18.1 C
Bangalore
Saturday, December 7, 2019

ಕೃಷ್ಣನ ದೈವಿಕತೆ ಮತ್ತು ಮಾನವತೆ

Latest News

ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿ

ಕಾರವಾರ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಹಳಗನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬ ಕುಮಾರವ್ಯಾಸ. ಆತನ ಪ್ರಸಿದ್ಧ ಕೃತಿ ‘ಕರ್ಣಾಟ ಭಾರತ ಕಥಾಮಂಜರಿ’. ಶ್ರೀಕೃಷ್ಣನನ್ನು ಸಾಕ್ಷಾತ್ ಮಹಾವಿಷ್ಣುವೆಂದೇ ಭಾವಿಸುವ ಕುಮಾರವ್ಯಾಸನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಶ್ರೀಕೃಷ್ಣನ ವರ್ಣನೆಯೂ ಒಂದು. ಈ ಕಾವ್ಯದಲ್ಲಿ ಕುಮಾರವ್ಯಾಸ ಚಿತ್ರಿಸಿರುವ ಕೃಷ್ಣನ ವಿಶ್ಲೇಷಣೆಯಿದು.

| ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಕೃಷ್ಣನು ಸಾಕ್ಷಾತ್ ಶ್ರೀಹರಿಯ ಅವತಾರವೆಂದು ಕೃಷ್ಣನ ಸಮಕಾಲೀನರಾದ ಭೀಷ್ಮ, ದ್ರೋಣ, ದ್ರುಪದ, ವಿರಾಟ – ಮೊದಲಾದವರು ದೃಢವಾಗಿ ನಂಬಿದ್ದಾರೆ. ಭೀಷ್ಮ, ಪಾಂಡವರು, ದ್ರೌಪದಿ, ದ್ರೋಣ, ವಿದುರ ಇವರೆಲ್ಲರೂ ಹಾಗೆ ನಂಬಿರುವ ಕೃಷ್ಣಭಕ್ತರಾಗಿದ್ದಾರೆ. ಹಾಗೆ ನಂಬದೆ ಅವನು ಕೇವಲ ಕಾಡುಗೊಲ್ಲನೆಂದು ಉದ್ಘೋಷಿಸುವ ಜರಾಸಂಧ, ಶಿಶುಪಾಲ ಮೊದಲಾದವರು ಎರಡನೇ ಗುಂಪಿಗೆ ಸೇರಿದವರು. ದುರ್ಯೋಧನ ತನ್ನ ಮಾತಿನಲ್ಲಿ ಕೃಷ್ಣನ ದೈವತ್ವವನ್ನು ನಂಬಿದಂತೆಯೂ ಇದ್ದಾನೆ; ನಂಬದವನಂತೆಯೂ ಇದ್ದಾನೆ! ಸ್ವತಃ ಕೃಷ್ಣನಿಗೇ ಪ್ರಶ್ನಿಸಿದರೆ ನನಗೆ ದೈವತ್ವ ಲವಲೇಶವಿಲ್ಲ ಎಂದು ಆತ ಉಗ್ಗಡಿಸುತ್ತಾನೆ. ಹೀಗೆ ಪರ, ವಿರೋಧ, ಸಂದೇಹವಾದಿಗಳ ನಡುವೆ ಕವಿ ಕುಮಾರವ್ಯಾಸನಿಗೆ ಮಾತ್ರ ಕೃಷ್ಣ ಸಾಕ್ಷಾತ್ ಶ್ರೀವಿಷ್ಣುವೇ. ಅಚ್ಚರಿಯೆಂದರೆ ಓದುಗರ ಸಂಗತಿ ಹಾಗಿರಲಿ, ಅವನ ಭಾರತ ಕೃತಿಯ, ಅವನೇ ಸೃಷ್ಟಿಸಿದ ಕೆಲವು ಪಾತ್ರಗಳೇ ಕೃಷ್ಣ ದೈವವೆಂಬುದನ್ನು ಮಾನ್ಯ ಮಾಡುತ್ತಿಲ್ಲ!

ಕುಮಾರವ್ಯಾಸನ ಭಾರತದಲ್ಲಿ ಬಹಳಷ್ಟು ಜನ ಭಾಗವತಶಿರೋಮಣಿಗಳು; ವೈಷ್ಣವರು; ನಾಮಧಾರಿಗಳು. ಸದಾ ಕೃಷ್ಣನ ನಾಮಸಂಕೀರ್ತನೆ ಮಾಡುವವರು! ಇದು ಮೂಲಭಾರತದ ನಿಲುವಲ್ಲ. ಪಂಪನು ಕೃಷ್ಣನ ಅಪೌರುಷೇಯತೆಯನ್ನು ರೂಪಕಾತ್ಮಕ ನೆಲೆಯಲ್ಲಿ ಮಾನ್ಯ ಮಾಡುವನಾದರೂ ಕುಮಾರವ್ಯಾಸನಂತೆ ಕೃಷ್ಣನನ್ನು ದೈವತ್ವಕ್ಕೆ ಏರಿಸುವುದರಲ್ಲಿ ಅವನಿಗೆ ಆಸಕ್ತಿಯಿಲ್ಲ. ಕುಮಾರವ್ಯಾಸನು ಬಹುದೊಡ್ಡ ಸವಾಲೊಂದನ್ನು ತನ್ನ ಮೈ ಮೇಲೆ ಹಾಕಿಕೊಂಡಿದ್ದಾನೆ. ಅವನು ಆರಾಧಿಸುವ ಕೃಷ್ಣನನ್ನು ವಿರೋಧಿಸುವ ಕಠೋರ ದೈವವಿಮರ್ಶಕರನ್ನೂ ಅವನು ತನ್ನ ಕಾವ್ಯದಲ್ಲಿ ದೃಢರೇಖೆಗಳಲ್ಲಿ ಚಿತ್ರಿಸಬೇಕಾಗಿದೆ. ಕಾರಣ ಕೃಷ್ಣನಿಷ್ಠೆಯನ್ನೆಂತೋ ಅಂತೆಯೇ ಕಾವ್ಯನಿಷ್ಠೆಯನ್ನೂ ಅವನು ಸರಿದೂಗಿಸಬೇಕಾಗಿದೆ. ಹಾಗೆ ಸರಿದೂಗಿಸುವಲ್ಲಿ ಅವನು ಸಫಲನೂ ಆಗಿದ್ದಾನೆ.

