ಬಂಧನಯೋಗ ಹಿನ್ನೆಲೆ ಮುನ್ನೆಲೆ

Latest News

ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ ಆಸ್ಟ್ರೇಲಿಯಾ ಪ್ರಜೆಗೆ ಹಿಗ್ಗಾಮುಗ್ಗಾ ಥಳಿತ; ಗಾಯಾಳು ಆಸ್ಪತ್ರೆಗೆ ದಾಖಲು

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕಂಕಣಕೊಪ್ಪ ಗ್ರಾಮದಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ ಮಾಡಿದ ಆರೋಪದ ಮೇಲೆ ಆಸ್ಟ್ರೇಲಿಯಾ ಮೂಲದ ವ್ಯಕ್ತಿಗೆ ಸ್ಥಳೀಯರು ಕೈಕಾಲು ಕಟ್ಟಿ...

ಪೋಲಿಯೋ ಮುಕ್ತ ಪ್ರಪಂಚ ರೋಟರಿ ಗುರಿ

ಬಾಗಲಕೋಟೆ: ಇಡೀ ವಿಶ್ವ ಪೋಲಿಯೋ ಮುಕ್ತವಾಗಬೇಕು ಎನ್ನುವುದು ರೋಟರಿ ಸಂಸ್ಥೆ ಕನಸು. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಕಟಿಬದ್ಧವಾಗಿ ಕೆಲಸ ಮಾಡಲಿದೆ ಎಂದು...

ವಿದೇಶಿ ಪ್ರಜೆಗೆ ಥಳಿತ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕಂಕಣಕೊಪ್ಪ ಗ್ರಾಮದಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ ಮಾಡಿದ ಆರೋಪದ ಮೇಲೆ ಆಸ್ಟ್ರೇಲಿಯಾ ಮೂಲಕ ವ್ಯಕ್ತಿಗೆ ಸ್ಥಳೀಯರು...

ವೃತ್ತಿಪರ ಗ್ಯಾಂಗ್‌ನ ಕೈವಾಡ ಶಂಕೆ

ಮೈಸೂರು: ಬೆಚ್ಚಿಬೀಳಿಸಿರುವ ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣದ ಹಿಂದೆ ವೃತ್ತಿಪರ ಗ್ಯಾಂಗ್‌ನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಬನ್ನಿಮಂಟಪದ ಬಾಲಭವನದಲ್ಲಿ...

ನ್ಯಾಯಾಲಯ ಆವರಣದಲ್ಲಿ ಆರೋಗ್ಯ ಕೇಂದ್ರ ಆರಂಭ

ಮೈಸೂರು: ನ್ಯಾಯಾಲಯದ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಿಲ್ಲಾಡಳಿತ...

| ಮಹಾಬಲಮೂರ್ತಿ ಕೊಡ್ಲೆಕೆರೆ

ಬಂಧನಯೋಗ ಅಂದರೆ ಏನು ಎಂದು ಹಲವರು ಪ್ರಶ್ನಿಸುತ್ತಾರೆ. ಈ ಲೇಖನ ಬರೆಯುವ ಹೊತ್ತಿಗೆ ಗಯ ಗಂಧರ್ವನನ್ನು ಶ್ರೀಕೃಷ್ಣ ಹುಡುಕಹೊರಟಂತೆ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಹುಡುಕುತ್ತಿರುವ ಸಂದರ್ಭ. ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟು ಒಂದು ಹಂತದ ವಿಚಾರಣೆ ನಡೆಸಿ ಇದೇ ತಿಂಗಳು 12ಕ್ಕೆ ವಿಚಾರಣೆಯನ್ನು ಮುಂದೂಡಿದ ಸಂದರ್ಭ. ಬಂಧನವನ್ನು ತಪ್ಪಿಸಿಕೊಳ್ಳಲು ರೆಡ್ಡಿ ಹರಸಾಹಸ ನಡೆಸುತ್ತಿದ್ದಾರೆ.

ಈ ಹಿಂದೆ ವರ್ಷಗಳ ಕಾಲ ಅವರು ಬೇರೆ ವಿಚಾರ ಒಂದರಲ್ಲಿ ವರ್ಷಗಳ ಕಾಲ ಬಂಧನದಲ್ಲಿದ್ದರು. ಈಗ ಬಂಧನ ಆಗುತ್ತದಾ ಇಲ್ಲವಾ ಎಂಬುದು ಭವಿಷ್ಯಕ್ಕೆ ಬಿಟ್ಟ ವಿಚಾರ. ಅವರ ಜನ್ಮಕುಂಡಲಿಯ ಅನುಪಸ್ಥಿತಿಯಲ್ಲಿ ಇದು ಹೀಗೆಯೇ ಎಂದು ಹೇಳುವುದು ದುಸ್ತರ. ಜನ್ಮಕುಂಡಲಿ ಸಿಕ್ಕಿದ್ದರೂ ಈ ಹಂತದಲ್ಲಿ ಯಾವುದನ್ನೂ ಹೇಳಬಾರದು ಎಂಬುದು ನಿಯಮ. ಜನಾರ್ದನ ರೆಡ್ಡಿಯವರ ಜನ್ಮಕುಂಡಲಿ ಏನನ್ನೇ ಹೇಳಲಿ, ‘ಬಂಧನಯೋಗ’ ನ್ಯಾಯವಾಗಿ ಏನನ್ನು ಹೇಳುತ್ತದೆ ಎಂಬುದನ್ನು ಇಲ್ಲಿ ವಿವರಿಸುತ್ತಿದ್ದೇನೆ.

ಶನೈಶ್ಚರ ಶಿವನಿಗೆ ಅಂಟಿಕೊಂಡ ಕತೆ

ಜ್ಯೋತಿಷಿಗಳು ಒಂದು ಕತೆ ಹೇಳುತ್ತಾರೆ. ಶನೈಶ್ಚರಸ್ವಾಮಿ ಹೇಗೆ ಪರಶಿವನನ್ನೇ ಬಿಡಲಿಲ್ಲ ಎಂಬ ಕತೆ ಇದು. ಹೌದು, ಕತೆಯ ಪ್ರಕಾರ – ಶನೈಶ್ಚರ ಶಿವನನ್ನು ಉದ್ದೇಶಿಸಿ ‘ನಿನ್ನನ್ನು ಆವರಿಸಿಕೊಳ್ಳುವುದು ಈಗ ಆಗಬೇಕಾಗಿದೆ. ಸದ್ಯದಲ್ಲೇ ಹಿಡಿಯುತ್ತೇನೆ’ ಎಂದು ಎಚ್ಚರಿಕೆ ಹೇಳಿದ್ದ. ನೆಲದ ಮೇಲೆ ನಿಂತರೆ ತಾನೆ ಮಹಾಶಯ ತನ್ನನ್ನು ಹಿಡಿಯುವುದು ಎಂದು ಆಲೋಚಿಸಿದ ಪರಮೇಶ್ವರ ಆಳ ಗುಂಡಿಯೊಂದನ್ನು ತೋಡಿಕೊಂಡು ಅಲ್ಲಿ ಇಳಿದುಕೊಂಡು ಕುತ್ತಿಗೆಯವರೆಗೆ ಮಣ್ಣು ಮುಚ್ಚಿಕೊಂಡಿದ್ದ. ಹೀಗೆ ಮಣ್ಣು ಮುಚ್ಚಿಕೊಂಡು ಕುಳಿತ ಶಿವನ ಬಳಿ ಪ್ರತ್ಯಕ್ಷನಾದ ಶನೈಶ್ಚರ ನಗುತ್ತ ‘ಜಗದ ದೇವನಾದ ಪರಮೇಶ್ವರ, ನಾನು ನಿನ್ನನ್ನು ಹಿಡಿದಾಗಿದೆ. ಈ ಪ್ರಾರಬ್ಧದಿಂದಲೇ ಮಣ್ಣು ಮುಚ್ಚಿಕೊಂಡು ಅಡಗಿ ಕುಳಿತ ನಿನ್ನ ಸ್ಥಿತಿ ನೋಡಿ ಮರುಕವೆನಿಸುತ್ತಿದೆ’ ಎಂದು ನಮಸ್ಕರಿಸಿ ಹೇಳಿದನಂತೆ. ಇಷ್ಟಕ್ಕೂ ಇದು ಒಂದು ಕತೆ.

ಬಂಧನಯೋಗವೂ ಇದೇ ಕತೆಯನ್ನು ಹೋಲುತ್ತದೆ. ಈಗ ಜನಾರ್ದನ ರೆಡ್ಡಿಯವರ ಕತೆಯೂ ಇದನ್ನೇ ಹೋಲುತ್ತದೆ. ತನ್ನ ಇರವನ್ನು ಗುಟ್ಟಾಗಿರಿಸಿಕೊಂಡು ಪೊಲೀಸರ ಕೈಗೆ ಸಿಕ್ಕಿಬೀಳದಂತೆ ಸ್ಥಳಗಳನ್ನು ಬದಲಾಯಿಸುತ್ತ ಹೋಗುವುದು ಒಂದು ರೀತಿಯ ಬಂಧನವೇ. ಸಕಲ ವ್ಯವಸ್ಥೆಗಳನ್ನೂ ಸಂಯೋಜಿಸಿಕೊಂಡು ಗುಟ್ಟಾಗಿ ಅಜ್ಞಾತವಾಸದಲ್ಲಿರುವುದು ಸುಲಭದ ಮಾತಲ್ಲ. ಒಂದು ರೀತಿಯ ಬಂಧನವೇ. ಪೊಲೀಸರ ಸೆರೆಯಲ್ಲಿರುವುದು ಅಲ್ಲವಾಗಿರಬಹುದು. ಆದರೆ ಯಾರಿಗೂ ಸಿಗದಂತೆ ನಾಲ್ಕು ಗೋಡೆಗಳ ನಡುವೆ ಸಿಲುಕಿಹಾಕಿಕೊಳ್ಳುವುದು ಒಂದು ರೀತಿಯ ಬಂಧನವೇ. ಗೊತ್ತಿಲ್ಲ, ಈಗ ಅವರ ಮೇಲಿನ ಅರೋಪ ರಾಜಕೀಯ ಷಡ್ಯಂತ್ರದ ಭಾಗವಾಗಿರಬಹುದು.

ಮುಖ್ಯಮಂತ್ರಿಯಾಗಬಹುದಾದ ಎತ್ತರಕ್ಕೆ ಬೆಳೆದ ಡಿ.ಕೆ.ಶಿವಕುಮಾರ್ ಜನ್ಮ ಕುಂಡಲಿಯಲ್ಲೂ ಧರ್ಮಕರ್ವಧಿಪ ಯೋಗದಂಥ ಮಹತ್ತರ ಯೋಗದ ಜತೆ ಸಂಪನ್ನತೆಯ ಗಂಟು ಒದಗಿಸುವ ಸೂರ್ಯ-ಬುಧರು ಕಾಂತಿಹೀನತೆಯನ್ನು ಪಡೆದರು. ಈಗ ಶನಿಕಾಟದ ಸಂದರ್ಭದಲ್ಲಿ ನಿರೀಕ್ಷಣಾ ಜಾಮೀನುಗಳನ್ನು ಪಡೆಯುತ್ತಿರಬೇಕಾದ, ತಾಪತ್ರಯಗಳನ್ನು ಅನುಭವಿಸಬೇಕಾದ ವರ್ತಮಾನವನ್ನು ಸೂರ್ಯ-ಬುಧರು ಸೃಷ್ಟಿಸುತ್ತಲೇ ಇರುವ ವಿಸ್ಮಯದಿಂದ ಬಳಲಿಕೆ ಅನುಭವಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್​ರ ಜನ್ಮಕುಂಡಲಿಯಲ್ಲಿ ಬಂಧನಯೋಗ ಇದೆಯೇ? ಇದರ ಉಪಸ್ಥಿತಿಯನ್ನು ತಕ್ಕ ವಿಶ್ಲೇಷಣೆಯೊಂದಿಗೆ ಗಮನಿಸಬೇಕಾಗಿದೆ. ಆದರೂ ಶನಿದರ್ಶನ, ಶನಿಕಾಟದ ಸಂದರ್ಭ ಅನೇಕ ರೀತಿಯ ಸಂಭಾವ್ಯ ಮಿಸುಕಾಟಗಳನ್ನು ತಗುಲಿಸಿಹಾಕಿದೆ. ತಮ್ಮ ವಿರುದ್ಧ ಬಿಜೆಪಿ ಎಲ್ಲ ರೀತಿಯ ಕುತಂತ್ರಗಳನ್ನು ನಡೆಸುತ್ತಲೇ ಇದೆ ಎಂದು ಪ್ರೆಸ್​ವಿುೕಟ್ ಕರೆದು ಹೇಳುತ್ತಲೇ ಇದ್ದಾರೆ.

ನಾನು ಮೌನಕ್ಕೆ ಶರಣಾಗಿದ್ದೇನೆ ಎಂದು ಒಂದೆಡೆ ಹೇಳುತ್ತಾರೆ. ಪರಿಪಕ್ವ ವಿನಯದ ಮಾತುಗಳಿಂದ ಇವರು ಡಿ.ಕೆ.ಶಿವಕುಮಾರ್​ರೇ ಹೌದೇ ಎಂಬ ಪ್ರಶ್ನೆ ಮೂಡುವಂತೆ ಮಾಡುತ್ತಿದ್ದಾರೆ. ಮಾತಿನಲ್ಲಿ ಪಕ್ವತೆ ಕಾಣಿಸುತ್ತಿದೆ. ಆದರೂ ಮೌನ ಹಲವು ಸಲ ಸಾಕಷ್ಟು ಹಿಂಸೆಯನ್ನೂ ಸೃಷ್ಟಿಸುತ್ತಿರುತ್ತದೆ. ಎಂದೂ ಕೈಗೂಡಿಸಲಾರರು ಎಂದುಕೊಂಡಿದ್ದ ಕುಮಾರಸ್ವಾಮಿ ಹಾಗೂ ದೇವೇಗೌಡರ ಜತೆ ಕೈಗೂಡಿಸಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವ ಸಂದರ್ಭಕ್ಕೆ ಒಂದು ರೀತಿಯಲ್ಲಿ ಪೌರೋಹಿತ್ಯವನ್ನು ವಹಿಸಿದಂತಿದ್ದಾರೆ. ಅನಿವಾರ್ಯವಾದ ಪೌರೋಹಿತ್ಯ ಈಗ ಕಾಡುತ್ತಿರುವ ಶನೈಶ್ಚರ ಹಾಗೂ ಶನಿದಶಾ ಕಾಲಘಟ್ಟ ನೀಡಿದ ಪಾಲಿಗೆ ಬಂದ ಪಂಚಾಮೃತ. ಮುಂದೆ ಇನ್ನೇನು? ಪ್ರಶ್ನೆ ಹಾಗೆಯೇ ಉಳಿದುಕೊಂಡಿದೆ.

ಜಯಲಲಿತಾ, ಲಾಲುಪ್ರಸಾದ ಯಾದವ್, ಪಾಕಿಸ್ತಾನದ ನವಾಝ್‌ ಶರೀಫ್, ಮಹಾತ್ಮ ಗಾಂಧಿ, ನೆಲ್ಸನ್ ಮಂಡೇಲ, ಸಲ್ಮಾನ್ ಖಾನ್, ಸಂಜಯ್ ದತ್, ಜಯಪ್ರಕಾಶ ನಾರಾಯಣ್, ಕಂಚಿ ಜಯೇಂದ್ರ ಸರಸ್ವತಿ ಸ್ವಾಮೀಜಿ, ಹರ್ಷದ್ ಮೆಹ್ತಾ ಇತ್ಯಾದಿ ಹೇಳುತ್ತ ಹೋದರೆ ಅನೇಕರ ಹೆಸರನ್ನು ಯಾದಿ ಮಾಡಿ ಹೇಳಬಹುದು. ಇವರೆಲ್ಲ ವಿವಿಧ ಕಾರಣಗಳಿಗಾಗಿ ಸೆರೆಮನೆಯನ್ನು ಸೇರಿ, ಬಂಧನಯೋಗ ಪಡೆದವರು. ಇಲ್ಲಿ ಭ್ರಷ್ಟಾಚಾರ, ರಾಜಕೀಯ ಸಂಚು, ಇನ್ನಿತರ ಕಾನೂನು ಉಲ್ಲಂಘಿಸಿದ ಕೃತ್ಯಗಳ ಕಾರಣಗಳೇ ಮೂಲವಾಗಿ ಬಂಧನಯೋಗ ಒದಗಿಬಂದಿತ್ತು. ಇವರ ಜಾತಕ ಕುಂಡಲಿಯಲ್ಲಿ ಬಂಧನಯೋಗ ಹರಳುಗಟ್ಟಿತ್ತೇ ಎಂದು ಪ್ರಶ್ನಿಸಿದರೆ ‘ಹೌದು’ ಎಂಬುದೇ ಉತ್ತರವಾಗುತ್ತದೆ.

ಹಾಗಾದರೆ ಬಂಧನಯೋಗ ಇರದೆಯೂ ಬಂಧನದ ಸಂದರ್ಭ ಒದಗಿಬಂದದ್ದು ಇಲ್ಲವೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಇದ್ದೂ ಬಂಧನವಾಗದೆ ಹೋದದ್ದು ಇದೆಯೇ ಎಂಬ ಪ್ರಶ್ನೆಯೂ ಎದ್ದೇಳುತ್ತದೆ. ಇವಕ್ಕೆಲ್ಲ ಉತ್ತರ ಒಂದೇ. ಬಂಧನಯೋಗ ಇದೆ ಎಂಬುದು ಸತ್ಯವಾದರೆ ಬಂಧನ ಇದ್ದಿದ್ದೇ. ಅದು ಮಕ್ಕಳು, ಹೆಂಡತಿ, ಬಂಧುಗಳ ನಿಯಂತ್ರಣದ ಫಲವಾಗಿ (ಹೆಣ್ಣುಮಕ್ಕಳಿಗೆ ಗಂಡನ ಕಾರಣಕ್ಕಾಗಿ) ಮನೆಯಲ್ಲಿಯೇ ಬಂಧನದಂಥ ಯಾತನೆ ಎದುರಾಗಬಹುದು. ಆಳುಕಾಳುಗಳ ನಿರಂತರ ಉಪಸ್ಥಿತಿ ಅಪ್ರತ್ಯಕ್ಷವಾದ ಬಂಧನದ ಸಂದರ್ಭವನ್ನು ನಿರ್ಮಾಣ ಮಾಡಬಹುದು. ಅಡಗಿಕೊಂಡೇ

ಇರುವ ಸಮಾಜವಿರೋಧಿ ಶಕ್ತಿಗಳು ಹಲವು ಸಲ ಬಂಧನವಾಗದಿದ್ದರೂ ಕತ್ತಲಕೋಣೆಯಲ್ಲಿ ಅಡಗಿ ಕುಳಿತಿರಬೇಕಾದ ಸ್ಥಿತಿಯೂ ಒಂದು ಬಂಧನವೇ. ಅನೇಕ ಗಣ್ಯ ವ್ಯಕ್ತಿಗಳನ್ನು ಖಾಸಗಿಯಾಗಿ ವಿಚಾರಿಸಿದಾಗ ‘ನನ್ನ ಸ್ಥಿತಿ ನನ್ನ ವೈರಿಗಳಿಗೂ ಬರುವುದು ಬೇಡ’ ಎಂದು ಅಸಹಾಯಕವಾಗಿ ಹೇಳುವುದನ್ನು ಕೇಳಿಸಿಕೊಳ್ಳುತ್ತೇವೆ ನಾವು.

ಬಂಧುಗಳಿಂದಲೇ ಒದಗುವ ಬಂಧನಯೋಗ

ವರದಕ್ಷಿಣೆ ಕಿರುಕುಳ, ಆಸ್ತಿಯ ವಿಚಾರ, ವಿಷಪ್ರಯೋಗ, ಅಧಿಕಾರದ ಹಿಡಿತ ಇತ್ಯಾದಿ ಸಂದರ್ಭಗಳು, ಸಾಲದ ಹಣದ ವಿಷಯದಲ್ಲಿನ ವ್ಯಾಜ್ಯ ಇತ್ಯಾದಿ ಸಂದರ್ಭಗಳಲ್ಲಿನ ಬಂಧನಯೋಗ ಕೇವಲ ಐದು ಸ್ಥಾನಗಳಲ್ಲಿ ಗ್ರಹಗಳ ಚದುರುವಿಕೆಯ ಹೊರತಾಗಿಯೂ ಅನೇಕ ಸಂಯೋಜನೆಗಳಿಂದ ಬಂಧನಯೋಗವನ್ನು ತರುತ್ತವೆ. ಇತ್ತೀಚೆಗೆ ಹಲವು ಸಿನಿಮಾ ಸ್ಟಾರ್​ಗಳು ಹಳಸಿದ ತಮ್ಮ ವೈಯಕ್ತಿಕ ಸಂಬಂಧಗಳಿಂದಾಗಿ ವಿಷಮ ಪರಿಸ್ಥಿತಿ ಎದುರಿಸಿದ ಸಂದರ್ಭಗಳನ್ನು ನಾವು ಗಮನಿಸಿದ್ದೇವೆ. ಬೇಕಿರದ ಕೊಲೆಗಳನ್ನು, ದೊಂಬಿಗಳನ್ನು ನಡೆಸಿ ತೊಂದರೆ ತಂದುಕೊಂಡವರಿದ್ದಾರೆ. ಇವು ಬಂಧನಯೋಗದ ಪರಿಣಾಮದಿಂದಲೂ ಇರಬಹುದು. ಇಸ್ರೋದ ಹಿರಿಯ ವಿಜ್ಞಾನಿ ತಪ್ಪು ಕಾರಣಕ್ಕಾಗಿ ಯಾತನೆ ಅನುಭವಿಸಿದ್ದು ಗಮನಿಸಿದ್ದೇವೆ.

ಒಟ್ಟಿನಲ್ಲಿ ಬಂಧನಯೋಗ ಮುಖ್ಯವಾಗಿ ಪಾಶಯೋಗದ ಕಾರಣದಿಂದಾಗಿ ಒದಗಿಬರುತ್ತದೆ. ಮಿಕ್ಕ ಕೆಲವು ದುರ್ದೈವದ ದೋಷಪೂರ್ಣ ಅನಿಷ್ಟ ಯೋಗಗಳೂ ಬಂಧನಕ್ಕಾಗಿನ ದಾರಿ ನಿರ್ವಿುಸಿಸುತ್ತಲೇ ಇರುತ್ತವೆ.

ಬಂಧನಯೋಗ ಎಂದರೆ ಏನು?

ಒಂದು ಜಾತಕ ಕುಂಡಲಿಯಲ್ಲಿ ರಾಹು, ಕೇತುಗಳನ್ನು ಹೊರತುಪಡಿಸಿ ಉಳಿದ ಏಳು ಗ್ರಹಗಳು ಕೇವಲ ಐದೇ ಮನೆಗಳಲ್ಲಿ ಚದುರಿಕೊಂಡಿರುತ್ತವೆ ಎಂದಾದರೆ ಅದು ಪಾಶಯೋಗ ಎಂದು ಕರೆಯಲ್ಪಡುತ್ತದೆ. ಒಂದಲ್ಲ ಒಂದು ಪಾಶದಿಂದ (ಹಗ್ಗ) ಕಟ್ಟಿಸಿಕೊಳ್ಳುವ ಬಂಧನ ಈ ಯೋಗವಿದ್ದವರಿಗೆ ಒದಗಿಯೇ ತೀರುತ್ತದೆ. ಆರನೆಯ ಮನೆಯ ಯಜಮಾನ, ಎರಡನೆಯ, ಎಂಟನೆಯ ಮನೆಯ ಯಜಮಾನರುಗಳ ನಂಟು ಹೊಂದಿದ ಪಾಶಯೋಗವಿದ್ದರೆ ಅರಿತೋ, ಅರಿಯದೆಯೋ ಇಲ್ಲವೇ ಸಂಚಿನ ಭಾಗವಾಗಿಯೋ ಬಂಧನವಾಸ, ಕಾರಾಗೃಹವಾಸ ಒದಗಿಯೇ ತೀರುತ್ತದೆ. ಇಂಥ ದಾರುಣತೆಗಳನ್ನು ಕುಟ್ಟಿ ಪುಡಿಗೈಯ್ಯಬಲ್ಲ ಶುಭಗ್ರಹ ದೃಷ್ಟಿ, ಯೋಗಗಳು ಜನ್ಮಕುಂಡಲಿಯಲ್ಲಿ ಬಲಿಷ್ಠವಾಗಿದ್ದ ಪಕ್ಷದಲ್ಲಿ ಬಂಧನಯೋಗದ ನಾಶಕ್ಕೆ ಕಾರಣವಾಗುವ ಸುಕೃತ ಅಂಶಗಳೂ ಇರುತ್ತವೆ. ಇಂಥದ್ದು ಇಲ್ಲವಾದಾಗ ಕಾರಾಗೃಹದ ಕತ್ತಲ ವರ್ತಮಾನಕ್ಕೆ ತಳ್ಳಿಸಿಕೊಳ್ಳುವುದು ಸಂಭವಿಸಿಯೇ ತೀರುತ್ತದೆ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

- Advertisement -

Stay connected

278,594FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...