ಇಸ್ರೇಲ್ ಮಾದರಿ ಕೃಷಿಯಲ್ಲಿ ಸಾಕಾರವಾಯ್ತು ಕನಸು

Latest News

ಲಕ್ಷದೀಪೋತ್ಸವಕ್ಕೆ ಸರ್ವಾಲಂಕೃತಗೊಂಡ ಧರ್ಮಸ್ಥಳ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಐದು ದಿನಗಳ ಕಾಲ ವೈಭವೋಪೇತವಾಗಿ ನೆರವೇರುವ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸರ್ವಾಲಂಕೃತಗೊಂಡು ಶೋಭಿಸುತ್ತಿದೆ. ಮೊದಲನೇ...

ಉಪಕದನ ಅಖಾಡ ಸಿದ್ಧ; ಅಂತಿಮ ಕಣದಲ್ಲಿ 165 ಅಭ್ಯರ್ಥಿಗಳು

ಬೆಂಗಳೂರು: ಯಡಿಯೂರಪ್ಪ ಸರ್ಕಾರದ ಅಳಿವು-ಉಳಿವಿನ ಜತೆಗೆ ಅನರ್ಹ ಶಾಸಕರ ರಾಜಕೀಯ ಹಣೆಬರಹ ನಿರ್ಧರಿಸಲಿರುವ 15 ಕ್ಷೇತ್ರಗಳ ಉಪಚುನಾವಣೆ ಕದನ ನಿರ್ಣಾಯಕ ಘಟ್ಟ ತಲುಪಿದೆ. ಅಭ್ಯರ್ಥಿಗಳ ನಾಮಪತ್ರ...

ಉಳಿಯ ಕುದ್ರುವಿಗೆ ಸೇತುವೆ

ಭರತ್ ಶೆಟ್ಟಿಗಾರ್ ಮಂಗಳೂರು ಮಂಗಳೂರು ಮಹಾನಗರದಿಂದ ಕೆಲವೇ ಕಿ.ಮೀ. ದೂರದಲ್ಲಿದ್ದರೂ ಆಡಳಿತ ವ್ಯವಸ್ಥೆಗೆ ಪಾವೂರು- ಉಳಿಯ ಕುದ್ರು ಪ್ರದೇಶಕ್ಕೆ ಸೇತುವೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಪ್ರತಿ ವರ್ಷದಂತೆ...

ರಾಜ್ಯದಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿ

ಮಂಗಳೂರು: ಕಡಲು ಹಾಗೂ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ನೂತನ ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ತರಲಾಗುವುದು. ಇದರ ಕರಡು ಪ್ರತಿ ಇನ್ನೆರಡು...

ಕಾಜೂರು ಮರದ ಗರಿಯಿಂದ ಮಾಡಿದ ಬುಟ್ಟಿಗೆ ಬೇಡಿಕೆ

ಗೋಪಾಲಕೃಷ್ಣ ಪಾದೂರು ಉಡುಪಿದೇಶಾದ್ಯಂತ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಹೆಚ್ಚಾಗುತ್ತಿದ್ದಂತೆ ಬಳ್ಳಿ, ಮರದ ತೊಗಟೆ, ಗರಿಗಳಿಂದ ರಚಿಸಿದ ಬುಟ್ಟಿಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಆದಿ...

| ಮಹಾಂತೇಶ ಕುಳ್ಳೊಳ್ಳಿ

ನಮ್ಮ ದೇಶದ ರೈತರು ಇನ್ನೂ ಹಳೆಯ ವ್ಯವಸಾಯ ಪದ್ಧತಿಯಿಂದ ಹೊರಬರುತ್ತಿಲ್ಲ. ಇದರಿಂದ ಇಲ್ಲಿನ ಕೃಷಿ ಕ್ಷೇತ್ರ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಗತ್ತಿನಲ್ಲಿಯೇ ಕೃಷಿಯಲ್ಲಿ ಗಣನೀಯ ಸಾಧನೆಗೈದಿರುವ ಪುಟ್ಟ ದೇಶ ಇಸ್ರೇಲ್​ನ ಸುಧಾರಿತ ಬೇಸಾಯ ಪದ್ಧತಿಯ ಕುರಿತು ಈಗೀಗ ಚರ್ಚೆಯಾಗುತ್ತಿದೆ. ಆದರೆ, ನಮ್ಮ ರಾಜ್ಯದ ಹುಕ್ಕೇರಿ ತಾಲೂಕಿನ ರೈತ ಅಶೋಕ ಪಾಟೀಲ ಕಳೆದ 3 ವರ್ಷದಿಂದ ಸದ್ದಿಲ್ಲದೆ ಇಸ್ರೇಲ್ ಮಾದರಿ ಕೃಷಿ ಅನುಸರಿಸಿ ಸಾಧಿಸಿ ತೋರಿಸಿದ್ದಾರೆ.

