18.1 C
Bangalore
Saturday, December 7, 2019

ಬಿಗ್​ಬಾಸ್ ಗೆಲ್ಲದಿದ್ದರೂ ಜನರ ಹೃದಯ ಗೆದ್ದೆ

Latest News

ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿ

ಕಾರವಾರ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಗಾಯಕ ನವೀನ್ ಸಜ್ಜು ಬಿಗ್​ಬಾಸ್ ವಿಜೇತರಾಗುತ್ತಾರೆ ಎಂದೇ ಅನೇಕರು ಭಾವಿಸಿದ್ದರು. ಆದರೆ ರನ್ನರ್ ಅಪ್ ಸ್ಥಾನಕ್ಕೆ ನವೀನ್ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆ ಬಗ್ಗೆ ಅವರಿಗೆ ಕಿಂಚಿತ್ತೂ ಬೇಸರ ಇಲ್ಲ. ಟ್ರೋಫಿ ಗೆಲ್ಲದಿದ್ದರೂ ಜನರ ಹೃದಯ ಗೆದ್ದಿದ್ದೇನೆ ಎಂಬ ಖುಷಿ ಈಗ ಅವರಿಗೆ ಸಿಕ್ಕಿದೆ. ಒಟ್ಟಾರೆ ಬಿಗ್​ಬಾಸ್ ಪಯಣದ ಕುರಿತು ನಮಸ್ತೆ ಬೆಂಗಳೂರು ಜತೆ ನವೀನ್ ಮಾತನಾಡಿದ್ದಾರೆ.

|ಮದನ್ ಬೆಂಗಳೂರು

100 ದಿನಗಳ ಬಿಗ್​ಬಾಸ್ ಅನುಭವ ಹೇಗಿತ್ತು?

ನಾನು ಫೈನಲ್ ಪ್ರವೇಶಿಸುತ್ತೇನೆ ಎಂದು ಮೊದಲ 50 ದಿನಗಳವರೆಗೆ ಅಂದುಕೊಂಡಿರಲಿಲ್ಲ. ಇದನ್ನು ಜೀವನದ ಒಂದು ಅನುಭವ ಎಂದಷ್ಟೇ ಭಾವಿಸಿದ್ದೆ. 50 ದಿನಗಳ ನಂತರ ಸ್ಪರ್ಧೆಯಂತೆ ಸ್ವೀಕರಿಸಿದೆ. ಚೆನ್ನಾಗಿ ಆಡಬೇಕು, ಫೈನಲ್ ತಲುಪಬೇಕು ಎಂದು ನಿರ್ಧರಿಸಿದೆ. ಎಲ್ಲರಿಗಿಂತ ಮೊದಲು ಫೈನಲ್​ಗೆ ಆಯ್ಕೆಯಾದರೂ ಸಹ ಯಾವ ಟಾಸ್ಕ್ ಗಳನ್ನೂ ಹಗುರವಾಗಿ ಪರಿಗಣಿಸಲಿಲ್ಲ. ಪರಿಣಾಮ, ಅಂತಿಮ ಹಂತದವರೆಗೂ ತೀವ್ರ ಪೈಪೋಟಿ ನೀಡಲು ಸಾಧ್ಯವಾಯ್ತು.

ರನ್ನರ್ ಅಪ್ ಆದೆ ಎಂಬ ಖುಷಿ ಇದೆಯೋ, ಗೆಲ್ಲಲಿಲ್ಲ ಎಂಬ ಬೇಸರ ಇದೆಯೋ?

ರನ್ನರ್ ಅಪ್ ಆದ ಖುಷಿಯೇ ಜಾಸ್ತಿ ಇದೆ. ಯಾಕೆಂದರೆ, ಒಳಗಿದ್ದಾಗ ಜನರು ನನಗೆ ಇಷ್ಟೆಲ್ಲ ಪ್ರೀತಿ ತೋರಿಸುತ್ತಿದ್ದಾರೆ ಎಂಬುದು ನಿಜಕ್ಕೂ ತಿಳಿದಿರಲಿಲ್ಲ. ವಿನ್ನರ್ ಯಾರು ಎಂಬುದು ಅನೌನ್ಸ್ ಆದ ಬಳಿಕ ವೇದಿಕೆಯ ಪಕ್ಕದಲ್ಲಿ ಇಬ್ಬರು ಅಳುತ್ತಿದ್ದರು. ಯಾಕೆ ಎಂದು ಕೇಳಿದರೆ ‘ನೀವೇ ಗೆಲ್ಲಬೇಕಿತ್ತು’ ಎಂದು ತಮ್ಮ ಕಣ್ಣೀರಿಗೆ ಕಾರಣ ತಿಳಿಸಿದರು. ಆಗಲೇ ನಾನು ಜನರ ಹೃದಯ ಗೆದ್ದಿದ್ದೇನೆ ಎಂಬುದು ಗೊತ್ತಾಯಿತು. ವೇದಿಕೆಯಲ್ಲಿ ಸುದೀಪ್ ತಬ್ಬಿಕೊಂಡು ಮೆಚ್ಚುಗೆ ಸೂಚಿಸಿದಾಗ ನನಗೆ ಸಿಕ್ಕ ತೃಪ್ತಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ.

ಈ ಜರ್ನಿಯಲ್ಲಿ ಯಾವುದು ನಿಮಗೆ ಹೆಚ್ಚು ಸ್ಮರಣೀಯ ಆಗಿರಲಿದೆ?

