More

    ಉಡುಗಿದಾಗ ಜಂಘಾಬಲ ಕೈಹಿಡಿಯುವುದು ಮನೋಬಲ

    ಮನುಷ್ಯಜನ್ಮ ಬಲು ದೊಡ್ಡದು. ಏಕೆಂದರೆ ಸಕಲ ಜೀವರಾಶಿಗಳಲ್ಲಿ ತಿಳಿವಳಿಕೆ ಮತ್ತು ಅರಿವು ಎಂಬುದನ್ನು ಹೊಂದಿರುವ ಏಕೈಕ ಜೀವಿ ಎಂದರೆ ಅದು ಮನುಷ್ಯ ಮಾತ್ರ. ಈ ಮನುಷ್ಯನಿಗೆ ಇರುವ ಮನಸ್ಸು ಆತನ ಏಳು-ಬೀಳು, ಉನ್ನತಿ-ಅವನತಿಗೆ ಕಾರಣ. ಇದು ಲೋಕಾರೂಢಿಯ ಮಾತು ಹೌದು, ಮತ್ತೆ ನಮ್ಮ ಕಣ್ಣಿಗೆ ಕಂಡು ಬರುವ ಸತ್ಯವೂ ಹೌದು.

    ಉಡುಗಿದಾಗ ಜಂಘಾಬಲ ಕೈಹಿಡಿಯುವುದು ಮನೋಬಲಮನುಷ್ಯನ ಮನಸ್ಸು ಶಕ್ತಿಶಾಲಿ ಹಾಗೂ ಚಂಚಲ. ಅದರ ನಿಗ್ರಹ ಬಲು ಕಷ್ಟ. ಹಾಗಂತ ಅಸಾಧ್ಯದ ಮಾತೇನಲ್ಲ. ಆಯಾ ವಯಸ್ಸಿಗೆ ಅನುಗುಣವಾಗಿ ಹರಿದಾಡುವ ಮನಸ್ಸು ಕೈಗೆ ಸಿಗೋದು ಅಪರೂಪ. ಅನ್ಯರ ಭಾವನೆಗಳನ್ನು ಅರಿಯುವ, ನೋವುನಲಿವುಗಳಿಗೆ ಸ್ಪಂದಿಸುವ ತಿಳಿವಳಿಕೆ ಮನಸ್ಸಿಗಿರುತ್ತದೆ. ಇಷ್ಟರ ಮೇಲಾಗಿಯೂ ಕೆಲವು ವಿಕೃತಿಗಳು ಈ ಮನಸ್ಸಿಗೆ ಆವರಿಸಿಕೊಂಡಾಗ ಮಾನಸಿಕ ಕ್ಷೋಭೆ ಉಂಟಾಗುತ್ತದೆ. ಇದು ಆ ವ್ಯಕ್ತಿಯ ಜತೆಜತೆಗೆ ಆತನ ಇಡೀ ಕುಟುಂಬದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದಕ್ಕೆ ಒಂದು ಉದಾಹರಣೆ ಹೇಳಬೇಕೆಂದರೆ ದೇಶದ ಪ್ರಮುಖ ವಾಣಿಜ್ಯನಗರಿ ಮುಂಬೈನಲ್ಲಿ ಕರ್ನಾಟಕ ಮೂಲದ ಒಬ್ಬ ವ್ಯಕ್ತಿ. ಹೆಸರು ಬೇಡ. ಖಾಸಗಿ ಕಂಪನಿಯಲ್ಲಿ ತಾಂತ್ರಿಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ. ಎಂದೂ ಯಾರಿಗೂ ಕೆಟ್ಟ ಮಾತು ಆಡದ ವ್ಯಕ್ತಿ. ಸಕಲರಿಗೂ ಲೇಸನ್ನೇ ಬಯಸುವ ಗುಣ ಅವರದು. ಅವರು ಕೆಲಸ ಮಾಡುತ್ತಿದ್ದ ಕಂಪನಿ ಒಂದು ದಿನ ಏಕಾಏಕಿಯಾಗಿ ಅವರ ಕೈಕೆಳಗೆ ಕೆಲಸ ಮಾಡುವ ಒಂದಿಷ್ಟು ಕೆಲಸಗಾರರನ್ನು ಕೆಲಸದಿಂದ ತೆಗೆಯುವ ನಿರ್ಧಾರಕ್ಕೆ ಬರುತ್ತದೆ. ಈ ಬೆಳವಣಿಗೆ ಕೆಲಸ ಕಳೆದುಕೊಳ್ಳುವವರಿಗಿಂತ ಹೆಚ್ಚು ಆಘಾತ ಮಾಡಿದ್ದು ಈ ವ್ಯಕ್ತಿಗೆ. ಪರಿಣಾಮ ಅವರಿಗೆ ಇನ್ನಿಲ್ಲಿದ ಚಡಪಡಿಕೆ, ಕನವರಿಕೆ ಜತೆಗೆ ಆ ಕೆಲಸಗಾರರ ಭವಿಷ್ಯದ ಚಿಂತೆ. ಇಷ್ಟು ವರ್ಷ ಜತೆಗಿದ್ದುಕೊಂಡು ಕೆಲಸ ಮಾಡಿದವರಿಗೆ ಕಂಪನಿ ನಿರ್ಧಾರದಂತೆ ನಾಳೆಯಿಂದ ಬರಬೇಡ ಎಂದು ಹೇಳಬೇಕಾದ ಅನಿವಾರ್ಯತೆ ಇವರದ್ದು. ಇದರಿಂದ ನನ್ನ ಬಗ್ಗೆ ಎಲ್ಲಿ ಅವರಿಗೆ ತಪ್ಪು ಕಲ್ಪನೆ ಬರುತ್ತದೆಯೋ ಎಂಬ ಪಾಪಪ್ರಜ್ಞೆ ಈ ವ್ಯಕ್ತಿಗೆ ಕಾಡಲು ಶುರುವಾಯಿತು. ನಿದ್ದೆಯಿಲ್ಲ, ಸರಿಯಾದ ಊಟವಿಲ್ಲ, ಮಾಡಿದರೂ ಎಲ್ಲವೂ ಯಾಂತ್ರಿಕವಾಗಿ. ಮನಸ್ಸಿನೊಳಗೆ ಆತಂಕ, ದುಗುಡ ಇವರನ್ನು ಕಾಡಲಾರಂಭಿಸಿದೆ. ಮಾನಸಿಕ ನೆಮ್ಮದಿ ಎನ್ನುವುದು ಕನಸಿನ ಮಾತು. ಕುಳಿತರೂ ನಿಂತರೂ ಸಮಾಧಾನವಿಲ್ಲ. ಏಕೆಂದರೆ ಈ ವ್ಯಕ್ತಿ ಇಡೀ ಜೀವನದಲ್ಲಿ ಇಂತಹ ಪರಿಸ್ಥಿತಿ ಎದುರಾಗಬಹುದು ಎಂಬುದನ್ನೇ ಊಹಿಸಿರಲಿಲ್ಲ ಅಥವಾ ನಿರೀಕ್ಷಿಸಿರಲಿಲ್ಲ.ಇಂತಹ ಕಠಿಣ ನಿರ್ಧಾರ ಕೈಗೊಳ್ಳುವ ಸಂದಿಗ್ಧ ಪರಿಸ್ಥಿತಿ ಆ ವ್ಯಕ್ತಿಗೆ ಇನ್ನಿಲ್ಲಿದ ಮಾನಸಿಕ ಹಿಂಸೆ ಕೊಟ್ಟಿದೆ. ಆಗ ಅವರು ನನ್ನ ಸಲಹೆ ಕೇಳಿದರು. ಆಗ ನಾನು ಅದಕ್ಕೆ ಆಪ್ತಸಲಹೆ ಮೂಲಕ ಧೈರ್ಯ ತುಂಬುವುದರ ಜತೆಗೆ ವೈಜ್ಞಾನಿಕ ಚಿಕಿತ್ಸೆಯನ್ನೂ ನೀಡಿದೆ. ಕ್ರಮೇಣ ಅವರು ಸುಧಾರಣೆಯಾಗುತ್ತಿದ್ದಾರೆ.

