Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಕಾಮಿಡಿ ಇಂಜಿನ್​ನಲ್ಲಿ ಸುಮನ್ ಸವಾರಿ

Friday, 13.07.2018, 3:02 AM       No Comments

‘ನೀರ್​ದೋಸೆ’ ಚಿತ್ರದ ನಂತರ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ನಟಿ ಸುಮನ್ ರಂಗನಾಥ್ ಈಗ ಚಂದ್ರಮೋಹನ್ ನಿರ್ದೇಶನದ ‘ಡಬಲ್ ಇಂಜಿನ್’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ. ಒಂದು ಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಿದ ಖುಷಿಯಲ್ಲಿದ್ದಾರೆ. ಶುಕ್ರವಾರ (ಜು.13) ಚಿತ್ರ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸಿನಿವಾಣಿ ಜತೆ ಮಾತನಾಡಿದ್ದಾರೆ.

| ರಾಜೇಶ್ ದುಗ್ಗುಮನೆ ಬೆಂಗಳೂರು

‘ಡಬಲ್ ಇಂಜಿನ್’ನಲ್ಲಿ ನಿಮ್ಮ ಪಾತ್ರ ಹೇಗಿದೆ?

ಈ ಚಿತ್ರದಲ್ಲಿ ನಾನು ವಿಧವೆ ಪಾತ್ರ ಮಾಡಿದ್ದೇನೆ. ಹಳ್ಳಿಯಲ್ಲಿ ವಾಸವಾಗಿದ್ದುಕೊಂಡು ಚಿಟ್​ಫಂಡ್ ನಡೆಸುತ್ತಿರುತ್ತೇನೆ. ಹಳ್ಳಿ ಜೀವನ ಸಾಕು ಎನಿಸಿದಾಗ, ಚಿಕ್ಕಣ್ಣ ಹಾಗೂ ಇನ್ನಿತರ ಸ್ನೇಹಿತರೊಂದಿಗೆ ಚಿಟ್​ಫಂಡ್ ಹಣವನ್ನು ದೋಚಿಕೊಂಡು ಸಿಟಿಗೆ ಬರುತ್ತೇವೆ. ಈ ಕೆಲಸ ಮಾಡುವುದಕ್ಕೆ ನಾವು ಏನೆಲ್ಲ ಪ್ಲಾ್ಯನ್ ಮಾಡುತ್ತೇವೆ? ನಗರಕ್ಕೆ ಬಂದಮೇಲೆ ಏನೆಲ್ಲ ಸಮಸ್ಯೆಗಳು ಎದುರಾಗು ತ್ತವೆ? ಅದರಿಂದ ಹೇಗೆ ಹೊರಬರುತ್ತೇವೆ ಎಂಬಿತ್ಯಾದಿ ವಿಚಾರಗಳ ಮೇಲೆ ಕಥೆ ಸಾಗಲಿದೆ. ಪಕ್ಕಾ ಎಂಟರ್​ಟೇನ್​ವೆುಂಟ್ ಸಿನಿಮಾ ಇದು. ಇರುವುದರಲ್ಲೇ ಖುಷಿಪಡಬೇಕು ಎಂಬ ಸಂದೇಶವನ್ನೂ ಈ ಚಿತ್ರ ನೀಡಲಿದೆ.

ಹಾಗಾದರೆ, ಪ್ರಧಾನ ಪಾತ್ರ ಎನ್ನಬಹುದು?

ಹ್ಹಹ್ಹಹ್ಹ.. ಹಾಗೇನೂ ಇಲ್ಲ. ಯಾವುದೋ ಒಂದು ಪಾತ್ರದ ಮೇಲೆ ಕೇಂದ್ರೀಕೃತವಾಗಿ ಚಿತ್ರ ಸಾಗಲು ಸಾಧ್ಯವಿಲ್ಲ. ಹಾಗಾದಾಗ, ಸಿನಿಮಾ ಯಶಸ್ಸಾಗುವುದು ಅನುಮಾನ. ಇಲ್ಲಿ ನನ್ನ ಪಾತ್ರವೇ ಮುಖ್ಯ ಎಂದು ನಾನು ಹೇಳುವುದಿಲ್ಲ. ಪ್ರತಿಯೊಬ್ಬರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಎಲ್ಲ ಪಾತ್ರಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಪ್ರತಿ ಪಾತ್ರವೂ ಮನರಂಜನೆ ನೀಡಲಿದೆ.

