ವಿಶೇಷ ವರದಿ: ಕರಗುತ್ತಿದೆ ಕೃಷಿ ಭೂಮಿ, ಬರಡಾಗಿದೆ ಶೇ 36.24 ಪ್ರದೇಶ -ಆಹಾರ ಕೊರತೆ ಭೀತಿ

blank

|ರಮೇಶ ದೊಡ್ಡಪುರ ಬೆಂಗಳೂರು

ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ಸರ್ಕಾರದ ವತಿಯಿಂದ ಹತ್ತಾರು ಯೋಜನೆ, ಕಾರ್ಯಕ್ರಮಗಳು ಅನುಷ್ಠಾನವಾಗಿರುವ ಹೊರತಾಗಿಯೂ ಹೆಚ್ಚುತ್ತಿರುವ ನಗರೀಕರಣ, ಕೈಗಾರಿಕೀಕರಣ ಹಾಗೂ ಗಣಿಗಾರಿಕೆಯಿಂದಾಗಿ ರಾಜ್ಯದ ಶೇ.36.24 ಭೂಮಿ ಬರಡಾಗಿದೆ. ಇದು ಭವಿಷ್ಯದಲ್ಲಿ ಮಾರಕ ಎಂದೇ ವಿಶ್ಲೇಷಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಸಿದ್ಧಪಡಿಸಿರುವ ವರದಿಯಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ವಿವಿಧ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಪರಿವತಿರ್ಸುವ ಕಾರ್ಯ ದೇಶದೆಲ್ಲೆಡೆ ನಡೆಯುತ್ತಿದೆ. ಕರ್ನಾಟಕದಲ್ಲೂ ಈ ಕಾರ್ಯ ಎಗ್ಗಿಲ್ಲದೆ ಸಾಗಿದೆ. ಭೂಮಿಯ ಲವತ್ತತೆ ಹಾಗೂ ಬಂಜರುಗೊಳಿಸುತ್ತಿರುವ ಪ್ರಮಾಣ ತಿಳಿಯಲು ಭಾರತೀಯ ರಿಮೋಟ್​ ಸೆನ್ಸಿಂಗ್​ (ಐಆರ್​ಎಸ್​) ಉಪಗ್ರಹದ ಮೂಲಕ ಪ್ರತಿ ಐದು ವರ್ಷಕ್ಕೊಮ್ಮೆ ನಡೆಸುವ “ಬರಡುಗೊಳಿಸುವಿಕೆ, ಭೂಮಿ ಗುಣಮಟ್ಟ ಕುಸಿತ ಅಟ್ಲಾಸ್​’ ಪರೀೆ ವರದಿ ಇತ್ತೀಚೆಗೆ ಬಿಡುಗಡೆ ಆಗಿದ್ದು, ಅದರಲ್ಲಿ ಹತ್ತಾರು ಕುತೂಹಲಕಾರಿ ಅಂಶ ಬಯಲಾಗಿದೆ.

ಕರ್ನಾಟಕಕ್ಕೆ ಎಚ್ಚರಿಕೆ: ವಿವಿಧ ಕಾರಣಗಳಿಂದಾಗಿ ಕರ್ನಾಟಕದ 1.55 ಲಕ್ಷ ಹೆಕ್ಟೇರ್​ ಅಂದರೆ ಸುಮಾರು 3.8 ಲಕ್ಷ ಎಕರೆ ಪ್ರದೇಶ ಬರಡಾಗಿದೆ. ಕಳೆದ 15 ವರ್ಷದಲ್ಲೇ 70 ಸಾವಿರ ಹೆಕ್ಟೇರ್​ ಭೂಮಿ ಲವತ್ತತೆ ಕಳೆದುಕೊಂಡಿರುವುದು ವರದಿಯಿಂದ ತಿಳಿದುಬಂದಿದೆ. ಐಆರ್​ಎಸ್​ ಉಪಗ್ರಹದ ದತ್ತಾಂಶಗಳ ಆಧಾರ ದಡಿ ಅಹಮದಾಬಾದ್​ನಲ್ಲಿರುವ ಇಸ್ರೋ ಸ್ಪೇಸ್​ ಅಪ್ಲಿಕೇಷನ್​ ಸೆಂಟರ್​ ವರದಿ ಸಿದ್ಧಪಡಿಸಿದೆ.
ಇದರಂತೆ ಕರ್ನಾಟಕದ ಒಟ್ಟು ಭೂಮಿಯ ಶೇ.36.29 ಅಂದರೆ 60.96 ಲಕ್ಷ ಹೆಕ್ಟೇರ್​ ಪ್ರದೇಶ 2018-19ರಲ್ಲಿ ಬಂಜರಾಗಿತ್ತು. 2003-05ರಲ್ಲಿ ನಡೆಸಿದ ಅಧ್ಯಯನ ದಲ್ಲಿ ಈ ಪ್ರಮಾಣ ಶೇ.36.19 ಹಾಗೂ 2011-13ರ ವರದಿಯಲ್ಲಿ ಶೇ.36.24 ದಾಖಲಾಗಿತ್ತು. ಅಂದರೆ ಕಳೆದ 15 ವರ್ಷದಲ್ಲಿ ಕರ್ನಾಟಕದ ಶೇ.0.1 ಭೂಮಿ ಕೈತಪ್ಪಿದೆ.

ಅರಣ್ಯೀಕರಣ ಅಗತ್ಯ: ನೆಲದ ಮೇಲ್ಮೆ ಬರಡಾಗುತ್ತಿರುವುದರಿಂದ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಮಾಣದ (ಶೇ.26.13) ಭೂಮಿ ಲವತ್ತತೆ ಕಳೆದುಕೊಳ್ಳುತ್ತಿದೆ. ಕೃಷಿ ಚಟುವಟಿಕೆಗಾಗಿ ಅರಣ್ಯನಾಶ (ಶೇ.8.85) ಆಗುತ್ತಿದೆ. ಆದರೆ ಇವೆರಡೂ ಕ್ಷೇತ್ರಗಳು ಕಳೆದ 15 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿವೆ. ಸರ್ಕಾರ ಹಾಗೂ ಸಂಸಂಸ್ಥೆಗಳ ಅರಣ್ಯೀಕರಣ ಯೋಜನೆಗಳ ಕಾರಣದಿಂದ, ಕಳೆದ 5 ವರ್ಷದಲ್ಲಿ ಮಣ್ಣಿನ ಸವೆತ ಕಡಿಮೆಯಾಗುತ್ತಿದೆ. ಅದೇ ರೀತಿ ಕೃಷಿ ಚಟುವಟಿಕೆಯಿಂದ ಆಗುವ ಅರಣ್ಯ ನಾಶ ಪ್ರಮಾಣವೂ ಕಡಿಮೆ ಆಗುತ್ತಿದೆ.

ದೇಶದಲ್ಲಿ ನಾಲ್ಕನೇ ಸ್ಥಾನ: ದೇಶದಲ್ಲಿ ಒಟ್ಟು ಬಂಜರಾಗುತ್ತಿರುವ ಭೂಮಿಯಲ್ಲಿ ಶೇ.23.79 ಪಾಲನ್ನು ಕರ್ನಾಟಕ ಸೇರಿ 9 ರಾಜ್ಯಗಳು ಹೊಂದಿವೆ. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್​ ಮೊದಲ ಮೂರು ಸ್ಥಾನದಲ್ಲಿದ್ದರೆ, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜಸ್ಥಾನದಲ್ಲಿ ಗಾಳಿಯ ಕಾರಣಕ್ಕೆ ಭೂಮಿಯ ಮೇಲ್ಮೆ ಸವೆತ ಆಗುತ್ತಿದ್ದರೆ ಉಳಿದ ಮೂರು ರಾಜ್ಯಗಳು
ವಸತಿ, ಕೈಗಾರಿಕೆ ಉದ್ದೇಶಗಳಿಗೆ ಕೃಷಿ ಭೂಮಿಯನ್ನು ಬಳಸುವುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ತಜ್ಞರು ತಿಳಿಸುತ್ತಾರೆ.


