22.5 C
Bengaluru
Thursday, January 23, 2020

ಅವಳ ಸಾಂಗತ್ಯ…

Latest News

ನಾಲ್ಕು ಜಿಲ್ಲೆಗಳಿಗೆ ವೈದ್ಯಕೀಯ ಕಾಲೇಜು ಮಂಜೂರು

ಮೈಸೂರು: ವೈದ್ಯಕೀಯ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ...

ಶನಿ ಸಂಚಾರ ಯಾರಿಗೆ ವರ, ಯಾರಿಗೆ ಗ್ರಹಚಾರ

ಶುಕ್ರವಾರ 33 ವರ್ಷದ ನಂತರ ಶನಿ ತನ್ನ ಮನೆಗೆ ಬರುತ್ತಾನೆ. ಒಂದು ಮನೆಯಿಂದ ಮತ್ತೊಂದು ಮನೆಗೆ ದಾಟಲು 2 ವರ್ಷ 8 ತಿಂಗಳು...

ಕೌಟುಂಬಿಕ ಕಲಹಕ್ಕೆ ನಲುಗಿದ ತಾಯಿ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ

ಚಿಕ್ಕೋಡಿ: ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದಲ್ಲಿ...

ಆಸ್ಪತ್ರೆ ಶುಚಿತ್ವಕ್ಕೆ ಮದ್ದರೆದ ಸಚಿವರ ವಾಸ್ತವ್ಯ

ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ಅವರು ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಇಣುಕಿದೆ. ಮೈಸೂರಿನಲ್ಲಿದ್ದ ಸಚಿವರು ರಾತ್ರಿ 11-30ರ...

ಹಾಫ್ ಬಾಯಿಲ್ಡ್ ರೆಡಿ; ಬ್ಯಾಚಲರ್​ ಬಾಯ್ಸ್​ ಕಾಮಿಡಿ ಸಿನಿಮಾ

‘ಹಾಫ್ ಬಾಯಿಲ್ಡ್’ ರೆಡಿಯಾಗಿದೆ. ಹಾಗಂತ ಇದು ಹಾಫ್ ಬಾಯಿಲ್ಡ್ ಮೊಟ್ಟೆ ಅಲ್ಲ, ‘ನಾವೆಲ್ರೂ ಹಾಫ್ ಬಾಯಿಲ್ಡ್’ ಎಂಬ ಚಿತ್ರ. ಹೀಗೊಂದು ವಿಭಿನ್ನ ಶೀರ್ಷಿಕೆ ಇಟ್ಟುಕೊಂಡು ಕನ್ನಡದಲ್ಲಿ...

| ಅರ್ಚನಾ ಎಚ್.

ನನ್ನೊಳಗೆ ಅದಮ್ಯ ಚೈತನ್ಯದ ಚಿಲುಮೆ ಚಿಮ್ಮಿತು. ಬೆಳಗ್ಗಿನಿಂದ ಸಂಜೆಯವರೆಗೂ ಪೆನ್ನು ಪೇಪರ್ ಹಿಡಿದು ಕೂತರೂ ಬರದಿದ್ದ ಸಾಲುಗಳು ನಿರಾಯಾಸವಾಗಿ ಪುಟದ ಮೇಲೆ ಮುತ್ತಿಡುತ್ತಾ ಹೊರಟಿದ್ದವು… ಸರಿಸುಮಾರು 2 ಗಂಟೆ ಇದ್ದಿರಬಹುದೇನೋ… ನೀರವ ಮೌನದ ಈ ಇರುಳಲ್ಲಿ ನನ್ನ ಕವಿತೆಗಳ ಮೋಹಕ ನರ್ತನ… ಬೌವೌ ಬೌವೌ… ಬೊಬ್ಬಿಡುವ ಶ್ವಾನಗಳು… ಕೀಟಗಳ ವಿಚಿತ್ರ ಕೂಗು… ಪಾದದಡಿಗೆ ತರಗೆಲೆಗಳು ಪುಡಿ ಪುಡಿಯಾಗಿ ಯಾರೋ ನನ್ನತ್ತ ಧಾವಿಸುತ್ತಿದ್ದಾರೆಯೇನೋ ಎನಿಸಿ ಅತ್ತಿತ್ತ ನೋಡಿದೆ… ಭ್ರಮೆಯೇ? ಕಣ್ಣ ತುಂಬಾ ಅವಳ ಬೆಳದಿಂಗಳ ಹೊಳಪನ್ನೇ ತುಂಬಿಕೊಂಡೆ… ಅವಳ ಸಾಂಗತ್ಯ ಹಿತವೆನಿಸಿತು… ನಾಲ್ಕಾರು ಕವನ ಅದರಷ್ಟಕ್ಕದೇ ಪುಟದ ಮೇಲೆ ಗೀಚಿ ಲೇಖನಿಯ ಇಂಕು ಸವೆಯಿತು…

***

ರೀ! ದಿನಾ ರಾತ್ರಿ ಹೋಗಿ ಬರೋದಾದ್ರೂ ನೀವು ಎಲ್ಲಿಗೆ? ಹೇಳ್ರೀ ಎಲ್ಲಿಗ್ರೀ ಹೋಗಿದ್ರಿ..? ಗುಡುಗಿದ್ಲು…ಒಳನಡೆದೆ… ಬಾಗಿಲ ಬಳಿಯೇ ಕುರ್ಚಿ ದಿಂಬು ಕಾಣಿಸಿತು… ಇವಳು ನಾನು ಬರೋದನ್ನೇ ಕಾಯ್ತಾ ಇದ್ಲು ಅನ್ಸುತ್ತೆ…

ಪೆನ್ನು ಪುಸ್ತಕ ಜತೆಗೀ ಜೋಳಿಗೆ… ‘ನಿಮ್ಮ ಕಥೆ ಕವನಕ್ಕಷ್ಟು ಬೆಂಕಿ ಬಿತ್ತು… ಸರಿ ಹೊತ್ನಲ್ಲಿ ಸಿರಿ ಬಂತು ಅಂತಾರಲ್ಲ ಹಾಗಾಯ್ತು… ನಾನು ಎರಡು ತಿಂಗಳಿನಿಂದ ನೋಡ್ತಾನೇ ಇದೀನಿ, ಕತ್ಲಲ್ಲಿ ಏನ್ರೀ ಮಾಡ್ಲಿಕ್ಕೆ ಹೋಗ್ತೀರಾ? ಅದ್ಯಾವಳು ಸ್ಪೂರ್ತಿ, ಈ ನಿಮ್ಮ ಹಾಳು ಕವನಗಳಿಗೆ? ಮನೆ ಬಾಗ್ಲು ಹಾರೊಡೆದು ಹೋಗಿದೀರಲ್ಲ, ಮನೇಲಿ ವಯಸ್ಸಿಗೆ ಬಂದಿರೋ ಹೆಣ್ಣುಮಗ್ಳಿದಾಳೆ ಅನ್ನೋ ಪರಿಜ್ಞಾನನಾದ್ರೂ ಬೇಡ್ವಾ ನಿಮ್ಗೆ?’

ಅವಳು ಈ ಪರಿ ಬೈದಾಗ್ಲೇ ಅರಿವಿಗೆ ಬಂದಿದ್ದು ನಾನು ಈ ದಿನವೂ ಆ ದಾರಿ ಸವೆಸಿ ಬಂದೆನೆಂದು… ಅವಳೊಡನೆ ಮರುಮಾತಾಡದೆ ಒಳನಡೆದೆ… ಮಗಳ ಕೋಣೆಯ ಬಾಗಿಲು ಹಾಕಿತ್ತು… ಸದ್ಯ ಇಂದೂ ಮಗಳಿಗೆ ತಿಳೀಲಿಲ್ಲ.. ಈಕೆಯೂ ಅವಳಿಗೇನನ್ನೂ ಹೇಳಿಲ್ಲ… ಒಂದು ವೇಳೆ ಗೊತ್ತಾದರೆ? ಅಪ್ಪನ ಮೇಲಿನ ಇಷ್ಟು ವರ್ಷದ ಪ್ರೀತಿ, ನಂಬಿಕೆ ಗಾಳಿಗೋಪುರವಾಗಿ ಬಿಡುತ್ತಿತ್ತೇನೋ? ಕಿಂಚಿತ್ ಗೌರವನೂ ಸಿಗದೇ ಹೋಗಬಹುದು… ಸದ್ಯ! ನಿಟ್ಟುಸಿರುಬಿಟ್ಟೆ. ಕಪಾಟಿನಲ್ಲಿ ಜೋಳಿಗೆಯಿಟ್ಟು ಕೈಕಾಲು ತೊಳೆದು ರೂಮಿನತ್ತ ನಡೆದೆ.

ಜೀನ್ಸ್ ಪ್ಯಾಂಟ್, ಗ್ರೀನ್ ಟೀ ಶರ್ಟನ್ನು ಬಾಗಿಲ ಕೊನೆಗೆ ಸಿಕ್ಕಿಸಿ ಪಂಚೆಯುಡುವುದನ್ನು ಈಕೆ ಕಣ್ಣು ಕೆಂಪು ಮಾಡಿಕೊಂಡು ನೋಡುತ್ತಿದ್ದಳು. ನಾನು ಈ ಜೀನ್ಸ್ ಪ್ಯಾಂಟ್, ಟೀ ಶರ್ಟ್ 60 ವರ್ಷಗಳಲ್ಲಿ ಒಮ್ಮೆಯೂ ತೊಟ್ಟವನೇ ಅಲ್ಲ. ಅನುಮಾನದ ವಾಸನೆ ಆಕೆಯ ಮೂಗಿಗೆ ಸ್ಪಷ್ಟವಾಗಿ ಬಡಿದಿತ್ತು. ಸಂಸಾರವೇ ಇಷ್ಟು. ನಂಬಿಕೆಯೇ ಅದರ ಆಧಾರಸ್ತಂಭ. ಒಮ್ಮೆ ಕುಸಿದರೆ ಮುಗೀತು. ಹೆಜ್ಜೆ ಹೆಜ್ಜೆಗೂ ಅನುಮಾನ, ನೋವು, ತಾತ್ಸಾರ ಅವಮಾನ ಹೀಗೆ ನೂರಾರು ಎಡೆಬಿಡದೆ ಜೀವನವನ್ನು ಅಧೋಗತಿಗಿಳಿಸಿ ಬಿಡುತ್ವೆ. ಆದರೆ ನಾನು ಮಾತಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಹಾಗಂತ ಎಷ್ಟು ದಿನ ಈ ಕಣ್ಣಾಮುಚ್ಚಾಲೆಯಾಟ..? ಉಫ್… ಹಾಸಿಗೆಗೆ ಒರಗಿದೆ.

***

ಇವಳು ರೂಮಿನ ಬಾಗಿಲು ಹಾಕಿ ಗಳಗಳನೆ ಅಳುತ್ತಾ ನೆಲದ ಮೇಲೆ ಉರುಳಿದ್ಲು.

ನಾನು ಸ್ವಲ್ಪ ಹೊತ್ತಿನ ನಂತರ ಬಾ ಮೇಲೆ! ಅಂದೆ.

ಈ ಬಾರಿ ಅವಳ ಕಣ್ಣೀರು, ಕಟ್ಟೆ ಒಡೆದ ಕೆರೆಯ ನೀರಂತೆ ಹರಿಯುತ್ತಿತ್ತು. ಸೆರಗ ತುದೀಲಿ ಕಣ್ಣೀರು ಒರೆಸ್ಕೊಂಡು, ಮೂಗನ್ನೂ ತೀಡಿ ನನ್ನತ್ತ ತಿರುಗಿ, ‘ರೀ! ಹೇಳ್ರೀ ಎಲ್ರೀ ಹೋಗಿದ್ರೀ? ಈ ವಯಸ್ಸಿನಲ್ಲಿ ಯಾಕ್ ರೀ ಬೇಕು ಇವೆಲ್ಲಾ? ನಾನೇನು ಕಮ್ಮಿ ಮಾಡಿದೀನಿ ಹೇಳಿ ನಿಮಗೆ?’

ನಿಜ… 25 ವರ್ಷದ ಸುಂದರ ಸಂಸಾರ. ಮದುವೆ, ಸಂಸಾರ ಯಾವುದರ ಗೋಜು ಬೇಡೆಂದು 35 ವರುಷ ಬ್ರಹ್ಮಚರ್ಯುಯಲ್ಲಿದ್ದ ನನ್ನ ವ್ರತವನ್ನು ಭಂಗಗೊಳಿಸಿದ ಮದನಾರಿ ಇವಳು. ಹೆಸರು ಸೌಂದರ್ಯ. ಹೆಸರಿಗೆ ತಕ್ಕನಾಗಿ ರೂಪಸಿ. ಇವಳ ತಂದೆ ಪೊಲೀಸ್ ಕಮಿಷನರ್ ಆಗಿದ್ರು. ಅವರ ಹದ್ದಿನ ಕಣ್ಣಿನ ಸರಹದ್ದು ಮೀರಿ ನಮ್ಮ ಪ್ರೇಮ ಪ್ರಕರಣ ಬಹಳ ಕಾಲ ನಿಲ್ಲಲಿಲ್ಲ. ನಾನು ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದೆ. ಇಬ್ಬರಿಗೂ ಹದಿನೈದು ವರ್ಷಗಳ ಅಂತರವಿದ್ದದ್ದೇನೋ ನಿಜ. ಆದರೆ ಅವಳ ನಡೆ-ನುಡಿ ವರ್ತನೆಗಳು ಪ್ರಬುದ್ಧವಾಗಿದ್ದವು. ದುಂಡನೆಯ ಮುಖ, ಸಿಂಹಕಟಿ, ನೀಳವಾದ ನಾಸಿಕ, ಹೊಳೆಯುವ ಆ ಕಣ್ಣು ಎಷ್ಟು ಹುಡುಗರ ನಿದ್ದೆ ಕೆಡಿಸಿತ್ತೋ!? ಕೊನೆಗದರ ರಾಯಭಾರಿ ನಾನಾಗಿದ್ದೆ. ಅವಳು ಅಳುವಾಗಲೂ ಸುಂದರವಾಗಿ ಕಾಣುತ್ತಿದ್ದಾಳೆ. ಈಗಲೂ ಅದೇ ಮೈಮಾಟ, ನನಗೆ 60 ವರುಷಗಳಾದರೂ ಈಕೆಯ ಸೌಂದರ್ಯ ನನ್ನನ್ನು ತರುಣನನ್ನಾಗಿಸುತ್ತೆ..

‘ಮಾತಾಡ್ರೀ…!’ ಅಬ್ಬರಿಸಿದಳು.

ಅಯ್ಯೋ! ಈಕೆ ತಪ್ಪು ತಿಳಿದಿದ್ದಾಳೆ.

ನನ್ನ ಈ ವರ್ತನೆಗಳು ನನಗೇ ವಿಚಿತ್ರ, ಪ್ರಶ್ನಾರ್ಥಕವಾಗಿರುವಾಗ ಈಕೆಗೂ ತಿಳಿಸಿ ಭಯಪಡಿಸುವುದೆಂತು?