ಕೈ ತುಂಬ ಸಂಬಳ ನೀಡುವ ಯಾವುದಾದರೊಂದು ಉದ್ಯೋಗ ಸಿಕ್ಕರೆ ಸಾಕು ಎಂದು ಕೇವಲ ನೌಕರಿ ಸಿಗಲು ಪೂರಕವಾಗಬಲ್ಲ ಪದವಿಗಳ ಬೆನ್ನು ಹತ್ತಿ ಶಿಕ್ಷಣ ಕಲಿಯುತ್ತಿರುವವರೇ ಇಂದು ಹೆಚ್ಚು. ಆದರೆ, ಕೃಷಿ ಪದವಿ ಪಡೆದಿದ್ದರೂ ವ್ಯವಸಾಯವನ್ನೇ ಕೈಗೊಂಡು ಪ್ರತಿ ತಿಂಗಳು ಲಕ್ಷಾಂತರ ರೂ. ಆದಾಯ ಗಳಿಕೆಯೊಂದಿಗೆ ನೂರಾರು ಜನರಿಗೆ ಉದ್ಯೋಗ ನೀಡಿ, ಕೃಷಿಯನ್ನೇ ಲಾಭದಾಯಕ ಉದ್ಯಮವನ್ನಾಗಿಸಿಕೊಂಡು ಮಾದರಿಯಾಗಿದ್ದಾರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದ ರೈತ ಡಾ. ಅಶೋಕ ಪಾಟೀಲ.

ಧಾರವಾಡ ಕೃಷಿ ವಿಶ್ವವಿದ್ಯಾಲಯವು ಪ್ರಥಮ ಬಾರಿಗೆ ಕೃಷಿ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ರೈತರೊಬ್ಬರಿಗೆ ನೀಡಿದ ಗೌರವ ಡಾಕ್ಟರೇಟ್ ಪಡೆದ ಹೆಗ್ಗಳಿಕೆಯನ್ನೂ ಇವರು ಹೊಂದಿದ್ದಾರೆ. ಇದು ಇವರ ಸಾಧನೆಗೆ ಹಿಡಿದ ಕೈಗನ್ನಡಿ. ಕೃಷಿ ಇವರ ಪೂರ್ವಜರಿಂದ ಬಂದ ಮೂಲ ಉದ್ಯೋಗ. ಆದರೆ, ಹತ್ತಾರು ಎಕರೆ ಜಮೀನು ಇದ್ದರೂ ಹಿಂದೆಲ್ಲ ಮಳೆಯ ಅನಿಶ್ಚಿತತೆಯಿಂದ ಬೆಳೆಗಳು ಕೈ ಹಿಡಿಯುತ್ತಿರಲಿಲ್ಲ. ಆಧುನಿಕ ಬೇಸಾಯ ಪದ್ಧತಿಯ ಮಾಹಿತಿ ಕೊರತೆಯಿಂದ ಸಾಂಪ್ರದಾಯಿಕ ಕೃಷಿ ವಿಧಾನವನ್ನೇ ಇವರ ಕುಟುಂಬಸ್ಥರು ಮುಂದುವರಿಸಿದ್ದರು. ಹೀಗಾಗಿ ಕೃಷಿ ನಷ್ಟದ ಕಾಯಕವಾಗಿಯೇ ಸಾಗಿತ್ತು. ಇದನ್ನು ಅರಿತ ಅಶೋಕ ಅವರು ನಷ್ಟದ ವೃತ್ತಿಯಾಗಿರುವ ಕೃಷಿಯಲ್ಲಿಯೇ ಆರ್ಥಿಕ ಅಭಿವೃದ್ಧಿ ಕಾಣಬೇಕೆಂದು ಪಣತೊಟ್ಟರು. ಕೃಷಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಆಧುನಿಕ ಬೇಸಾಯ ವಿಧಾನಗಳ ಸಮಗ್ರ ಅಧ್ಯಯನಕ್ಕಾಗಿ, ತಮ್ಮ ಕೃಷಿ ಸಾಧನೆಗೆ ಪೂರಕವಾಗಬಲ್ಲ ಶಿಕ್ಷಣ ಕಲಿಯಲು ಧಾರವಾಡದತ್ತ ಹೆಜ್ಜೆ ಹಾಕಿದರು. ಇಲ್ಲಿ ಪದವಿ ಪಡೆದ ಬಳಿಕ ನೇರವಾಗಿ ಸ್ವಗ್ರಾಮಕ್ಕೆ ತೆರಳಿ ಕೃಷಿಯಲ್ಲಿ ತೊಡಗಿ ಪ್ರಗತಿಯ ಹಾದಿಯಲ್ಲಿ ಸಾಗಿದರು.

ಯಶಸ್ಸಿನ ಪಯಣ: 35 ವರ್ಷದಿಂದ ವ್ಯವಸಾಯದಲ್ಲಿ ನಿರತರಾಗಿರುವ ಇವರು, ಹಂತಹಂತವಾಗಿ ಸುಧಾರಿತ ಬೇಸಾಯ ಕ್ರಮ ಅಳವಡಿಸಿಕೊಂಡರು. ಇದರ ಪರಿಣಾಮ ಕೆಲವೇ ವರ್ಷಗಳಲ್ಲಿ ಹತ್ತಾರು ಬೆಳೆಗಳು ಭರ್ಜರಿಯಾಗಿ ಫಸಲು ನೀಡಲು ಪ್ರಾರಂಭಿಸಿದವು. ಪ್ರತಿ ತಿಂಗಳು ಲಕ್ಷಾಂತರ ರೂ. ಲಾಭ ಬರಲಾರಂಭಿಸಿತು. ಮೊದಲು 22 ಎಕರೆಯಲ್ಲಿ ಕೃಷಿ ಕೈಗೊಂಡಿದ್ದವರು ಆರ್ಥಿಕ ಆದಾಯ ವೃದ್ಧಿಯಿಂದ ಕೃಷಿ ಕ್ಷೇತ್ರವನ್ನು ವಿಸ್ತರಿಸಿಕೊಂಡು ಈಗ 48 ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಇವರ ಕೃಷಿ ಪದ್ಧತಿ ಕಂಡು ನಿಬ್ಬೆರಗಾದ ಸುತ್ತಮುತ್ತಲಿನ ರೈತರು ಇವರಂತೆ ಕೃಷಿ ಕೈಗೊಳ್ಳಲು ಮುಂದಾಗಿದ್ದಾರೆ. ಸಹಾಯ ಬಯಸಿ ಬಂದ ರೈತರಿಗೂ ಮಾಹಿತಿ ನೀಡಿ ಅವರೂ ಆರ್ಥಿಕ ಸ್ವಾವಲಂಬಿಗಳಾಗಲು ಅಶೋಕ್ ನೆರವಾಗಿದ್ದಾರೆ. ಅಲ್ಲದೆ, ಕೃಷಿಯಲ್ಲಿ ನಿತ್ಯ ನೂರಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕಿಗೂ ಆಸರೆಯಾಗಿದ್ದಾರೆ. ರೈತರು ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳ ನೆರವಿನಿಂದ ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಒಡ್ಡು ನಿರ್ವಿುಸಿದ್ದಾರೆ. ಇದರಿಂದ ನದಿ ಹಿನ್ನೀರು ಸಂಗ್ರಹಗೊಂಡು ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿ ರೈತರು ಸಾವಿರಾರು ಎಕರೆಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗಿದೆ.

ಸಾಮಾನ್ಯ ರೈತ ಕೃಷಿ ವಿಜ್ಞಾನಿಯಾದ !: ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿ ತಟದಲ್ಲಿ ಇವರ ಜಮೀನು ಇದೆ. ನದಿಗಳ ಹಾಗೂ ಬೋರ್, ಬಾವಿ ನೀರು ಸಂಗ್ರಹಿಸಲು 50 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ವಿುಸಿದ್ದಾರೆ. ವಿದ್ಯುತ್ ಇಲ್ಲದಿದ್ದರೂ ಸೋಲಾರ್ ಪಂಪ್​ಸೆಟ್​ಗಳ ಮೂಲಕ ನೀರುಣಿಸುತ್ತಾರೆ. ಒಂದು ಎಕರೆ ಹನಿ ನೀರಾವರಿ ಪದ್ಧತಿಗೆ ಸಾಮಾನ್ಯವಾಗಿ 40-45 ಸಾವಿರ ರೂ. ಖರ್ಚು ಬರುತ್ತದೆ. ಆದರೆ ಇವರು ಪಿವಿಸಿ ಪೈಪ್​ಗಳ ಮೂಲಕ ತಮ್ಮದೇ ಆದ ವಿಶೇಷ ಡ್ರಿಪ್ ಅಳವಡಿಸಿಕೊಂಡಿದ್ದಾರೆ. ಇದಕ್ಕೆ ಕೇವಲ 12 ಸಾವಿರ ರೂ. ಖರ್ಚಾಗುತ್ತದೆ. ಸಾವಯವ ಗೊಬ್ಬರ ಘಟಕ ಸ್ಥಾಪಿಸಿದ್ದಾರೆ. ಕಬ್ಬು ಕಟಾವಿಗೆ ಕಾರ್ವಿುಕರ ಕೊರತೆ ಹಾಗೂ ಹೆಚ್ಚು ಹಣ ವೆಚ್ಚವಾಗುತ್ತಿದ್ದರಿಂದ ತಾವೇ ಕಬ್ಬು ಕಟಾವು ಯಂತ್ರ ಕಂಡು ಹಿಡಿದು ಬಳಸುವ ಮೂಲಕ ಯಶಸ್ವಿಯಾಗಿದ್ದಾರೆ. ಬೈಕ್​ನಿಂದ ರಸಗೊಬ್ಬರ ಸಿಂಪಡಣೆ ಯಂತ್ರ, ಎತ್ತುಗಳ ಮೂಲಕ ಉಳುಮೆ ಮಾಡಲು ಅಗತ್ಯವಿರುವ ಕೃಷಿ ಪರಿಕರಗಳನ್ನು ತಾವೇ ವಿನ್ಯಾಸಗೊಳಿಸಿ ತಯಾರಿಸಿದ್ದಾರೆ. ಹೀಗೆ ಹಲವು ಯಂತ್ರಗಳ ಆವಿಷ್ಕಾರ, ವಿವಿಧ ತಳಿಯ ಕಬ್ಬಿನ ಸಸಿಗಳ ತಯಾರಿಕೆ, ಅನೇಕ ಸಂಶೋಧನೆಗಳ ಮೂಲಕ ಸಾಮಾನ್ಯ ರೈತರಾಗಿದ್ದವರು ಕೃಷಿ ವಿಜ್ಞಾನಿಯಾಗಿ ಹೊರಹೊಮ್ಮಿದ್ದಾರೆ. ಇವರ ಕೃಷಿ ಯಶೋಗಾಥೆಗೆ 2012ರಲ್ಲಿ ಧಾರವಾಡ ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್, ರಾಷ್ಟ್ರಮಟ್ಟದ ಪ್ರಗತಿಶೀಲ ಕೃಷಿಕ, ಪರಮ ಶ್ರೇಷ್ಠ ಕೃಷಿ ಅನ್ವೇಷಕ, ಬಸವ ಶಾಂತಿ, ಡಾ. ಅಬ್ದುಲ್ ಕಲಾಂ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ರಾಜಸ್ಥಾನ ಸರ್ಕಾರದ ರಾಷ್ಟ್ರಮಟ್ಟದ ರೈತ ವಿಜ್ಞಾನಿ ಪ್ರಶಸ್ತಿ ದೊರೆತಿವೆ.

