Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಉಸಿರಿನಲ್ಲಿ ಪಾರ್ಕಿನ್​ಸನ್​ ಕಾಯಿಲೆ ಪತ್ತೆ !

Sunday, 09.09.2018, 3:03 AM       No Comments

| ಡಾ.ಎಚ್.ಎಸ್.ಮೋಹನ್

ಇಸ್ರೇಲಿನ ವಿಜ್ಞಾನಿಗಳು ಆರಂಭದ ಹಂತದಲ್ಲಿಯೇ ಪಾರ್ಕಿನ್​​​ಸನ್​ ಕಾಯಿಲೆಯನ್ನು ವ್ಯಕ್ತಿಯ ಉಸಿರಿನಲ್ಲಿ ಕಂಡುಹಿಡಿಯುವ ಹೊಸ ಪರೀಕ್ಷೆ ಕಂಡುಹಿಡಿದಿದ್ದಾರೆ. ಟೆಕ್ನಿಯಾನ್ ಇಸ್ರೇಲ್ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳ ತಂಡವು ಈಗಾಗಲೇ ರ್ಪಾನ್​ಸನ್ ಕಾಯಿಲೆಗೆ ಚಿಕಿತ್ಸೆಗೆ ಒಳಪಟ್ಟವರಲ್ಲಿ ಈ ಕಾಯಿಲೆ ರೋಗಿಗಳ ಉಸಿರಿನಲ್ಲಿ ಪತ್ತೆಹಚ್ಚಲು ಸಾಧ್ಯ ಎಂದು ಸಾಬೀತುಪಡಿಸಿದ್ದರು. ಆದರೆ ಈಗ ಅವರು ಚಿಕಿತ್ಸೆಗೆ ತೊಡಗದೇ ಇರುವವರಲ್ಲಿಯೂ ಆರಂಭಿಕ ಹಂತದಲ್ಲಿಯೇ ಕಾಯಿಲೆ ಪತ್ತೆಹಚ್ಚಲು ಸಾಧ್ಯ ಎಂಬುದನ್ನು ಸಂಶೋಧಿಸಿದ್ದಾರೆ. ಈ ಪರೀಕ್ಷೆಯಲ್ಲಿ ವ್ಯಕ್ತಿಯ ಉಸಿರಿನಲ್ಲಿ ಹೊರಬರುವ ಕಣಗಳನ್ನು ವಿವಿಧ ಪರೀಕ್ಷೆಗೆ ಒಳಪಡಿಸಿ ರೋಗ ಪತ್ತೆಹಚ್ಚಲಾಗುತ್ತದೆ. ವಾಸನೆಯಿಂದ ರೋಗ ಪತ್ತೆ ಹಚ್ಚುವ ವಿಧಾನಕ್ಕಿಂತ ಇದು ಉತ್ತಮ ಮತ್ತು ಮೆದುಳಿನ ಅಲ್ಟ್ರಾಸೌಂಡ್ ಸ್ಕಾ್ಯನ್​ನಷ್ಟು ಉತ್ತಮವಲ್ಲ ಈ ಪರೀಕ್ಷೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ತಜ್ಞರ ಸಹಾಯವಿಲ್ಲದೆ ಸಂಚಾರಿ ಸ್ಕ್ರೀನಿಂಗ್ ಪರೀಕ್ಷೆಯ ರೀತಿ ಇದನ್ನು ಉಪಯೋಗಿಸಬಹುದು ಎಂದು ಸಂಶೋಧಕರ ಅಭಿಮತ.

ರ್ಪಾನ್​ಸನ್ ಕಾಯಿಲೆ: ಇದೊಂದು ಮೆದುಳಿನ ಡಿಜನರೇಟಿವ್ ಕಾಯಿಲೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸಿ ವ್ಯಕ್ತಿಯ ಚಲನೆಯನ್ನು ಕುಂಠಿತಗೊಳಿಸುತ್ತದೆ. ಇದರಲ್ಲಿ ಮುಖ್ಯವಾಗಿ ನಾಲ್ಕು ಲಕ್ಷಣಗಳಿವೆ. ಕೈಕಾಲು ಅದುರುವುದು, ಗಟ್ಟಿಯಾಗುವುದು, ಚಲನೆಯು ನಿಧಾನಗೊಳ್ಳುವಿಕೆ, ದೇಹದ ಸಮತೋಲನ ಮತ್ತು ಸರಿ ಹೊಂದುವಿಕೆ (ಕೋಆರ್ಡಿನೇಷನ್) ಯಲ್ಲಿ ವ್ಯತ್ಯಾಸವಾಗುವುದು. ಕಾಯಿಲೆ ಮುಂದುವರಿದ ಹಾಗೆ ಇನ್ನಿತರ ಸಮಸ್ಯೆಗಳು ಬರಬಹುದು. ಉದಾಹರಣೆಗೆ ಸುಸ್ತಾಗುವಿಕೆ, ಮಾತನಾಡಲು ತೊಂದರೆಯಾಗುವುದು, ನಿದ್ರೆ ವ್ಯತ್ಯಾಸವಾಗಬಹುದು, ಜ್ಞಾಪಕ ಶಕ್ತಿ ಕುಂಠಿತಗೊಳ್ಳುವುದು ಮತ್ತು ಮಾನಸಿಕ ಖಿನ್ನತೆ (ಡಿಪ್ರೆಷನ್)ಗೆ ಒಳಗಾಗುವುದು.

ರ್ಪಾನ್​ಸನ್ ಕಾಯಿಲೆ ತುಂಬಾ ಸಂಕೀರ್ಣವಾದ ಕಾಯಿಲೆ. ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ಆರಂಭಗೊಳ್ಳುತ್ತದೆ. ಆದರೆ ಎಲ್ಲರಲ್ಲಿ ಇರುವಂಥದ್ದೆಂದರೆ ಮೆದುಳಿನ ಸಬ್​ಸ್ಟಾನ್ಷಿಯಾ ನೈಗ್ರ ಭಾಗದಲ್ಲಿ ಡೋಪಮಿನ್ ಉತ್ಪಾದಿಸುವ ಜೀವಕೋಶಗಳು ನಾಶಹೊಂದುತ್ತಾ ಬರುತ್ತವೆ. ದೇಹದ ಚಲನೆಗೆ ಸಂಬಂಧಪಟ್ಟ ಸಂದೇಶಗಳನ್ನು ಹರಡುವ ಮೆದುಳಿನ ರಾಸಾಯನಿಕವೇ ಡೋಪಮಿನ್. ಸಾಮಾನ್ಯವಾಗಿ ರ್ಪಾನ್​ಸನ್ ಕಾಯಿಲೆ ಪತ್ತೆಯಾಗುವ ಹೊತ್ತಿಗೆ ಡೋಪಮಿನ್ ಉತ್ಪಾದಿಸುವ ಹಲವಾರು ಜೀವಕೋಶಗಳು ನಾಶ ಹೊಂದಿರುತ್ತವೆ. ಜಗತ್ತಿನಾದ್ಯಂತ ಒಂದು ಕೋಟಿಗೂ ಅಧಿಕ ಜನರಲ್ಲಿ ಈ ಕಾಯಿಲೆ ಇದೆ ಎಂದು ಅಂದಾಜಿಸಲಾಗಿದೆ. ಮಹಿಳೆಯರು ಮತ್ತು ಪುರುಷರು ಇಬ್ಬರಲ್ಲಿಯೂ ಕಾಣಿಸಿಕೊಳ್ಳುವುದಾದರೂ ಪುರುಷರಲ್ಲಿಯೇ ಸ್ವಲ್ಪ ಹೆಚ್ಚು ಎನ್ನಲಾಗಿದೆ.