ಶಿಶುಪಾಲ, ಜರಾಸಂಧಾದಿಗಳ ಪಾತ್ರರಚನೆಯಲ್ಲಿ ಈ ಅಂಶವನ್ನು ನಾವು ಗುರುತಿಸಬಹುದು. ಜರಾಸಂಧವಧಾ ಸಂದರ್ಭದಲ್ಲಿ ಜರಾಸಂಧ ಒಬ್ಬ ಧೀರೋದಾತ್ತ ನಾಯಕನಂತೆಯೇ ವಿಜೃಂಭಿಸುತ್ತಾನೆ. ಹಾಗೇ ಜರಾಸಂಧನ ಅಳಿಯನಾದ ಶಿಶುಪಾಲನ ಚಿತ್ರಣದಲ್ಲಿ ಕುಮಾರವ್ಯಾಸ ಆ ಖಳನ ದಾಷ್ಟಿಕತೆಯನ್ನು ದೃಢವಾದ ಬಣ್ಣಗಳಿಂದ ಮೈದುಂಬಿ ಬರುವಂತೆ ಚಿತ್ರೀಕರಿಸಿದ್ದಾನೆ. ಅವನು ಆಧುನಿಕ ಪರಿಭಾಷೆಯಲ್ಲಿ ಛಿಡಜ್ಝಿನ ಮೂರ್ತಿಮತ್ತ ರೂಪ. ಸ್ವಕೀರ್ತನೆ, ಪರದೂಷಣೆ, ಅಕಾರಣ ದ್ವೇಷ, ಅಪರಿಮಿತ ಪೂರ್ವಗ್ರಹ, ದುರ್ದಮ್ಯ ಹಟಮಾರಿತನ, ಭ್ರಷ್ಟ ಭಾಷೆ, ಮಾತಿನಲ್ಲಿ ಕಾಣುವ ರಾಜಕೀಯ ತಂತ್ರಗಾರಿಕೆ, ಕುಯುಕ್ತಿ – ಯಾವ ದೃಷ್ಟಿಯಿಂದಲೂ ಶಿಶುಪಾಲ ಯೋಗ್ಯಪುರುಷನೆಂದು ಹೇಳಲಿಕ್ಕಾಗದು. ಕೃಷ್ಣ ಅಸುರಮರ್ದನನಾಗಿದ್ದಾನೆ. ತನ್ನ ಮಾವ ಜರಾಸಂಧನನ್ನು ಏಮಾರಿಸಿ ಕೊಲ್ಲಿಸಿದ್ದಾನೆ. ವಾವೆಯಿಂದ ತನ್ನ ಹತ್ತಿರದ ಸಂಬಂಧಿಯಾಗಿಯೂ ಶಿಶುಪಾಲನಿಗೆ ಕೃಷ್ಣನ ಮೇಲೆ ಅಪರಿಮಿತವಾದ ದ್ವೇಷ. ಅವನ ವಿಚಿತ್ರವಾದ ಛಛಿಚಠಿಜ ಞಚ್ಞಜಿಚ ಕೂಡ ಗಮನಿಸಬೇಕಾದದ್ದು. ಮೃತ್ಯುವಿನತ್ತ ಅವಡುಗಚ್ಚಿ ಓಡುವ ಶಿಶುಪಾಲ ದೈವವನ್ನು ಛಿಡಜ್ಝಿ ಎದುರಿಸುವ ರೀತಿಗೆ ಪ್ರಖರ ಉದಾಹರಣೆ.

ತನ್ನ ವೈರಿಗಳೊಡನೆ ಮಾತ್ರವಲ್ಲ ತನ್ನ ಪರಮಾಪ್ತ ಭಕ್ತರೊಡನೆಯೂ ಕೃಷ್ಣ ಸೆಣೆಸಬೇಕಾಗುತ್ತದೆ! ಭೀಷ್ಮನೊಂದಿಗೆ ಅವನ ಸಂಘರ್ಷ ಆ ಬಗೆಯದು! ಕೃಷ್ಣನ ಹಣೆಯೊಡೆಯುವಂತೆ ಯುದ್ಧದಲ್ಲಿ ಭೀಷ್ಮ ಘಾತಿಸಿದ್ದಾನೆ. ಕೆರಳಿದ ಕೃಷ್ಣ ಕುಪಿತನಾಗಿ ಸುದರ್ಶನ ಚಕ್ರ ಹಿಡಿದು ತನ್ನ ಭಕ್ತನ ಮೇಲೆ ಹರಿಹಾಯುವಾಗ, ಭೀಷ್ಮ ರಥದಿಂದ ಕೆಳಗಿಳಿದು, ಅವನಿಗೆ ಕೈಮುಗಿದು, ‘ಸುದರ್ಶನಚಕ್ರ ಪ್ರಯೋಗಿಸುವ ವ್ಯರ್ಥ ಸಾಹಸ ಏಕೆ ಮಾಡುತ್ತೀ ಕೃಷ್ಣ? ನಾವು ನಿನ್ನ ನಾಮಸಂಕೀರ್ತನೆ ಮಾಡುವವರು. ನಿನ್ನ ಚಕ್ರ ನನ್ನ ಒಂದು ಕೂದಲು ಹರಿಯಲಾರದು.

ನಾಮಧಾರಿಗಳು ಅತುಲ ಭುಜಬಲರು’ ಎಂದಾಗ ಕೃಷ್ಣ ನಾಚಿ, ತನ್ನ ಚಕ್ರವನ್ನು ವಿಸರ್ಜಿಸಬೇಕಾಗುತ್ತದೆ! ಪಾಪ ! ತನ್ನನ್ನು ದೈವವೆಂದು ಸ್ಥಾಪಿಸಿಕೊಳ್ಳಬೇಕೆಂಬ ಹಟವೂ ಅವನಿಗಿಲ್ಲ!

ಕೃಷ್ಣನಿಗೆ ತಾನು ದೇವರೆಂಬುದು ನಿಶ್ಚಿತವಿತ್ತೋ? ಅಥವಾ ಅವನೂ ಸಂದೇಹ ಸ್ಥಿತಿಯಲ್ಲೇ ಇದ್ದಾನೋ? ತನ್ನನ್ನು ದೃಢವಾಗಿ ದೇವರೆಂದು ಕೃಷ್ಣ ಕರೆದುಕೊಳ್ಳುವುದು ಭಾರತದ ಕಥನ ಸಂದರ್ಭದಲ್ಲಿ ಅಲ್ಲ; ಕಥನವು ಒಂದು ಮುಹೂರ್ತಕಾಲ ಸ್ಥಗಿತವಾಗಿ ತನ್ನ ಭಕ್ತನಾದ ಅರ್ಜುನನಿಗೆ ಅವನು ಭಗವದ್ಗೀತೆಯನ್ನು ಬೋಧಿಸುವ ಸಂದರ್ಭದಲ್ಲಿ!

ಉದ್ಯೋಗಪರ್ವದಲ್ಲಿ ಕೃಷ್ಣನ ವ್ಯಕ್ತಿತ್ವವು ದೈವ-ಮಾನುಷಧ್ರುವಗಳ ನಡುವೆ ನಿರಂತರವಾಗಿ ಜೋಲಿ ಹೊಡೆಯುತ್ತಾ ಇದೆ! ಉದ್ಯೋಗಪರ್ವದ ಮೊದಲ ಸಂಧಿಯ

ಈ ಪದ್ಯವನ್ನು ಗಮನಿಸಿ:

ಹೋಲಿಕೆಗೆ ಬಾಯ್ವಿಡುವ ವೇದದ

ತಾಳಿಗೆಗಳೊಣಗಿದವು ಘನತೆಯ

ಮೇಲೆ ತನ್ನದು ಘನತೆಯೆಂಬುದನತ್ತ ಬೇರಿರಿಸಿ |

ಕಾಲಿಗೆರಗುವನಾ ಯುಧಿಷ್ಠಿರ

ನೇಳಲೊಡನೇಳುವನು ಕೃಷ್ಣನ

ಲೀಲೆಯನುಪಮವೆಂದು ವೈಶಂಪಾಯಮುನಿ ನುಡಿದ || 1 ||

ಕೃಷ್ಣನ ಈ ನಡಾವಳಿಯನ್ನು ಗ್ರಹಿಸುವುದಕ್ಕೆ ಕುಮಾರವ್ಯಾಸ ನಮಗೆ ಒದಗಿಸುವ ಒಂದೇ ಕೀಲಿಪದ ‘ಲೀಲೆ’ ಎನ್ನುವುದು. ಹೀಗೇಕೆ ಕೃಷ್ಣ ವರ್ತಿಸುತ್ತಾನೆ ಎಂದರೆ ಅದು ಅವನ ಲೀಲೆ-ಆಟ ಎಂದು ಗ್ರಹಿಸುವುದು. ಲೀಲೆಯಲ್ಲಿ ಸಫಲತೆ ವಿಫಲತೆ ವಿಚಾರಕ್ಕೆ ಬರುವುದಿಲ್ಲ; ಕಾರ್ಯ-ಕಾರಣದ ತರ್ಕವೂ ಅಲ್ಲಿ ವ್ಯವಹರಿಸುವುದಿಲ್ಲ. ಮಗು, ತನ್ನ ಬೊಂಬೆಯನ್ನು ಮುದ್ದುಮಾಡಿದ ಮರುಕ್ಷಣ ಅದರ ಕೈ ಕಾಲುಗಳನ್ನು ಕಿತ್ತುಹಾಕುವ ಕ್ರೌರ್ಯದಲ್ಲಿ ತೊಡಗಬಹುದು. ಅದನ್ನು ಮಗುವಿನ ಕ್ರೌರ್ಯ ಎನ್ನಲಾಗದು. ಅದು ಮಗುವಿನ ಆಟ ಅಷ್ಟೆ! ರತಿ-ವಿರತಿಗಳೆರಡರಲ್ಲೂ ಅದು ಪ್ರಸನ್ನವಾಗಿಯೇ ತನ್ನ ಲೀಲೆಯಲ್ಲಿ ತೊಡಗಿರುತ್ತದೆ. ತರ್ಕಾತೀತವಾದ ದೈವೀವ್ಯವಹಾರವನ್ನು ನಾವು ಸರಿಯಾದ ಪರಿಪ್ರೇಕ್ಷ್ಯದಲ್ಲಿ ಅರ್ಥಮಾಡಿಕೊಳ್ಳಲು ಈ ಲೀಲೆ ಎಂಬ ಮಾತು ನಮಗೆ ಸಹಕಾರ ನೀಡಬಹುದು. ಪೂರ್ಣದೃಷ್ಟಿ ಎಂಬ ಮಾತು (ಕುವೆಂಪು ಅವರದ್ದು) ಲೀಲೆಯನ್ನು ಆಧುನಿಕ ಪರಿಭಾಷೆಯಲ್ಲಿ ಗ್ರಹಿಸುತ್ತಿದೆ ಎನ್ನಬಹುದು. ವಿಶ್ವವನ್ನು ನಡೆಸುವ ವಿರಾಟ್ ಮನವು ಯಾವುದನ್ನು ಯಾತಕ್ಕಾಗಿ ಮಾಡುತ್ತದೆ ಎಂಬುದನ್ನು ಆಂಶಿಕ ನೆಲೆಯಲ್ಲಿ ಸರಿಯಾಗಿ ಗ್ರಹಿಸಲಾಗದು. ಲೀಲೆಯ ಅರ್ಥೈಕೆ ಪೂರ್ಣದೃಷ್ಟಿಯ ನೆಲೆಯಲ್ಲೇ ನಡೆಯಬೇಕಾಗುತ್ತದೆ.

ವಾಸ್ತವ ಮತ್ತು ಅತಿವಾಸ್ತವಗಳು ಕೃಷ್ಣನ ಬದುಕಿನಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡುಬಿಟ್ಟಿವೆ. ದ್ರೌಪದಿಯ ವಸ್ತ್ರಾಪಹರಣ ಪ್ರಸಂಗದಲ್ಲಿ ಅವನ ಅಸಾಮಾನ್ಯತೆಯು ಪ್ರಕಟಗೊಳ್ಳುತ್ತದೆ. ಕಪಟದ್ಯೂತವನ್ನು ಕೃಷ್ಣನಿಗೆ ತಡೆಯಲಾಗಲಿಲ್ಲ! ‘ಆಗ ನಾನು ನನ್ನ ವೈಯಕ್ತಿಕ ಹೋರಾಟದಲ್ಲಿ ತೊಡಗಿದ್ದೆ’ ಎಂದು ಪಾಂಡವರೆದುರು ಅವನು ಸಾಮಾನ್ಯ ಮನುಷ್ಯನಂತೆ ಹೊಯ್ದಾಡಿಕೊಳ್ಳುತ್ತಾನೆ.

