ಮೂಕಜ್ಜಿಯ ಕನಸುಗಳಿಗೆ ಅರ್ಧ ಶತಮಾನ

Latest News

ಉಪಕದನ ಅಖಾಡ ಸಿದ್ಧ; ಅಂತಿಮ ಕಣದಲ್ಲಿ 165 ಅಭ್ಯರ್ಥಿಗಳು

ಬೆಂಗಳೂರು: ಯಡಿಯೂರಪ್ಪ ಸರ್ಕಾರದ ಅಳಿವು-ಉಳಿವಿನ ಜತೆಗೆ ಅನರ್ಹ ಶಾಸಕರ ರಾಜಕೀಯ ಹಣೆಬರಹ ನಿರ್ಧರಿಸಲಿರುವ 15 ಕ್ಷೇತ್ರಗಳ ಉಪಚುನಾವಣೆ ಕದನ ನಿರ್ಣಾಯಕ ಘಟ್ಟ ತಲುಪಿದೆ. ಅಭ್ಯರ್ಥಿಗಳ ನಾಮಪತ್ರ...

ಉಳಿಯ ಕುದ್ರುವಿಗೆ ಸೇತುವೆ

ಭರತ್ ಶೆಟ್ಟಿಗಾರ್ ಮಂಗಳೂರು ಮಂಗಳೂರು ಮಹಾನಗರದಿಂದ ಕೆಲವೇ ಕಿ.ಮೀ. ದೂರದಲ್ಲಿದ್ದರೂ ಆಡಳಿತ ವ್ಯವಸ್ಥೆಗೆ ಪಾವೂರು- ಉಳಿಯ ಕುದ್ರು ಪ್ರದೇಶಕ್ಕೆ ಸೇತುವೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಪ್ರತಿ ವರ್ಷದಂತೆ...

ರಾಜ್ಯದಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿ

ಮಂಗಳೂರು: ಕಡಲು ಹಾಗೂ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ನೂತನ ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ತರಲಾಗುವುದು. ಇದರ ಕರಡು ಪ್ರತಿ ಇನ್ನೆರಡು...

ಕಾಜೂರು ಮರದ ಗರಿಯಿಂದ ಮಾಡಿದ ಬುಟ್ಟಿಗೆ ಬೇಡಿಕೆ

ಗೋಪಾಲಕೃಷ್ಣ ಪಾದೂರು ಉಡುಪಿದೇಶಾದ್ಯಂತ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಹೆಚ್ಚಾಗುತ್ತಿದ್ದಂತೆ ಬಳ್ಳಿ, ಮರದ ತೊಗಟೆ, ಗರಿಗಳಿಂದ ರಚಿಸಿದ ಬುಟ್ಟಿಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಆದಿ...

ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲು ನಿರ್ಧಾರ

ವಿಜಯಪುರ: ರೈತರ ಜಮೀನುಗಳಿಗೆ ದಾರಿ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ...

ಜ್ಞಾನಪೀಠ ಪುರಸ್ಕೃತ ಕೃತಿ ಮೂಕಜ್ಜಿಯ ಕನಸುಗಳು ಕಾರಂತರ ಕಾದಂಬರಿಗಳಲ್ಲೇ ವಿಶಿಷ್ಟವಾದದ್ದು. ಈ ಕಾದಂಬರಿಗೀಗ ಐವತ್ತರ ಸಂಭ್ರಮ. ಮಾನವ ಜೀವನ, ಇತಿಹಾಸ, ಧಾರ್ವಿುಕ ನಂಬಿಕೆಗಳು, ಮಾನವ ಸಹಜ ನಡವಳಿಕೆಗಳು, ಸಂಸಾರ, ಅಧ್ಯಾತ್ಮದ ಬಗ್ಗೆ ಹೊಸ ಕಲ್ಪನೆ ಮೂಡಿಸುವಲ್ಲಿ ಮೂಕಜ್ಜಿಯ ಕನಸುಗಳು ಸಾರ್ಥಕ್ಯ ಸಾಧಿಸುತ್ತದೆ. ಮೂಕಜ್ಜಿಯ ಪಾತ್ರ ನಿಜಕ್ಕೂ ಅದ್ಭುತ ಕಲ್ಪನೆ. ಅವಳ ಕನಸುಗಳಲ್ಲಿ ಸಮಾಜವನ್ನು ತಿದ್ದುವ ಪ್ರಯತ್ನವಿದೆ. ಕುತೂಹಲ ಹುಟ್ಟಿಸುವ ಕಥೆಗಳಿವೆ.