ಥ್ರೀ ಟೈರ್ ರಿಲೆ ಇಂಟರ್​ಕ್ರಾಪಿಂಗ್ ಸಿಸ್ಟ್ಂ: ಐದು ವರ್ಷಗಳ ಹಿಂದೆ ಸರ್ಕಾರದಿಂದ ಚೀನಾ ಪ್ರವಾಸ ಹೋಗಿದ್ದ ಅಶೋಕ್, ಅಲ್ಲಿನ ರೈತರು ಅಳವಡಿಸಿಕೊಂಡಿದ್ದ ಸುಧಾರಿತ ಕೃಷಿ ಪದ್ಧತಿಗೆ ಮನಸೋತು ತಮ್ಮ ಕೃಷಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಚಿಂತನೆ ಹೆಚ್ಚಿಸಿಕೊಂಡರು. 3 ವರ್ಷದಿಂದ ಇಸ್ರೇಲ್ ಮಾದರಿ ಅನುಸರಿಸುತ್ತಿದ್ದಾರೆ. ಇಸ್ರೇಲ್ ದೇಶ ಕಬ್ಬು ಬೆಳೆಯಲ್ಲಿ ವಾರ್ಷಿಕ ಎರಡು ಮಿಶ್ರ ಬೆಳೆ ತೆಗೆಯುತ್ತಿದೆ. ಆದರೆ, ಇವರು ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಆದ ಥ್ರೀ ಟೈರ್ ರಿಲೆ ಇಂಟರ್​ಕ್ರಾಪಿಂಗ್ ಸಿಸ್ಟ್ಂ ಅಳವಡಿಸಿಕೊಂಡು ವಾರ್ಷಿಕ ಕಬ್ಬು ಬೆಳೆಯಲ್ಲಿ ಮೂರು ಮಿಶ್ರಬೆಳೆ ಬೆಳೆಯಲು ಪ್ರಾರಂಭಿಸಿ ಯಶ ಕಂಡಿದ್ದಾರೆ.

ಒಂದು ಎಕರೆಗೆ 130 ಟನ್!: ಒಂದು ಎಕರೆಯಲ್ಲಿ ಸಾಮಾನ್ಯವಾಗಿ 35-45 ಟನ್ ಕಬ್ಬು ಬರುತ್ತದೆ. ಆದರೆ, ಇವರು ಥ್ರೀ ಟೈರ್ ರಿಲೆ ಇಂಟರ್​ಕ್ರಾಪಿಂಗ್ ಸಿಸ್ಟ್ಂ ಕೃಷಿ ಅಳವಡಿಸಿಕೊಂಡು 25 ಎಕರೆ ಕಬ್ಬು ಬೆಳೆದಿದ್ದು, ಒಂದು ಎಕರೆಗೆ 100-130 ಟನ್​ವರೆಗೂ ಇಳುವರಿ ನೀಡುತ್ತಿದೆ. ಎಕರೆ ಕಬ್ಬಿನಿಂದ ಸರಾಸರಿ 2.5 ಲಕ್ಷ ರೂ.ವರೆಗೆ ಆದಾಯ ದೊರೆಯುತ್ತಿದೆ. ಬೆಳೆ ಖರ್ಚು 50 ಸಾವಿರ ರೂ. ತೆಗೆದರೂ ಕೇವಲ ಒಂದು ಎಕರೆಗೆ 2 ಲಕ್ಷ ರೂ.ನಷ್ಟು ಲಾಭವಾಗುತ್ತಿದೆ. ಅಲ್ಲದೆ, ಇದರಲ್ಲಿ ಮಿಶ್ರಬೆಳೆಯಾಗಿ ಮುಂಗಾರು ಹಂಗಾಮಿನ ಶೇಂಗಾ, ಉದ್ದು, ಅವರೆ, ಹೆಸರು, ಅಲಸಂದಿ, ಸೋಯಾಬಿನ್ ಬೆಳೆಯುತ್ತಾರೆ. ಹಿಂಗಾರು ಹಂಗಾಮಿನಲ್ಲಿ ಅರಿಶಿಣ, ಗೋಧಿ, ಭತ್ತ, ಕಡಲೆ, ಮೆಕ್ಕೆಜೋಳ ಬೆಳೆಯುತ್ತಾರೆ. ಬದನೆ, ಹೀರೆಕಾಯಿ, ಬೆಂಡೆ, ಬವಚಿ, ಮೆಣಸು, ಕೊತ್ತಂಬರಿ, ಈರುಳ್ಳಿ, ಎಲೆಕೋಸು, ಹೂಕೋಸು, ಕ್ಯಾಪ್ಸಿಕಂ ಹಾಗೂ ವಿವಿಧ ಸೊಪ್ಪು ಬೆಳೆಯುತ್ತಾರೆ. ಕಬ್ಬಿನ ಆದಾಯದೊಂದಿಗೆ ಮಿಶ್ರ ಬೆಳೆಗಳಿಂದಲೂ ಒಂದು ಎಕರೆಗೆ ಪ್ರತಿವರ್ಷ 70 ಸಾವಿರ ರೂ.ಗೂ ಅಧಿಕ ಲಾಭ ಪಡೆಯುತ್ತಿದ್ದಾರೆ.

ಕಬ್ಬಿನ ಸಸಿ ತಯಾರಿಕೆ: ಬೆಳಗಾವಿ ಜಿಲ್ಲೆ ಕಬ್ಬು ಬೆಳೆಗೆ ಪ್ರಸಿದ್ಧಿ ಗಳಿಸಿದೆ. ಆದರೆ, ವೈಜ್ಞಾನಿಕ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳುತ್ತಿಲ್ಲ. ಇದರಿಂದ ಕಬ್ಬು ಕೃಷಿ ಅಷ್ಟೇನೂ ಲಾಭದಾಯಕವಾಗಿಲ್ಲ. ಆದರೆ, ಇವರು ಕಬ್ಬು ಹಾಗೂ ಇನ್ನಿತರ ಬೆಳೆಗಳನ್ನು ವ್ಯವಸ್ಥಿತವಾಗಿ ಬೆಳೆಯುತ್ತ, ಸುಸ್ಥಿರ ಕೃಷಿ ಕೈಗೊಂಡಿದ್ದಾರೆ. ಕಬ್ಬಿನ ಸಸಿಗಳನ್ನು ತಾವೇ ತಯಾರಿಸಿ ಬೆಳೆಯುತ್ತಾರೆ. ಕಬ್ಬು ಬೆಳೆಯಲು ಹಳೇ ವಿಧಾನದಲ್ಲಿ ಒಂದು ಎಕರೆಗೆ 4 ಟನ್ ಕಬ್ಬು ಬೀಜಕ್ಕೆ ಬಳಕೆಯಾಗುತ್ತದೆ. ಆದರೆ, ಇವರು ಒಂದೇ ಟನ್ ಕಬ್ಬಿನ ಸಸಿಗಳನ್ನು ಬೀಜಕ್ಕೆ ಬಳಸುತ್ತಾರೆ. ಇದರಿಂದ ಬೆಳೆಯಲು ವೆಚ್ಚ ಕಡಿಮೆಯಾಗಿ ಲಾಭ ಹೆಚ್ಚು ದೊರೆಯುತ್ತಿದೆ. ಕಬ್ಬಿನ ಸಸಿಗಳನ್ನು ಬೇರೆ ರೈತರಿಗೂ ಯೋಗ್ಯ ದರದಲ್ಲಿ ಮಾರುತ್ತಾರೆ. ಕಬ್ಬನ್ನು ವಿಶೇಷವಾಗಿ ಬೆಳೆದಿದ್ದು, ಕಬ್ಬಿನಿಂದ ಕಬ್ಬಿಗೆ ಎರಡು ಅಡಿ ಹಾಗೂ ಸಾಲಿನಿಂದ ಸಾಲಿಗೆ 10 ಅಡಿ ಅಂತರವಿದೆ. ಇದರಿಂದ ಬೆಳೆಗೆ ಪೂರಕ ಗಾಳಿ ದೊರೆಯುವುದರಿಂದ ಕಬ್ಬು ಹೆಚ್ಚು ದಪ್ಪ ಹಾಗೂ ಉದ್ದವಾಗಿ ಬೆಳೆಯುತ್ತದೆ. ಅಲ್ಲದೆ, ಮಿಶ್ರಬೆಳೆ ಬೆಳೆಯಲು ಸಾಧ್ಯವಾಗಿದೆ. ಈ ಬೆಳೆಯನ್ನು ವೀಕ್ಷಿಸಲು ಬೇರೆ ಜಿಲ್ಲೆಗಳಿಂದಲೂ ರೈತರು ಬರುತ್ತಿದ್ದಾರೆ.

ಜಮೀನಿನ ಸಮರ್ಪಕ ಬಳಕೆ: ಜಮೀನಿನ ಸಮರ್ಪಕ ಪ್ರಯೋಜನ ಪಡೆಯುವುದನ್ನು ಇವರನ್ನು ನೋಡಿ ಕಲಿತುಕೊಳ್ಳಬೇಕು. ಜಮೀನಿಗೆ ಹೋಗುವ ದಾರಿಗೆ ಕಮಾನು ಆಕಾರದಲ್ಲಿ ಕಬ್ಬಿಣದಿಂದ ಮೇಲ್ಛಾವಣಿ ನಿರ್ವಿುಸಿದ್ದು, ಇದರ ಮೇಲೆ ತೊಂಡೆಕಾಯಿ ಬೆಳೆದಿದ್ದಾರೆ. ಹಚ್ಚ ಹಸಿರಿನ ಬಳ್ಳಿ ಕಮಾನಿನ ಮೇಲೆ ಸುಂದರವಾಗಿ ಹರಡಿ ಇವರ ತೋಟ ವೀಕ್ಷಿಸಲು ಬರುವ ಅತಿಥಿಗಳನ್ನು ಸ್ವಾಗತಿಸುವಂತಿದೆ. ತೊಂಡೆಕಾಯಿಯನ್ನು ವಾರಕ್ಕೊಮ್ಮೆ ಕಟಾವು ಮಾಡಿ ಮಾರುತ್ತಾರೆ. ಇದರಿಂದ ಪ್ರತಿ ವಾರ 5 ಸಾವಿರ ರೂ. ಆದಾಯ ದೊರೆಯುತ್ತಿದೆ. ತೊಂಡೆಕಾಯಿ ಆದಾಯವು ಕೃಷಿ ಕೂಲಿ ಕಾರ್ವಿುಕರ ಖರ್ಚು ವೆಚ್ಚವನ್ನು ನೀಗಿಸಿದೆ. ಅಲ್ಲದೆ, ದಾರಿಯ ಎರಡೂ ಬದಿಗೆ ಚಿಕ್ಕು, ಮಾವು, ಸೀತಾಫಲ, ಪೇರಲ, ತೆಂಗು, ಪಪ್ಪಾಯಿ, ಲಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಇವು ನೋಡುಗರನ್ನು ನಿಬ್ಬೆರಗಾಗಿಸುತ್ತಿವೆ. ಇವರ ಕೃಷಿ ಕಾರ್ಯಕ್ಕೆ ಅಣ್ಣ ಲಿಂಗನಗೌಡ ಪಾಟೀಲ, ಪತ್ನಿ ಸುನೀತಾ ಪಾಟೀಲ ಸಾಥ್ ನೀಡಿದ್ದಾರೆ.

ಸಾವಯವ ಗೊಬ್ಬರ ಘಟಕ

ಭೂಮಿಯ ಫಲವತ್ತತೆ ಕಾಪಾಡಿ ಉತ್ತಮ ಬೆಳೆ ಬೆಳೆಯಲು ಅನುಕೂಲವಾಗುವಂತೆ ಸಂಪೂರ್ಣ ಸಾವಯವ ಗೊಬ್ಬರ ತಯಾರಿಸಲು ಘಟಕವನ್ನು ಸ್ಥಾಪಿಸಿದ್ದಾರೆ. ಜಾನುವಾರುಗಳ ಸಗಣಿ, ಗಂಜಲು, ಕೃಷಿ ತ್ಯಾಜ್ಯ, ಜಮೀನಿನಲ್ಲಿನ ಕಳೆ ಹಾಗೂ ಗಿಡ-ಮರಗಳ ನಿರುಪಯುಕ್ತ ತ್ಯಾಜ್ಯದಿಂದ ಪೋಷಕಾಂಶಯುಕ್ತ ಸಾವಯವ ಗೊಬ್ಬರ ತಯಾರಿಸುತ್ತಾರೆ. ಬೆಳೆಗಳ ರೋಗ ನಿಯಂತ್ರಣಕ್ಕೂ ಸಾವಯವ ವಿಧಾನವನ್ನೇ ಅನುಸರಿಸುತ್ತಾರೆ.

ಹೈಟೆಕ್ ಕೃಷಿಗೆ ಸರ್ಕಾರದ ನೆರವು ಅಗತ್ಯ

ಪ್ರತಿಯೊಬ್ಬ ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು. ಇಂದು ಭೂಮಿಗೆ ಸಂಪೂರ್ಣ ಸಾವಯವ ಗೊಬ್ಬರ ಬಳಸುವ ಅಗತ್ಯವಿದೆ. ರೈತರ ಬದುಕನ್ನು ಶಾಶ್ವತವಾಗಿ ಸುಸ್ಥಿರಗೊಳಿಸುವ ಕಾರ್ಯ ಸರ್ಕಾರಗಳಿಂದ ಆಗಬೇಕಿದೆ. ರಾಜ್ಯದ ಪ್ರತಿ ತಾಲೂಕಿನಿಂದ ಒಬ್ಬ ರೈತರನ್ನು ಇಸ್ರೇಲ್​ಗೆ ಕೃಷಿ ಅಧ್ಯಯನಕ್ಕೆ ಕಳುಹಿಸಬೇಕು. ಬಳಿಕ ಅವರು ಆ ಮಾದರಿ ಕೃಷಿ ಅಳವಡಿಸಿಕೊಂಡು ತಮ್ಮ ತಾಲೂಕಿನ ಇತರ ರೈತರಿಗೆ ಮಾರ್ಗದರ್ಶನ ನೀಡಬೇಕು. ವೈಜ್ಞಾನಿಕ ಕೃಷಿ ಪದ್ಧತಿಗೆ ಅಪಾರ ಹಣದ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರ ಇದಕ್ಕೆ ಅಗತ್ಯ ಹಣಕಾಸಿನ ನೆರವು ನೀಡಿದರೆ ಮಾತ್ರ ಸಾಧ್ಯವಾಗಲಿದೆ ಎನ್ನುತ್ತಾರೆ ರೈತ ಅಶೋಕ ಪಾಟೀಲ. ಸಂಪರ್ಕಕ್ಕೆ ಮೊ. 9880118922.

ಇಸ್ರೇಲ್ ಮಾದರಿಯೊಂದಿಗೆ 25 ಎಕರೆಯಲ್ಲಿ ನನ್ನದೇ ಆದ ಕೃಷಿ ಪದ್ಧತಿ ಅನುಸರಿಸಿ ಕಬ್ಬಿನ ಅಧಿಕ ಇಳುವರಿ ಪಡೆದಿದ್ದೇನೆ. ಅದರಲ್ಲಿ ವಾರ್ಷಿಕ ಮೂರು ಅವಧಿಯಲ್ಲಿ ಮಿಶ್ರಬೆಳೆ ಬೆಳೆಯುತ್ತಿದ್ದೇನೆ. ಕಬ್ಬು ಕಟಾವು ಯಂತ್ರ ಸಂಶೋಧಿಸಿ ಬಳಸುತ್ತಿದ್ದು, ಕಟಾವಿನ ವೆಚ್ಚ ಕಡಿಮೆಯಾಗಿದೆ.

ಡಾ. ಅಶೋಕ ಪಾಟೀಲ ಹುಕ್ಕೇರಿ ತಾಲೂಕಿನ ಬೆಣಿವಾಡ ರೈತ

(ಪ್ರತಿಕ್ರಿಯಿಸಿ: [email protected])

- Advertisement -

Stay connected

278,653FansLike
574FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...