22.8 C
Bengaluru
Saturday, January 18, 2020

ತರ್ಕಕ್ಕೆ ನಿಲುಕದ ಪ್ರಭಾವ

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಇಂದಿನ ಕಾಲಘಟ್ಟದಲ್ಲಿ ಕೆಲಸಗಳು ನಿರ್ವಿಘ್ನವಾಗಿ ಕೈಗೂಡಬೇಕಾದರೆ ಉನ್ನತ ಪ್ರಭಾವವನ್ನು ಬಳಸಬೇಕೆಂಬ ಭಾವನೆ ಜನರಲ್ಲಿದೆ. ಏಕೆಂದರೆ ವ್ಯಕ್ತಿಯ ಪ್ರಭಾವ ಲೆಕ್ಕಾಚಾರಗಳನ್ನು ಮೀರಿ ಕೆಲಸ ಮಾಡುತ್ತದೆ. ಆಹಾರವಸ್ತು ಅಥವಾ ಔಷಧೀಯ ಸಸ್ಯಗಳು ಮಾಡುವ ಎಲ್ಲ ಕಾರ್ಯಗಳಿಗೂ ಒಂದು ತಳಹದಿ ಇರುತ್ತದೆ. ರುಚಿ, ವಿಪಾಕ, ಗುಣ ಹಾಗೂ ವೀರ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಕರ್ಮಗಳನ್ನು ನಡೆಸಿಕೊಡುತ್ತದೆ. ಇವೆಲ್ಲ ಕಾರ್ಯಗಳು ನಡೆಯಲು ಆಧಾರ ಏನೆಂಬುದೂ ತಿಳಿದಿರುತ್ತದೆ. ಈ ಅಂಶಗಳನ್ನೆಲ್ಲ ಮೀರಿ ಊಹೆಗೂ ನಿಲುಕದಂತಹ ಕಾರ್ಯವೆಸಗಿದರೆ ಅದನ್ನೇ ಪ್ರಭಾವ ಎಂದು ಆಯುರ್ವೆದ ಹೇಳಿದೆ. ಔಷಧವು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರಣೆ ನೀಡುವ ಸಂದರ್ಭದಲ್ಲಿ ಚರಕ ಸಂಹಿತೆಯಲ್ಲಿ ‘ದ್ರವ್ಯಪ್ರಭಾವದಿಂದ, ಗುಣಪ್ರಭಾವದಿಂದ, ದ್ರವ್ಯಗುಣಪ್ರಭಾವದಿಂದ’ ಎಂಬ ಮಾತೊಂದಿದೆ. ನಮಗೆ ತಿಳಿದಿರುವುದೇನಿದ್ದರೂ ಅಲ್ಪ. ನಮ್ಮ ಅವಲೋಕನಕ್ಕೆ ಗೋಚರಿಸದ ವಿಚಾರಗಳೇ ಅನೇಕ ಎಂಬುದಾಗಿ ಪ್ರಭಾವವನ್ನು ಆದ್ಯತೆ ನೀಡಿ ಮೊದಲೇ ಹೇಳಿದ್ದು ಸೂಚಿಸುತ್ತದೆ.

ಶುಂಠಿ ಹಾಗೂ ಚಿತ್ರಕಗಳೆರಡಕ್ಕೂ ಖಾರರುಚಿ ಇದ್ದರೆ ಶುಂಠಿಯು ಶರೀರದ ಧಾತುಗಳನ್ನು ಪೋಷಿಸಿದರೆ ಚಿತ್ರಕ ಆ ಕೆಲಸ ಮಾಡುವುದಿಲ್ಲ. ಏಕೆಂದರೆ ಶುಂಠಿ ಜೀರ್ಣವಾದ ಬಳಿಕ ಸಿಹಿರುಚಿಯನ್ನು ತಾಳುವುದೇ ಇದಕ್ಕೆ ಕಾರಣ. ಇಲ್ಲಿ ಶುಂಠಿಗೆ ವಿಶೇಷ ಗುಣವಿದ್ದರೂ ಅದಕ್ಕಿರುವ ಕಾರಣ ತಿಳಿದಿರುವುದರಿಂದ ಅದು ಪ್ರಭಾವವಲ್ಲ. ಹೆಸರು, ಉದ್ದುಗಳೆರಡೂ ಸಿಹಿರುಚಿ ಹೊಂದಿದ್ದು ಉದ್ದು ಪಿತ್ತವನ್ನು ಕಡಿಮೆಗೊಳಿಸಿದರೆ ಹೆಸರು ಪಿತ್ತವನ್ನು ಹೆಚ್ಚಿಸುತ್ತದೆ. ಹೆಸರು ಉಷ್ಣವೀರ್ಯ ಹೊಂದಿದ್ದು ಉದ್ದು ಶೀತವೀರ್ಯ ಹೊಂದಿರುವುದೇ ಇದಕ್ಕೆ ಕಾರಣ. ಹೀಗೆ ರಸ, ಗುಣ, ವೀರ್ಯ ಹಾಗೂ ವಿಪಾಕಗಳ ಆಧಾರದಲ್ಲಿ ಒಂದು ದ್ರವ್ಯದ ಕಾರ್ಯವನ್ನು ನಿರ್ಧರಿಸಲು ಸಾಧ್ಯವಾಗಬೇಕು. ಯಾವುದನ್ನು ಆಧಾರದೊಂದೊಗೆ ನಿರ್ಧರಿಸಲು ಸಾಧ್ಯವಾಗದೋ ಆಗ ಅದನ್ನು ಪ್ರಭಾವ ಎನ್ನಬಹುದು.

ಗೋವಿನ ಹಾಲು ಹಾಗೂ ತುಪ್ಪಗಳೆರಡೂ ಸಿಹಿರುಚಿ ಹಾಗೂ ಶೀತಲ ಗುಣ ಹೊಂದಿವೆ. ತುಪ್ಪವು ಹಸಿವನ್ನು ಹೆಚ್ಚಿಸಿದರೆ ಹಾಲಿಗೆ ಆ ಗುಣವಿಲ್ಲ! ಹಸಿವನ್ನು ಹೆಚ್ಚಿಸುವುದು ತುಪ್ಪದ ಪ್ರಭಾವ. ಎಳ್ಳು ಹಾಗೂ ಮಗ್ಗಾರೆಕಾಯಿಗಳು ಸಿಹಿ, ಒಗರು, ಕಹಿ ರುಚಿ ಪಡೆದಿದ್ದು ಸ್ನಿಗ್ನ, ಪಿಚ್ಛಿಲ ಎಂಬ ಗುಣಗಳನ್ನು ಹೊಂದಿವೆ. ಮಗ್ಗಾರೆಕಾಯಿ ತೀವ್ರವಾಗಿ ವಾಂತಿ ಉಂಟುಮಾಡಿದರೆ ಎಳ್ಳಿಗೆ ಆ ಗುಣವಿಲ್ಲ. ವಾಂತಿ ಬರಿಸುವುದು ಮಗ್ಗಾರೆಕಾಯಿಯ ಪ್ರಭಾವ. ಚಿತ್ರಕ ಹಾಗೂ ದಂತಿಗಳೆಂಬ ಎರಡು ಔಷಧೀಯ ಸಸ್ಯಗಳನ್ನೊಮ್ಮೆ ಅವಲೋಕಿಸಿ. ಎರಡರದ್ದೂ ಖಾರ ರುಚಿ. ವಿಪಾಕವೂ ಖಾರವೇ. ಎರಡೂ ಉಷ್ಣ ವೀರ್ಯ ಹೊಂದಿವೆ. ಹಲವಾರು ಕಾರ್ಯಗಳೂ ಒಂದೇ ತೆರನಾಗಿವೆ. ಆದರೆ ದಂತಿ ಭೇದಿಯನ್ನುಂಟುಮಾಡಿದರೆ ಚಿತ್ರಕಕ್ಕೆ ಇಂಥ ಗುಣವಿಲ್ಲ. ಭೇದಿ ಉಂಟುಮಾಡುವುದು ದಂತಿಯ ಪ್ರಭಾವ. ರಸ, ಗುಣಾದಿಗಳಿಂದ ಇದು ಏಕೆಂದು ವಿವರಿಸಲು ಸಾಧ್ಯವಾಗದು. ಸರಳವಾಗಿ ಹೇಳಬೇಕೆಂದರೆ ಕಾರಣ ಅಥವಾ ಆಧಾರಸಹಿತ ಹೇಳಲು ಬರದಿರುವ ದ್ರವ್ಯದ ಕಾರ್ಯವಿಧಾನವೇ ಪ್ರಭಾವ. ಒಂದು ಹುದ್ದೆಯ ಸಂದರ್ಶನಕ್ಕೆ ಇಬ್ಬರು ಹಾಜರಾದಾಗ ಅವರಿಬ್ಬರ ಅಂಕ, ಪದವಿ, ವಯಸ್ಸು, ಸ್ಥಿತಿಗತಿ ಮುಂತಾದ ಮಾನದಂಡಗಳೆಲ್ಲ ಒಂದೇ ತೆರನಾಗಿದ್ದರೂ ಒಬ್ಬನೇ ವ್ಯಕ್ತಿ ಕೆಲಸಕ್ಕೆ ಆಯ್ಕೆಯಾದನೆಂದರೆ ಯಾರದ್ದೋ ಪ್ರಭಾವ ಕೆಲಸ ಮಾಡಿದೆ ಎಂದೇ ಅರ್ಥ. ಆಹಾರ, ಸಸ್ಯ, ಔಷಧಗಳೂ ಹೀಗೆಯೇ. ಪ್ರಭಾವ ಬೀರಲು ಬರುವುದು ಮನುಷ್ಯರಿಗೆ ಮಾತ್ರವಲ್ಲ!

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...