ಅನ್ನಕ್ಕೂ ಸಂಕಷ್ಟ?: ಕೃಷಿ ಭೂಮಿ ಪ್ರಮಾಣ ತಗ್ಗುತ್ತಿರುವುದು ಭವಿಷ್ಯದಲ್ಲಿ ಆಹಾರ ಉತ್ಪಾದನೆ ಕೊರತೆ ಎದುರಾಗುವ ಗಂಭೀರ ಮುನ್ಸೂಚನೆ ನೀಡಿದೆ. ದೇಶದಲ್ಲಿ ಗುಣಮಟ್ಟ ಕಳೆದುಕೊಂಡಿರುವ ಭೂಮಿಯನ್ನು ಮರಳಿ ಪಡೆಯುವ ಸಲುವಾಗಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಂಡು ಕಾರ್ಯಪ್ರವೃತ್ತವಾಗಿದ್ದರೆ ರಾಜ್ಯದಲ್ಲಿ ಇದು ಹಿಮ್ಮುಖ ಚಲನೆಯಾಗಿರುವುದು ಆತಂಕ ಮೂಡಿಸಿದೆ.

ಮರಳಿ ಫಲವತ್ತತೆ ಮಾಡುವ ಗುರಿ:2019ರಲ್ಲಿ ವಿಶ್ವಸಂಸ್ಥೆಯ ಯುಎನ್​ಸಿಸಿಡಿಯ 14ನೇ ಅಧಿವೇಶನವನ್ನು (ಸಿಒಪಿ-14) ಭಾರತ ಆಯೋಜಿಸಿತ್ತು. ಬರಡಾಗಿರುವ ಎಲ್ಲ ಭೂಮಿಯನ್ನೂ ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ 2030ರ ವೇಳೆಗೆ ವಿಶ್ವದಲ್ಲಿ ಲವತ್ತತೆ ಕಳೆದುಕೊಂಡಿರುವ 2.6 ಕೋಟಿ ಹೆಕ್ಟೇರ್​ ಭೂಮಿಯನ್ನು ಮರಳಿ ಲವತ್ತತೆ ಮಾಡಲಾಗುವುದೆಂದು ಈ ಅಧಿವೇಶನದಲ್ಲಿ ಏರ್ಪಟ್ಟ ಒಪ್ಪಂದಕ್ಕೆ ಭಾರತವೂ ಸಹಿ ಹಾಕಿದೆ.

ಮಾನವ ನಿರ್ಮಿತ ವಿಕೋಪ: ಕೃಷಿ ಚಟುವಟಿಕೆಗಾಗಿ ಅರಣ್ಯ ನಾಶ, ನೀರಿನಿಂದ ನೆಲದ ಮೇಲ್ಮೆ ಲವತ್ತತೆ ಕಳೆದುಕೊಳ್ಳುವುದು, ಗಾಳಿಯಿಂದ ಬರಡಾಗುವಿಕೆ, ನೀರಿನ ಗಡಸುತನ, ಮಾನವನಿಮಿರ್ತ ಅಪಾಯಗಳು, ವಸತಿ ಕಾರ್ಯಕ್ಕಾಗಿ ಕೃಷಿ ಭೂಮಿ ಬಳಕೆ ಸೇರಿ 10 ವಿಭಾಗಗಳಲ್ಲಿ ವರದಿಯನ್ನು ಸಿದ್ಧಪಡಿಸಲಾಗಿದೆ. ಮುಖ್ಯವಾಗಿ ವಸತಿ ಉದ್ದೇಶಕ್ಕೆ ಅರಣ್ಯ ಹಾಗೂ ಕೃಷಿ ಭೂಮಿಯ ಬಳಕೆ ತೀವ್ರವಾಗಿದೆ. 2003-05ರ ವರದಿಯಲ್ಲಿ 66.4 ಸಾವಿರ ಹೆಕ್ಟೇರ್​ ವಸತಿ ಉದ್ದೇಶಕ್ಕೆ ಬಳಕೆಯಾಗಿದ್ದರೆ 2011&13ರಲ್ಲಿ 82,409 ಹೆಕ್ಟೇರ್​ಗೆ ಏರಿಕೆ ಕಂಡು ಇದೀಗ 2018&19ರ ವರದಿಯಂತೆ 1.16 ಲಕ್ಷ ಹೆಕ್ಟೇರ್​ ಆಗಿದೆ. ಅಂದರೆ ಶೇ. 75 ಹೆಚ್ಚಳ ಕಂಡಿದೆ. ಅದೇ ರೀತಿ ಗಣಿಗಾರಿಕೆ, ಇಟ್ಟಿಗೆ ಗೂಡು, ಕೈಗಾರಿಕಾ ತ್ಯಾಜ್ಯ ಹರಿಸುವಿಕೆ, ನಗರ ತ್ಯಾಜ್ಯ ಸುರಿಯುವಿಕೆಯಂತಹ ಕಾರಣದಿಂದ 2003&05ರಲ್ಲಿ 18,704 ಹೆಕ್ಟೇರ್​ ಭೂಮಿ ಬರಡಾಗಿದ್ದರೆ 2018&19ರಲ್ಲಿ 38,794 ಹೆಕ್ಟೇರ್​ ಆಗಿದೆ. 15 ವರ್ಷಗಳಲ್ಲಿ 20 ಸಾವಿರ ಹೆಕ್ಟೇರ್​ ಭೂಮಿ ಕೈತಪ್ಪಿದೆ.


ದೇಶದ ಪಾಲೆಷ್ಟು?: ದೇಶದ ಒಟ್ಟು ಭೂ ಪ್ರದೇಶದ ಶೇ.29.77 ಭೂಮಿ ಸವೆತಕ್ಕೊಳಗಾಗುತ್ತಿದೆ. ಆದರೆ, ಕರ್ನಾಟಕದ ಶೇ.36.29 ಭೂಮಿ ಅಪಾಯದಲ್ಲಿದೆ. ಅಂದರೆ ದೇಶದ ಸರಾಸರಿಗಿಂತಲೂ ಹೆಚ್ಚು ವೇಗವಾಗಿ ಕರ್ನಾಟಕದಲ್ಲಿ ಭೂಮಿ ಬಂಜರಾಗುತ್ತಿದೆ. ಭೂಮಿಯ ಲವತ್ತತೆ ಹೆಚ್ಚಿಸಲು ಸರ್ಕಾರಗಳು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಆದರೂ ಮತ್ತಷ್ಟು ತೀವ್ರವಾಗಿ ಕಾಯೋರ್ನ್ಮುಖವಾಗಬೇಕು ಎಂಬುದನ್ನು ವರದಿ ತಿಳಿಸುತ್ತದೆ ಎಂದು ರಾಷ್ಟ್ರೀಯ ಮಣ್ಣು ಸಮೀೆ ಮತ್ತು ಭೂಮಿ ಉಪಯೋಗ ಯೋಜನೆ (ಎನ್​ಬಿಎಸ್​ಎಸ್​-ಎಲ್​ಯುಪಿ) ಬೆಂಗಳೂರು ಕೇಂದ್ರದ ಮುಖ್ಯ ವಿಜ್ಞಾನಿ ಡಾ. ರಾಜೇಂದ್ರ ಹೆಗಡೆ ತಿಳಿಸಿದ್ದಾರೆ.


ಪರಿಣಾಮಗಳೇನು?
* ಆಹಾರ ಉತ್ಪಾದನೆ ಕುಸಿತ
* ಆಹಾರಕ್ಕಾಗಿ ಪರಾವಲಂಬನೆ
* ಬಡತನ ಹೆಚ್ಚಳ
* ನಿರುದ್ಯೋಗ ಹೆಚ್ಚಳ
* ಸಮುದಾಯ, ರಾಜ್ಯಗಳ ನಡುವೆ ಸಂರ್ಷ
* ಮಾನವ ಸಾಮೂಹಿಕ ವಲಸೆ
* ರಾಜಕೀಯ ಅಸ್ಥಿರತೆ

Share This Article

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…

ಕೂದಲು ಉದುರುವ ಸಮಸ್ಯೆ ಪರಿಹಾರಕ್ಕೆ ರಾಮಬಾಣ ಹರಳೆಣ್ಣೆ ಹೇರ್​​ ವಾಶ್​​​; ನಿಮಗಾಗಿ ಹೆಲ್ತಿ ಮಾಹಿತಿ | Health Tips

ನಮ್ಮ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಏನೆನೋ ಮಾಡುತ್ತೇವೆ. ನಮ್ಮ ಕೂದಲಿನ ಬೆಳವಣಿಗೆಯ…