21 C
Bengaluru
Wednesday, January 22, 2020

ಯುವರಾಜ ಕೊನೆಗೂ ಮಹಾರಾಜನಾಗಲೇ ಇಲ್ಲ!

Latest News

ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ಆರೋಪ ತನಿಖೆ ನಡೆಸಿ ವಾರದೊಳಗೆ ವರದಿ‌ ಸಲ್ಲಿಸಿ ಎಂದು ಸೂಚಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ಹಾಸನ: ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ನಡೆದ ಆರೋಪವಿದ್ದು ತನಿಖೆ ನಡೆಸಿ ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವ...

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಹೊತ್ತು 6 ಕಿ.ಮೀ ಸಾಗಿ ಆಸ್ಪತ್ರೆಗೆ ದಾಖಲಿಸಿದ ಯೋಧರ ತಂಡ

ಬಿಜಾಪುರ್​: ಸಿಆರ್​ಪಿಎಫ್​ ಯೋಧರ ತಂಡವೊಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮಂಚದ ಮೇಲೆ ಹಾಕಿಕೊಂಡು ಸುಮಾರು 6 ಕಿ.ಮೀ ದೂರದ ಆಸ್ಪ್ರತೆಗೆ ನೆಡದುಕೊಂಡೇ...

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ|

ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ||

ತಾನಾಗಿ ದೊರೆತಿದ್ದರಲ್ಲಿ ತೃಪ್ತಿ ಇರುವವನೂ, ದ್ವಂದ್ವ-ಅಸೂಯೆ ಇಲ್ಲದವನೂ, ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸುವವನೂ ತನ್ನ ಕರ್ಮಗಳ ಬಂಧನಕ್ಕೆ ಸಿಲುಕುವುದಿಲ್ಲ. (ಭಗವದ್ಗೀತೆ)

***

ಜೀವನವೆಂದ ಮೇಲೆ ಕೆಲವು ಅತೃಪ್ತಿಗಳು ಇರಲೇಬೇಕು..

ಅಂಥ ಹಲವು ಅತೃಪ್ತಿಗಳೊಂದಿಗೆ ನಮ್ಮ ಪ್ರೀತಿಯ ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡಕ್ಕೆ ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾ ಸಮವಸ್ತ್ರದಲ್ಲಿ ಯುವರಾಜ್ ಬ್ಯಾಟಿಂಗ್ ನೋಡುವ ಅವಕಾಶ ಇನ್ನು ದೊರಕುವುದಿಲ್ಲ.

ಯುವರಾಜ್ ಕೇವಲ ಹೆಸರಿನಿಂದಷ್ಟೇ ಅಲ್ಲ, ಅಕ್ಷರಶಃ ಭಾರತೀಯ ಕ್ರಿಕೆಟ್​ನ ಭಾಗ್ಯದ ಬಾಗಿಲು ತೆರೆದ ರಾಜಕುಮಾರನೇ ಆಗಿದ್ದರು. ಆದರೆ, ಕ್ರಿಕೆಟ್​ನಲ್ಲಿ ಮಹಾರಾಜನಾಗುವ ಯೋಗ ಮಾತ್ರ ಈ ಯುವರಾಜನಿಗಿರಲಿಲ್ಲ.

ಸಚಿನ್ ತೆಂಡುಲ್ಕರ್​ರಂಥ ಮಹಾನ್ ಆಟಗಾರ ಭಾರತೀಯ ಕ್ರಿಕೆಟ್​ನಲ್ಲಿ ಅವತರಿಸಿ ಹನ್ನೆರಡು ವರ್ಷಗಳೇ ಕಳೆದಿತ್ತು. ಆದರೆ, ಭಾರತೀಯ ಕ್ರಿಕೆಟ್ ತಂಡ ಇನ್ನೂ ‘ಟೀಮ್ ಇಂಡಿಯಾ’ ಆಗಿರಲಿಲ್ಲ. ಮನೆಯಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಅಣಕದಿಂದ ತಪ್ಪಿಸಿಕೊಳ್ಳುವುದು ಆವರೆಗಿನ ಭಾರತದ ತಂಡಗಳಿಂದ ಸಾಧ್ಯವಾಗಿರಲಿಲ್ಲ. ಅಂಥ ಕಾಲಘಟ್ಟದಲ್ಲಿ ಮ್ಯಾಚ್​ಫಿಕ್ಸಿಂಗ್ ಹಗರಣದ ಕಹಿ-ನೋವುಗಳನ್ನು ಗಂಟುಮೂಟೆ ಕಟ್ಟಿ ಶೂನ್ಯದಿಂದ ಹೊಸ ಮನ್ವಂತರ ಆರಂಭಿಸುವ ಹೊಣೆಗಾರಿಕೆ ಸಹಿತ ಸೌರವ್ ಗಂಗೂಲಿ ನಾಯಕತ್ವ ವಹಿಸಿಕೊಂಡಿದ್ದರು. ಕೊನೆಗೂ 2002ರಲ್ಲಿ ಭಾರತೀಯ ಕ್ರಿಕೆಟ್​ನ ವರ್ತಮಾನ- ಭವಿಷ್ಯ ಎಲ್ಲವನ್ನೂ ಬದಲಾಯಿಸಿ ಹೊಸ ದಿಕ್ಕು, ಹೊಸ ದಾರಿ ತೋರುವ ಆ ಕ್ಷಣ ಬಂದೇಬಿಟ್ಟಿತು. ಇಂಗ್ಲೆಂಡ್ ಪ್ರವಾಸದ ನ್ಯಾಟ್​ವೆಸ್ಟ್ ಟ್ರೋಫಿ ಫೈನಲ್​ನಲ್ಲಿ ಭಾರತ ತಂಡ ಕ್ರಿಕೆಟ್ ಇತಿಹಾಸದ ಅಭೂತಪೂರ್ವ ಗೆಲುವೊಂದನ್ನು ದಾಖಲಿಸಿಬಿಟ್ಟಿತ್ತು. ಮುಂದಿನ ಸುವರ್ಣಯುಗದ ಸೊಗಸಿಗೆ ಮುನ್ನುಡಿ ಬರೆದ ಆ ಅದ್ಭುತ ಗೆಲುವಿನ ರೂವಾರಿಗಳು ಯುವರಾಜ್ ಸಿಂಗ್ ಮತ್ತು ಮಹಮದ್ ಕೈಫ್. ಅದೊಂದು ಕ್ರಿಕೆಟ್ ಚರಿತ್ರೆಯ ದಿಕ್ಕು ಬದಲಿಸಿದ ಜೊತೆಯಾಟವಾಗಿತ್ತು.

ಅಂಥ ಯುವರಾಜ್, ಭಾರತೀಯ ಕ್ರಿಕೆಟ್​ನ ಔನ್ನತ್ಯಕ್ಕೆ ಪ್ರತ್ಯಕ್ಷದರ್ಶಿಯಾಗಿಯೂ ವ್ಯಕ್ತಿಗತವಾಗಿ ತೃಪ್ತಿಯಿಲ್ಲದೆ ಮೈದಾನದಿಂದ ನಿರ್ಗಮಿಸಿದ್ದಾರೆ. ಸದ್ಯ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಭರ್ಜರಿ ಗೆಲುವುಗಳ ಹೈಜೋಷ್​ನಲ್ಲಿರುವ ಭಾರತೀಯರು ಯುವಿ ನಿರ್ಗಮನದ ನೋವನ್ನು ಮೌನವಾಗಿ ನುಂಗಿಕೊಳ್ಳುವಂತಾಗಿದೆ.

ಯುವರಾಜ್ ಸಿಂಗ್ ಜೂನಿಯರ್ ಕ್ರಿಕೆಟ್ ದಿನಗಳಿಂದಲೇ ಸೂಪರ್​ಸ್ಟಾರ್ ಎನಿಸಿಕೊಂಡಿದ್ದವರು. ವಿವಿಧ ವಯೋಮಿತಿ ಕ್ರಿಕೆಟ್ ಟೂರ್ನಿಗಳಲ್ಲಿ ನಿರ್ದಾಕ್ಷಿಣ್ಯವಾಗಿ ಬೌಲರ್​ಗಳನ್ನು ಚಚ್ಚುತ್ತಿದ್ದ, ಬೆಟ್ಟದಷ್ಟು ರನ್ ಗುಡ್ಡೆ ಹಾಕುತ್ತಿದ್ದ ಅವರ ಆಟಕ್ಕೆ ಮರುಳಾಗದವರಿರಲಿಲ್ಲ. ಬೆಣ್ಣೆಯ ಬಿಳುಪು, ಆಕರ್ಷಕ ಮೈಕಟ್ಟು, ಗುಂಗುರು ಕೇಶ, ಕಣ್ಣುಗಳಲ್ಲಿ ತುಂಬಿತುಳುಕುತ್ತಿದ್ದ ಆತ್ಮವಿಶ್ವಾಸ, ಶ್ರೀಮಂತಿಕೆಯ ಗತ್ತು-ಗೈರತ್ತಿನ ಯುವರಾಜ್ 1999ರಲ್ಲಿ ಕಿರಿಯರ (19 ವಯೋಮಿತಿ) ವಿಶ್ವಕಪ್ ಗೆದ್ದ ಭಾರತ ತಂಡದ ಹೀರೋ ಆಗಿದ್ದರು. ವೇಗದ ಬೌಲರ್​ಗಳನ್ನು ನಿರ್ಭೀತಿಯಿಂದ ದಂಡಿಸುವ ಅವರ ಬ್ಯಾಟಿಂಗ್, ನಿರ್ಣಾಯಕ ಘಟ್ಟಗಳಲ್ಲಿ ವಿಕೆಟ್ ಕಬಳಿಸುವ ಆಕರ್ಷಕ ಸ್ಪಿನ್ ಬೌಲಿಂಗ್, ಮಿಂಚಿನ ಫೀಲ್ಡಿಂಗ್ ಇವೆಲ್ಲವೂ ಯುವಿಯ ತಾರಾಮೌಲ್ಯ ಹೆಚ್ಚಿಸಿದ್ದವು. ಭಾರತೀಯ ಕ್ರಿಕೆಟ್​ನಲ್ಲಿ ತೆಂಡುಲ್ಕರ್ ಉತ್ತರಾಧಿಕಾರಿ ಎಂದೇ ಯುವರಾಜ್ ಸ್ಥಾನ ಫಿಕ್ಸ್ ಆಗಿಬಿಟ್ಟಿತ್ತು.

