Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಪ್ರಶ್ನೆ-ಪರಿಹಾರ

Thursday, 17.05.2018, 3:02 AM       No Comments

| ಮಹಾಬಲಮೂರ್ತಿ ಕೊಡ್ಲೆಕೆರೆ

# ಎಲ್ಲ ರೀತಿಯ ಧೈರ್ಯ ತಳೆದು ಜೀವನದ ಬಿರುಗಾಳಿಯನ್ನು ಮೆಟ್ಟಿ ನಿಲ್ಲುವ ಸಂಕಲ್ಪ ತಳೆಯುತ್ತೇನೆ. ಹಿಂದಿರುಗಿ ನೋಡಬಾರದು, ಮುನ್ನುಗ್ಗಬೇಕು ಎಂಬ ಯೋಚನೆ ತಳೆದು ಮುಂದಾದಾಗಲೇ ಒಂದಾದ ಮೇಲೆ ಇನ್ನೊಂದು ಎಂಬ ರೀತಿಯಲ್ಲಿ ಆಪ್ತರ, ಬಂಧುಗಳ ಸಾವು ಸಂಭವಿಸಿತು. ಮನಸ್ಸು ಮತ್ತೆ ಜೇನುಗೂಡಾಯಿತು. ಅಳುಕು ಬಂದು ಎಲ್ಲವೂ ಸ್ತಬ್ಧ. ಪರಿಹಾರಗಳೇನು?

| ಉಮಾಶಂಕರ ಕಟಕಿ ಬಾಗಲಕೋಟೆ

ನಿಜ. ಇಂಥ ಸಂಗತಿಗಳು ಮನಸ್ಸನ್ನು ಸೂಕ್ತ ಕ್ರಿಯಾಶೀಲತೆಯೊಂದಿಗೆ ಮುನ್ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ. ನಿಮ್ಮ ಜಾತಕದಲ್ಲಿ ಲಗ್ನಾಧಿಪತಿ ಶುಕ್ರನು ಹಿನ್ನಡೆ ತರುವ ಭಾವದಲ್ಲಿ ಸ್ಥಿತವಾಗಿ ರಾಹುವಿನ ಉರಿವಿಷದಲ್ಲಿ ಬಸವಳಿದಿದ್ದಾನೆ. ಬುಧನ ಉಚ್ಚಶಕ್ತಿಯ ಬಲ ನಿಮ್ಮನ್ನು ಕಾಪಾಡಬೇಕು. ಧೈರ್ಯಸ್ಥಾನಕ್ಕೆ ಚ್ಯುತಿ ತರುತ್ತಿರುವ ಚಂದ್ರನನ್ನು ಮೂಲ ಬೀಜಾಕ್ಷರ ಮಂತ್ರ ಪಠಣದಿಂದ ನಿಯಂತ್ರಣಕ್ಕೆ ತಂದುಕೊಳ್ಳಿ. ‘ಓಂ ಶ್ರಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ’ ಎಂಬುದನ್ನು 108 ಬಾರಿ ಓದಿ. ಮಲಗುವ ಮುನ್ನ ಕವಚ ಮಂತ್ರ (10 ನಿಮಿಷ ಸಾಕು) ಪಠಿಸಿ. ಚಂದ್ರನ ನಿಯಂತ್ರಣದಿಂದಾಗಿ ಭಾವನಾತ್ಮಕ ನೆಲೆಯು ದುರ್ಬಲ ಶಕ್ತಿ ನಿವಾರಣೆಯಾಗಿ ಮಾನಸಿಕ ದಾರ್ಢ್ಯತೆ ಲಭ್ಯ. ರಕ್ತಕ್ಕೆ ಸೇರುವ ಹಲವು ನಂಜಿನ ಘಟಕಗಳಿಗೂ ಛೇದನ ಒದಗಿ ಉತ್ಸಾಹಕ್ಕೆ ದಾರಿ ಮಾಡುತ್ತದೆ. 2018 ಅಕ್ಟೋಬರ್ ನಂತರ ಬರುವ ಗುರುದಶಾ ಕೂಡ ನಿಮ್ಮ ಆರ್ಥಿಕ ಅಭಿವೃದ್ಧಿಗೆ ಕೆಲವು ಸರಳ ದಾರಿಗಳನ್ನು ಒದಗಿಸುತ್ತದೆ. ವಿಷ್ಣುಸ್ತುತಿ ಕೂಡಾ ಒಳಿತು. ಇನ್ನು ಸಂಭವಿಸಿರುವ ಸಾವುಗಳು ನಿಮ್ಮ ಅಭಿವೃದ್ಧಿಗೆ ಯಾವ ಕೆಟ್ಟ ಆವರಣಗಳನ್ನೂ ತಂದಿಡುವ ಶಕ್ತಿಯದಲ್ಲ.