ಈ ಜರ್ನಿಯಲ್ಲಿ ಯಾವ ನೆನಪನ್ನೂ ಸಣ್ಣದು ಎನ್ನಲು ಸಾಧ್ಯವಿಲ್ಲ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಸ್ಪರ್ಧಿಗಳನ್ನು ಅವರವರ ಪಾಲಕರು ನೋಡಲು ಬಂದಿದ್ದರಲ್ಲ, ಆ ಕ್ಷಣಗಳನ್ನು ಎಂದಿಗೂ ನಾನು ಮರೆಯಲು ಸಾಧ್ಯವಿಲ್ಲ. ಸಣ್ಣ ಸುಳಿವೂ ನೀಡದೆ ಅವರು ಬಂದು ನನ್ನನ್ನು ಭೇಟಿ ಮಾಡಿದ್ದು ಒಂದು ಭಾವುಕ ಅನುಭವ.

ಸ್ಟುಡಿಯೋ ನಿರ್ವಣಕ್ಕೆ ಸುದೀಪ್ ಸಹಕಾರ ನೀಡಲಿದ್ದಾರಂತೆ..?

ಹೌದು, ಬಿಗ್​ಬಾಸ್​ನಿಂದ ಹಣ ಸಿಕ್ಕರೆ ಸ್ಟುಡಿಯೋ ಮಾಡಬೇಕು ಎಂದು ಆರಂಭದಲ್ಲೇ ಹೇಳಿದ್ದೆ. ಅದನ್ನು ಫೈನಲ್ ವೇದಿಕೆಯಲ್ಲಿ ಸುದೀಪ್ ನೆನಪಿಸಿ ಕೊಂಡರು. ನಾನು ವಿನ್ನರ್ ಆಗಲಿಲ್ಲವಾದರೂ ನನ್ನ ಸ್ಟುಡಿಯೋ ಕೆಲಸಗಳಿಗೆ ಅವರು ಬೆಂಬಲ ಸೂಚಿಸುವುದಾಗಿ ತಿಳಿಸಿದರು. ಅದಕ್ಕಿಂತ ಜಾಸ್ತಿ ನನಗೆ ಇನ್ನೇನೂ ಬೇಡ.

ಈ ಶೋನಿಂದ ನಿಮ್ಮ ಬದುಕಿನಲ್ಲಿ ಏನಾದರೂ ಬದಲಾವಣೆ?

ಚಿತ್ರರಂಗದವರಿಂದ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ. ಸಂಗೀತ ನಿರ್ದೇಶನ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಲು ಹಲವು ನಿರ್ವಪಕರು ಆಫರ್ ನೀಡುತ್ತಿದ್ದಾರೆ. ಆದರೆ 20 ದಿನ ಆರಾಮಾಗಿ ಕಾಲ ಕಳೆದು, ನಂತರ ಎಲ್ಲದರ ಕಡೆಗೆ ಗಮನ ಹರಿಸಲಿದ್ದೇನೆ.

ಹೊರಬಂದ ಬಳಿಕ ಕುಟುಂಬದವರು, ಅಭಿಮಾನಿಗಳು ಏನು ಹೇಳುತ್ತಿದ್ದಾರೆ?

ಸಾಮಾಜಿಕ ಜಾಲತಾಣದಲ್ಲಿ ಜನರ ಕಮೆಂಟ್ಸ್ ಓದುವಾಗ ನನ್ನ ಕಣ್ಣಲ್ಲಿ ನೀರು ಬಂದಿದೆ. ಒಮ್ಮೆಯೂ ನನ್ನ ಬಗ್ಗೆ ಅವರು ನೆಗೆಟಿವ್ ಕಮೆಂಟ್ ಮಾಡಿಲ್ಲ. ಅದಕ್ಕಿಂತ ಜಾಸ್ತಿ ಇನ್ನೇನು ಬೇಕು ಹೇಳಿ? ನಮ್ಮ ಪಾಡಿಗೆ ನಾವು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದೆವು. ಆದರೆ ಪ್ರೇಕ್ಷಕರು ನಮ್ಮ ಬಗ್ಗೆ ಒಂದು ಫೀಲಿಂಗ್ ಬೆಳೆಸಿಕೊಂಡಿದ್ದರು. ಈಗ ಎಲ್ಲರೂ ಕರೆ ಮಾಡಿ ಪ್ರೀತಿ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ಕಂಡು ನಮ್ಮ ಕುಟುಂಬದವರೂ ತುಂಬ ಖುಷಿ ಆಗಿದ್ದಾರೆ.

ಹಳ್ಳಿ ದತ್ತು ಪಡೆಯುವ ಆಲೋಚನೆ ಬಂದಿದ್ದು ಯಾಕೆ?

ನಟ ‘ನೀನಾಸಂ’ ಸತೀಶ್ ಒಂದು ಹಳ್ಳಿ ದತ್ತು ತೆಗೆದುಕೊಂಡರು ಎಂದು ಗೊತ್ತಾದಾಗ ನಾನೂ ಅವರ ಹಾದಿಯಲ್ಲಿ ಸಾಗಬೇಕು ಎನಿಸಿತು. ಬಿಗ್​ಬಾಸ್ ವಿಜೇತನಾದರೆ ಹಳ್ಳಿ ದತ್ತು ಪಡೆಯಬೇಕು ಎಂದುಕೊಂಡಿದ್ದೆ. ಸದ್ಯಕ್ಕೆ ಅಷ್ಟು ಶಕ್ತಿ ನನ್ನಲ್ಲಿಲ್ಲ. ಇನ್ನು ಸ್ವಲ್ಪ ದಿನ ಕಳೆಯಲಿ. ಖಂಡಿತವಾಗಿಯೂ ಆ ಕೆಲಸ ಮಾಡುತ್ತೇನೆ.

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...