ನಟಸಾರ್ವಭೌಮನ ದುಬಾರಿ ಎಂಟ್ರಿ

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಮತ್ತು ‘ಪವರ್​ಸ್ಟಾರ್’ ಪುನೀತ್ ರಾಜ್​ಕುಮಾರ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ನಟಸಾರ್ವಭೌಮ’ ಸ್ಯಾಂಡಲ್​ವುಡ್ ಮಟ್ಟಿಗೆ ಬಹುನಿರೀಕ್ಷಿತ ಸಿನಿಮಾ. ಇದೀಗ ಆ ನಿರೀಕ್ಷೆಗೆ ಮತ್ತೊಂದು ಕೊಂಡಿ ಅಂಟಿಕೊಂಡಿದೆ. ಅಂದರೆ, ಈವರೆಗೂ ಕನ್ನಡದಲ್ಲಿ ಯಾರೂ ಮಾಡದ ಹೊಸ ಸಾಹಸವೊಂದಕ್ಕೆ ‘ನಟಸಾರ್ವಭೌಮ’ ಚಿತ್ರತಂಡ ಕೈಹಾಕಿದೆ. ದುಬಾರಿ ಬಜೆಟ್​ನ ಐದು ಸೆಟ್​ಗಳನ್ನು ನಿರ್ವಿುಸಿ ಅದರಲ್ಲಿ ಪುನೀತ್ ಅವರ ಇಂಟ್ರಡಕ್ಷನ್ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಬೆಂಗಳೂರಿನ ಹಲವೆಡೆ ದುಬಾರಿ ವೆಚ್ಚದಲ್ಲಿ ಒಟ್ಟು ಐದು ಸೆಟ್​ಗಳನ್ನು ಹಾಕಲಾಗಿದೆ. ಒಂದೊಂದು ಸೆಟ್​ನಲ್ಲೂ ಒಂದೊಂದು ರೀತಿಯ ವಿಶೇಷತೆಗಳು ಇರಲಿದ್ದು, ಆರು ದಿನ ಹಾಡಿನ ಶೂಟಿಂಗ್ ಮಾಡಲಾಗುತ್ತದೆಯಂತೆ. ‘ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಪ್ರಯತ್ನ. ಪುನೀತ್ ಅವರ ಇಂಟ್ರಡಕ್ಷನ್ ಹಾಡಿಗಾಗಿ ಹೊಸ ರೀತಿಯ ಸೆಟ್​ಗಳನ್ನು ಪರಿಚಯಿಸಲಿದ್ದೇವೆ. ಎಲ್ಲವೂ ಎಪಿಕ್ ರೀತಿಯಲ್ಲಿ ಕಾಣಿಸಲಿವೆ.

ಸೋಮವಾರ ಹಾಡಿನ ಚಿತ್ರೀಕರಣವೂ ಶುರುವಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಚಿತ್ರದ ನಿರ್ದೇಶಕ ಪವನ್ ಒಡೆಯರ್. ಆದರೆ ಈ ಹಾಡಿಗಾಗಿ ಎಷ್ಟು ಬಜೆಟ್ ಮೀಸಲಿಡಲಾಗಿದೆ ಎಂಬ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ‘ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಮೊದಲ ಬಾರಿಗೆ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಆ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಮತ್ತು ಪುನೀತ್ ಅವರ ಮಾಸ್ ಇಮೇಜ್​ಗೆ ತಕ್ಕಂತೆ ಹಾಡಿನ ಸಾಹಿತ್ಯ ಇರಲಿದೆ. ಈ ಗೀತೆಗೆ ಖುದ್ದು ಪವನ್ ಒಡೆಯರ್ ಸಾಹಿತ್ಯ ಬರೆದಿದ್ದಾರೆ. ‘ರ್ಯಾಂಬೊ 2’ ಚಿತ್ರದ ‘ಚುಟು ಚುಟು..’ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದ ಭೂಷಣ್, ‘ನಟಸಾರ್ವಭೌಮ’ನಿಗೂ ಸ್ಟೆಪ್ಸ್ ಹೇಳಿಕೊಡಲಿದ್ದಾರೆ. ಪುನೀತ್​ಗೆ ಜೋಡಿಯಾಗಿ ರಚಿತಾ ರಾಮ್ ಅನುಪಮಾ ಪರಮೇಶ್ವರನ್ ನಟಿಸಿದ್ದು, ರಾಕ್​ಲೈನ್ ವೆಂಕಟೇಶ್ ಚಿತ್ರದ ನಿರ್ವಪಕರಾಗಿದ್ದಾರೆ.

ಈ ಹಾಡಿನ ಚಿತ್ರೀಕರಣವಾದರೆ ಚಿತ್ರದ ಶೂಟಿಂಗ್ ಪೂರ್ಣಗೊಳ್ಳಲಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸ ಗಳು ಕೂಡ ಮುಗಿದಿದ್ದು, ಟೀಸರ್ ಕೆಲಸ ಶುರು ಆಗಲಿದೆ. ಜನವರಿ ವೇಳೆಗೆ ಸಿನಿಮಾ ರಿಲೀಸ್ ಮಾಡುವ ಪ್ಲಾ್ಯನ್ ಇದೆ.

| ಪವನ್ ಒಡೆಯರ್ ನಿರ್ದೇಶಕ