ಹೀಗೆ ಮಾಡಿದರೆ ಮಾತ್ರ ಹೃದಯ ಯಾವಾಗಲೂ ಆರೋಗ್ಯದಿಂದ ಇರುತ್ತದೆ

ಯಾವುದೇ ಕೆಲಸವನ್ನು ಮಾಡುವುದಿದ್ದರೂ ಅದು ನಮ್ಮ ಮನಸ್ಸಿಗೆ ಸಮಾಧಾನವನ್ನು ತರುವಂತಿರಬೇಕು. ಆ ಕೆಲಸ ಸಂತೋಷವನ್ನು ಕೊಡುವಂಥದ್ದಾಗಿರಬೇಕು. ಮನಸ್ಸಿಗೆ ಸಮಾಧಾನವನ್ನು ತರಬೇಕು. ಕೆಲಸವನ್ನು ಚೆನ್ನಾಗಿ ಮನಃಪೂರ್ವಕವಾಗಿ ಮಾಡಬೇಕು. ಕೆಲಸ ಮಾಡುವಾಗ ಯಾವುದೇ ಆಸೆ, ಅಭಿಲಾಷೆ, ಫಲಾಪೇಕ್ಷೆಗಳನ್ನು ಇಟ್ಟುಕೊಳ್ಳದೆ ನಿಷ್ಕಾಮ ಮನೋಭಾವದಿಂದ ಮಾಡಬೇಕು. ಕೆಲಸವನ್ನು ಕೆಲಸಕ್ಕಾಗಿ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ಹೃದಯ ಯಾವಾಗಲೂ ಆರೋಗ್ಯದಿಂದ ಇರುತ್ತದೆ.

ಕೆಲವರು, ‘ಫ್ಯಾಟ್ ತಿಂದರೆ ಒಳ್ಳೆಯದಲ್ವಾ? ಕೊಲೆಸ್ಟರಾಲ್ ತಿಂದರೆ ಒಳ್ಳೆಯದಲ್ವಾ?’ ಎಂದೆಲ್ಲ ಕೇಳುತ್ತಾರೆ. ಇದೆಲ್ಲ ವ್ಯಾಪಾರ. ಏನಾಯ್ತೆಂದರೆ – ಐವತ್ತರ ದಶಕದಲ್ಲಿ ಕೆಲವು ಅಧ್ಯಯನಗಳಿಂದ ತಿಳಿದುಬಂದ ಸಂಗತಿ ಏನೆಂದರೆ – ಸಕ್ಕರೆಯನ್ನು ತಿಂದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು. ಇದನ್ನು ಲಂಡನ್ ವಿಶ್ವವಿದ್ಯಾಲಯದ ಬಹು ದೊಡ್ಡ ನ್ಯೂಟ್ರಿಷಿಯನ್ ಡಾ. ಜಾನ್ ಯುಡ್ಕಿನ್ ಎನ್ನುವವರು ಸಕ್ಕರೆಯ ವಿಚಾರವಾಗಿ ಕ್ಠ್ಟ, ಗಜಜಿಠಿಛಿ ಚ್ಞಛ ಈಛಿಚಛ್ಝಢ ಎಂಬ ಪುಸ್ತಕವನ್ನು ಬರೆದರು. ಅದು ಸಂಪೂರ್ಣವಾಗಿ ಸಕ್ಕರೆಯ ಗುಣಾವಗುಣಗಳನ್ನು ಕುರಿತ ವಿಚಾರಗಳೇ ಇರುವಂತಹ ಪುಸ್ತಕ. ಸಕ್ಕರೆ ಆರೋಗ್ಯಕ್ಕೆ ಬಹಳ ಹಾಳು ಎಂಬುದನ್ನು ಅವರು ಆ ಪುಸ್ತಕದಲ್ಲಿ ತೋರಿಸಿಕೊಟ್ಟರು. ಅದರಲ್ಲೂ ಹೃದಯದ ಆರೋಗ್ಯಕ್ಕೆ ತುಂಬ ಹಾನಿಕರ.

