18.5 C
Bangalore
Monday, December 16, 2019

ಉದ್ಯಮಶೀಲತೆಯಲ್ಲಿ ಯಶಸ್ಸಿನ ಗುಟ್ಟು

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಉದ್ಯಮಿಗಳೆಲ್ಲರೂ ಅತ್ಯುತ್ತಮ ಉದ್ಯಮಶೀಲ ವ್ಯಕ್ತಿಗಳಾಗಿ ಅಥವಾ ಯಶಸ್ವಿ ಉದ್ಯಮಿಗಳಾಗಿ ಇಂದು ನಮ್ಮ ಮುಂದೆ ನಿಂತಿಲ್ಲ. ಅದೇ ರೀತಿ, ಲಕ್ಷಗಟ್ಟಲೆ ಬಂಡವಾಳ ಹೂಡಿಕೆ ಮಾಡಿದ ಮಾತ್ರಕ್ಕೆ ಯಾರೂ ಯಶಸ್ವಿಯಾಗಿಲ್ಲ. ಏಕೆಂದರೆ, ಉದ್ಯಮಿ ಯಶಸ್ವಿಯಾಗಬೇಕಾದರೆ ಖಂಡಿತವಾಗಿ ಅನೇಕ ವಿಶಿಷ್ಟ ಗುಣಗಳನ್ನು ಹೊಂದಿರಬೇಕಾಗುತ್ತದೆ. ಬಹು ಮುಖ್ಯವಾಗಿ, ಉದ್ಯಮಶೀಲತೆ ಗುಣಗಳನ್ನು ಹೊಂದಿರುವುದು ಯಶಸ್ಸಿನ ಬಹುಮುಖ್ಯವಾದ ಮೆಟ್ಟಿಲು.

| ಸಂತೋಷ್ ರಾವ್ ಪೆರ್ಮುಡ

ಯಾವುದೇ ಉದ್ಯಮ ಪ್ರಾರಂಭಿಸಿ ಅದರಲ್ಲಿ ಯಶಸ್ವಿಯಾಗುವುದು ಹೇಳಿದಷ್ಟು ಸುಲಭವಲ್ಲ. ನಾವು ಪ್ರಾರಂಭಿಸುವ ಉದ್ಯಮಕ್ಕೆ ಎಲ್ಲ ಕಡೆಗಳಿಂದಲೂ ಪೈಪೋಟಿ ಇದ್ದೇ ಇರುತ್ತದೆ. ಪ್ರತಿನಿತ್ಯ ವಿವಿಧ ರೀತಿಯ ಸವಾಲು ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಯಾವುದೇ ಕಾರಣಕ್ಕೆ ಉದ್ಯಮಿ ತಾಳ್ಮೆ ಕಳೆದುಕೊಳ್ಳುವಂತಿಲ್ಲ ಹಾಗೂ ಎಚ್ಚರ ತಪ್ಪುವಂತಿಲ್ಲ. ಪ್ರತಿನಿತ್ಯ ತನ್ನ ಕೌಶಲವನ್ನು ಒರೆಗೆ ಹಚ್ಚಬೇಕಾಗುತ್ತದೆ. ಯಶಸ್ವಿಯಾಗಿ ಉದ್ಯಮ ನಡೆಸುವ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ವಿವಿಧ ರೀತಿಯ ಚಿಂತನೆಗಳು ಹುಟ್ಟಿಕೊಂಡಿವೆ. ಉದ್ಯಮಿಯೊಬ್ಬ ಹಲವಾರು ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ. ಆಗಲೇ ಆತನ ಉದ್ಯಮವು ದೀರ್ಘಕಾಲಿಕ ಬಾಳ್ವೆ ಹೊಂದಲು ಸಾಧ್ಯ. ಇಂಥ ಕೆಲವೇ ಕೆಲವು ವಿಶೇಷವಾದಂಥ ಕೌಶಲಗಳು ಮತ್ತು ಜ್ಞಾನಕ್ಕೆ ಉದ್ಯಮಶೀಲತೆ ಎಂದು ಕರೆಯಲಾಗುತ್ತದೆ. ಹಾಗಾದರೆ, ಉದ್ಯಮಶೀಲ ವ್ಯಕ್ತಿಗೆ ಇರಬೇಕಾದಂತಹ ಪ್ರಮುಖ ಕೌಶಲ ಮತ್ತು ಗುಣಗಳು ಯಾವುವೆಂದು ತಿಳಿಯೋಣ.