# ನನಗೆ ಮದುವೆಯಾಗಿ ಆರು ವರ್ಷಗಳಾದವು. ನನ್ನ ಒಪ್ಪಿಗೆ ಇದ್ದೇ ತಂದೆ ತಾಯಿಗಳು ಮದುವೆ ಮಾಡಿದ್ದಾರೆ. ಆದರೆ ಮದುವೆಯಾದ ನಂತರ ನನ್ನ ಪತಿ, ‘ನನಗೆ ನಾನು ನಿನಗೆ ಸೂಕ್ತವಾದ ವರನಲ್ಲ’ ಎಂದು ದೂರವೇ ಇದ್ದಾರೆ. ಹೊರಜಗತ್ತಿಗೆ ಒಟ್ಟಿಗಿದ್ದರೂ ಗೋಡೆಗಳೂ ನಿಂತಿವೆ. ಹಾಗೆಂದು ನನ್ನ ಪತಿ ದಾರಿ ತಪ್ಪಿದವರಲ್ಲ. ದೇವತೆಯ ಜತೆ ನನಗೆ ಸತಿ-ಪತಿಗಳ ಸಂಬಂಧ ಸಾಧ್ಯವಾಗದು ಎಂಬ ನಿರಾಕರಣೆಯಲ್ಲಿರುತ್ತಾರೆ. ಆರ್ಥಿಕವಾಗಿ ಇನ್ನಿತರ ಯಾವುದೇ ವಿಚಾರದಲ್ಲಿ ತೊಂದರೆ ಇಲ್ಲ. ಏನಾದರೂ ಪರಿಹಾರ ಇದೆಯೆ?

| ಸುಧಾ ನಟೇಶನ್ ಕರ್ನಲು

ಮನೋಮಂಡಲದ ಹಿಂಜರಿಕೆಯು (ರಾಹು, ಕುಜ ಹಾಗೂ ಶನೈಶ್ಚರರ ಒಗ್ಗೂಡುವಿಕೆಯ ವಿಷಮ ಸ್ಥಿತಿಗಳು) ದಾಂಪತ್ಯದ ಭಾಗಕ್ಕೆ ಆಧಿಪತ್ಯ ಪಡೆದ ಶುಕ್ರನ ಮೂಲಕ ಪ್ರಾಪ್ತವಾಗಿದೆ. ಆಧುನಿಕ ವಿಜ್ಞಾನ ಹಲವು ಕಾಂಪ್ಲೆಕ್ಸ್​ಗಳ ಬಗೆಗೆ, ವೈದ್ಯಕೀಯಶಾಸ್ತ್ರದ ಮೂಲಕವೂ ಸತಿಪತಿಗಳ ನಡುವಣ ಬಾಂಧವ್ಯದಲ್ಲಿದ್ದ ಬಿಕ್ಕಟ್ಟುಗಳ ಬಗೆಗೆ ವಿವರಿಸುತ್ತದೆ. ಮುಖ್ಯವಾಗಿ ನೀಲಿ ಹಾಗೂ ಕೆಂಪು ರೇಷ್ಮೆ (ಪುಟ್ಟ ವಸ್ತುಗಳು) ಬಟ್ಟೆಯ ಮೇಲೆ ಕ್ರಮವಾಗಿ ಚಿಟಿಕೆಯಷ್ಟು ಕರಿ ಎಳ್ಳು, ತೊಗರಿಬೇಳೆ ಇರಿಸಿ ಶನೈಶ್ಚರ, ಕುಜ ಅಷ್ಟೋತ್ತರ ನಾಮಾವಳಿ ಓದಿ. ಮನಸ್ಸಿಗೆ ಶಾಂತಿ ನೀಡುವ ಬೆಳವಣಿಗೆಗಳಿಗೆ ಇದರಿಂದ ದಾರಿ. ನಿಮ್ಮ ಮನೆಯಯವರು ಪ್ರತಿದಿನ ಒಂದೆರಡು ಹರಳು ಸಮುದ್ರದ ಉಪ್ಪನ್ನು ನೈಋತ್ಯ ದಿಕ್ಕಿಗೆ ಎರಚಿ; ಸಿಂಧು, ದಾಮಿನಿ, ವಾರಾಹಿ ಸ್ತೋತ್ರಗಳನ್ನು ಪಠಿಸಲಿ. ಆಧುನಿಕತೆಯ ಈ ಕಾಲಘಟ್ಟದಲ್ಲಿ ಮನಃಶಾಸ್ತ್ರಜ್ಞರನ್ನೂ ಸಂಧಿಸಲಿ. ಶಿವ ಅಷ್ಟೋತ್ತರ ಪಠಿಸಲಿ.

# ನನಗೆ ನಿದ್ದೆಯೇ ಸರಿಯಾಗಿ ಬರುತ್ತಿಲ್ಲ. ಒಂದೊಮ್ಮೆ ತೂಕಡಿಕೆ ಹತ್ತಿದರೆ ‘ನನ್ನ ಆದೇಶಗಳನ್ನು ನೀನು ಪಾಲಿಸುತ್ತಿಲ್ಲ’ ಎಂಬ ಧ್ವನಿ ಕೇಳಿಸುತ್ತದೆ. ಈ ಹಿಂದೆ ಬಾಲ್ಯದಲ್ಲಿನ (ಈಗ ಅವರುಗಳಿಲ್ಲ, ನನಗೆ ಸಂಬಂಧಿಗಳೂ ಅಲ್ಲ) ಕಂಡ ಹಿರಿಯ ಪರಿಚಿತರು ನಮ್ಮ ಮನೆಯ ಕಾರ್ಯ ಒಂದಕ್ಕೆ ಊಟಕ್ಕೆ ಬಂದಂತೆ ಕನಸೋ, ವಾಸ್ತವವೋ ಅರ್ಥವಾಗದ ರೀತಿಯಲ್ಲಿ ಮನದ ತುಂಬ ಕನವರಿಕೆಗಳು. ಕೆಲಸದ ಸ್ಥಳದಲ್ಲೂ ಕೆಟ್ಟ ಒತ್ತಡ. ಸಂಬಳ ಚೆನ್ನಾಗಿದೆ. ಪತ್ನಿ ಮಕ್ಕಳು ಉತ್ತಮರು. ಮನಃಶಾಂತಿಗೆ ಪರಿಹಾರ ಇದೆಯೇ?

| ಸಿದ್ಧಾರ್ಥ ಚಂದ್ರೇಗೌಡ ಬೆಂಗಳೂರು

ವೈಜ್ಞಾನಿಕ ಯುಗದಲ್ಲಿ ಇದೆಲ್ಲ ಅರ್ಥಹೀನ. ಮನದ ಒತ್ತಡಗಳು ಅಮೂರ್ತರೂಪದಲ್ಲಿ, ಆದರೂ ಒಂದು ಸ್ವರೂಪ ಸಿಗುವ ಹಾಗೆ ಕನಸು ಅಥವಾ ಭ್ರಮೆಯ ಆವರಣದಲ್ಲಿ ಹೆಪ್ಪುಗಟ್ಟಿದಂತಿರುತ್ತವೆ ಎಂಬ ಸಮಾಧಾನ ಕೂಡ ವಿಜ್ಞಾನ ತಿಳಿಸುತ್ತದೆ. ಇನ್ನು ಭಾರತೀಯ ಜ್ಯೋತಿರ್ವಿಜ್ಞಾನ ಅನುಸರಿಸುವುದಾದರೆ ತುಳಸಿದಳಗಳನ್ನು ನಿಮ್ಮ ಮನೆದೇವರಿಗೆ ಅರ್ಪಿಸಿ ಶ್ರೀ ಗಣಪತಿ ಅಥರ್ವಶೀರ್ಷ ಮಂತ್ರಭಾಗ ಪಠಿಸಿ. ಪ್ರತಿ ಮಂಗಳವಾರ ನಿಮ್ಮ ಕಾಲಿನ ಹೆಬ್ಬೆರಳಿನ ಮೇಲ್ಭಾಗಕ್ಕೆ ರಕ್ತಚಂದನವನ್ನು ಲೇಪಿಸಿಕೊಂಡು ಮಲಗಿ. ರಾತ್ರಿ ಮಲಗುವಾಗ ಮಂಗಳಚಂಡಿಕಾ ನಾಮಸ್ಮರಣೆಯನ್ನು (ಓಂ ಶ್ರೀ ಚಂಡಿಕಾಯೈ ನಮಃ) ಮಾಡಿ. ನಿದ್ದೆಗೆ ಜಾರುವ ಸ್ವಾಸ್ಥ್ಯ ನಿಮಗೆ ಒದಗುತ್ತದೆ. ಗಣಪತಿ ಹಾಗೂ ದೇವಿಸ್ಮರಣೆಗಳಿಂದ ಶಾಂತಿಗೆ ದಾರಿ. ನಿಂಬು ಫಲವನ್ನು ಧಾರಾಳವಾಗಿ ಸೇವಿಸಿ. ಚಂಡಿಕಾಳನ್ನು ನೆನೆಯುವಾಗ ನಿಂಬು ಫಲ ಬಳಿ ಇರುವುದೂ ಸೂಕ್ತ.

# ನಿಜ ಹೇಳಬೇಕೆಂದರೆ ಸಾಕಾಗಿಹೋಗಿದೆ. ನನ್ನ ಪತ್ನಿಗೆ ಯಾವುದೇ ರೀತಿಯ ಜಾಗ್ರತೆ ತೆಗೆದುಕೋ ಎಂಬ ಮಾತನ್ನು ಅನ್ನಬಾರದು. ಏನಾದರೂ ಅಜಾಗ್ರತೆಯಿಂದ ಘಟಿಸಿದಾಗ, ‘ನೋಡು, ಹೀಗಾಗಿದ್ದರಿಂದ ಇದು ಹೀಗಾಯ್ತು…’ ಎಂಬುದನ್ನು ಎತ್ತಿ ಹೇಳಲೂಬಾರದು. ಒಮ್ಮೆ ಮಾಡಿದ ಎಡವಟ್ಟುಗಳನ್ನೇ ಮತ್ತೆ ಮತ್ತೆ ಮಾಡುವುದು. ಉಂಟಾದ ನಷ್ಟಕ್ಕೆ ಇತರ ಏನೇ ಪರಿಹಾರ, ಉಪಶಮನಗಳಿಗೆ ನಾನೇ ತಲೆ ಕೊಡಬೇಕಾಗಿ ಬರುತ್ತದೆ. ಪ್ರತಿದಿನವೂ ಹೆದರಿ ಬದುಕುವುದೇ ಆಗಿದೆ. ತಾಪತ್ರಯ ದೂರ ಮಾಡಲು ಸಾಧ್ಯವೇ?

| ಧರಣೇಂದ್ರ ಸಜ್ಜನಹಳ್ಳಿ

ಸಮಸ್ಯೆಯ ಮೂಲ ಅನೇಕ ವಿಧವಾದ ವಿಸ್ತಾರವನ್ನು ಚಾಚಿಕೊಂಡಿದೆ. ನಿಮ್ಮಿಬ್ಬರ ಮನಸ್ತಾಪ ಅಥವಾ ಉದ್ವಿಗ್ನತೆಗಳನ್ನು ಒಂದರ್ಥದಲ್ಲಿ ಪ್ರಾರಬ್ಧ ಎಂಬುದಾಗಿಯೇ ಹೆಸರಿಸಬೇಕು. ನಿಮ್ಮ ಮನೆಯವರ ಬಾಲ್ಯದ ಅಸುರಕ್ಷಿತ ವಾತಾವರಣ, ನಿಮ್ಮ ಜಾತಕದ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಅಳೆದು, ತೂಗಿ ಇಡುವ ಕ್ರಮ (ಇದೂ ನಿಮ್ಮ ಬಾಲ್ಯದ ಅಸುರಕ್ಷಿತತೆಯ ಪರಿಣಾಮದಿಂದಲೇ ಆದದ್ದು.) ಸಂಸಾರದ ಸಾಮರಸ್ಯವನ್ನು ಇಳಿಮುಖದಲ್ಲಿರಿಸಿವೆ. ಬಾಲ್ಯದಲ್ಲಿ ಅಸುರಕ್ಷತೆಗೆ ಕಾರಣವಾದ ರಾಹು, ಕೇತುಗಳು ನಿಮ್ಮ ಪತ್ನಿಯ ವಿಷಯದಲ್ಲಿ ಸೂರ್ಯನ ಮೂಲಕ ಕೆಟ್ಟ ಧೈರ್ಯ ಪ್ರದರ್ಶಿಸಿ ವೈಫಲ್ಯಕ್ಕೆ ದೂಡುತ್ತಿದ್ದರೆ, ನಿಮ್ಮ ವಿಷಯದಲ್ಲಿ ಬುಧಾದಿತ್ಯರು ಒದಗಿಸಿದ ಸೂಕ್ಷ್ಮಬುದ್ಧಿಕೌಶಲ್ಯದ ವಿಚಾರವನ್ನೇ ಒಂದು ಮಿತಿಯಾಗಿಸಿ ಎಲ್ಲದಕ್ಕೂ ಧೈರ್ಯ ಕುಂದಿಸುವುದರಲ್ಲಿ ಚಡಪಡಿಕೆ ತರಿಸಿವೆ. ರಾಹು-ಕೇತುಗಳು ಸಾಮಾನ್ಯ ದುಷ್ಟ ಗೃಹಗಳಲ್ಲ, ನಿಜವಾಗಿ ಕ್ರೂರಿಗಳಾಗಿವೆ. ನಿಮಗಿಬ್ಬರಿಗೂ ನಿಮ್ಮ ಗುರು ನಷ್ಟಕ್ಕೆ ಜಾರಿರುವುದರಿಂದ (ನಷ್ಟದ ಮನೆಯಲ್ಲಿ ಬಾಳಸಂಗಾತಿಯನ್ನು ಪ್ರದರ್ಶಿಸುವ ಗುರು ಇದ್ದಾನೆ.) ಪ್ರಸ್ತುತ ಬಿಕ್ಕಟ್ಟು ಹರಳುಗಟ್ಟಿದೆ. ಅವಧೂತ ಸಿದ್ಧಿ ಗುರು ದತ್ತಾತ್ರೇಯನನ್ನು ಹಾಗೂ ಮಹಾಗಣಪತಿಯನ್ನು ಸ್ತುತಿಸಿ.

# ಎಲ್ಲ ರೀತಿಯ ಒಣ ಹಣ್ಣು, ಗೋಡಂಬಿ, ಬದಾಮಿ ಇತ್ಯಾದಿ ಹೋಲ್​ಸೇಲ್ ವ್ಯಾಪಾರದಲ್ಲಿ ಒಳ್ಳೆಯದಾಗಿಯೇ ದಿನಗಳು ಕಳೆದಿದ್ದವು. ಅದೃಷ್ಟವೋ, ದುರದೃಷ್ಟವೋ ಹೊತ್ತಿನ ಊಟಕ್ಕೆ ತೊಂದರೆ. ಇದ್ದಲ್ಲಿಂದ ಮೇಲಕ್ಕೆದ್ದು ಬಂದ ಬಗೆ ಅತ್ಯಾಶ್ಚರ್ಯಕಾರಕವೇ ಆಗಿತ್ತು. ಹಲವು ಹಿರಿಯರು ನೀಡಿದ ವಿಶ್ವಾಸ, ಆದರ ಮರೆಯಲಾರದ ರೀತಿಯದು. ಆದರೆ ಈಗ ಏಕಾಏಕಿ ಒಂದು ಮನೆ ಖರೀದಿಸಿದ್ದೇ ನೆಪ. ಎಲ್ಲವೂ ಸೋಲಿನ ಸರಮಾಲೆ. ನಷ್ಟ. ಒಳಿತಿಗೆ ದಾರಿ ಸಾಧ್ಯವೇ?

| ಹೊಳೆಸಿದ್ದಯ್ಯ ರಬಕವಿ, ಸೋಲಾಪುರ

ಶುಕ್ರದಶಾ ಕಾಲ ಉತ್ತಮವಾದುದನ್ನು ಅನುಗ್ರಹಿಸೀತು. ಈಗ ಸೂರ್ಯಸಿದ್ಧಿ ದುಸ್ತರವಾಗುತ್ತಿದೆ. ಶುಕ್ರದಶಾದ ಲೆಕ್ಕಾಚಾರಗಳು ಸೂರ್ಯದಶಾದಲ್ಲಿ ಹಣದ ವಿಚಾರದಲ್ಲಿ ಅಪಾರ ಪ್ರಮಾಣದ ಸವಕಳಿಯನ್ನು ನಿರ್ವಿುಸಿವೆ. ಕ್ಷೀಣ ಚಂದ್ರನೂ ಶನಿಕಾಟವೂ ಈಗ ಒಗ್ಗೂಡಿದೆ. ಸಕಲ ಸನ್ಮಂಗಳಕಾರಕಳಾದ ಶಾಂಭವಿಯನ್ನು ಆರಾಧಿಸಿ. ಒಳಾಂತರ್ಗತ ತಾಂತ್ರಿಕ ಶಕ್ತಿಧಾತುಗಳನ್ನು ಸಂವೇದಿಸುವ ಜಗಜ್ಜನನಿಯಿಂದ ಆರ್ಥಿಕ ವಿಚಾರ, ಅದರಲ್ಲೂ ನಿಮ್ಮ ವ್ಯಾಪಾರದ ಮೂಲಭೂತ ಸತ್ಯ ಸಂವರ್ಧನೆಗಾಗಿ ದಾರಿ ಒದಗಿಸುತ್ತದೆ. ಹುಬ್ಬುಗಳ ನಡುವಣ ಭಾಗದಲ್ಲಿ ದೃಷ್ಟಿ ಕೇಂದ್ರೀಕರಿಸಿ ಶಾಂಭವಿಯನ್ನು ಧ್ಯಾನಿಸಿ. ಸಂಕಲ್ಪಿತ ಕಾರ್ಯಸಿದ್ಧಿ, ಧನವಿಶೇಷಕ್ಕೆ ದಾರಿ ಮಾಡುತ್ತದೆ.

# ಕನಸಿನಲ್ಲಿ ಪದೇಪದೆ ನೀರು ಕಾಣಿಸುತ್ತದೆ. ನೀರಿನ ಅಲೆಗಳು ಸುಂದರವಾಗಿವೆ ಎಂಬ ಅನುಭವ ಸಿಗುತ್ತಿರುವಾಗಲೇ ದೈತ್ಯಾಕಾರದ ಅಲೆಗಳು, ಮೊಸಳೆಗಳು, ಹಾವುಗಳು ಆಕ್ರಮಣಕ್ಕೆ ಬಂದಂತಾಗಿ, ಭಯದಿಂದ ಎಚ್ಚರವಾಗುತ್ತದೆ. ಕೇವಲ ಭ್ರಮೆಯೇ? ತೊಂದರೆ ಇದೆಯಾ?

| ವಿನುತಾ ಶಂಕರಪ್ಪ ಇಂಡಿ

ಕನಸುಗಳ ಸಂಬಂಧವಾಗಿ ಮನಸ್ಸು, ಮನಸ್ಸಿನ ಸಂಬಂಧವಾಗಿ ಚಂದ್ರ, ಚಂದ್ರನ ಸಂಬಂಧವಾಗಿ ರಾಹು-ಕೇತುಗಳನ್ನು ವಿಶ್ಲೇಷಿಸಿ ಬೇಕಾಗುತ್ತದೆ. ನೀವು ಜಾತಕ ಪ್ರತಿ ಕಳಿಸಿಲ್ಲ. ದುರ್ಗಾಸ್ತುತಿ ಕ್ಷೇಮ.

Leave a Reply

Your email address will not be published. Required fields are marked *

Back To Top