| ಗೊದ್ಲಬೀಳು ಪರಮೇಶ್ವರ

ಚಳಿ ಚಳಿ ಎಂದು ನಡುಗುವ ಹೇಮಂತ ಸಮಯವಿದು. ಹೆಚ್ಚು ಕನಸು ಕಾಣುವ ಕಾಲವೂ ಹೌದು. ಅಷ್ಟೇ ಅಲ್ಲ, ಕನ್ನಡಿಗರೆಲ್ಲ ಕನಸುಗಳನ್ನು ಸಂಭ್ರಮಿಸುವ ಸನ್ನಿವೇಶವೂ ಇದಾಗಿದೆ. ಅದು ಮೂಕಜ್ಜಿ ಕಂಡ ಕನಸುಗಳ ಸಂಭ್ರಮ. ಡಾ. ಕೋಟ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ಈಗ ಐವತ್ತು ವರ್ಷ.

ಕಥೆ ಹೇಳುವ ಅಂಥ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ ನಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯಪಿಶಾಚಿಯ ರೂಪವೇ ಅವಳೆಂದು ತಿಳಿದರಾಯ್ತು. ಆದರೂ ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿದ್ದಾಳೆ. ಸಾಂಪ್ರದಾಯಿಕ ಹೆರೆಗಟ್ಟಿದ ಮನಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು…

ನಾವೆಲ್ಲ ಹೆಮ್ಮೆಪಡಬೇಕಾದ ಈ ಅದ್ಭುತ ಕೃತಿಯ ಸಾರಾಂಶವನ್ನು ಶಿವರಾಮ ಕಾರಂತರು ಮುನ್ನುಡಿಯಲ್ಲಿ ನಾಲ್ಕೈದು ಸಾಲುಗಳಲ್ಲಿ ಕಟ್ಟಿಕೊಟ್ಟ ಬಗೆಯಿದು. ತನ್ನರಿವಿನ ಪರಿಧಿಯಲ್ಲೇ ಉತ್ತರ ಕಂಡುಕೊಳ್ಳುವ ಸೂಕ್ಷ್ಮ ಚಿತ್ರಣ ಈ ಕಾದಂಬರಿಯ ಸ್ಥೂಲ ಮೊತ್ತ. ಮೂಕಜ್ಜಿಯ ಕನವರಿಕೆಗಳ ಹಿಂದೆ ಅಂಥದ್ದೊಂದು ಅಂತಃಸತ್ವ, ಪ್ರಜ್ಞೆಯಾಳ ಸಾಮಾನ್ಯ ಓದುಗರ ನಿಲುಕಿಗೂ ತಲುಪುವ ವಿಸ್ಮಯ ಮಾತ್ರ ಕಾರಂತರ ಜೀವನದರ್ಶನ ಹಾಗೂ ಬರಹದ ಶಕ್ತಿಯ ಪ್ರತೀಕ.