    ಈ ಉದಾಹರಣೆ ಮೂಲಕ ನಾನು ಹೇಳಹೊರಟಿರುವುದು ಏನೆಂದರೆ ಮನುಷ್ಯನ ಮನಸ್ಸಿಗೆ ಅಥವಾ ಮನಃಸ್ಥಿತಿಗೆ ಏನಾದರೂ ಆಘಾತ, ಧಕ್ಕೆ ಉಂಟಾದರೆ ಸುಧಾರಣೆ ಸ್ವಲ್ಪ ಕಠಿಣ. ಅದರಲ್ಲೂ ವೀಕ್ ಮೈಂಡೆಡ್ ಜನ ಆಗಿದ್ದರಂತೂ ತುಂಬಾನೇ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಯಾರೇ ಆಗಲಿ ಕೈಗೊಳ್ಳಬೇಕಾದ ನಿರ್ಧಾರ ಎಂದರೆ ಮನೋಧೈರ್ಯ. ದಾಸರು ತಮ್ಮ ಪದಗಳಲ್ಲಿ ಹೇಳುವಂತೆ, ‘ಬಂದದ್ದೆಲ್ಲಾ ಬರಲಿ ನಿನ್ನ ದಯವೊಂದಿರಲಿ’ ಎನ್ನುವಂತೆ ಗಟ್ಟಿ ನಿಲುವು ಅತ್ಯಗತ್ಯ. ಇದಕ್ಕೆ ಪೂರಕವಾಗಿ ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಂದ ಮನೋಬಲ ಸಿಕ್ಕಾಗ ಇಡೀ ಜಗತ್ತನ್ನೇ ಗೆಲ್ಲುವ ಎದುರಿಸುವ ಆತ್ಮವಿಶ್ವಾಸ, ಧೈರ್ಯ ಆ ವ್ಯಕ್ತಿಯಲ್ಲಿ ಬರುತ್ತದೆ. ಅದಕ್ಕೆ ಮನೋಬಲ ಅಥವಾ ಮನೋಧೈರ್ಯ ತುಂಬಾನೇ ಪ್ರಮುಖ. ಡಿಜ್ಝಿ್ಝಟಡಿಛ್ಟಿ ಜಿಠ ಚ್ಝಡಿಚಢಠ ಞಟಠಿಜಿಡಚಠಿಟ್ಟ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts