ಆಯೋಗ್ಯನ ಜೇಬಿಗೆ – 4 ಕೋಟಿ ರೂ.

ಬೆಂಗಳೂರು: ನಟ ಸತೀಶ್ ‘ನೀನಾಸಂ’ ಹಾಗೂ ರಚಿತಾ ರಾಮ್ ಅಭಿನಯದ ‘ಅಯೋಗ್ಯ’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಲು ಆರಂಭಿಸಿದೆ. ಶುಕ್ರವಾರ ಬಿಡುಗಡೆಯಾದ ಈ ಸಿನಿಮಾ ಮೂರೇ ದಿನಕ್ಕೆ ನಾಲ್ಕು ಕೋಟಿ ರೂ. ಗಳಿಕೆ ಕಂಡಿದೆ.

ರಾಜ್ಯಾದ್ಯಂತ 280ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಈ ಚಿತ್ರವು ಬಹುತೇಕ ಕಡೆ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆಯಂತೆ. ‘ಸಿನಿಮಾ ಪ್ರದರ್ಶನ ಕಾಣುತ್ತಿರುವ ಭಾಗಶಃ ಚಿತ್ರಮಂದಿರಗಳು ಹೌಸ್​ಫುಲ್ ಆಗಿವೆ. ಇದು ಮಂಡ್ಯ ಸೊಗಡಿನ ಸಿನಿಮಾವಾಗಿದ್ದರೂ, ಉತ್ತರ ಕರ್ನಾಟಕದಲ್ಲೂ ಜನ ಮುಗಿಬಿದ್ದು ನೋಡುತ್ತಿರುವುದು ಚಿತ್ರತಂಡದ ಸಂತಸ ಹೆಚ್ಚಿಸಿದೆ’ ಎಂದು ನಿರ್ದೇಶಕ ಮಹೇಶ್​ಕುಮಾರ್ ಮಾಹಿತಿ ನೀಡುತ್ತಾರೆ. ಇನ್ನು, ಸತೀಶ್ ಸಿನಿಮಾ ವೃತ್ತಿಜೀವನದಲ್ಲಿ ಅತಿ ಹೆಚ್ಚಿನ ಗಳಿಕೆಯಾಗಿದೆ. ಈ ವರ್ಷ ತೆರೆಕಂಡ ‘ಟಗರು’, ‘ರ್ಯಾಂಬೋ 2’ ಸಿನಿಮಾಗಳ ನಂತರದ ಹೆಚ್ಚಿನ ಕಲೆಕ್ಷನ್ ಈ ಸಿನಿಮಾ ಮಾಡಿದೆ ಎಂಬುದು ಗಾಂಧಿನಗರ ಮಂದಿಯ ಲೆಕ್ಕಾಚಾರ. ‘ಚಮಕ್’ ನಂತರ ನಿರ್ವಪಕರ ಟಿ.ಆರ್. ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.