ಕಾದಂಬರಿಯಲ್ಲಿ ತೆರೆದುಕೊಳ್ಳುವ ಲೋಕ ನಮ್ಮ ಆಧುನಿಕ ಬದುಕಿನ ಪರಿಧಿಯಾಚೆ ಯಾವುದೋ ಪುಟ್ಟ ಪುರಾತನ ಪ್ರಪಂಚಕ್ಕೆ ಕರೆದೊಯ್ದುಬಿಡುತ್ತದೆ. ಅಜ್ಜಿ-ಮೊಮ್ಮಗನ ಮೂಲಕವೇ ತೆರೆದುಕೊಳ್ಳುತ್ತಾ ಸಾಗುವ ಕಥೆ ಆ ದಿನಗಳ ಸಾಮಾಜಿಕ ಬದುಕಿನ ನೆಲೆಗಟ್ಟಿನಲ್ಲಿಯೇ ಕಂಡ, ಕಾಣದ ಸತ್ಯಗಳನ್ನೆಲ್ಲ ತಣ್ಣಗೆ ಅನಾವರಣಗೊಳಿಸುತ್ತದೆ. ಎಲ್ಲರೂ ಅವರವರ ಮನೋಧರ್ಮಕ್ಕನುಗುಣವಾಗಿಯೇ ವರ್ತಿಸುವುದರಿಂದ ಅವರ ಅರಿವು, ಗೊಂದಲ, ಅನುಮಾನ, ಪ್ರಜ್ಞೆಗಳು ಓದುಗನದೇ ಆಗುತ್ತಾ ತಲ್ಲೀನವಾಗಿಸಿಬಿಡುತ್ತವೆ.

ಈ ತಲ್ಲೀನತೆಯ ನಡುವೆಯೇ ಹುಟ್ಟಿಕೊಳ್ಳುವ ನಿಗೂಢ ಸೋಜಿಗ ಮೂಕಜ್ಜಿಯ ವಿಶೇಷ ಶಕ್ತಿಯ ರೂಪದಲ್ಲಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಅದೇನು ಅದ್ಭುತ ಶಕ್ತಿಯೋ, ಹುಚ್ಚು ಬಡಬಡಿಕೆಯೋ ಎನ್ನುವ ಅನುಮಾನ, ದ್ವಂದ್ವಗಳನ್ನು ಜತೆಜತೆಗೆ ದಾಟಿಸುತ್ತದೆ, ಹೊರಗಿನ ಜನಕ್ಕೆ ಮುಪ್ಪಿನ ಮರುಳಾಗಿ ಕಾಣಿಸುವ ಇದನ್ನು ಮೂಕಜ್ಜಿಯ ಅದ್ಭುತ ಶಕ್ತಿಯೆಂದು ಗ್ರಹಿಸಿದವನು ಮೊಮ್ಮಗ ಸುಬ್ಬರಾಯ ಮಾತ್ರ. ಮಿಕ್ಕೆಲ್ಲರಿಗೂ ಅದು ಮುಪ್ಪಿನ ಮರುಳು. ಇಡೀ ಕಥಾನಕದ ಹಂದರದಲ್ಲಿ ಕಾಣುವ ಪಾತ್ರಗಳು ಘಟನೆಗಳು, ಸನ್ನಿವೇಶಗಳು ಮೇಲ್ನೋಟಕ್ಕೆ ಪರಸ್ಪರ ಸಂಬಂಧಿಸದ, ಸಡಿಲವಾಗಿ ಜೋಡಿಸಿದ ಅನುಬಂಧ ಎನಿಸಿದರೂ, ಸಮಷ್ಟಿ ದೃಷ್ಟಿಯಲ್ಲಿ ನೋಡಿದಾಗ ಕಥೆಯ ಮೂಲತತ್ವವಾದ ಸೃಷ್ಟಿಮಥನದ ಆವರಣಕ್ಕೆ ಜೋಡಿಸಿದ ನೂರಾರು ಎಳೆಗಳಂತೆ ಕಾಣುತ್ತವೆ.

ನಮ್ಮೊಳಗೆ ಮುಚ್ಚಿಟ್ಟ ಗುಟ್ಟುಗಳೆಲ್ಲ ಅರೆಬರೆಯಾಗಿಯೇ ತೆರೆದುಕೊಳ್ಳುತ್ತ ಕೊನೆಯಿರದ ಯಾತ್ರೆಯಂತೆ ಸಾಗುತ್ತದೆ. ಕಥೆಯೊಳಗಿನ ಕಥೆಗಳು ಜೇಡ ನೇಯ್ದ ಬಲೆಯಂತೆ ತಮ್ಮದೇ ಆದ ವಿಸ್ಮಯಲೋಕದಲ್ಲಿ ಒಂದಾಗಿಬಿಡುತ್ತವೆ. ಇದೆಲ್ಲಕ್ಕಿಂತ ಹೆಚ್ಚಿನದೆಂದರೆ, ಮೂಕಜ್ಜಿಯ ಕನಸು ಓದಿ ಮುಗಿಸುವ ಹೊತ್ತಿಗೆ ತಾನೊಬ್ಬ ಪ್ರಜ್ಞಾವಂತ, ಸಂವೇದನಾಶೀಲ ಓದುಗನಾಗಿಬಿಟ್ಟೆ ಎಂದೆನಿಸುವ ಸಂತೃಪ್ತಿ, ಆನಂದದ ಅನುಭೂತಿ ಒಬ್ಬ ಸಾಧಾರಣ ಮನಸ್ಥಿತಿಯ ಓದುಗನದಾಗಿರುತ್ತದೆ.