ಚಿಕ್ಕಣ್ಣ ಕಾಮಿಡಿಯಲ್ಲಿ ಜನಪ್ರಿಯರು. ಅವರ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಅವರ ಜತೆ ಕೆಲಸ ಮಾಡಿದ ಅನುಭವ ನಿಜಕ್ಕೂ ಉತ್ತಮವಾಗಿತ್ತು. ಕಾಮಿಡಿಯಲ್ಲಿ ನಮ್ಮ ಕಾಂಬಿನೇಷನ್ ತುಂಬ ಚೆನ್ನಾಗಿ ಮೂಡಿ ಬಂದಿದೆ. ನಾವು ಈಗಲೂ ಉತ್ತಮ ಗೆಳೆಯರು. ಚಿಕ್ಕಣ್ಣ ಮಾತ್ರವಲ್ಲ, ಇಡೀ ಚಿತ್ರತಂಡ ತುಂಬ ಉತ್ತಮವಾಗಿದೆ.

ಈಚಿತ್ರದಿಂದ ಪ್ರೇಕ್ಷಕನಿಗೆ ಏನೆಲ್ಲ ಮನರಂಜನೆ ಸಿಗಲಿದೆ?

ನಾವು ಸದಾ ಕೆಲಸದಲ್ಲಿ ಬಿಜಿ ಆಗಿರುತ್ತೇವೆ. ಪ್ರತಿ ಕ್ಷಣವೂ ಒತ್ತಡ ಅನುಭವಿಸುತ್ತೇವೆ. ಅದಕ್ಕೆ ನಗುವೊಂದೇ ಮದ್ದು. ಹಾಗಾಗಿ ಅಂಥವರಿಗೆ ಒಂದು ರಿಲೀಫ್ ಬೇಕು ಎಂದಾದರೆ ನಮ್ಮ ಚಿತ್ರ ನೋಡಬಹುದು. 2 ಗಂಟೆಗಳ ಕಾಲ ನಕ್ಕು ಮನೆಗೆ ಹೋಗಬಹುದು. ‘ಡಬಲ್ ಇಂಜಿನ್’ ನೋಡಿದ ನಂತರ ಒಂದು ರಿಲೀಫ್ ಫೀಲ್ ಆಗುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರದಲ್ಲಿ ಪಾತ್ರವರ್ಗ ತುಂಬ ಭಿನ್ನವಾಗಿದೆ. ಕಥೆಯಲ್ಲಿ ಅನೇಕ ತಿರುವುಗಳಿವೆ. ತಡೆರಹಿತ ಮನರಂಜನೆ ಗ್ಯಾರಂಟಿ.

ಟ್ರೇಲರ್​ನಲ್ಲಿ ಒಂದಷ್ಟು ತರಲೆ ಸಂಭಾಷಣೆ ಇವೆ. ಇಡೀ ಚಿತ್ರದಲ್ಲೂ ಅದೇ ರೀತಿ ಇರಲಿದೆಯೇ?

ಸಿನಿಮಾ ಆ ರೀತಿ ಇಲ್ಲ ಎಂಬ ಗ್ಯಾರಂಟಿಯನ್ನು ನಾನು ಕೊಡುತ್ತೇನೆ. ಟ್ರೇಲರ್​ನಲ್ಲಿ ಒಂದೆರಡು ತರಲೆ ಸಂಭಾಷಣೆ ಇರಬಹುದು. ಅದನ್ನು ನಾವು ಸಿನಿಮಾದಲ್ಲಿ ಅವಶ್ಯಕತೆಗೆ ತಕ್ಕಂತೆ ಬಳಸಿದ್ದೇವೆ ಅಷ್ಟೆ. ಆ ರೀತಿ ಡೈಲಾಗ್ ಡೆಲಿವರಿ ಮಾಡುವಾಗ ಕಲಾವಿದ ಅದನ್ನು ತುಂಬ ಗಂಭೀರವಾಗಿಯೇ0 ಹೇಳಿರುತ್ತಾನೆ. ಆದರೆ, ಅದು ಪ್ರೇಕ್ಷಕನಿಗೆ ಹಾಸ್ಯದ ರೀತಿಯಲ್ಲಿ ಕಂಡು ಬರುತ್ತದೆ.

ಈ ಮೊದಲಿನ ನಿಮ್ಮ ಚಿತ್ರಗಳಿಗೆ ಹೋಲಿಸಿದರೆ ಈ ಸಿನಿಮಾ ಹೇಗೆ ಭಿನ್ನ?

ನಾನು ಈ ಹಿಂದೆ ಸಾಕಷ್ಟು ಚಿತ್ರಗಳನ್ನು ಮಾಡಿದ್ದೇನೆ. ಪ್ರತಿ ಚಿತ್ರದಲ್ಲೂ ಒಂದೊಂದು ರೀತಿಯ ಪಾತ್ರ ಮಾಡುತ್ತಿದ್ದೇನೆ. ಈ ಮೊದಲು ‘ನೀರ್​ದೋಸೆ’ ಚಿತ್ರದಲ್ಲಿ ನಟಿಸಿದ್ದೆ. ಅದು ಹಾಸ್ಯಪ್ರಧಾನ ಚಿತ್ರವೇ. ಆದರೂ ಆ ಚಿತ್ರಕ್ಕೆ ಹೋಲಿಸಿದರೆ ಇಲ್ಲಿ ಇನ್ನೂ ಹೆಚ್ಚು ಕಾಮಿಡಿ ಇದೆ. ಈ ಮಾದರಿಯ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು ಎನ್ನಬಹುದು. ಚಂದ್ರಮೋಹನ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಹಾಸ್ಯಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಈ ಚಿತ್ರದಲ್ಲೂ ಅದೇ ಸಂಪ್ರದಾಯ ಮುಂದುವರಿದಿದೆ.

ದೊಡ್ಡ ತಂಡದ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಹಾಸ್ಯ ಎಂಬುದು ಯಾರೋ ಒಬ್ಬರಿಂದ ಉದ್ಭವವಾಗುವಂಥದ್ದಲ್ಲ. ಅದಕ್ಕೆ ಟೀಮ್ ವರ್ಕ್ ಬೇಕು. ನಮ್ಮ ತಂಡ ಅದನ್ನು ಸಾಧಿಸಿದೆ. ಒಂದು ಉತ್ತಮ ತಂಡದ ಜತೆಗೆ ಕೆಲಸ ಮಾಡಿದ ಖುಷಿ ನನಗಿದೆ. ಅಚ್ಯುತ್ ರಾವ್, ಸಾಧುಕೋಕಿಲ, ದತ್ತಣ್ಣ ಅವರೆಲ್ಲರೂ ನಟನೆಯಲ್ಲಿ ಪಳಗಿದವರು. ಅವರ ಜತೆ ತೆರೆಹಂಚಿಕೊಳ್ಳುವುದು ಸಂತಸದ ವಿಚಾರ. ಹಾಸ್ಯ ಪ್ರಧಾನ ಚಿತ್ರ ಎಂದಾಗ ಸೆಟ್​ನಲ್ಲಿ ಕೇಳಬೇಕೆ? ಚಿತ್ರೀಕರಣವನ್ನು ಸಂಪೂರ್ಣ ಫನ್ ಆಗಿ ಕಳೆದಿದ್ದೇವೆ. ಇಡೀ ತಂಡದ ಜತೆ ಒಳ್ಳೆಯ ಹೊಂದಾಣಿಕೆ ಇತ್ತು.

ಉಳಿದ ಚಿತ್ರಗಳ ಕೆಲಸಗಳು ಹೇಗೆ ಸಾಗಿವೆ?

ಪುನೀತ್ ರಾಜ್​ಕುಮಾರ್ ನಿರ್ವಣದ ‘ಕವಲುದಾರಿ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದೇನೆ. ಚಿಕ್ಕದಿದ್ದರೂ, ತುಂಬ ಮಹತ್ವದ ಪಾತ್ರ. ಇನ್ನು, ‘ದಂಡುಪಾಳ್ಯಂ 4’ ಚಿತ್ರದಲ್ಲೂ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ಗ್ಯಾಂಗ್ ಲೀಡರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದರ ಜತೆಗೆ ಅನೇಕ ಕಥೆಗಳನ್ನು ಕೇಳುತ್ತಿದ್ದೇನೆ. ಪರಭಾಷೆಗಳಿಗಿಂತ ಕನ್ನಡ ಚಿತ್ರಗಳನ್ನು ಹೆಚ್ಚೆಚ್ಚು ಮಾಡಬೇಕು ಎಂದು ಕೊಂಡಿದ್ದೇನೆ.

Leave a Reply

Your email address will not be published. Required fields are marked *

Back To Top