ಉಸಿರಿನ ಪರೀಕ್ಷೆ: ಕಾಯಿಲೆ ಪತ್ತೆ ಹಚ್ಚಲು ಉಸಿರಿನ ಪರೀಕ್ಷೆ ಮಾಡುವ ಕ್ರಮ ಬಹಳ ಕಾಲದಿಂದಲೂ ಇದೆ. ಪ್ರಾಚೀನ ಗ್ರೀಸ್ ಕಾಲದಿಂದಲೂ ಉಸಿರಿನ ವಿವಿಧ ರೀತಿಯ ಪರೀಕ್ಷೆಗಳನ್ನು ಕಾಯಿಲೆ ಪತ್ತೆಹಚ್ಚಲು ವೈದ್ಯರು ಕೈಗೊಳ್ಳುತ್ತಿದ್ದಾರೆ. ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್ ಮತ್ತು ಆಮ್ಲಜನಕಗಳಲ್ಲದೆ ನಾವು ಹೊರಬಿಡುವ ಉಸಿರಿನಲ್ಲಿ 100 ಕ್ಕೂ ಹೆಚ್ಚು ಬೇರೆ ರಾಸಾಯನಿಕಗಳಿರುತ್ತವೆ. ಇವುಗಳಲ್ಲಿ ಹಲವು ನಮ್ಮ ದೇಹದ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುತ್ತವೆ.

ಮೊದಲು ತಿಳಿಸಿದ ಟೆಕ್ನಿಯಾನ್ ಇಸ್ರೇಲ್ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳ ತಂಡವು ಕಾಯಿಲೆಗಳನ್ನು ಪತ್ತೆ ಹಚ್ಚಲು ವಿಧಾನವನ್ನು ರೂಪಿಸುತ್ತಿದ್ದಾರೆ. ಅವರುಗಳು ನ್ಯಾನೋಟೆಕ್ನಾಲಜಿ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಜೆನ್ಸ್) ಗಳನ್ನು ಉಪಯೋಗಿಸಿ ಈ ರೋಗ ಪತ್ತೆ ಹಚ್ಚುವ ವಿಧಾನಗಳನ್ನು ರೂಪಿಸುತ್ತಿದ್ದಾರೆ. 2017 ರಲ್ಲಿ ಇನ್ನಿತರ ಅಂತಾರಾಷ್ಟ್ರೀಯ ಕೇಂದ್ರಗಳ ಸಹಯೋಗದೊಂದಿಗೆ ಅವರು ಒಂದು ಅಧ್ಯಯನವನ್ನು ಪ್ರಕಟಿಸಿದ್ದರು. ಅದರಲ್ಲಿ 1000 ರೋಗಿಗಳ ಉಸಿರಿನ ಪರೀಕ್ಷೆಯಿಂದ 17 ಕಾಯಿಲೆಗಳನ್ನು ಪತ್ತೆಹಚ್ಚಲು ಆರ್ಟಿಫಿಷಿಯಲೀ ಇಂಟೆಲಿಜೆಂಟ್ ನ್ಯಾನೋ ಅರ್ರೇ ಎಂಬ ವಿಧಾನವನ್ನು ರೂಪಿಸಿದರು.

ರ್ಪಾನ್​ಸನ್ ಕಾಯಿಲೆಯಲ್ಲಿ ಉಸಿರು ಪರೀಕ್ಷಿಸುವ ಯಂತ್ರವು ಕಾರ್ಬನ್ ನ್ಯಾನೋಟ್ಯೂಬ್ ಮತ್ತು ಬಂಗಾರದ ನ್ಯಾನೋ ಕಣಗಳನ್ನು ಒಳಗೊಂಡ 40 ಸೆನ್ಸರ್​ಗಳಿಂದ ಕೂಡಿದ ಅರ್ರೆಗಳನ್ನು ಹೊಂದಿದೆ. ಹೊಸದಾಗಿ ರ್ಪಾನ್​ಸನ್ ಕಾಯಿಲೆ ಪತ್ತೆಯಾದ ಮತ್ತು ಚಿಕಿತ್ಸೆ ಆರಂಭಿಸದೆ ಇದ್ದ 29 ರೋಗಿಗಳಲ್ಲಿ ಉಸಿರು ಪರೀಕ್ಷೆಯಲ್ಲಿ ಇದನ್ನು ಪ್ರಯೋಗಿಸಿದರು. ಹಾಗೆಯೇ ಆರೋಗ್ಯವಂತ ಅದೇ ವಯಸ್ಸಿನ 19 ರೋಗಿಗಳ ಉಸಿರಿನಲ್ಲಿಯೂ ಈ ಪರೀಕ್ಷೆಯನ್ನು ನಡೆಸಿದರು. ಈ ಪರೀಕ್ಷೆಯು ಆರಂಭದ ರ್ಪಾನ್​ಸನ್ ಕಂಡುಹಿಡಿಯುವಲ್ಲಿ ಶೇಕಡಾ 79ರಷ್ಟು ಸೂಕ್ಷ್ಮತೆ (ಸೆನ್ಸಿಟಿವಿಟಿ), ಸ್ಪಷ್ಟತೆ (ಸ್ಪೆಸಿಫಿಸಿಟಿ) ಶೇಕಡಾ 84, ಅಕ್ಯುರಸಿ ಶೇಕಡಾ 81 ಹೊಂದಿತ್ತು ಎಂದು ಫಲಿತಾಂಶಗಳು ತಿಳಿಸಿದವು. ಮಿಡ್​ಬ್ರೇನ್ ಅಲ್ಟ್ರಾಸೌಂಡ್​ನಲ್ಲಿ ಈ ಸೂಚ್ಯಂಕಗಳು ಶೇಕಡಾ 90-92 ರಷ್ಟಿರುತ್ತವೆ. ಅಕ್ಯುರಸಿ, ಸೂಕ್ಷ್ಮತೆ ಮತ್ತು ಸ್ಪಷ್ಟತೆ ಇವು ಈ ಉಸಿರಿನ ಪರೀಕ್ಷೆಯ ಸೂಚ್ಯಂಕಗಳು, ಅಕ್ಯುರಸಿ ಎಂದರೆ ಕಾಯಿಲೆ ಇರುವ ಮತ್ತು ಇಲ್ಲದ ವ್ಯಕ್ತಿಗಳನ್ನು ಸರಿಯಾಗಿ ಕಂಡುಹಿಡಿಯುವುದು. ಸ್ಪಷ್ಟತೆ (ಸ್ಪೆಸಿಫಿಸಿಟಿ) ಎಂದರೆ ಆರೋಗ್ಯವಂತ ವ್ಯಕ್ತಿಗಳನ್ನು ಸರಿಯಾಗಿ ಗುರುತಿಸುವುದು, ಸೂಕ್ಷ್ಮತೆ (ಸೆನ್ಸಿಟಿವಿಟಿ) ಎಂದರೆ ಕಾಯಿಲೆ ಬಂದ ವ್ಯಕ್ತಿಗಳನ್ನು ಸರಿಯಾಗಿ ಕಂಡುಹಿಡಿಯುವುದು.

ರ್ಪಾನ್​ಸನ್ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿದರೆ ಸೂಕ್ತ ಚಿಕಿತ್ಸೆ ಬೇಗ ಆರಂಭಿಸಿ ಮೆದುಳಿಗೆ ಆಗುವ ದೀರ್ಘಕಾಲೀನ ಹಾನಿಯನ್ನು ತಪ್ಪಿಸಬಹುದು.

(ಲೇಖಕರು ಹಿರಿಯ ನೇತ್ರತಜ್ಞರು ಮತ್ತು ವೈದ್ಯಕೀಯ ಬರಹಗಾರರು)

ಪ್ರತಿಕ್ರಿಯಿಸಿ: [email protected]

Leave a Reply

Your email address will not be published. Required fields are marked *

Back To Top