ತಾಯಿಯ ಗುಣಗಾನ

ಮನುಷ್ಯ ಮನುಷ್ಯನಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು ಉಚಿತವಲ್ಲ ಎಂದು ಇಸ್ಲಾಮ್ ಬೋಧಿಸುತ್ತದೆ. ಇಂಥ ನಡೆಗೆ ಅನುಮತಿ ನೀಡುವುದಾಗಿದ್ದರೆ ತನಗೆ ಸಾಷ್ಟಾಂಗ ನಮಸ್ಕಾರ ಮಾಡಲು ಪತಿಯು ಪತ್ನಿಗೆ ಆಜ್ಞಾಪಿಸಬಹುದಿತ್ತು. ಪತ್ನಿಯ ಮೇಲೆ ಪತಿಯ ಹಕ್ಕು ತುಂಬ ದೊಡ್ಡದು. ಪತ್ನಿಯು ಪತಿಯ ಸೇವೆ ಮಾಡುವುದರಲ್ಲಿ ಸಂತೋಷಪಡಬೇಕು. ತನ್ನ ಕಷ್ಟವನ್ನು ತೋರ್ಪಡಿಸಿಕೊಳ್ಳಬಾರದು. ಸರ್ವವಿಧಗಳಲ್ಲಿಯೂ ಪತಿಯ ಸೇವೆ ಮಾಡಬೇಕು. ಹ. ಆಯಿಷಾ (ರ) ತಮ್ಮ ಕೈಗಳಿಂದ ಪ್ರವಾದಿಗಳ ವಸ್ತ್ರಗಳನ್ನು ಒಗೆಯುತ್ತಿದ್ದರು. ಪ್ರವಾದಿಗಳ ತಲೆಗೆ ಎಣ್ಣೆಯನ್ನು ಹಚ್ಚುತ್ತಿದ್ದರು. ತಲೆ ಬಾಚುತ್ತಿದ್ದರು. ಪರಿಮಳದ್ರವ್ಯವನ್ನು ಹಚ್ಚುತ್ತಿದ್ದರು.

ಯಾವುದಾದರೂ ಮನೆಯಲ್ಲಿ ಒಂದು ಹೆಣ್ಣು ಮಗು ಹುಟ್ಟಿದರೆ ತಂದೆ-ತಾಯಿ ಆ ಮಗುವನ್ನು ಜೀವಂತ ದಫನ (ಮಣ್ಣು ಮಾಡುವುದು, ಜೀವಂತ ಹೂಳುವುದು) ಅಥವಾ ತಿರಸ್ಕಾರದಿಂದ ಕಾಣಬಾರದು. ಆ ಮಗುವನ್ನು ಹೆಚ್ಚು ಲಕ್ಷ್ಯೊಟ್ಟು ಪೋಷಿಸಿದರೆ ಅಲ್ಲಾಹನು ಸ್ವರ್ಗಪ್ರವೇಶ ಮಾಡಿಸುವನು. ತಮ್ಮ ಮನೆಯವರ ವಿಷಯದಲ್ಲಿ, ಹಣದ ವಿಷಯದಲ್ಲಿ ಹಾಗೂ ನೆರೆಹೊರೆಯವರ ವಿಷಯದಲ್ಲಿ ಮಾನವನು ಮಾಡುವ ತಪ್ಪುಗಳಿಗೆ ಪ್ರಾಯಶ್ಚಿತ್ತವಿದೆ. ಉಪವಾಸ ಮಾಡುವುದು, ನಮಾಜ್ ಮಾಡುವುದು, ದಾನ-ಧರ್ಮಗಳನ್ನು ಮಾಡುವುದು ಎಂದು ಪ್ರವಾದಿಗಳು ತಮ್ಮ ವಚನಗಳಲ್ಲೇ (ಹದೀಸ್) ಹೇಳಿದ್ದಾರೆ.

ಒಂದು ಸಾರಿ, ‘ಸ್ವರ್ಗಕ್ಕೆ ಅರ್ಹತೆ ಪಡೆಯಲು ಸಹಕರಿಸುವ ವಸ್ತು ಯಾವುದು’ ಎಂದು ವ್ಯಕ್ತಿಯೊಬ್ಬರು ಪ್ರವಾದಿಗಳನ್ನು ಪ್ರಶ್ನಿಸಿದರು. ಅದಕ್ಕೆ ಪ್ರವಾದಿವರ್ಯರು, ‘ಅಲ್ಲಾಹನ ಭಯ ಹಾಗೂ ಸಚ್ಚಾರಿತ್ರ್ಯ ಎಂದು ಉತ್ತರಿಸಿದರು. ಆ ವ್ಯಕ್ತಿಯು ಮತ್ತೆ, ‘ಜನರನ್ನು ನರಕಕ್ಕೆ ಕಳಿಸುವಂಥ ವಸ್ತು ಯಾವುದು?’ ಎಂದರು. ಅದಕ್ಕೆ ಪ್ರವಾದಿಗಳು, ‘ಮನುಷ್ಯನ ಬಾಯಿ ಮತ್ತು ಗುಹ್ಯೇಂದ್ರಿಯ’ ಎಂದು ಉತ್ತರಿಸಿದರು. ಒಬ್ಬ ಮನುಷ್ಯ ತನ್ನ ಬಾಯಿಯಿಂದ ನೀಚ ಮಾತುಗಳನ್ನು ಆಡಿದರೆ ಹಾಗೂ ತನ್ನ ಗುಹ್ಯೇಂದ್ರಿಯದ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳದಿದ್ದರೆ – ಅನೈತಿಕ ಕಾರ್ಯಗಳಲ್ಲಿ ತೊಡಗಿ ತನ್ನ ಚಾರಿತ್ರ್ಯನ್ನು ಕಳೆದುಕೊಳ್ಳುತ್ತಾನೆ’ ಎಂಬುದು ಪ್ರವಾದಿವರ್ಯರ ಅಭಿಪ್ರಾಯವಾಗಿತ್ತು.

ನಾಳಿನ ಅಂತರಂಗದಲ್ಲಿ: ಸ್ವಾಮಿ ಹರ್ಷಾನಂದಜೀ,

ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು

Leave a Reply

Your email address will not be published. Required fields are marked *