ಯುವರಾಜ್ ಸೋಮವಾರ ತಮ್ಮ ವಿದಾಯ ಭಾಷಣದಲ್ಲಿ ಸೌರವ್ ಗಂಗೂಲಿಗೆ ವಿಶೇಷ ಥ್ಯಾಂಕ್ಸ್ ಹೇಳಿದರು. ಅದಕ್ಕೆ ಕಾರಣವೂ ಇತ್ತು. ಸೌರವ್ ನಾಯಕರಾಗಿದ್ದ ಕಾಲಘಟ್ಟದಲ್ಲಿ ವಿಶ್ವಾಸ ಮತ್ತು ಆತ್ಮವಿಶ್ವಾಸದ ನೆಲೆಗಟ್ಟಿನ ಮೇಲೆ ತಂಡ ಕಟ್ಟಿದ್ದರು. ಯುವರಾಜ್, ಸೆಹ್ವಾಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಧೋನಿ ಇವರೆಲ್ಲರ ನೈಜ ಸಾಮರ್ಥ್ಯವನ್ನು ಗುರುತಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರೆಲ್ಲರ ಪ್ರತಿಭಾ ವಿಕಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದು ದಾದಾ. ಗಂಗೂಲಿ ನಾಯಕರಾಗಿದ್ದ ಅವಧಿಯಲ್ಲಿ ಹಾಗೂ ಅವರ ನಿರ್ಗಮನದ ನಂತರವೂ ಯುವರಾಜ್ ಭಾರತದ ಏಕದಿನ ತಂಡದ ಅತ್ಯುತ್ತಮ ಬ್ಯಾಟ್ಸ್​ಮನ್ ಆಗಿ ಪ್ರತಿಷ್ಠಾಪನೆಗೊಂಡಿದ್ದರು. ಅವರ ಆಟವೆಂದರೆ, ಎದುರಾಳಿಗಳ ಪಾಲಿಗೆ ಸ್ಪೋಟ. ಆ ದಿನಗಳಲ್ಲಿ ಮ್ಯಾಚ್​ವಿನ್ನರ್​ಗಳ ಉದಾಹರಣೆಗೆ ಮೊದಲ ಸಾಲಿನಲ್ಲಿ ನೆನಪಾಗುತ್ತಿದ್ದವರು ಇದೇ ಯುವರಾಜ್ ಆಗಿದ್ದರು. ತಂಡದಲ್ಲಿ ತೆಂಡುಲ್ಕರ್, ಸೆಹ್ವಾಗ್, ಗಂಗೂಲಿ, ಧೋನಿಯಂಥ ಸಿಡಿಲಬ್ಬರದ ಬ್ಯಾಟ್ಸ್​ಮನ್​ಗಳ ನಟ್ಟನಡುವೆಯೂ ಯುವರಾಜ್ ಬ್ಯಾಟಿಂಗ್​ನ ಬಿರುಸಿಗೆ, ಶಕ್ತಿಗೆ, ವೇಗಕ್ಕೆ, ರನ್ ಹಸಿವಿಗೆ ಜನ ