂದು

ಇ-ಮೇಲ್ ಕಳಿಸಿ

ಇಷ್ಟವಾಗದಿದ್ದರೆ

ಆಕಳಿಸಿ!

ಪ್ರತಿಕ್ರಿಯಿಸಿ: [email protected]

- Advertisement -

Stay connected

278,552FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....