ಆಗ ಸಕ್ಕರೆ ಲಾಬಿಯವರು, ತಮ್ಮ ವ್ಯಾಪಾರ ಹಾಳಾಗುತ್ತದೆಂದು ಬಹಳ ಅಸಮಾಧಾನಗೊಂಡರು. ಇಂಗ್ಲೆಂಡ್​ನಲ್ಲಿ ಅಷ್ಟೇ ಅಲ್ಲ, ಜಗತ್ತಿನ ಎಲ್ಲೆಡೆಯೂ ಸಕ್ಕರೆ ತಯಾರಕರು ಬಹು ಪ್ರಭಾವಶಾಲಿಗಳು. ಅವರೆಲ್ಲ ಸೇರಿ ಹಾರ್ವರ್ಡ್​ನ ಮೂವರು ವಿಜ್ಞಾನಿಗಳಿಗೆ ಐವತ್ತು ಮಿಲಿಯನ್ ಡಾಲರ್ ಹಣ ಕೊಟ್ಟು (ಈಗ ಹಣ ಕೊಟ್ಟರೆ ವಿಜ್ಞಾನಿಗಳು ಸಿಗುತ್ತಾರೆ!) ಅವರಿಂದ, ‘ಸಕ್ಕರೆ ಹಾಳಲ್ಲ. ಕೊಬ್ಬು ಹಾಳು’ ಎಂದು ಒಂದು ಹೊಸ ಸಂಗತಿಯನ್ನು ಪ್ರತಿಪಾದಿಸುವಂತೆ ಪ್ರಭಾವ ಬೀರಿದರು. ಆ ವಿಜ್ಞಾನಿಗಳು ಅದನ್ನು ಅಚ್ಚುಕಟ್ಟಾಗಿ ಮಾಡಿದರು. ಈ ಬಗ್ಗೆ ಉತ್ತಮವಾದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದು ಹೇಗೆ, ಹೇಗೆ ಬರೆದರೆ ಅದು ಪ್ರಕಟವಾಗುತ್ತದೆ ಎಂಬುದೆಲ್ಲ ಅವರಿಗೆ ಹೇಗೂ ಗೊತ್ತಿತ್ತು. ಅದರಲ್ಲಿ ಸತ್ಯ-ಸುಳ್ಳು ಅಂತ ಇಲ್ಲ. ಸುಳ್ಳೂ ಆಗಬಹುದು, ಸತ್ಯವೂ ಇರಬಹುದು. ಅದು ಬರವಣಿಗೆಯ ಕ್ರಮವನ್ನು ಅವಲಂಬಿಸಿರುತ್ತದೆ. ಸತ್ಯವನ್ನು ಬರೆಯಲು ಗೊತ್ತಿಲ್ಲದಿದ್ದರೆ ಪ್ರಕಟಿಸುವುದಿಲ್ಲ. ಹೀಗಾಗಿ ಆ ವಿಜ್ಞಾನಿಗಳು ವ್ಯವಸ್ಥಿತವಾಗಿ ಒಂದು ಸಂಶೋಧನೆಯನ್ನು ಆರಂಭಿಸಿದರು.

ಫ್ಯಾಟ್​ನಿಂದಲೇ ಎಲ್ಲ ಸಮಸ್ಯೆಗಳೂ ಉದ್ಭವವಾಗುವುದು. ನಂತರ ಫ್ಯಾಟನ್ನು ಸ್ಯಾಚ್ಯುರೇಟೆಡ್ ಫ್ಯಾಟ್, ಅನ್​ಸ್ಯಾಚ್ಯುರೇಟೆಡ್ ಫ್ಯಾಟ್, ಗುಡ್ ಕೊಲೆಸ್ಟರಾಲ್, ಬ್ಯಾಡ್ ಕೊಲೆಸ್ಟರಾಲ್, ಅದು-ಇದು ಎಂದೆಲ್ಲ ವಿಂಗಡಿಸಿದರು. ಇಷ್ಟೆಲ್ಲ ಮಾಡಿ ಕಳೆದ ಐವತ್ತು ವರ್ಷಗಳಲ್ಲಿ ಅವರು ಮಿಲಿಯಾಂತರ ದುಡ್ಡು ಮಾಡಿದರು. ಈ ಫ್ಯಾಟ್ ಹಾಳು ಎಂದು ಹೇಳಿ ಸಕ್ಕರೆಯವರು ದುಡ್ಡು ಮಾಡಿಕೊಂಡರು. ಫ್ಯಾಟ್ ಹಾಳು ಎಂದು ಹೇಳಿ, ಆ ಕೊಲೆಸ್ಟರಾಲ್ ಕೆಳಕ್ಕೆ ತರುವುದಕ್ಕೆ ಔಷಧಗಳನ್ನು ತಯಾರಿಸಿದರು. ಅರವತ್ತರ ದಶಕದ ಆರಂಭದಲ್ಲಿ ಒಂದು ಔಷಧ ಪ್ರಚಲಿತದಲ್ಲಿತ್ತು. ಅದು ಮರಳಿನ ಹಾಗಿತ್ತು. ದೊಡ್ಡ ಟೇಬಲ್ ಸ್ಪೂನ್​ನಲ್ಲಿ ದಿನಕ್ಕೆ ಮೂರು ಬಾರಿ ಆ ಔಷಧವನ್ನು ಸೇವಿಸಬೇಕಾಗಿತ್ತು. ಅದನ್ನು ಸೇವಿಸಿದರೆ ಮೂರು ಸಲ ಊಟ ಮಾಡಿದ ಹಾಗೆಯೇ ಆಗುತ್ತಿತ್ತು. ಎಷ್ಟೋ ಜನ ಊಟವನ್ನೇ ಮಾಡುತ್ತಿರಲಿಲ್ಲ. ಅದನ್ನು ಸೇವಿಸಿ ಫ್ಯಾಟ್ ಮಟ್ಟ ಕೆಳಕ್ಕೆ ತರಬೇಕೆಂದು ಜನ ಕಷ್ಟಪಟ್ಟು ಪ್ರಯತ್ನಿಸುತ್ತಿದ್ದರು. ಈಗ ಸಣ್ಣ ಸಣ್ಣ ದುಬಾರಿ ಬೆಲೆಯ ಮಾತ್ರೆಗಳೆಲ್ಲ ಮಾರುಕಟ್ಟೆಗೆ ಬಂದಿವೆ. ಅವುಗಳನ್ನು ಸೇವಿಸಿದ ಕೂಡಲೇ ಫ್ಯಾಟ್​ನ ರಿಪೋರ್ಟ್ ಸರಿಯಾಗುತ್ತದೆ. ಆದರೆ ದೇಹ ಹಾಳಾಗುತ್ತದೆ.

Leave a Reply

Your email address will not be published. Required fields are marked *