20.4 C
Bengaluru
Monday, January 20, 2020

ಬಗೆಬಗೆಯ ಉಂಡೆಗಳು

Latest News

ಸಿಎಎ ಬೆಂಬಲಿಸಿ ರ‌್ಯಾಲಿ

ಬಾದಾಮಿ: ವಿಶ್ವದ ದೊಡ್ಡ ಹಿಂದು ರಾಷ್ಟ್ರವಾದ ಭಾರತದ ಸಂಸ್ಕೃತಿ ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಪೌರತ್ವ ತಿದ್ದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದರಿಂದ...

ಕೋಟೆನಗರಿಯಲ್ಲಿ ಆಕರ್ಷಕ ಪಥ ಸಂಚಲನ

ಬಾಗಲಕೋಟೆ: ಸಂಕ್ರಾಂತಿ ಹಬ್ಬದ ಅಂಗವಾಗಿ ಆರ್‌ಎಸ್‌ಎಸ್ ಅಂಗ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಸೇವಕಿಯರ ಘೋಷ ಸಹಿತ...

ಧರ್ಮದಲ್ಲಿ ರಾಜಕೀಯ ಸಲ್ಲ

ತೇರದಾಳ: ಧರ್ಮ ಶ್ರೇಷ್ಠವಾಗಿದ್ದು, ಧರ್ಮದಲ್ಲಿ ರಾಜಕೀಯ ಬೆರೆಸಬೇಡಿ. ವೀರಶೈವರು ಲಿಂಗವನ್ನು ತ್ರಿಕಾಲಗಳಲ್ಲಿ ಪೂಜೆಗೈಯುತ್ತ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮ ಮತ್ತು ಗುರು ಜೀವನ...

ಕಲಾದಗಿಯಲ್ಲಿ ಆರ್ಥಿಕ ಗಣತಿಗೆ ಅಸಹಕಾರ

ಕಲಾದಗಿ: ಗ್ರಾಮದಲ್ಲಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯ ಒಂದು ವಾರದಿಂದ ಸ್ಥಗಿತಗೊಂಡಿದ್ದು, ಪ್ರಬಲ ಕೋಮಿನ ನೂರಾರು ಮನೆಯವರು ಆರ್ಥಿಕ ಗಣತಿದಾರರಿಗೆ ಮಾಹಿತಿ...

ವೇಗ ಕಾಣದ ಫಾಸ್ಟ್ಯಾಗ್​ !

ಹೀರಾನಾಯ್ಕ ಟಿ. ವಿಜಯಪುರ: ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್ಯಾಗ್ ​ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಆದರೆ, ಸಾಕಷ್ಟು ವಾಹನಗಳಿಗೆ ಫಾಸ್ಟ್ಯಾಗ್  ಅಳವಡಿಸದೆ ಇರುವುದರಿಂದ...

ಹಬ್ಬಗಳ ಸಾಲು ಬಂತೆಂದರೆ ಸಾಕು, ಮಹಿಳೆಯರಿಗೆ ಯಾವ ಅಡುಗೆ, ಯಾವ ಸಿಹಿ ತಿಂಡಿ ಮಾಡಬೇಕು ಎಂಬುದೇ ಯೋಚನೆ. ಹಬ್ಬಗಳಲ್ಲಿ ಸಾಂಪ್ರದಾಯಿಕವಾದ ಸಿಹಿತಿಂಡಿಗಳನ್ನು ತಯಾರಿಸುವುದೇ ಸೂಕ್ತ. ಕೆಲವು ಉಂಡೆಗಳನ್ನು ಮಾಡುವ ಬಗೆ ಹೀಗಿವೆ.

| ಮೀನಾಕ್ಷಿ ರಮೇಶ್

ಖರ್ಜೂರದ ಉಂಡೆ

ಬೇಕಾಗುವ ಸಾಮಗ್ರಿಗಳು: ಅರ್ಧ ಕೆ.ಜಿ. ಖರ್ಜೂರ, ಎರಡು ಚಮಚ ತುಪ್ಪ, ಸ್ವಲ್ಪ ಗೋಡಂಬಿ, ಸ್ವಲ್ಪ ಬಾದಾಮಿ, ಸ್ವಲ್ಪ ಒಣ ದ್ರಾಕ್ಷಿ.

ಮಾಡುವ ವಿಧಾನ: ಖರ್ಜೂರದಿಂದ ಬೀಜವನ್ನು ತೆಗೆದು ಸಣ್ಣ ಚೂರುಗಳನ್ನಾಗಿ ಮಾಡಿಕೊಂಡು, ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಖರ್ಜೂರವನ್ನು ಬಿಸಿ ಮಾಡಬೇಕು. ಆಗ ಅದು ಮೆತ್ತಗಾಗುತ್ತದೆ. ಅದಕ್ಕೆ ತುಂಡು ಮಾಡಿಟ್ಟುಕೊಂಡ ಗೋಡಂಬಿ, ಬಾದಾಮಿ, ದ್ರಾಕ್ಷಿ ಹಾಕಿ ಉಂಡೆ ಕಟ್ಟಬೇಕು. ಈ ಉಂಡೆಗಳನ್ನು ಇಪ್ಪತ್ತು ನಿಮಿಷ ಫ್ರಿಜ್​ನಲ್ಲಿಟ್ಟರೆ ಗಟ್ಟಿಯಾಗುತ್ತದೆ. ಅನಂತರ ಅವನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಎಷ್ಟು ದಿವಸವಾದರೂ ಹಾಳಾಗುವುದಿಲ್ಲ. ಮಕ್ಕಳಿಂದ ಮೊದಲ್ಗೊಂಡು ದೊಡ್ಡವರೆಲ್ಲರೂ ಸವಿಯಬಹುದಾದ ಉತ್ತಮ ಆರೋಗ್ಯದಾಯಕ ತಿನಿಸು ಮನೆಯಲ್ಲೇ ಇರುತ್ತದೆ.


ಅರಳಿನ ಉಂಡೆ

ಬೇಕಾಗುವ ಸಾಮಗ್ರಿಗಳು: 2 ಕಪ್ ಅರಳಿನ ಪುಡಿ, 1 ಕಪ್ ಬೆಲ್ಲದ ಪುಡಿ, ಸ್ವಲ್ಪ ಏಲಕ್ಕಿ ಪುಡಿ, ಸ್ವಲ್ಪ ಗೋಡಂಬಿ ತುಂಡುಗಳು.

ಮಾಡುವ ವಿಧಾನ: ಬೆಲ್ಲ ಮುಳುಗುವಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ 2 ಎಳೆಪಾಕ ಆದನಂತರ ಅರಳು ಪುಡಿ, ಏಲಕ್ಕಿ ಪುಡಿ ಹಾಗೂ ಗೋಡಂಬಿ ಚೂರುಗಳನ್ನು ಸೇರಿಸಬೇಕು. ತಣ್ಣಗಾದ ನಂತರ ಉಂಡೆಗಳನ್ನು ಕಟ್ಟಬೇಕು.


ಎಳ್ಳು ಉಂಡೆ

ಬೇಕಾಗುವ ಸಾಮಗ್ರಿಗಳು: 2 ಕಪ್ ಕಪ್ಪು ಎಳ್ಳು, ಒಂದೂವರೆ ಕಪ್ ಬೆಲ್ಲದ ಪುಡಿ, ಕಾಲು ಕಪ್ ಒಣ ಕೊಬ್ಬರಿತುರಿ ಹಾಗೂ 2 ಚಮಚ ಹುರಿಗಡಲೆ ಪುಡಿ.

ಮಾಡುವ ವಿಧಾನ: ಮೊದಲು ಎಳ್ಳನ್ನು ಸ್ವಚ್ಛಗೊಳಿಸಿಕೊಳ್ಳಿ. ಎಳ್ಳಿನಲ್ಲಿ ಸಣ್ಣ ಸಣ್ಣ ಕಲ್ಲುಗಳಿರುತ್ತವೆ. ಎಳ್ಳನ್ನು ಘಂ ಎನ್ನುವವರೆಗೆ ಹುರಿದುಕೊಳ್ಳಬೇಕು. ಬೆಲ್ಲದ ಪಾಕವನ್ನು ತಯಾರಿಸಿಕೊಳ್ಳಬೇಕು. ಪಾಕಕ್ಕೆ ಹುರಿದ ಎಳ್ಳು, ತುರಿದ ಕೊಬ್ಬರಿ ಹಾಗೂ 2 ಚಮಚ ಹುರಿಗಡಲೆ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಬೇಕು. ತಣ್ಣಗಾದ ನಂತರ ಉಂಡೆ ಕಟ್ಟಿದರೆ ರುಚಿಕರ ಹಾಗೂ ಆರೋಗ್ಯಪೂರ್ಣವಾದ ಎಳ್ಳಿನ ಉಂಡೆ ತಯಾರು. ಗಾಳಿಯಾಡದ ಡಬ್ಬದಲ್ಲಿ ಇಟ್ಟರೆ 15 ದಿನಗಳಾದರೂ ಹಾಳಾಗುವುದಿಲ್ಲ.


ಹುರಿಗಡಲೆ ಉಂಡೆ

ಬೇಕಾಗುವ ಸಾಮಗ್ರಿಗಳು: 1 ಕಪ್ ಹುರಿಗಡಲೆ ಹಿಟ್ಟು, ಮುಕ್ಕಾಲು ಕಪ್ ಸಕ್ಕರೆ ಪುಡಿ, ಸ್ವಲ್ಪ ತುಪ್ಪದಲ್ಲಿ ಹುರಿದ ಗೋಡಂಬಿ, ಅರ್ಧ ಕಪ್ ತುಪ್ಪ ಹಾಗೂ ಸ್ವಲ್ಪ ಏಲಕ್ಕಿ ಪುಡಿ.

ಮಾಡುವ ವಿಧಾನ: ತುಪ್ಪವನ್ನು ಸ್ವಲ್ಪ ಬಿಸಿಮಾಡಿ ನೀರು ಮಾಡಿಕೊಂಡು ಉಳಿದೆಲ್ಲ ಸಾಮಗ್ರಿಗಳ ಜತೆಗೆ ಸೇರಿಸಿ ಉಂಡೆ ಕಟ್ಟಿದರೆ ಸವಿಯಲು ಸಿದ್ಧ. ದಿಢೀರಾಗಿ ಮನೆಗೆ ಅತಿಥಿಗಳು ಬಂದಾಗ ಸುಲಭವಾಗಿ ತಯಾರಿಸಬಹುದು. ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟರೆ 15 ದಿನಗಳವರೆಗೂ ಹಾಳಾಗುವುದಿಲ್ಲ.


ಶೇಂಗಾ ಉಂಡೆ

ಬೇಕಾಗುವ ಸಾಮಗ್ರಿಗಳು: 2 ಕಪ್ ಹುರಿದ ಶೇಂಗಾ ಬೀಜ, ಒಂದೂವರೆ ಕಪ್ ಬೆಲ್ಲದ ಪುಡಿ, ಕಾಲು ಕಪ್ ಒಣ ಕೊಬ್ಬರಿತುರಿ ಹಾಗೂ ಕಾಲು ಕಪ್ ಹುರಿಗಡಲೆ ಹಿಟ್ಟು.

ಮಾಡುವ ವಿಧಾನ: ಮೊದಲು ಹುರಿದ ಶೇಂಗಾ ಬೀಜದ ಸಿಪ್ಪೆಯನ್ನು ತೆಗೆದು, 2 ಭಾಗವನ್ನಾಗಿ ಮಾಡಬೇಕು. ಒಂದು ಬಾಣಲೆಯಲ್ಲಿ ಬೆಲ್ಲದ ಪುಡಿಯನ್ನು ಹಾಕಿ ಅದು ಮುಳುಗುವಷ್ಟು ನೀರು ಹಾಕಿ, ನಿಧಾನ ಬೆಂಕಿಯಲ್ಲಿ ಬೆಲ್ಲವನ್ನು ಕರಗಿಸಿಕೊಂಡು ಸೋಸಿಕೊಳ್ಳಬೇಕು. ನಂತರ 2 ಎಳೆಪಾಕ ಬರುವವರೆಗೆ ಕುದಿಸಬೇಕು. ಪಾಕ ಬಂದ ತಕ್ಷಣ ಸಿಪ್ಪೆ ತೆಗೆದ ಶೇಂಗಾ ಬೀಜ, ಒಣ ಕೊಬ್ಬರಿತುರಿ ಹಾಕಿ ಚೆನ್ನಾಗಿ ಕಲಸಬೇಕು. ಸ್ವಲ್ಪ ತಣ್ಣಗಾದ ನಂತರ ಸ್ವಲ್ಪ ಹುರಿಗಡಲೆ ಹಿಟ್ಟನ್ನು ಸೇರಿಸಿ, ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಬೇಕು. ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 15 ದಿನಗಳಾದರೂ ಕೆಡುವುದಿಲ್ಲ.


ಮೋಹನ ಲಾಡು

ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಮೈದಾ, ಮುಕ್ಕಾಲು ಕಪ್ ಸಕ್ಕರೆ, ನಾಲ್ಕು ಚಮಚ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ ಹಾಗೂ ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಮೈದಾ ಹಿಟ್ಟಿಗೆ ನಾಲ್ಕು ಚಮಚ ತುಪ್ಪ ಸೇರಿಸಿ ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿ ಕಲಸಿ. ಸ್ವಲ್ಪ ಹೊತ್ತು ನೆನೆಯಲು ಬಿಡಿ. ಸಕ್ಕರೆಯನ್ನು ಪಾಕ ಮಾಡಿಟ್ಟುಕೊಳ್ಳಿ. ಸ್ವಲ್ಪ ಸಮಯದ ನಂತರ ಕಲಿಸಿದ ಮೈದಾ ಹಿಟ್ಟಿನಿಂದ ತೆಳುವಾದ ಚಪಾತಿ ಲಟ್ಟಿಸಿ ಚಾಕುವಿನಿಂದ ಕಟ್ ಮಾಡಿ. ಕಾದ ಎಣ್ಣೆಯಲ್ಲಿ ನಿಧಾನವಾದ ಬೆಂಕಿಯಲ್ಲಿ ಗರಿಗರಿಯಾಗಿ ಕರಿಯಿರಿ. ನಂತರ ಪುಡಿ ಪುಡಿ ಮಾಡಿ ಪಾಕಕ್ಕೆ ಸೇರಿಸಿ, ಏಲಕ್ಕಿ ಪುಡಿಯನ್ನು ಸೇರಿಸಿ ಉಂಡೆಗಳನ್ನು ಕಟ್ಟಿದರೆ ಗರಿಗರಿಯಾದ ಮೋಹನ ಲಾಡು ತಯಾರು. ಗಾಳಿಯಾಡದ ಡಬ್ಬದಲ್ಲಿಟ್ಟರೆ ಒಂದು ವಾರದವರೆಗೆ ಹಾಳಾಗದೆ ಇರುತ್ತದೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...