ನಾನೂ ಮಂಚದಿಂದಿಳಿದು ನೆಲದ ಮೇಲುರುಳಿದೆ. ದೂರ ಸರಿಯುತ್ತಿದ್ದ ಅವಳನ್ನು ಬಲವಂತವಾಗಿ ಬರಸೆಳೆದು ನನ್ನ ತೋಳ ತೆಕ್ಕೆಗಳಲ್ಲಿ ಬಳಸಿದೆ. ಕೊಸರಾಡುತ್ತಿದ್ದ ಅವಳ ತಲೆ ನೇವರಿಸುತ್ತಾ, ಹಣೆಮೇಲೆ ಮುತ್ತಿಕ್ಕಿ ಸಂತೈಸುತ್ತಾ..

‘ಚಿನ್ನಾ! ಯಾಕೆ ಹೀಗೆ ಮಾತಾಡ್ತಿದ್ಯಾ? ನಿನ್ನಾಣೆಗೂ ನಾನು ಯಾವ ತಪ್ಪನ್ನೂ ಮಾಡಿಲ್ಲ. ಮಾಡೋದೂ ಇಲ್ಲ.. ನಂಬು ನನ್ನ.. ಬೇರೆನನ್ನೂ ಕೇಳ್ಬೇಡ… ಇಷ್ಟೇ ನನ್ನಿಂದ ಸದ್ಯಕ್ಕೆ ಹೇಳಲು ಸಾಧ್ಯ’ ಎಂದು ಎದೆಗಪ್ಪಿ ಮಲಗಿದೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳು ಮಗುವಂತೆ ಅರೆಘಳಿಗೆಯಲ್ಲಿ ನಿದ್ರೆಗೆ ಜಾರಿದ್ದಳು.

ಐವರಿ ಬಣ್ಣದ ಗ್ರಾನೈಟ್ ತಣ್ಣಗೆ ಕೊರೆದಂತಾಗಿ ಎದ್ದೆ. ಗಂಟೆ ಆಗಲೇ ಒಂಭತ್ತು ಬಾರಿಸಿ ಹತ್ತರೆಡೆಗೆ ಓಡಿತ್ತು. ಮುಖ ತೊಳೆದು ಅಡುಗೆ ಮನೆಗೆ ಬಂದೆ. ನನ್ನವಳು ಮುಖ ಗಂಟಿಕ್ಕಿ, ‘ತಣ್ಣಗಾಗಿದೆ ಟೀ ಬೇಕಿದ್ರೆ ಬಿಸಿ ಮಾಡ್ಕೊಳ್ಳಿ’ ಅಂತ ಖಾರವಾಗಿ ನುಡಿದು ಸ್ಲಾಬ್ ಮೇಲೆ ಪಾತ್ರೆ ಕುಟ್ಟಿ ಹೊರನಡೆದಳು. ಬೆಳಗ್ಗೆ ಒಬ್ಬಳೇ ಟೀ ಕುಡಿತಿದ್ದಾಳೆ ಇತ್ತೀಚೆಗೆ. ನಾನು ದಿನಾಲು ತಡವಾಗಿ ಏಳುತ್ತಿದ್ದೇನೆ. ಬಿಸಿಗಿಟ್ಟ ಟೀ ಮರಳ ಹತ್ತಿತ್ತು. ಲೋಟಕ್ಕೆ ಸುರಿದು ಟೀ ಹೀರುವಾಗ ಯಾಕೋ ಒಬ್ಬಂಟಿ ಎನಿಸಿತು. ಬೆಳಗಿನ ಟೀ ಜತೆ ಸಲ್ಲಾಪದೆರಡು ಮಾತುಗಳ ಬಿಸ್ಕೆಟ್ ನೆಂಚಿಕೊಳ್ಳೋದು, ಹಂಚಿಕೊಳ್ಳೋದು ಇಪತೆôದು ವರ್ಷಗಳಿಂದ ರೂಢಿಯಾಗಿಬಿಟ್ಟಿತ್ತು. ವೃತ್ತಿಯಿಂದ ನಿವೃತ್ತಿ ಹೊಂದಿ ನಾಲ್ಕು ತಿಂಗಳುಗಳುರುಳಿವೆ. ಆದರೆ ಈಗೆರಡು ತಿಂಗಳಿಂದ..? ಹಾಂ… ಮೂಕನಾದೆ. ಸ್ವಲ್ಪ ಹೊತ್ತಿನ ನಂತರ ಬಿಸಿ ಉಪ್ಪಿಟ್ಟು ತಟ್ಟೆಯಲ್ಲಿ ಹಾಕಿಕೊಂಡು ಮಗಳ ರೂಮ್ತ್ತ ಧಾವಿಸಿದೆ. ಮಗಳು ರೂಮ್ಲ್ಲಿರಲಿಲ್ಲ. ಕಾಲೇಜ್ಗೆ ಹೋಗಿದ್ದಳು. ಅಲ್ಲೇ ಕೂತು ಒಬ್ಬನೇ ತಿಂದೆ. ಯಾಕೋ ಇತ್ತೀಚೆಗೆ ಏಕಾಂತವೇ ಆಪ್ಯಾಯಮಾನವೆನಿಸುತ್ತಿತ್ತು.

ಈ ದಿನ ತೀರ್ವನಿಸಿದ್ದೆ. ಯಾವ ಸುಡುಗಾಡು ಬೇಡ. ಕವನ-ಕಥೆ ಯಾವುದೂ ಬೇಡ. ಲೇಖನಿಯನ್ನೂ ಎಸೆದೆ. ಗಡಿಯಾರ ಅನಾಯಾಸವಾಗಿ ಓಡುತ್ತಿತ್ತು. ಅದರೊಂದಿಗೆ ನನ್ನೆದೆ ಬಡಿತವು ಬಿಗಡಾಯಿಸುತಿತ್ತು.

ಸೂರ್ಯ ಕೆಂಪು ಕಿತ್ತಳೆ ಕಿರಣ ಸೂಸುತ್ತ ಪಡುವಣ ದಿಕ್ಕಿನತ್ತ ಕೆಲಸ ಮುಗಿಸಿ ಹೊರಟ.

ಮಗಳು ಮನೆಗೆ ಬಂದಾಯ್ತು. ಆದರೆ ಯಥಾವತ್ತಾಗಿ ಹೆಂಡತಿಯ ಮುಖಗಂಟಿಕ್ಕಿತ್ತು. ನನ್ನ ನಿರ್ಣಯವು ಅಚಲವಾಗಿತ್ತು. ಈ ರಾತ್ರಿ ನಾನು ಮಲಗುವುದಿಲ್ಲ, ನಾ ಮಲಗಿದರೆ ತಾನೇ ಇಷ್ಟೆಲ್ಲ ಆಗೋದು. ಟಿವಿ ಮುಂದೆ ಹನ್ನೆರಡು ಹೊಡೆದರೂ ಹಾಗೇ ಕೂತಿದ್ದೆ. ಇವಳು ಹಾಗೂ ಮಗಳು ಊಟ ಮಾಡಿ ಮಲಗಿಯಾಗಿತ್ತು.

***

ಈ ಕರಾಳ ಕತ್ತಲಲ್ಲಿ ಮತ್ತೆ ನಾನೊಬ್ಬನೇ!

ಅದೇ ಜೀನ್ಸ್ ಪ್ಯಾಂಟ್ ಮತ್ತು ಗ್ರೀನ್ ಶರ್ಟ್. ಕಾರ್ವೇಡ ಕವಿದಿತ್ತು. ಮರಗಳೇ ಮನುಷ್ಯಾಕೃತಿಯಲ್ಲಿ ಕಂಡು ಭೀತಿ ಮೂಡಿಸುತ್ತಿದ್ದವು. ನಾಲ್ಕು ಫರ್ಲಾಂಗ್ ದೂರದಲ್ಲಿ ಹೊಗೆಯಾಡುತ್ತಿದೆ. ಢಬ್ ಢಬ್ ಢಬ್ ಬುರುಡೆ ಸಿಡೀತೇನೋ!? ಬೀದಿ ದೀಪದ ಬೆಳಕು ಅದೊಂದೇ ಸಾಲಿನ ಗೋರಿಗಳ ಮೇಲೆ ಬೀಳುತ್ತಿತ್ತ್ತು. ನನಗರಿವಿಲ್ಲದಂತೆ ಕಾಲುಗಳು ಅದೇ ಕರ›ನೆಯ ಮಾರ್ಬಲ್ ಕಲ್ಲಿನ ಗೋರಿಯ ಬಳಿಗೆ ಕರೆದೊಯ್ದವು.

ಕವಿರಾಜ

ಜನನ: 1991

ಮರಣ: 2016

ಬೆರಳುಗಳು ಗೋರಿಯನ್ನು ರ್ಸ³ಸಿದ್ದೇ ತಡ, ಮೈಯಲ್ಲಿ ಮಿಂಚಿನ ಸಂಚಲನ. ಗೋರಿ ಮೇಲೆ ಕುಳಿತೆ. ಮನಸ್ಸು ಹಗುರಾಯ್ತು. ಕತ್ತಲ ತೋಳನ್ನು ಆಶ್ರಯಿಸಿದಂತೆ ಕಾಣುತ್ತಿತ್ತು ನೀಲಾಕಾಶ. ನಾಚಿ ನೀರಾದ ತಾರೆಗಳು ಅವಳ ಮೂಗುತಿಯಂತೆ ಕಂಗೊಳಿಸುತ್ತಿದ್ದವು. ಮತ್ತವಳು ಕಾಡಹತ್ತಿದಳು. ಅದು ಅವಳು! ಹೌದು ಅವಳೇ! ಆದರೆ ಅವಳು ಇವಳಲ್ಲ. ಅವಳನೆಂದೂ ನಾ ನೋಡಿಲ್ಲ. ಈ ಗೋರಿಯ ಮೇಲೆ ಕುಳಿತಾಕ್ಷಣ ಯಥಾವತ್ತಾಗಿ ಅವಳು, ಕಣ್ಣು ಮನಸ್ಸು ಅಂಗಾಂಗಗಳನ್ನೆಲ್ಲಾ ಆವರಿಸಿ ಕವನಗಳ ಧಾರೆಯನ್ನೇ ಹರಿಸುತ್ತಾಳೆ. ಅವಳು ನನ್ನ ಪ್ರೇಯಸಿ. ಎಂದೂ ಕಂಡಿರದ ಹದಿನಾರರ ಅಪ್ಸರೆ..! ತಲೆಯಲ್ಲಿ ಮತ್ತೇನೋ ಹೊಳೆಯುವ ಮುನ್ನ ಅವಳ ಸಾಂಗತ್ಯದ ಅನುಭೂತಿ ಭಾಸವಾಗತೊಡಗಿತು…ಅಷ್ಟೇ..! ಅಷ್ಟರಲ್ಲಿ ಜೋಳಿಗೆಯು ಬರಿದಾಗಿ ಪುಸ್ತಕ ನನ್ನ ಕೈ ಸೇರಿತ್ತು.. ಇದೇನಾಶ್ಚರ್ಯ..! ಬೆಳಗ್ಗೆ ಬೇಡವೆಂದು ಎಸೆದಿದ್ದ ಲೇಖನಿ ಗೋರಿಯ ಮೇಲಿದೆ..! ಪುಟಗಳಿಗೆ ಲೇಖನಿಯು ಮುತ್ತು ಸುರಿಸಲು ಮುಂದಾಯಿತು…

ನಿನ್ನ ರೂಪದ ಸ್ಪಟಿಕ ಹೊಳಪು

ಸ್ಪುರಿಸಿಹುದು ಚೈತನ್ಯ ಚಿಲುಮೆ…

ನಿನ್ನೀ ಬಿಂಕದ ಮೋಹಕ ಒನಪು

ನನ್ನೆದೆಯ ಪುಷ್ಕರಣಿ ಒಲುಮೆ..!

ಪ್ರತಿಕ್ರಿಯಿಸಿ: [email protected]

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...