ಭಾರತೀಯ ಪರಂಪರೆಯಲ್ಲಿ ಸಾವಿರಾರು ವರ್ಷಗಳಿಂದ ತಳವೂರಿದ್ದ ಸಂಪ್ರದಾಯವಾದಿ ಆಚರಣೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ವಿಮಶಿಸುವ ಕಾದಂಬರಿಯಿದು. ಮೂಕಜ್ಜಿಗೆ ಅತೀತವಾದ ವಿಶೇಷ ಶಕ್ತಿಯಿದೆ. ಮೂಕಜ್ಜಿಯ ಕನಸುಗಳು ನಿದ್ದೆಯಲ್ಲಿ ಬರುವಂಥವುಗಳಲ್ಲ. ಎಚ್ಚರವಿದ್ದಾಗಲೇ ಕಾಣುವ ಕನಸುಗಳು. ನಾಗಿಯ ರೂಪಹಂಕಾರ, ಜನ್ನನ ಲಂಪಟತನ, ಅನಂತರಾಯರ ಗೊಡ್ಡು ಸನ್ಯಾಸತ್ವ, ಸೀತೆಗಿರುವ ಅಂಧ ನಂಬಿಕೆ, ಸುಬ್ಬರಾಯನ ಸತ್ಯಶೋಧನೆ, ಇವಕ್ಕೆಲ್ಲ ಕಳಶವಿಟ್ಟಂತೆ ಮೂಕಜ್ಜಿಯ ನಿರ್ಭಯ, ನಿರ್ಭೀತಿ ಮತ್ತು ಅವರದೇ ಆದ ಸಮಾಜದ ಕಲ್ಪನೆ ಹಲವರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಪ್ರೀತಿ, ಪ್ರೇಮ, ಕಾಮ, ಕರ್ಮ, ಕರ್ತವ್ಯದ ಬಗ್ಗೆ ಮೂಕಜ್ಜಿಯ ಮಾತು ಸಾರ್ವಕಾಲಿಕ. ಹಲವು ನಿಟ್ಟಿನಲ್ಲಿ ಇದೊಂದು ಚಿರಂಜೀವಿ ಕಾದಂಬರಿ.

ಮೂಕಜ್ಜಿ ಯಾರು?: ಇದೊಂದು ಕಾಲ್ಪನಿಕ ಪಾತ್ರವಾದರೂ ನಮ್ಮ ನಡುವಿನ ಅಜ್ಜಿಯಾಗಿಯೇ ಕಾಣಿಸಿಕೊಳ್ಳುವ ತಾಕತ್ತು ಈ ಪಾತ್ರದ್ದು. ಮೂಕಜ್ಜಿ ಇಲ್ಲದೆ ಕಥೆ ಸಾಗದು ಎಂಬಷ್ಟರಮಟ್ಟಿಗೆ ಇಡೀ ಕಾದಂಬರಿಯಲ್ಲಿ ಹಾಸುಹೊಕ್ಕಾಗಿರುವ ಪಾತ್ರವಿದು. ಕಥಾನಾಯಕನಿಲ್ಲ, ನಾಯಕಿಯಿಲ್ಲ ಎಂದು ಕಾರಂತರೇ ಹೇಳಿದ್ದರೂ ಮೂಕಜ್ಜಿ ಚೈತನ್ಯದ ಪ್ರತೀಕ. ಕಾರಂತರ ಬಹುತೇಕ ಸಾಹಿತ್ಯಕ್ಕೆ ವೇದಿಕೆಯಾದದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೇ. ಮೂಕಜ್ಜಿಯ ಮೊಮ್ಮಗ ಸುಬ್ಬರಾಯ ಪ್ರಶ್ನೆಗಳ ಮೂಲಕ ತನ್ನ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಾನೆ. ಹಾಗೆಯೇ ಓದುಗನಿಗೂ ಉತ್ತರ ಒದಗಿಸುತ್ತಾನೆ.

ಮಲೆನಾಡಿನ ಕೊಲ್ಲೂರು ಸಮೀಪದ ಮೂಡೂರು ಎಂಬ ಗ್ರಾಮದ ಸುಬ್ಬರಾಯರ ಅಜ್ಜಿಯೇ ಮೂಕಜ್ಜಿ. ಸುಬ್ಬರಾಯರ ತಾತನ ಅಂದರೆ ತಂದೆಯ ತಂದೆಯ ಚಿಕ್ಕಮ್ಮ. ಹುಟ್ಟಿನಿಂದಲೂ ಮೂಡೂರಿನ ಮನೆಯಲ್ಲೇ ಬೆಳೆದಾಕೆ. ಮೂಡೂರಿನ 500 ವರ್ಷಗಳ ಅಶ್ವತ್ಥದ ಕಟ್ಟೆಗೂ, ಮೂಕಜ್ಜಿಗೂ ಅವಿನಾಭಾವ ಸಂಬಂಧ. ಅಜ್ಜಿ-ಮೊಮ್ಮಗನ ಮಾತುಕತೆಗೆ ಇದೇ ಅಶ್ವತ್ಥಕಟ್ಟೆ ಸಾಕ್ಷಿ. ಕೊಲ್ಲೂರು ಮೂಕಾಂಬಿಕೆಯ ಹೆಸರನ್ನಿಟ್ಟ ಒಬ್ಬ ಹುಡುಗಿಯ ಕಥೆಯಿದು. ಮೂಕಾಂಬಿಕಾ ಹೆಸರು ಆಡುಭಾಷೆಯಲ್ಲಿ ಮೂಕಿ ಆಗುತ್ತಾಳೆ. ಹೆಸರಿಗೆ ತಕ್ಕಂತೆ ಮೌನವಾಗುತ್ತ ಕೊನೆಗೆ 80 ದಾಟಿದ ಮೂಕಜ್ಜಿಯಾಗುತ್ತಾಳೆ. ಬದುಕಿನ ಜಂಜಡಗಳಿಂದ ಮೂಕಾಂಬಿಕೆ ಹಲವು ವರ್ಷ ಮಾತನ್ನೇ ಮರೆತಿದ್ದರಿಂದಲೂ ಊರಿನ ಜನರು ಅನ್ವರ್ಥವಾಗಿಟ್ಟ ಹೆಸರು ಮೂಕಜ್ಜಿ. ಈ ಅಜ್ಜಿಯ ವೈಶಿಷ್ಟ್ಯವೆಂದರೆ, ಯಾವುದೇ ವಸ್ತುವನ್ನು ಮುಟ್ಟಿದರೂ ಅದರ ಸಂಪೂರ್ಣ ಇತಿಹಾಸ ಕಣ್ಮುಂದೆ ಬಂದು ನಿಲ್ಲುತ್ತದೆ. ಕಣ್ಮುಚ್ಚಿಕೊಂಡಾಗ ಏನೇನು ಕಾಣುತ್ತಿತ್ತೋ ಅವೆಲ್ಲವನ್ನೂ ಸುಬ್ಬರಾಯನಿಗೆ ಹೇಳುತ್ತಿದ್ದಳು. ಉಳಿದವರಿಗೆ ಅಜ್ಜಿಯ ವರ್ತನೆ ಅರಳು ಮರುಳಿನಂತೆ ಕಂಡರೂ, ಕುತೂಹಲದ ಬದುಕಿಗೆ ಒಗ್ಗಿಹೋಗಿದ್ದ ಸುಬ್ಬರಾಯ ಮಾತ್ರ ಅಜ್ಜಿಯ ಮಾತನ್ನು ನಂಬುತ್ತಿದ್ದ. ಏನೇನೋ ವಸ್ತುಗಳನ್ನು ಅಜ್ಜಿಗೆ ತಂದುಕೊಟ್ಟು ಅವುಗಳ ಇತಿಹಾಸವನ್ನೇ ಕೆದಕುತ್ತಿದ್ದ. ಮೂಕಜ್ಜಿಯ ಕನಸುಗಳಾಗಿ ಆರಂಭದಲ್ಲಿ ಹೇಳುವ ಸಣ್ಣ ಕಥೆಗಳೆಲ್ಲ ಮುಂದೆ ಹೋದಂತೆ ವಿಭಿನ್ನ ಆಯಾಮ ಪಡೆಯುತ್ತವೆ. ಈ ಆಯಾಮಗಳೇ ಓದುಗನನ್ನು ಕೆಲವೊಮ್ಮೆ ಗೊಂದಲಕ್ಕೀಡುಮಾಡುತ್ತವೆ. ಹೀಗಾಗಿ ಈ ಕಾದಂಬರಿ ಓದುವಾಗ ತಲ್ಲೀನರಾಗಲೇಬೇಕು.

50 ಸಾವಿರಕ್ಕೂ ಹೆಚ್ಚು ಪ್ರತಿ ಮಾರಾಟ!

1968ರ ಡಿಸೆಂಬರ್​ನಲ್ಲಿ ಪುತ್ತೂರಿನ ಹರ್ಷ ಪ್ರಕಟಣಾಲಯದಿಂದ ಮೊದಲ ಮುದ್ರಣ ಕಂಡ ಮೂಕಜ್ಜಿಯ ಕನಸು 1978ರಲ್ಲಿ ಜ್ಞಾನಪೀಠ ಪುರಸ್ಕಾರಕ್ಕೆ ಪಾತ್ರವಾಯಿತು. ಈವರೆಗೆ 33 ಬಾರಿ ಮುದ್ರಣವಾಗಿದೆ. ಐವತ್ತು ಸಾವಿರಕ್ಕೂ ಹೆಚ್ಚು ಮಾರಾಟವಾಗಿವೆ. ಅಷ್ಟೇ ಅಲ್ಲ, ಈಗಲೂ ಜನಪ್ರಿಯವಾಗಿರುವುದು ದಾಖಲೆಯೇ ಸೈ. ಮೊದಲ ಮುದ್ರಣದಲ್ಲಿ ಕೇವಲ ರೂ.4.50 ಬೆಲೆಯ ಕೃತಿ ಈಗ 160 ರೂ.ಗೆ ಮಾರಾಟವಾಗುತ್ತಿದೆ. ಸಪ್ನಾ ಬುಕ್ ಹೌಸ್ ಪ್ರಕಾಶನದ ಹಕ್ಕು ಪಡೆದಿದ್ದು, ಕಾಲಕ್ಕೆ ತಕ್ಕಂತೆ ಮುದ್ರಣ, ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ.

ವಿಶಿಷ್ಟ ಕಾದಂಬರಿ

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬರೆದು ಬದುಕಿಯೇ ಕನ್ನಡಕ್ಕೆ ಮೂರನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಬಹುಮುಖ ಪ್ರತಿಭೆ ಡಾ. ಕೋಟ ಶಿವರಾಮ ಕಾರಂತರು. ಕೊನೆಯವರೆಗೂ (1902-1997) ಸರ್ಕಾರದ ನೆರವಿಲ್ಲದೆ ಒಂಟಿ ಸಲಗದಂತೆ ಬದುಕು ಸಾಗಿಸಿದ ಬಹು ದೊಡ್ಡ ಚಿಂತಕ. ಕಾದಂಬರಿಕಾರರಾಗಿ, ಸಮಾಜ ಚಿಂತಕರಾಗಿ, ಪರಿಸರವಾದಿಯಾಗಿ, ಯಕ್ಷಗಾನ ತಜ್ಞರಾಗಿ, ಚಿತ್ರನಿರ್ದೇಶಕರಾಗಿ ಯಶಸ್ವಿಯಾದವರು.

ಡಾ. ಜಿ.ಎಸ್. ಶಿವರುದ್ರಪ್ಪ ಅಂದೇ ಹೇಳಿದ್ದರು: ‘ಶಿವರಾಮ ಕಾರಂತರು ಯಾರೋ ಸಿದ್ಧಪಡಿಸಿ ಇರಿಸಿದ ತೀರ್ವನಗಳಿಂದ ಬದುಕನ್ನು ಒಪ್ಪಿಕೊಳ್ಳುವವರೋ ಅಥವಾ ಯಾವುದೋ ಸಾಮಾಜಿಕ ಕಟ್ಟುಪಾಡುಗಳಿಗೆ ಒಳಗಾದವರೋ ಅಲ್ಲ. ಅವರೊಬ್ಬ ವಿಚಾರವಾದಿ, ದಾರ್ಶನಿಕ. ಕಾರಂತರು ಬದುಕಿನ ಸಮಸ್ತ ಅನುಭವಗಳಿಗೆ ತಮ್ಮನ್ನು ಒಡ್ಡಿಕೊಂಡವರು. ಅಂತಹ ಸಂಘರ್ಷಗಳ ನಡುವೆಯೇ ಬೆಳೆದವರು. ಇಂತಹ ವಾಸ್ತವಿಕ ಅನುಭವವೇ ಕಾರಂತರ ಪಾಲಿಗೆ ಒಂದು ಪುಸ್ತಕ. ವಾಸ್ತವದ ನೆಲೆಯಲ್ಲಿ ಗಟ್ಟಿಯಾಗಿ ನಿಂತು ಅದರೊಳಗಿನ ಮತ್ತು ಅದರಾಚೆಯ ರಹಸ್ಯವನ್ನು ಆಳವಾಗಿ ಅನ್ವೇಷಿಸಿದವರು’. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ಸ್ವಾತಂತ್ರೊ್ಯೕತ್ತರ ಭಾರತದ ರವೀಂದ್ರನಾಥ್ ಠಾಗೋರ್ ಎಂದು ಕರೆದರು.

ನನ್ನ ತಂದೆ ಕಾರಂತರು ಏನಾದರೂ ಬರೆಯುವ ಮುನ್ನ ಅಮ್ಮನ ಬಳಿ ಹೇಳುತ್ತಿದ್ದರು. ಆಫ್ರಿಕಾದ ‘ಪ್ಲೇನ್ಸ್ ಆಫ್ ಕ್ಯಾಮ್ಡೆಬು’ ಕೃತಿ ಓದಿ ಅವರು ಪ್ರೇರಣೆಗೊಂಡರಾ? ಯಾವುದೂ ಸರಿಯಾಗಿ ನೆನಪಿಲ್ಲ. ಆ ಪುಸ್ತಕದಲ್ಲಿನ ಪಾತ್ರವೊಂದಕ್ಕೆ ಸೆಮಿ ಸೈಕಿಕ್ ಪವರ್ ಇದ್ದು, ದೇವರು ಮೈಮೇಲೆ ಬರುವುದು, ಹಳೆಯದೆಲ್ಲ ನೆನಪಾಗೋದು ಎಲ್ಲ ಇತ್ತು. ಆ ಪುಸ್ತಕ ಆಧರಿಸಿ ಮೂಕಜ್ಜಿಯ ಕನಸು ಬರೆದಿದ್ದಾರೆಂಬುದು ನನ್ನ ಅನಿಸಿಕೆ.

| ಡಾ.ಉಲ್ಲಾಸ್ ಕಾರಂತ್ ವನ್ಯಜೀವಿ ತಜ್ಞರು

1968ರಿಂದ ಈವರೆಗೆ 33 ಮುದ್ರಣ ಕಂಡಿರುವ ಮೂಕಜ್ಜಿಯ ಕನಸುಗಳು ಕಾದಂಬರಿಯ ಸುಮಾರು 50 ಸಾವಿರ ಪ್ರತಿಗಳು ಮಾರಾಟಗೊಂಡಿವೆ. ಮೊದಲ ಮುದ್ರಣವಾಗಿ ಐವತ್ತು ವರ್ಷವಾಗುತ್ತಿರುವ ಈ ಸಂದರ್ಭದಲ್ಲೂ ಕೃತಿ ಜನಪ್ರಿಯವಾಗಿರುವುದು ಸೋಜಿಗವನ್ನುಂಟುಮಾಡುತ್ತದೆ.

| ದೊಡ್ಡೇಗೌಡ ವ್ಯವಸ್ಥಾಪಕರು, ಸಪ್ನಾ ಬುಕ್ ಹೌಸ್

ಮೂಕಜ್ಜಿಯ ಕನಸುಗಳು ಸಿನಿಮಾ ರೂಪ ಪಡೆಯುತ್ತಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದೇನೆ. ಮೂಕಜ್ಜಿಯ ಕನಸು ನಾಟಕದಲ್ಲಿ ಮೂಕಜ್ಜಿ ಯಾಗಿದ್ದ ನಟಿ ಬಿ.ಜಯಶ್ರೀ ಅವರೇ ಸಿನಿಮಾದಲ್ಲೂ ಮೂಕಜ್ಜಿಯಾಗಿದ್ದಾರೆ. ಬ್ರಹ್ಮಾವರದ ಸಾಲಿಕೇರಿಯಲ್ಲಿ ಚಿತ್ರೀಕರಣಗೊಂಡಿದೆ. ಈ ಕೃತಿಗೆ ಜ್ಞಾನಪೀಠ ಬಂದಾಗ ಹೈಸ್ಕೂಲ್ನಲ್ಲಿ ಓದ್ತಿದ್ದೆ. ಅಣ್ಣ ಲೈಬ್ರರಿಯಿಂದ ಈ ಪುಸ್ತಕ ತಂದಾಗ ಓದಿದ್ದೆ. ಪಾಲಕರು, ಶಿಕ್ಷಕರಿಂದ ಸಿಗದ ಸಾಕಷ್ಟು ಪ್ರಶ್ನೆಗಳಿಗೆ ಮೂಕಜ್ಜಿಯಿಂದ ಉತ್ತರ ಸಿಕ್ಕಿತು. ಮಾನವಶಾಸ್ತ್ರ, ಧರ್ಮಗಳ ಬಗ್ಗೆ ತಿಳಿದುಕೊಂಡೆ. ಫ್ಯಾಂಟಸಿ ಕೂಡ ಇರುವುದರಿಂದ ಖುಷಿ ಕೊಡ್ತು. ಸಿನಿಮಾ ಕ್ಷೇತ್ರಕ್ಕೆ ಬರ್ತೀನಿ, ಈ ಸಿನಿಮಾ ಮಾಡ್ತೀನಿ ಎನ್ನುವುದು ಅಂದು ಗೊತ್ತಿರಲಿಲ್ಲ. ಸಿನಿಮಾ ಮಾಡಬೇಕೆಂಬ ಹಂಬಲ ಇತ್ತು. ಇದೇ ವೇಳೆ, ಈ ಕಾದಂಬರಿಯ ಮೂಲ ಪ್ರತಿ ಸಿಕ್ತು. ಇದರಿಂದ ಇನ್ನಷ್ಟು ಉತ್ಸಾಹಗೊಂಡೆ. ಆದರೆ, ಬೆಟ್ಟದ ಜೀವ ಸಿನಿಮಾಗಿಂತ ಮೂಕಜ್ಜಿ ಕನಸು ಸಿನಿಮಾ ಮಾಡೋದು ಕಷ್ಟವಾಗಿತ್ತು. ಆದರೂ ಮಾಡಿದ್ದೇನೆ.

| ಪಿ. ಶೇಷಾದ್ರಿ ನಿರ್ದೇಶಕ

(ಪ್ರತಿಕ್ರಿಯಿಸಿ: [email protected], [email protected])

- Advertisement -

Stay connected

278,653FansLike
574FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...