ಸಾಮಾಜಿಕ ಶಿಷ್ಟಾಚಾರಗಳನ್ನು ಕೃಷ್ಣ ಯಾವತ್ತೂ ಕಡೆಗಣಿಸುವಂಥವನಲ್ಲ. ಯುಧಿಷ್ಠಿರ ತನಗಿಂತ ವಯಸ್ಸಲ್ಲಿ ಸ್ವಲ್ಪ ಹಿರಿಯ. ಆದರೆ ತಕ್ಕ ಹೋಲಿಕೆ ದೊರಕಿಸಲಾರದೆ ವೇದಗಳ ಬಾಯೊಣಗಿಸಿದ ಆ ಮಹಾತ್ಮ ತನ್ನ ಭಕ್ತನಾದ ಯುಧಿಷ್ಠಿರನಿಗೆ ನಮಸ್ಕಾರ ಮಾಡಬೇಕೆ? ಅವನು ಎದ್ದಾಗ ಎದ್ದು ನಿಲ್ಲಬೇಕೆ? ಅದೆಂಥ ಗೌರವ ಅವನಿಗೆ ಹಿರಿಯರಲ್ಲಿ! ಈ ನಡಾವಳಿಗೆ ಒಂದು ಸಮಾಧಾನ ಗೀತೆಯಲ್ಲಿ ಉಂಟು. ‘ನಾನು ಏಕೆ ಕರ್ಮ ಮಾಡಬೇಕು ಎಂದರೆ – ಮಾಡದಿದ್ದರೆ ಉಳಿದವರು ನನ್ನನ್ನು ಅನುಕರಿಸುತ್ತಾರೆ. ಆಗ ವ್ಯವಸ್ಥೆ ಛಿದ್ರಗೊಳ್ಳುತ್ತದೆ.’

ದೊಡ್ಡವರು, ನಾಯಕರು ಮೇಲ್ಪಂಕ್ತಿಯನ್ನು ನಿರ್ವಿುಸುವುದು ಅಗತ್ಯ. ಹಿರಿಯರನ್ನು ಕಿರಿಯರು ಗೌರವಿಸಬೇಕು ಎಂಬುದು ಒಂದು ಸಾಮಾಜಿಕ ಶಿಷ್ಟಾಚಾರ, ಕೃಷ್ಣ ಅದನ್ನು ಮಾಡಿಯೇ ತೋರಿಸಬೇಕು. ಇಲ್ಲವಾದರೆ ಕಿರಿಯರಿಗೆ ತಪ್ಪು ಮಾದರಿ ಒದಗಿಸಿದಂತಾಗುವುದು.

***

ಉದ್ಯೋಗಪರ್ವವು ಅನೇಕ ನಾಟ್ಯಮಯ ದೃಶ್ಯಗಳಿಂದ ಇಡಿಕಿರಿದಿರುವ ಪರ್ವ. ಇಡೀ ಪರ್ವವನ್ನು ಕೃಷ್ಣನ ವ್ಯಕ್ತಿತ್ವವು ವ್ಯಾಪಿಸಿಬಿಟ್ಟಿದೆ. ಭೀಷ್ಮಪರ್ವ, ದ್ರೋಣಪರ್ವ, ಕರ್ಣಪರ್ವ ಎಂದು ಕರೆಯುವಂತೆ ಈ ಪರ್ವವನ್ನು ಕೃಷ್ಣಪರ್ವ ಎಂದು ಕರೆಯಬಹುದು. ದೇವರು ಪ್ರತ್ಯಕ್ಷವಾಗಿ ವ್ಯವಹರಿಸುವ ಪರ್ವವಿದು. ಮಹಾಭಾರತದಲ್ಲಿ ಉದ್ಯೋಗಪರ್ವವೇ ಅತ್ಯಂತ ಸಾರವತ್ತಾದ ಪರ್ವವೆಂದು ಅದಕ್ಕಾಗಿಯೇ ಹೇಳುವುದು (ಭಾರತೇ ಸಾರಂ ಉದ್ಯೋಗಂ). ಕೃಷ್ಣನ ದ್ವೈಧ ವ್ಯಕ್ತಿತ್ವವನ್ನು ಹೃದಯಂಗಮವಾಗಿ ಚಿತ್ರಿಸಿರುವುದು ಈ ಪರ್ವದ ಮಹತ್ವವಾಗಿದೆ. ಚಲನೆಯಿಂದ ವ್ಯಾಪ್ತವಾಗಿರುವ ಪರ್ವವಿದು. ಕೃಷ್ಣ ಅಭಿಮನ್ಯುವಿನ ವಿವಾಹಕ್ಕಾಗಿ ವಿರಾಟನಗರಿಗೆ ಯದುಪರಿವಾರ ಸಮೇತ ಬರುತ್ತಾನೆ. ಮದುವೆ ಮುಗಿಸಿಕೊಂಡು ದ್ವಾರಕಾವತಿಗೆ ಹಿಂದಿರುಗುತ್ತಾನೆ. ಸಂಧಿಗೆ ಪ್ರಯತ್ನಿಸುವುದು, ಅದು ವಿಫಲವಾದಲ್ಲಿ ಯುದ್ಧಕ್ಕೆ ತೊಡಗುವುದು ಎಂಬುದಾಗಿ ಪಾಂಡವರಿಗೆ ಸಲಹೆ ನೀಡಿ ಕೃಷ್ಣ ದ್ವಾರಕೆಗೆ ಹಿಂದಿರುಗಿದ ಮೇಲೆ, ದ್ರುಪದ ತನ್ನ ಪುರೋಹಿತರನ್ನು ಸಂಧಿಯ ಪ್ರಸ್ತಾವಕ್ಕಾಗಿ ಹಸ್ತಿನಾವತಿಗೆ ಕಳುಹಿಸಿಕೊಡುತ್ತಾನೆ. ಸಂಧಿಗೆ ದುರ್ಯೋಧನ ಒಪ್ಪಿಯಾನೆಂಬ ಭರವಸೆ ಯಾರಿಗೂ ಇಲ್ಲ! ಆದರೆ ಪ್ರಯತ್ನವನ್ನಂತೂ ಮಾಡಬೇಕಲ್ಲ! ತಾವು ಯುದ್ಧಕ್ಕೆ ಮೊದಲಿಟ್ಟವರು ಎಂಬುದು ನಾಳೆ ಜನರ ಮಾತಾಗಬಾರದು. ನೀತಿಯಿಂದ ಭೀಷ್ಮ-ದ್ರೋಣರನ್ನು ಕಟ್ಟಬೇಕಾದ ಅಗತ್ಯವಿದೆ. ಹಾಗಾಗಿ ಮೊದಲ ಸಂಧಿಯ ಪ್ರಸ್ತಾಪ ತಮ್ಮ ಕಡೆಯಿಂದಲೇ ನಡೆಯಬೇಕು. ಪುರೋಹಿತರು ಹಸ್ತಿನಾವತಿಗೆ ಹೋಗುತ್ತಾರೆ. ಅದೇ ಕಾಲದಲ್ಲಿ ರಾಜದೂತರನ್ನು ದೇಶ ವಿದೇಶಗಳ ರಾಜರ ಬಳಿಗೆ ಸೈನ್ಯದ ಸಹಾಯಾರ್ಥ ಕಳಿಸಿಕೊಡಲಾಗಿದೆ. ಅತ್ತ ದುರ್ಯೋಧನ ಮಾಡುತ್ತಿರುವ ಕೆಲಸವೂ ಅದೆ! ಸೈನ್ಯ ಜಮಾವಣೆ. ಬೇರೆ ಬೇರೆ ಪ್ರಭುಗಳನ್ನು ಸಹಾಯಕ್ಕೆ ಆಹ್ವಾನಿಸುವುದು!

ಸ್ವತಃ ತಾನೇ ಕೃಷ್ಣನನ್ನು ಒಳಗು ಮಾಡಿಕೊಳ್ಳಲು ದುರ್ಯೋಧನ ದ್ವಾರಕೆಗೆ ಹೊರಟಿದ್ದಾನೆ. ಗುಪ್ತಚರರಿಂದ ಈ ವಿಷಯ ತಿಳಿದು ಧರ್ಮಜನೂ ಅರ್ಜುನನನ್ನು ಕೃಷ್ಣನ ಸಹಾಯ ಯಾಚಿಸಲು ದ್ವಾರಕೆಗೆ ಕಳಿಸಿಕೊಡುತ್ತಾನೆ!

ಅರ್ಜುನ ದ್ವಾರಕೆಗೆ ಬಂದಾಗ ಶ್ರೀಕೃಷ್ಣ ನಿದ್ರಾಯೋಗದಲ್ಲಿದ್ದಾನೆ!

ಮುಕುಳ ಕರಪುಟನಾಗಿ ಭಯಭರ

ಭಕುತಿಯಲಿ ಕಲಿಪಾರ್ಥನಬುಜಾಂ

ಬಕನನೆಬ್ಬಿಸಲಮ್ಮದೊಯ್ಯನೆ ಚರಣ ಸೀಮೆಯಲಿ |

ಅಕುಟಿಲನು ಸಾರಿದನು ಬಳಿಕೀ

ವಿಕಳ ದುರ್ಯೋಧನನು ನಿಗಮ

ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ || 2 ||

ಅರ್ಜುನ ಮತ್ತು ದುರ್ಯೋಧನರು ಕೆಲವೇ ನಿಮಿಷಗಳ ಅಂತರದಲ್ಲಿ ಕೃಷ್ಣನ ಶಯನಗೃಹವನ್ನು ಪ್ರವೇಶಿಸಿದ್ದು. ಅರ್ಜುನ ಕೃಷ್ಣನ ಕಾಲ ಬಳಿ. ದುರ್ಯೋಧನ ಕೃಷ್ಣನ ತಲೆಯ ಬಳಿ. ಅದು ಅವರವರ ಜಾಯಮಾನಕ್ಕೆ ಯುಕ್ತವಾಗಿಯೇ ಇದೆ. ಮೊದಲು ಬಂದ ಭಕ್ತನಾದ ಅರ್ಜುನ ದೇವರ ಪದಮೂಲದಲ್ಲಿ ಕುಳಿತುಕೊಳ್ಳಬೇಕಷ್ಟೆ? ಅಧಿಕಾರದ ಮೇಲೆ ಕಣ್ಣಿಟ್ಟಿರುವ ದುರ್ಯೋಧನ ಕೃಷ್ಣನ ತಲೆಯ ಕಡೆ (ಮೌಳಿಯತ್ತಲು) ಕುಳಿತುಕೊಳ್ಳುತ್ತಾನೆ. ಒಂದು ವಿನಯದ ಅಭಿವ್ಯಕ್ತಿ; ಮತ್ತೊಂದು ಅಹಂಕಾರದ ಅಭಿವ್ಯಕ್ತಿ! ದೈವದ ತಲೆ ಮತ್ತು ಕಾಲುಗಳ ಬಳಿ ದುರ್ಯೋಧನಾರ್ಜುನರನ್ನು ಸ್ಥಾಪಿಸುವಲ್ಲಿ ಕವಿ ಒಂದು ವಿಲಕ್ಷಣವಾದ ಪ್ರಮೇಯವನ್ನೇ ರಚಿಸಿದಂತಾಗಿದೆ.

ನಿದ್ದೆ ತಿಳಿದು ಕೃಷ್ಣ ಎದ್ದಾಗ ಮೊದಲು ಕಣ್ಣಿಗೆ ಬೀಳುವುದು ಕಾಲ ಬಳಿ ಕುಳಿತ ಅರ್ಜುನನೇ! ಆಮೇಲೆ ತಿರುಗಿ ನೋಡಿದಾಗ ಕಂಡದ್ದು ವಿಕಲಮತಿಯಾದ ದುರ್ಯೋಧನ! ಅವರಿಬ್ಬರನ್ನು ಒಮ್ಮೆಗೇ ಕಂಡ ಕೃಷ್ಣನ ಪ್ರತಿಕ್ರಿಯೆ ನೋಡಿ: ‘‘ಏನಿದೇನು?!’’

ಪ್ರತಿಪಕ್ಷದವರಾದ ಇಬ್ಬರೂ ಮೊಟ್ಟಮೊದಲಿಗೆ ಇಲ್ಲಿ ಏಕಾಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ! ‘ನಮ್ಮಿಬ್ಬರಿಗೂ ಬಲವಾಗಬೇಕೆ’ನ್ನುತ್ತಾನೆ ದುರ್ಯೋಧನ! ಆಹಾ! ಅರ್ಜುನನ ಬಗ್ಗೆಯೂ ಎಂಥ ಕಾಳಜಿ ಅವನಿಗೆ! ‘ನೀವು ನಮಗೆ ಹೊರಗಿನವರಲ್ಲ. ದಾಯಾದ ವಿಷಯದಿಂದಾಗಿ ಸೋದರರ ಮನಸ್ಸು ಕದಡಿಹೋಗಿವೆ. ಕೃಷ್ಣಾ! ನೀನು ಇಬ್ಬರಿಗೂ ಸಹಾಯ ಮಾಡಬೇಕು!’

ಮೊದಲು ಕೃಷ್ಣ ಇಬ್ಬರಿಗೂ ಕೆಲವು ಬುದ್ಧಿ ಮಾತು ಹೇಳುತ್ತಾನೆ.

ಕೌರವೇಶ್ವರ ಕೇಳು ಧರಣೀ

ನಾರಿಯನಿಬರಿಗೊಕ್ಕತನವಿ

ದ್ದಾರ ಮೆಚ್ಚಿದಳಾರ ಸಂಗಡ ಉರಿಯ ಹಾಯಿದಳು |

ಭೂರಿ ಮಮಕಾರದಲಿ ನೃಪರು ವಿ

ಚಾರಿಸದೆ ಧರೆಯೆಮ್ಮದೆಂದೇ

ನಾರಕದ ಸಾಮ್ರಾಜ್ಯಕೈದುವರೆಂದು ಹರಿ ನುಡಿದ || 3 ||

ಅನ್ಯ ರಾಜರನ್ನು ಸಿಂಹಾಸನದ ಮೇಲೆ ಕೂಡಿಸಿ ಪ್ರಭುಪ್ರತಿಷ್ಠಾಚಾರ್ಯನೆಂದು ಹೆಸರಾದ ಕೃಷ್ಣ ತಾನು ಅಧಿಕಾರಕ್ಕೆ ಆಸೆಪಟ್ಟವನ್ನಲ್ಲ. ಯಾವತ್ತೂ ಅವನು ಪ್ರಭುವಾಗಿ ಸಿಂಹಾಸನದ ಮೇಲೆ ಕೂತವನಲ್ಲ. ಆದರೂ ಭೀಷ್ಮಾದಿಗಳು ಅವನನ್ನು ಲೋಕಪ್ರಭುವೆಂದೇ ಕರೆದು ಕೀರ್ತಿಸುತ್ತಿದ್ದಾರೆ!

‘ಧರಣೀನಾರಿ ಯಾವ ದೊರೆಯೊಂದಿಗೆ ನಿಷ್ಠೆಯಿಂದ ಒಕ್ಕತನ ಮಾಡಿದಳು? ಯಾರನ್ನು ಮೆಚ್ಚಿದಳು? ರಾಜರು ವ್ಯರ್ಥ ತಮ್ಮನ್ನು ಭೂಪತಿಗಳೆಂದು ಕರೆದುಕೊಂಡರು. ಅದು ಕೇವಲ ಮಮಕಾರ. ಅಷ್ಟೆ! ಭೂಪತಿಗಳು ಸೋತು ಸುಣ್ಣವಾದಾಗ ಭೂಮಿ ಯಾರೊಂದಿಗೂ ಸಹಗಮನ ಮಾಡಲಿಲ್ಲ! ಧರೆ ನಮ್ಮದು ಎಂದ ಭೂಪತಿಗಳು ಕಡೆಗೆ ತಾವು ನರಕದ ಸಾಮ್ರಾಜ್ಯಕ್ಕೆ ಹೋದರು! ನಾಡಿಗೋಸ್ಕರ ಸೋದರರು ಹೊಯ್ದಾಡಿ ಹರಿಹಂಚಾದರು ಎಂದು ಸೃಷ್ಟಿ ಇರುವವರೆಗೆ ಎಲ್ಲರೂ ಆಡಿಕೊಳ್ಳುವರು! ಆ ಅಪವಾದ ಬೇಡವಪ್ಪಾ! ನೀವು ಒಂದುಗೂಡಿ ಬದುಕಿ. ನಾವು ಅದನ್ನು ನೋಡಿ ಸಂತೋಷಪಡುತ್ತೇವೆ’ ಎನ್ನುತ್ತಾನೆ ರುಕ್ಮಿಣೀರಮಣನಾದ ಶ್ರೀಕೃಷ್ಣ!

‘ನಿಮ್ಮನ್ನು ಯುದ್ಧಕ್ಕೆ ಹುರಿದುಂಬಿಸಿ ನೀಚರು ನೀವು ಹಾಳಾಗುವುದನ್ನು ನೋಡಿ ತಮ್ಮ ದಾರಿ ತಾವು ಹಿಡಿಯುವರು! ನೀವು ಅಪಕೀರ್ತಿನಾರಿಯ ಹಾದರ ಮಾಡುವಿರಿ!’

ಕೃಷ್ಣನ ನೀತಿಮಾತಿಗೆ ದುರ್ಯೋಧನನ ಖಡಕ್ ಉತ್ತರ: ‘ಸ್ವಾಮೀ! ನಾವು ಧರ್ಮಶ್ರವಣಕ್ಕಾಗಿ ಬಂದವರಲ್ಲ! ಕ್ಷತ್ರಿಯರಿಗೆ ಸಹಜವಾದ ಯುದ್ಧಾಕಾಂಕ್ಷಿಗಳಾಗಿ ಬಂದಿದ್ದೇವೆ. ನೀವು ಪಾಂಡವರಿಗೂ ಕೌರವರಿಗೂ ಪ್ರೀತಿಯಿಂದ ನಿಮ್ಮ ಕೈಲಾಗುವ ಸಹಾಯ ಮಾಡಿ!’

ದುರ್ಯೋಧನನ ಮಾತು ಕೇಳಿ ಕೃಷ್ಣ ‘‘ತಂಬುಲ ಸೂಸುವಂತೆ’’ ನಕ್ಕನಂತೆ! ನಗುತ್ತಲೇ ಅರ್ಜುನನನ್ನು ನೋಡಿ, ‘ನಿನ್ನ ಅಭಿಪ್ರಾಯವೇನು ಅರ್ಜುನ’ ಎಂದು ವಿಚಾರಿಸಿದನಂತೆ! ಅರ್ಜುನ ಹೇಳುತ್ತಾನೆ: ‘ಸ್ವಾಮೀ! ದುರ್ಯೋಧನನ ಮತವೇ ನನ್ನ ಮತ!’

ವಿರೋಧಮತಿಗಳಲ್ಲಿ ಮೊಟ್ಟಮೊದಲಿಗೆ ಏಕಮತ ವ್ಯಕ್ತವಾಗಿದೆ!

ಕೃಷ್ಣ ಈಗ ನೇರವಾಗಿ ವ್ಯವಹಾರಕ್ಕಿಳಿಯುತ್ತಾನೆ. ಯುದ್ಧ ಮಾಡದ ತಾನು ಒಂದುಕಡೆ; ಕೃತವರ್ಮನೊಡಗೂಡಿದ ನಾರಾಯಣ ಮಹಾಸೇನೆ ಇನ್ನೊಂದು ಕಡೆ! ‘ಪಾರ್ಥ, ಇವೆರಡರಲ್ಲಿ ಯಾವುದು ಬೇಕೋ ಅದನ್ನು ನೀನು ಆರಿಸಿಕೊ!’ (ಅ.ರಾ.ಸೇ.ಯವರು ಸೂಚಿಸಿರುವಂತೆ ನಾರಾಯಣ ಮಹಾಸೇನೆಯಲ್ಲಿ ಬಲರಾಮನು ಒಳಪಡುವುದಿಲ್ಲ. ಬಲ ಎಂಬುದು ಸೇನೆಯನ್ನಷ್ಟೇ ಸೂಚಿಸುವುದೆಂಬುದು ನನ್ನ ಗ್ರಹಿಕೆ.)

ಮೊದಲ ಆಯ್ಕೆಯ ಹಕ್ಕು ಅರ್ಜುನನಿಗೇ ಯಾಕೆ? ಮೂಲಭಾರತದಲ್ಲಿ ಅರ್ಜುನ ವಯಸ್ಸಿನಲ್ಲಿ ಕಿರಿಯನಾದ ಕಾರಣ ಅವನಿಗೆ ಆಯ್ಕೆಯ ಮೊದಲ ಹಕ್ಕು ಎಂದು ಕೃಷ್ಣ ಹೇಳುತ್ತಾನೆ. ಕುಮಾರವ್ಯಾಸನಲ್ಲಿ ಅದರ ಪ್ರಸ್ತಾಪವಿಲ್ಲ. ಬೇಡುವವರಿಗೆ ಹಕ್ಕುಗಳಿರುವುದಿಲ್ಲ ಅಲ್ಲವೇ?

ನಿರೀಕ್ಷೆಯಂತೆ ಅರ್ಜುನ ಕೃಷ್ಣನನ್ನೇ ಆರಿಸಿಕೊಳ್ಳುತ್ತಾನೆ.

‘‘ಕೃಷ್ಣ ನೀನೇ ಸಾಕು ನಮಗೆಂದ.’’ ನೀನು ನಮಗೆ ಸಾಕು ಎಂದು ಒಂದರ್ಥ; ನೀನೇ ನಮ್ಮನ್ನು ಸಾಕಬೇಕು ಎಂಬುದು ಇನ್ನೊಂದು ಅರ್ಥ! ಕೃಷ್ಣನನ್ನೇ ಆರಿಸಿಕೊಂಡದ್ದಕ್ಕೆ ಅರ್ಜುನ ಕೊಡುವ ಕಾರಣ: ನಾವು ಬಡವರು! ನಾರಾಯಣ ಮಹಾಸೇನೆಯನ್ನು ನಾವು ಹೊರೆಯಲಾರೆವು. ಬಡವರ ಬಂಧುವಾದ ನೀವೇ ನಮಗೆ ಬೇಕು!

ದುರ್ಯೋಧನನ ವಿನಯದ ಭಂಗಿ ಈಗ ಒಂದೇ ಕ್ಷಣದಲ್ಲಿ ಮಂಗಮಾಯವಾಗುತ್ತದೆ.

‘‘ಗೊತ್ತು ಕೃಷ್ಣಾ! ನೀವು ಒಳಗೊಳಗೆ ಪಾಂಡವರ ಕಡೆಯೇ! ಮರೆಯ ಮಾತುಗಳು ಏಕೆ? ಪಾಂಡವರ ಎರಕ (ಪ್ರೀತಿ) ನಿಮ್ಮಲ್ಲಿ ಹಿರಿದು! ಪಾರ್ಥ ಎಂದರೆ ಮರುಗುವಿರಿ! ಪರಸ್ಪರ ಹಿರಿದಾದ ಮನಮೆಚ್ಚು ನಿಮ್ಮಲ್ಲಿ. ಹಾಗೆ ನೋಡಿದರೆ ನಾವೇ ಹೊರಗು! ನೀವು ಪಾಂಡವರ ಕಡೆಯೇ ಇರಿ! ಆದರೆ ಯುದ್ಧದಲ್ಲಿ ಹೊಕ್ಕಿರಿಯಬೇಡಿ! ಅಷ್ಟೆ!’’

ಕೃಷ್ಣ ಹೇಳುತ್ತಾನೆ; ‘ನಾವು ಚಿಕ್ಕಂದಿನಿಂದಲೂ ಸಾವಿರಾರು ಮಂದಿ ರಕ್ಕಸರನ್ನು ಕೊಂದೂ ಕೊಂದು ಆಯಾಸಗೊಂಡಿದ್ದೇವೆ. ನಮಗೆ ತುಂಬ ಆಯಾಸವಾಗಿದೆ! ನಮ್ಮ ಚಕ್ರವನ್ನು ಅಲ್ಲಾಡಿಸುವಷ್ಟು ಶಕ್ತಿಯೂ ನಮ್ಮಲ್ಲಿ ಉಳಿದಿಲ್ಲ! ಯೌವನದ ಬಲ ಅಳಿಯಿತು! ಈಗ ಕೇವಲ ಉಂಡಾಡಿಭಟ್ಟರಾಗಿದ್ದೇವೆ!’

ಕೃಷ್ಣ ಇಷ್ಟು ಹೇಳಿದ್ದೇ ತಡ – ‘ಒಳ್ಳೆಯದೇ ಆಯಿತು ಬಿಡಿ’ ಎಂದು ಕೈಕೊಡವಿಕೊಂಡು ದುರ್ಯೋಧನ ಬಲರಾಮಾದಿಗಳನ್ನು ಕಾಣುವುದಕ್ಕೆ ಹೊರಟೇ ಹೋಗುತ್ತಾನೆ!

ಶಯ್ಯಾಗೃಹದಲ್ಲಿ ಈಗ ಉಳಿದಿರುವವನು ಅರ್ಜುನ ಒಬ್ಬನೇ! ಕೃಷ್ಣ ಅವನನ್ನು ಹಾಸ್ಯಮಾಡುತ್ತಾನೆ!

ಸುರಗಿಯನು ಬಿಸುಟೊರೆಯನಂಗೀ

ಕರಿಸಿದಂದದಲಾಹವದ ಧುರ

ಭರದ ಯಾದವ ಬಲವನೊಲ್ಲದೆ ಮಂದ ಮತಿಯಾಗಿ |

ಮರುಳೆ ಕಾದದ ಕಟ್ಟದೆಮ್ಮನು

ಬರಿದೆ ಬಯಸಿದೆಯಿದನು ಕೇಳ್ದೊಡೆ

ಮರುಳುಗುಟ್ಟದೆ ಮಾಣ್ಬರೇ ನಿಮ್ಮಣ್ಣ ತಮ್ಮದಿರು! || 4 ||

ಈಗ ಗಹಗಹಿಸಿ ನಗುವ ಸರದಿ ಅರ್ಜುನನದು!

‘ನಾವೂ ನಿಮ್ಮ ಗರುಡಿಯಲ್ಲೇ ಅಭ್ಯಾಸ ಮಾಡಿದವರು ಸ್ವಾಮಿ! (ನಾವೆಲ್ಲಮೊಂದೆ ಗರಡಿಯೊಳೋದಿದ ಮಾನಿಸರ್ – ಎಂಬ ಪಂಪನ ವಾಣಿ ನೆನಪಿಗೆ ಬರುತ್ತದೆ). ಶಿಷ್ಯನೊಂದಿಗೇ ನಿಮ್ಮ ಇಂದ್ರಜಾಲವೇ? ನಮ್ಮ ಅಣ್ಣ ತಮ್ಮಂದಿರಿಗೆ ನಿಮ್ಮ ಮಹಿಮೆ ಏನೆಂಬುದು ತಿಳಿದಿಲ್ಲವೆ?’

ನಾವು ಬರಿಗೈಯವರು ಬರಲೆಮ

ಗಾವುದಲ್ಲಿಯ ಕೆಲಸ ಉಂಡುಂ

ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ |

ದೇವನೆಂದೇ ನೀವು ಬಗೆವಿರಿ.

ದೇವತನ ನಮ್ಮಲ್ಲಿ ಲವವಿ

ಲ್ಲಾವು ಬಲ್ಲೆವು ಬಂದು ಮಾಡುವುದೇನು ಹೇಳೆಂದ || 5 ||

‘ದೇವತನ ನಮ್ಮಲ್ಲಿ ಲವವಿಲ್ಲ’ ಎಂದು ಕೃಷ್ಣ ಹೇಳಿದನಲ್ಲವೇ?

‘ಹೌದು! ನೀವು ದೇವರಲ್ಲ. ಆದರೆ ದೇವರ ದೇವರ ಒಡೆಯರು! ನಾವು ಭಕ್ತರು. ನೀವು ಭಕ್ತರ ಭೃತ್ಯರು (ಸೇವಕರು). ನೀವು ಸಾರಥಿಯಾಗಿ ಭೃತ್ಯನ ಕಾವುದು’ – ಇದು ಅರ್ಜುನನ ಪ್ರಾರ್ಥನೆ. ಭಕ್ತನಿಗಲ್ಲದೆ ಇಂಥ ಸಲುಗೆ ಮತ್ತ್ಯಾರಿಗೆ ಸಾಧ್ಯ?

ಎನಲು ನಗುತೆತ್ತಿದನು, ಸಾರಥಿ

ತನವ ಕೈಕೊಂಡನು, ಕೃಪಾಳುವಿ

ನನುನಯವ ನಾನೆತ್ತ ಬಲ್ಲೆನು ಭೃತ್ಯವರ್ಗದಲಿ |

ತನಗಹಂಕೃತಿಯಿಲ್ಲ ವೈರೋ

ಚನಿಯ ಪಡಿಹಾರಿಕೆ ಕಿರೀಟಿಯ

ಮನೆಯ ಬಂಡಿಯ ಬೋವನಾದನು ವೀರನಾರಯಣ || 6 ||

ಕೃಷ್ಣ ಆದದ್ದು ಪಾರ್ಥಸಾರಥಿಯಲ್ಲ; ಕಿರೀಟಿಯ ಮನೆಯ ಬಂಡಿಯ ಬೋವ! ಸಂಸ್ಕೃತದಿಂದ ಕಾವ್ಯದ ನುಡಿಗಟ್ಟು ದೇಸಿಗನ್ನಡಕ್ಕೆ ಬರುವುದೇ ದೈವದ ಮಾನುಷ ಅವತರಣ.

(‘ಅಭಿನವ’ ಬೆಂಗಳೂರು ಪ್ರಕಟಿಸಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರ ‘ಕುಮಾರವ್ಯಾಸ ಕಥಾಂತರ: ಉದ್ಯೋಗಪರ್ವ, ಭೀಷ್ಮಪರ್ವ, ದ್ರೋಣಪರ್ವ’ ಕೃತಿಯ ಆಯ್ದ ಬರಹ)

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...