ಕ್ರಿಯಾಶೀಲತೆ ಮತ್ತು ಹೊಸತನದ ಶೋಧನೆ: ಹೊಸತನದ ಶೋಧನೆ ಎಂದರೆ ಉದ್ಯೋಗಿಯೊಬ್ಬ ತಾನು ಹೊಂದಿರುವ ಜ್ಞಾನ ಅಥವಾ ಇತರ ಮೂಲಗಳಿಂದ ತಿಳಿದ ವಿಚಾರವನ್ನು ತನ್ನ ಜ್ಞಾನಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೆ ಅವುಗಳನ್ನು ವಿವಿಧ ಸಂದರ್ಭಗಳಲ್ಲಿ ಅಳವಡಿಸಿಕೊಳ್ಳುವುದು, ಅನುಷ್ಠಾನಗೊಳಿಸುವುದು. ಇದರ ಜತೆಜತೆಗೆ ಉದ್ಯಮರಂಗಕ್ಕೆ ಪೂರಕವಾದಂತಹ ಇತರ ವಿಚಾರಗಳನ್ನು ವಿವಿಧ ಸಂದರ್ಭ ಹಾಗೂ ಸನ್ನಿವೇಶಗಳಲ್ಲಿ ಅನ್ವೇಷಿಸುವ ಹಾಗೂ ಹೊಸತಾಗಿ ಅರಿತು ಅಳವಡಿಸಿಕೊಳ್ಳುವ ವಿಭಿನ್ನವಾದ ಕೌಶಲವನ್ನೂ ಹೊಂದಿರಬೇಕಾಗುತ್ತದೆ.

ರಿಸ್ಕ್ ತೆಗೆದುಕೊಳ್ಳುವ ಮನೋಭಾವ: ಸಾಕಷ್ಟು ಜನರಲ್ಲಿ ಹೊಸ ರೀತಿಯ ಯೋಚನೆ, ಹೊಸ ಜ್ಞಾನ, ಕೌಶಲ ಹಾಗೂ ಸಂಪನ್ಮೂಲಗಳಿದ್ದರೂ ಉದ್ಯಮ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳುವ ವಿಶಿಷ್ಟವಾದ ಮನೋಧರ್ಮ ಅವರಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ. ಕೆಲವಷ್ಟು ಜನ ಉದ್ಯಮ ಪ್ರಾರಂಭಿಸಿದ ಬಳಿಕವೂ ಈ ಗುಣ ಬೆಳೆಸಿಕೊಳ್ಳದೆ ಹೆಚ್ಚು ಅಭಿವೃದ್ಧಿ ಹೊಂದುವುದಿಲ್ಲ. ರಿಸ್ಕ್ ತೆಗೆದುಕೊಳ್ಳದೇ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲವೆಂಬ ವಾಸ್ತವಾಂಶವನ್ನು ಉದ್ಯಮಿಯಾಗುವವರು ತಿಳಿದಿರಬೇಕು. ಅಳೆದು-ತೂಗಿ ನಿರ್ಧಾರ ಕೈಗೊಳ್ಳುವ ಪ್ರವೃತ್ತಿಯ ಉದ್ಯಮಿ ತನ್ನ ಕ್ಷೇತ್ರದಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತಾನೆ.

ಚಾಲನೆ ಮತ್ತು ಸ್ವಯಂ ಪ್ರೇರಣೆಯ ಗುಣ: ಉದ್ಯಮ ಪ್ರಾರಂಭಿಸುವವರು ಕೇವಲ ಹಗಲು ಕನಸನ್ನು ಕಾಣುತ್ತ ಕುಳಿತುಕೊಳ್ಳದೇ ಮನಸ್ಸಿನಲ್ಲಿರುವ ಯೋಜನೆಯನ್ನು, ಜ್ಞಾನ ಅಥವಾ ಚಿಂತನೆಯನ್ನು ಸೂಕ್ತ ಸಂದರ್ಭದಲ್ಲಿ ಅಳವಡಿಸಿಕೊಳ್ಳುವಂಥ ವಿಶಿಷ್ಟ ಮನೋಧರ್ಮವನ್ನು ಹೊಂದಿರುತ್ತಾರೆ. ಇದಕ್ಕೆ ಬೇಕಾಗುವಂತಹ ಸ್ವಯಂ ಪ್ರೇರಣೆಯನ್ನು ತಾವೇ ಸ್ವತಃ ಪಡೆದು ಕಾರ್ಯರೂಪಕ್ಕೆ ತರುವುದರಿಂದ ಉದ್ದಿಮೆಯಲ್ಲಿ ಕಠಿಣ ಪರಿಶ್ರಮ ಹಾಕಲು ಬೇಕಾಗುವ ಅಂತಃಶಕ್ತಿ ಮತ್ತು ಆತ್ಮಸ್ಪೂರ್ತಿ ತನ್ನಿಂದ ತಾನಾಗೇ ಬರುತ್ತದೆ.

ಸತತ ಪ್ರಯತ್ನ ಮಾಡುವ ಮನೋಭಾವ: ಉದ್ಯಮ ಪ್ರಾರಂಭಿಸುವ ಸಂದರ್ಭದಲ್ಲಿ ಉದ್ಯಮಿಗೆ ಪ್ರಾಥಮಿಕ ಪ್ರಯತ್ನವೇ ಯಶಸ್ಸು ತರಬೇಕೆಂದಿಲ್ಲ. ಅಥವಾ ಒಮ್ಮೆ ಯಶಸ್ಸು ಪಡೆದು ನಂತರ ಹಿನ್ನಡೆ ಹೊಂದುವುದೂ ಇರುತ್ತದೆ. ಇಂಥ ಸಮಯದಲ್ಲಿ ಸತತ ಪ್ರಯತ್ನ ಮಾಡುವ ಮನೋಭಾವವೇ ಕೈಹಿಡಿಯುತ್ತದೆ. ಕೆಲವೊಮ್ಮೆಯಾದರೂ ಹಿನ್ನಡೆ ಅನುಭವಿಸದ ಉದ್ಯಮಿ ಯಾರೂ ಇಲ್ಲ ಎಂಬುದನ್ನು ಅವರು ಮರೆಯಬಾರದು. ಆರಂಭಿಕ ಯಶಸ್ಸು ಶಾಶ್ವತವಾಗಿರಲು ಸಾಧ್ಯವಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕಾಲಕಾಲಕ್ಕೆ ಎದುರಾಗುವ ಅಡ್ಡಿ-ಆತಂಕಗಳನ್ನು ಎದುರಿಸುತ್ತ ನಿರಂತರ ಪ್ರಯತ್ನ ಮಾಡುವ ಮನೋಭಾವವನ್ನು ಬಿಟ್ಟುಕೊಡದೆ, ಬೇರೆ ಬೇರೆ ರೀತಿಯ ಅನ್ವೇಷಣೆಗಳ ಮೂಲಕ ಯಶಸ್ಸಿನ ಮೆಟ್ಟಿಲೇರುವಂತಹ ವಿಶಿಷ್ಟವಾದ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ವೈವಿಧ್ಯಮಯ ಅವಕಾಶಗಳ ಶೋಧನೆ: ಸಾಮಾನ್ಯರು ವಿವಿಧ ಅವಕಾಶಗಳು ತಮ್ಮೆಡೆಗೆ ಬರಬೇಕೆಂದು ಕಾಯುತ್ತ ಕೂರುತ್ತಾರೆ. ಕೆಲವು ಮಂದಿ ತಮ್ಮ ಎದುರು ಇರುವಂಥ ಅವಕಾಶಗಳನ್ನು ಗುರುತಿಸಲೂ ವಿಫಲರಾಗುತ್ತಾರೆ. ಆದರೆ ಕ್ರಿಯಾಶೀಲ ವ್ಯಕ್ತಿತ್ವದ ಉದ್ಯಮಿ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮನೋಧರ್ಮವನ್ನು ತೋರಿಸುತ್ತಾನೆ. ಸಿಗುವ ಅವಕಾಶವನ್ನೇ ತನ್ನ ಯಶಸ್ಸಿನ ಮೊದಲ ಮೆಟ್ಟಿಲು ಎಂದು ಭಾವಿಸಿ ಅದನ್ನು ಸಾಧಿಸುತ್ತಾನೆ. ಅದೇ ರೀತಿ, ತನ್ನ ಚಿಂತನಾಶೀಲ ವ್ಯಕ್ತಿತ್ವಕ್ಕೆ ಅನುಗುಣವಾಗಿ ವಿವಿಧ ರೀತಿಯ ಅವಕಾಶಗಳನ್ನು ನಿರ್ವಿುಸಿಕೊಂಡು ಸಾಗುತ್ತಾನೆ. ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಅವಕಾಶಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾನೆ.

ಮಾಹಿತಿ ಕ್ರೋಡೀಕರಣದ ಮನೋಭಾವ: ಉದ್ಯಮಕ್ಕೆ ಅವಶ್ಯಕವಿರುವ ಸಮರ್ಪಕ ಮತ್ತು ನೇರವಾದ ಮಾಹಿತಿಗಳನ್ನು ವಿವಿಧೆಡೆಗಳಿಂದ ಸಂಗ್ರಹಿಸುವುದು ಯಶಸ್ಸಿಗೆ ಅತ್ಯಂತ ಪ್ರಮುಖವಾದ ಅಂಶವಾಗುವುದು. ಇದು ಸೂಕ್ತವಾದ ಅಥವಾ ಸಮರ್ಪಕವಾದ ರಿಸ್ಕ್ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಹಾಗೂ ಕ್ಷಣದಿಂದ ಕ್ಷಣಕ್ಕೆ ಹಾಗೂ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸುಧಾರಿಸಿಕೊಂಡು ಹೋಗಲು ಸಹಾಯವಾಗುವುದು. ತನ್ಮೂಲಕ ಉದ್ಯಮ ರಂಗದಲ್ಲಿ ಅತ್ಯುತ್ತಮ ಸ್ಥಾನ ಹೊಂದಲು ಭದ್ರ ಬುನಾದಿ ಆಗುವುದು.

ಸಮಸ್ಯೆ ನಿವಾರಣೆಯ ಶಕ್ತಿ: ಯಶಸ್ವಿ ಉದ್ಯಮಿಯು ಕ್ಷಣಕ್ಷಣಕ್ಕೂ ಬಂದೊದಗಬಹುದಾದ ವಿವಿಧ ರೀತಿಯ ಸಮಸ್ಯೆ ಹಾಗೂ ಸವಾಲುಗಳನ್ನು ಅರ್ಥೈಸಿಕೊಂಡು ಅವುಗಳನ್ನು ನಿವಾರಿಸಿಕೊಳ್ಳುವಂತಹ ವಿಶಿಷ್ಟ ಕೌಶಲ ಹೊಂದಿರಬೇಕಾಗುತ್ತದೆ. ಉದ್ಯಮ ಕ್ಷೇತ್ರದಲ್ಲಿ ಮೇಲ್ದರ್ಜೆಗೇರಬೇಕೆಂದರೆ, ಹೆಚ್ಚಿನ ಯಶಸ್ಸನ್ನು ಸಾಧಿಸಬೇಕಾದರೆ ಆಗಿಂದಾಗ್ಗೆ ಎದುರಾಗುವ ಸಮಸ್ಯೆ ಮತ್ತು ಸವಾಲುಗಳು ನಿವಾರಿಸಿಕೊಳ್ಳುವಲ್ಲಿ ನಿಜವಾದ ಸಂತೋಷವನ್ನು ಕಂಡುಕೊಳ್ಳುತ್ತಾನೆ. ಸಮಯ, ಸಂದರ್ಭ, ಸಮಸ್ಯೆ ಹಾಗೂ ಸವಾಲುಗಳಿಗೆ ಅನುಗುಣವಾಗಿ ಅವುಗಳಿಗೆ ಅವಶ್ಯಕವಿರುವ ಸಮಸ್ಯೆ ನಿವಾರಣೆಯ ಕೌಶಲವನ್ನು ಹೊಂದುತ್ತ ಸಾಗುತ್ತಾನೆ.

ಗುರಿ ನಿಗದಿಪಡಿಸುವ ಮನೋಭಾವ: ಯಶಸ್ಸಿನೆಡೆಗೆ ಸಾಗುತ್ತಿರುವ ಉದ್ಯಮಿಗಳೆಲ್ಲರೂ ತಮ್ಮ ಉದ್ಯಮ ರಂಗದಲ್ಲಿ ಸ್ಪಷ್ಟವಾದ ಉದ್ದೇಶ ಹಾಗೂ ಗುರಿಯನ್ನು ಹೊಂದಿರುತ್ತಾರೆ. ತಾವು ನಿರ್ವಹಿಸುತ್ತಿರುವ ಜವಾಬ್ದಾರಿಯಲ್ಲಿ ಯಾವ ರೀತಿ ಜಯ ಸಾಧಿಸಬೇಕು ಅಥವಾ ಏನನ್ನು ಸಾಧಿಸಬೇಕೆಂಬ ಸ್ಪಷ್ಟವಾದ ಕಲ್ಪನೆಯನ್ನು ಹೊಂದಿರುವುದರ ಗುರಿಯೆಡೆಗೆ ಸ್ಪಷ್ಟವಾದ ದೃಷ್ಟಿಕೋನ ಹೊಂದಿರುತ್ತಾರೆ. ಅವರ ಗುರಿಯು ಕೇವಲ ಸ್ಪರ್ಧಾತ್ಮಕವಾಗಿ ಇತರರಿಗೆ ಪೈಪೋಟಿ ನೀಡುವ ಉದ್ದೇಶಕ್ಕಷ್ಟೇ ಸೀಮಿತವಾಗಿರದೆ ವಾಸ್ತವಿಕತೆಯ ತಳಹದಿಯ ಮೇಲೆ ನಿಂತಿರುತ್ತದೆ.

ಇತರರಿಗೆ ಮನವರಿಕೆ ಮಾಡುವ ಮತ್ತು ಪ್ರಭಾವ ಬೀರುವ ಗುಣ: ಲಕ್ಷಗಟ್ಟಲೆ ಅಥವಾ ಕೋಟಿಗಟ್ಟಲೆ ಬಂಡವಾಳ ಹೂಡಿಕೆ ಮಾಡಿ ಸುಮ್ಮನೆ ಕುಳಿತರೆ ಖಂಡಿತವಾಗಿಯೂ ಉದ್ಯಮಿ ಲಾಭ ಗಳಿಸಿ ಯಶಸ್ವಿಯಾಗಲಾರ. ಬದಲಾಗಿ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ವಿವಿಧ ರೀತಿಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹಾಗೂ ಇತರ ವಿಭಾಗಗಳ ಮೇಲೆ ತಮ್ಮದೇ ಆದಂತಹ ಪ್ರಭಾವವನ್ನು ಬೀರುವ ಮೂಲಕ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಮನೋಭಾವವನ್ನು ಗಳಿಸಿಕೊಳ್ಳಬೇಕಾಗುತ್ತದೆ. ಉತ್ಪಾದನೆ ಮತ್ತು ಸೇವೆಗಳನ್ನು ಮಾರಾಟ ಮಾಡಲು ಇತರರಿಗೆ ಮನವರಿಕೆ ಮಾಡುವ ಹಾಗೂ ಅವರನ್ನು ಪ್ರಭಾವಿಸುವ ಕೌಶಲ ಹೊಂದಿರಬೇಕಾಗುತ್ತದೆ.

ಗುಣಮಟ್ಟದ ಬಗ್ಗೆ ಕಾಳಜಿ ಹೊಂದುವುದು

ಉದ್ಯಮಿಯು ಸದಾಕಾಲ ತಾನು ಉತ್ಪಾದಿಸುವ ಹಾಗೂ ಮಾರಾಟ ಮಾಡುತ್ತಿರುವ ಉತ್ಪನ್ನಗಳು ಗರಿಷ್ಠ ಗುಣಮಟ್ಟದಿಂದ ಕೂಡಿರಬೇಕೆಂದು ಯೋಚಿಸುತ್ತಾನೆ. ಅದರಂತೆ, ತನ್ನ ಯೋಚನೆಯ ಮಟ್ಟಕ್ಕೆ ಉತ್ಪನ್ನವು ತಲುಪಿದಾಗ ಉದ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಸಾಧಿಸಿದಂತಹ ಭಾವಕ್ಕೆ ಒಳಗಾಗುತ್ತಾನೆ. ಗುಣಮಟ್ಟದ ಬಗ್ಗೆ ಇರುವ ಈ ಕಾಳಜಿಯು ಕೇವಲ ಒಂದು ಸಮಯ ಮತ್ತು ಸಂದರ್ಭಕ್ಕಷ್ಟೆ ಸೀಮಿತವಾಗಿರದೆ ನಿರಂತರವಾಗಿ ಇರುವಂತೆ ಕಾಳಜಿವಹಿಸುತ್ತಾನೆ.

ಆತ್ಮವಿಶ್ವಾಸದ ಮಟ್ಟ: ಮಹತ್ವಾಕಾಂಕ್ಷಿಯಾದ ಉದ್ದಿಮೆದಾರ ಅಥವಾ ಉದ್ಯಮಿ ಅತ್ಯಂತ ಉನ್ನತ ಮಟ್ಟದ ಆತ್ಮವಿಶ್ವಾಸವನ್ನು ಹೊಂದಿರುತ್ತಾನೆ, ಹೊಂದಿರಬೇಕು. ಆತನ ಈ ಗುಣದಿಂದಲೇ ಉದ್ಯಮ ಕ್ಷೇತ್ರದ ಜವಾಬ್ದಾರಿಗಳನ್ನು ನಿಭಾಯಿಸಲು ಅನುಕೂಲವಾಗುತ್ತದೆ. ಹಾಕಿಕೊಂಡ ಗುರಿ ಸಾಧಿಸುವಲ್ಲಿ ವಿಶ್ವಾಸವನ್ನು ಇಟ್ಟಾಗಲೇ ಆತ ಶೀಘ್ರವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ.

ದೀರ್ಘಕಾಲಿಕ ನಿಷ್ಠೆ

ಉದ್ಯಮಿಯೋರ್ವ ತನ್ನ ಉದ್ಯಮವನ್ನು ದೀರ್ಘಕಾಲಿಕವಾಗಿ ಮುನ್ನಡೆಸಿಕೊಂಡು ಹೋಗುವ ಹಾಗೂ ಇತರರಿಗೆ ಉದ್ಯೋಗವಕಾಶ ನೀಡುವ ಮನೋಧರ್ಮವನ್ನು ಹೊಂದಿರಬೇಕಾಗುತ್ತದೆ. ಈ ಒಂದು ಗುಣವೇ ಆತನನ್ನು ಒಬ್ಬ ಯಶಸ್ವಿ ಉದ್ಯಮಿಯನ್ನಾಗಿ ಮಾಡಬಲ್ಲದು. ನಿಷ್ಠೆಯಿದ್ದಲ್ಲಿ ಉದ್ಯೋಗಗಳ ನಿರ್ವಣಕರ್ತನಾಗುವ ಜತೆಗೆ, ಉದ್ಯಮವನ್ನು ದೀರ್ಘಕಾಲ ಮುನ್ನಡೆಸಿಕೊಂಡು ಹೋಗುವಂತೆ ಮಾಡುತ್ತದೆ.

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...