More

    ಸ್ಫೂರ್ತಿಯಿಂದ ರಮೇಶ್​| ಶ್ರೀಮಂತರಾಗೋದು ಬಹಳ ಸುಲಭ…

    ಬೇಡದಿರುವ ಖರ್ಚು, ಮತ್ತೊಬ್ಬರನ್ನು ಇಂಪ್ರೆಸ್ ಮಾಡಲು ಖರೀದಿಸುವ ವಸ್ತು, ಅನಾವಶ್ಯಕ ಆಡಂಬರಗಳಿಂದ ದೂರ ಇರಬೇಕು. ನಿಜವಾಗಲೂ ಖುಷಿ ನೀಡುವ ವಿಷಯಗಳನ್ನು ತ್ಯಾಗ ಮಾಡದೇ, ಅತೀ ವೆಚ್ಚಕ್ಕೆ ಕಾರಣವಾಗಿರುವ ಸುಳ್ಳು ವಿಷಯಗಳಿಂದ ದೂರವಿರುವುದು ನಿಜವಾದ ಜಾಣತನ.

    ಶವಪೆಟ್ಟಿಗೆಗಳಿಗೆ ಜೇಬುಗಳಿಲ್ಲ ಅಂತ ಎಲ್ಲೋ ಓದಿದ ನೆನಪು. ತಾನು ಸತ್ತಾಗ, ತನ್ನ ಎರಡೂ ಅಂಗೈಗಳನ್ನು ಸ್ಫೂರ್ತಿಯಿಂದ ರಮೇಶ್​| ಶ್ರೀಮಂತರಾಗೋದು ಬಹಳ ಸುಲಭ...ಶವಪೆಟ್ಟಿಗೆ ಹೊರಗೆ ಬರುವಂತೆ ಮಾಡಿ, ಮೆರವಣಿಗೆ ಮಾಡಿಸಿ ಎಂದು ಅಲೆಕ್ಸಾಂಡರ್ ಆಜ್ಞೆ ಮಾಡಿದ್ದನಂತೆ. ಇಡೀ ಜಗತ್ತನ್ನೇ ಗೆದ್ದರೂ, ಸತ್ತ ಮೇಲೆ ಬರೀಗೈಯಲ್ಲೇ ಹೋಗಬೇಕು ಅನ್ನೋದು ಅವನ ಜೀವನದ ಕೊನೆಯ ಸಂದೇಶವಾಗಿತ್ತು. ಜೀವನದ ಕೊನೆಯ ದಿನಗಳಲ್ಲಿ ಈ ಹಣ, ದುಡ್ಡು, ಡಬ್ಬು ಅನ್ನೋದು ಜೀವನದ ಮೊದಲ ಗುರಿಯಾಗಿ ಇರೋಕೆ ಸಾಧ್ಯ ಇಲ್ಲ ಅಂತ ಜ್ಞಾನೋದಯ ಆಗುತ್ತೆ ಎಂದು ಹಿರಿಯರ ಕಥೆಗಳ ಮೂಲಕ ಕೇಳಿದ್ದೀನಿ.

    ಆದರೆ, ಸಾಮಾನ್ಯ ಮನುಷ್ಯನಿಗೆ, ನನ್ನ-ನಿಮ್ಮಂಥವರಿಗೆ ದುಡ್ಡು ಅನ್ನೋದು ದೊಡ್ಡ ಆಕರ್ಷಣೆ. ಕೆಲವರಿಗೆ ಹೇಗಾದರೂ ಸರಿ, ದುಡ್ಡು ಮಾಡಬೇಕೆಂಬ ಹಠ. ಇನ್ನೂ ಕೆಲವರಿಗೆ ಅದು ಬಿಡಿಸಲಾಗದ ಒಗಟು. ಒಂದಿಷ್ಟು ಜನರಿಗೆ ದುಡ್ಡು ಎಂದರೆ ತಮ್ಮ ಎಲ್ಲ ಆಸೆಗಳನ್ನು ತೀರಿಸುವಂತಹ ಕಾಮಧೇನುವಾದರೆ, ಇನ್ನೊಂದಿಷ್ಟು ಜನರಿಗೆ ಅದು ಕೈಗೆಟುಕದ ಮರೀಚಿಕೆ. ದುಡ್ಡು ಎಂದರೆ ಮಾಡಿದ ತಪು್ಪಗಳನ್ನು ಮತ್ತು ಪಾಪಗಳನ್ನು ಮುಚ್ಚಿಡುವಂಥ ಬೆಡ್​ಶೀಟ್, ದುಡ್ಡು ಎಂದರೆ ಕೆಲವರು ಅನರ್ಹರಾದರೂ ಎತ್ತರದ ಶಿಖರಗಳನ್ನು ಏರಿಸಬಲ್ಲ ಏಣಿ, ಸಾಧಾರಣ ಆಸೆಗಳನ್ನೂ ಪೂರೈಸುವುದಕ್ಕೆ ಬಿಡದಂತ ಮಾಯೆ … ಹೀಗೆ ದುಡ್ಡು ಎಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುತ್ತದೆ.

    ದುಡ್ಡು ಮಾಡೋದು ಹೇಗೆ? Financially Secure ಆಗೋದು ಹೇಗೆ? ಎಂಬ ಪ್ರಶ್ನೆ ಹಲವರನ್ನು ಸಹಜವಾಗಿಯೇ ಕಾಡುತ್ತಿರುತ್ತದೆ. ದಲೈಲಾಮಾ ಒಮ್ಮೆ ಟಿವಿ ಸಂದರ್ಶನದಲ್ಲಿ ಹೀಗೆ ಹೇಳೋದನ್ನು ಕೇಳಿದ್ದೆ. ಅವರಿಗೆ ದಿನಕ್ಕೆ ಕೇವಲ 32 ಪೈಸೆ ಸಾಕಂತೆ. ಅವರ ಊಟ-ವಸತಿಯೆಲ್ಲ ಧರ್ಮಶಾಲಾದಲ್ಲೇ ಕಳೆಯುತ್ತದೆಯಂತೆ. ವರ್ಷಕ್ಕೊಮ್ಮೆ ವಾಚ್​ನ ಸ್ಟ್ರಾಪ್ ಬದಲಾಯಿಸಬೇಕು ಎನ್ನುವುದು ಅವರ ಆಸೆಯಾಗಿತ್ತಂತೆ. ಅದಕ್ಕೆ 250 ರೂಪಾಯಿ ಖರ್ಚಾಗುತ್ತದೆ. ಅದನ್ನು ಬಿಟ್ಟರೆ, ಅವರಿಗೆ ಬೇರೆ ಆಸೆ ಮತ್ತು ಅಗತ್ಯಗಳು ಇರಲಿಲ್ಲವಂತೆ. ಹಾಗಾಗಿ ತನಗೆ ದುಡ್ಡು ಬೇಡ ಎಂದು ನಗುತ್ತ ಹೇಳುತ್ತಿದ್ದರು.

    ಯಾವತ್ತೂ ಒಂದು ವಿಷಯ ಗಮನದಲ್ಲಿರಲಿ. ನಮ್ಮ ಅಗತ್ಯಗಳೇನು ಅನ್ನೋದರ ಮೇಲೆ ನಮ್ಮ ಆಸೆಗಳು ಅವಲಂಬಿಸಿರಬೇಕು. Financial Security ಅಂದರೆ ಸಿಕ್ಕಾಪಟ್ಟೆ ದುಡ್ಡು ಮಾಡೋದು ಅಂತಲ್ಲ. ನಮ್ಮ ಸಂಪಾದನೆ ಒಳಗೆ ನಮ್ಮ ಜೀವನವನ್ನು ನಡೆಸುವ ಜಾಣ್ಮೆಯೇ ನಿಜವಾದ Financial Security. ಮೊದಲನೇದಾಗಿ ಬೇಡದಿರುವ ಖರ್ಚುಗಳು, ಮತ್ತೊಬ್ಬರನ್ನು ಇಂಪ್ರೆಸ್ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಖರೀದಿ ಮಾಡುವ ವಸ್ತುಗಳು, ಅನಾವಶ್ಯಕವಾದ ಆಡಂಬರ ಇತ್ಯಾದಿಗಳಿಂದ ದೂರ ಇರಬೇಕು. ನಿಮಗೆ ನಿಜವಾಗಲೂ ಖುಷಿ ನೀಡುವ ವಿಷಯಗಳನ್ನು ತ್ಯಾಗ ಮಾಡದೇ, ಅತೀ ವೆಚ್ಚಕ್ಕೆ ಕಾರಣವಾಗಿರುವ ಸುಳ್ಳು ವಿಷಯಗಳಿಂದ ದೂರವಿರುವುದು ನಿಜವಾದ ಜಾಣತನ. ಹೀಗೆ Outflowನ ಕಂಟ್ರೋಲ್ ಮಾಡುವುದು ಒಂದು ಕಡೆಯಾದರೆ, Inflowನ ಹೆಚ್ಚು ಮಾಡೋದು ಹೇಗೆ ಅನ್ನೋದು ಇನ್ನೊಂದು ಕಡೆ.

    ‘ರಮೇಶ, ದುಡ್ಡು ಮರದಲ್ಲಿ ಬೆಳೆಯೋಲ್ಲ’ ಅಂತ ನಮ್ಮಮ್ಮ ಹೇಳುತ್ತಿದ್ದರು. ದುಡ್ಡು ಮರದಲ್ಲಿ ಬೆಳೆಯುವುದಿಲ್ಲ ಎಂದರೆ, ಬೇರೆ ಹೇಗೆ ಸಿಗುತ್ತದೆ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ದುಡ್ಡು ಎನ್ನುವುದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸಿಗಬೇಕು. ಒಂದೋ, ನೀವು ನನಗೆ ಕೊಡಬೇಕು ಅಥವಾ ನಾನು ನಿಮಗೆ ಕೊಡಬೇಕು. ನಾನ್ಯಾಕೆ ನಿಮಗೆ ದುಡ್ಡು ಕೊಡಲಿ? ನೀವು ಯಾವುದಾದರೂ ರೀತಿಯಲ್ಲಿ ನನಗೆ ಸಹಾಯ ಮಾಡಿದರೆ, ನನ್ನ ಬದುಕನ್ನು ಸುಲಭಗೊಳಿಸಿದರೆ ಅಥವಾ ನನಗೊಂದು ಒಳ್ಳೆಯ ಅನುಭವ ನೀಡಿದರೆ ನಾನು ನಿಮಗೆ ಹಣ ಕೊಡುತ್ತೀನಿ. It is about adding value to somebody’s life. ನನ್ನ ಜೀವನವನ್ನು ಇನ್ನಷ್ಟು ಅನುಕೂಲ ಮಾಡುವಂಥ ವಿಷಯಗಳು, ಸಮಯವನ್ನು ಉಳಿಸುವ ವಿಷಯಗಳು, ಮನಸ್ಸಿಗೆ ತೃಪ್ತಿಕೊಡುವ ವಿಷಯಗಳು, ಕುಟುಂಬದವರಿಗೆ ಮತ್ತು ಆಪ್ತರಿಗೆ ಸಹಾಯವಾಗುವಂತಹ ವಿಷಯಗಳಾದರೆ ನಾನು ನನ್ನ ದುಡ್ಡು ಖರ್ಚು ಮಾಡುತ್ತೇನೆ. ನೀವು ದುಡ್ಡು ಮಾಡಬೇಕೆಂದರೆ, ಇನ್ನೊಬ್ಬರ ಜೀವನಕ್ಕೆ ಸಹಾಯವಾಗುವಂಥ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಕು. ಹಾಗಾಗಿ ನಿಮ್ಮ ಸಂಪಾದನೆಯನ್ನು ನಿರ್ಧರಿಸುವುದು ನಿಮ್ಮ ಕೊಡುಗೆ. ನಿಮ್ಮ ಕೊಡುಗೆ ಎಷ್ಟು ಹೆಚ್ಚಿರುತ್ತದೋ, ನಿಮ್ಮ ಸಂಪಾದನೆ ಸಹ ಅಷ್ಟೇ ಹೆಚ್ಚಿರುತ್ತದೆ. ನೀವು ಮಾಡುವ ಅದೇ ಕೆಲಸವನ್ನು, ಅದೇ ಸೇವೆಯನ್ನು ಇನ್ನೂ ಶ್ರೇಷ್ಠವಾಗಿ ಇನ್ನೊಬ್ಬ ಮಾಡುತ್ತಾನೆ ಎಂದರೆ, ಅವನ ಸಂಪಾದನೆ ಇನ್ನೂ ಹೆಚ್ಚಾಗಿರುವುದು ಸ್ವಾಭಾವಿಕ. ಹಾಗಾಗಿ, ನೀವು ಮಾಡುವ ಕೆಲಸದಲ್ಲಿ, ನಿಮ್ಮ ಕ್ಷೇತ್ರದಲ್ಲಿ ನಿಪುಣರಾಗುವುದು, ಕೌಶಲ ಇನ್ನೂ ಬೆಳೆಸಿಕೊಳ್ಳುವುದು ಬಹಳ ಅಗತ್ಯ.

    ಹಾಗಂತ, ಒಳ್ಳೆಯ ಕೆಲಸಗಾರನಾಗಿರೋದಷ್ಟೇ ಮುಖ್ಯವಲ್ಲ. ನಿಮ್ಮ ಮಾತನ್ನು ಹೇಗೆ ಉಳಿಸಿಕೊಳ್ಳುತ್ತೀರಿ, ಒಪ್ಪಿಕೊಂಡ ಸಮಯದಲ್ಲಿ ಕೆಲಸವನ್ನು ಹೇಗೆ ಮುಗಿಸುತ್ತೀರಿ, ಇನ್ನೊಬ್ಬರ ಜತೆಗೆ ಹೇಗೆ ಸ್ಪಂದಿಸುತ್ತೀರಿ, ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮನ್ನು ನಂಬಿ ಒಂದು ಕೆಲಸವನ್ನು ಕೊಟ್ಟರೆ ಆ ಕೆಲಸವನ್ನು ಸರಿಯಾದ ರೀತಿಯಲ್ಲಿ ಮುಗಿಸುತ್ತೀರಾ? ಹೀಗೆ ಹಲವು ವಿಷಯಗಳು ಪರೋಕ್ಷವಾಗಿ ನಿಮ್ಮ ಸಂಪಾದನೆಯನ್ನು ನಿರ್ಧರಿಸುತ್ತವೆ. ನೀವು ನೂರು ರೂಪಾಯಿಗಳಿಗೆ ಮಾಡುವ ಅದೇ ಕೆಲಸವನ್ನು ಇನ್ನೊಬ್ಬ 70 ರೂ.ಗಳಿಗೆ ಮಾಡುತ್ತಾನೆ ಎಂದರೆ ಸಹಜವಾಗಿಯೇ ಎಲ್ಲರೂ ಅವನ ಬಳಿ ಹೋಗುತ್ತಾರೆ. ಆದರೆ, ನೀವು ಕೊಟ್ಟ ಕೆಲಸವನ್ನು ಶ್ರೇಷ್ಠವಾಗಿ ಮಾಡುವುದರ ಜತೆಗೆ ಎಲ್ಲ ರೀತಿಯಲ್ಲಿ ನ್ಯಾಯಯುತವಾಗಿ ನಡೆದುಕೊಂಡು, ನನ್ನ ನಂಬಿಕೆಯನ್ನು ಗಳಿಸಿದರೆ ನೀವು 200 ರೂಪಾಯಿ ಕೇಳಿದರೂ ನಾನು ನಿಮ್ಮ ಹತ್ತಿರ ಬರುತ್ತೇನೆ. ಹಾಗಾಗಿ ಮಾಡುವ ಕೆಲಸದಲ್ಲಿ ನೀವು Irreplaceable ಆಗುವುದು ಮೊದಲ ವಿಷಯ. ನಿಮಗೆ ಕೆಲಸ ಕೊಟ್ಟವರಿಗೆ ನಿಮ್ಮನ್ನು ತೆಗೆದು ಆ ಜಾಗದಲ್ಲಿ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳುವುದಕ್ಕೂ ಕಷ್ಟ ಆಗಬೇಕು. ಆ ರೀತಿ ನಿಮ್ಮ ಕೌಶಲಗಳನ್ನ ಬೆಳೆಸಿಕೊಳ್ಳಬೇಕು. ಎರಡನೆಯದಾಗಿ ಆ expertise ಜತೆಗೆ, ನಿಮ್ಮ ಜತೆ ವ್ಯವಹರಿಸೋದೇ ಒಂದು ಹಿತವಾದ ಅನುಭವವಾದರೆ ಮತ್ತೆಮತ್ತೆ ಅವಕಾಶಗಳು ಹೊಸ ರೂಪದಲ್ಲಿ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.

    ಹಾಗಾಗಿ ಎಷ್ಟು ಮೌಲ್ಯಯುತವಾದ ಕೊಡುಗೆ ಕೊಡುತ್ತೀರೋ, ಆ ಕೊಡುಗೆ ಅದೆಷ್ಟು ಜನರಿಗೆ ತಲುಪುತ್ತದೋ, ಅದರ ಮೇಲೆ ಆದಾಯದ ಗುಟ್ಟು ಸಹ ಅವಲಂಬಿಸಿರುತ್ತದೆ. ಬಿಲ್ ಗೇಟ್ಸ್ ಜಗತ್ತಿನ ಅತೀ ಶ್ರೀಮಂತ ವ್ಯಕ್ತಿ ಆಗಿದ್ದಕ್ಕೆ ಕಾರಣ, ಅವನು ನೀಡಿದಂತ Windows. ಅದು ಒಬ್ಬಿಬ್ಬರಿಗಲ್ಲ, ಜಗತ್ತಿನ ಪ್ರತಿಯೊಬ್ಬರಿಗೂ ಉಪಯೋಗವಾಯಿತು. ಹಾಗಾಗಿ, ನೀವು ನೀಡುವ ಕೊಡುಗೆ ಅಸಂಖ್ಯ ಜನರಿಗೆ ಸಹಾಯಕ ವಾದಾಗ, ಹಣದ ರೂಪದಲ್ಲಿ ನಿಮಗೇ ವಾಪಸ್ಸು ಬರುತ್ತದೆ. ಅದರಿಂದ ನೀವು ಶ್ರೀಮಂತರಾಗುವುದು ಖಂಡಿತಾ.

    ಶ್ರೀಮಂತರಾಗೋದು ಬಹಳ ಸುಲಭ… ಏನಂತೀರಾ?

    (ಲೇಖಕರು ನಟ, ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts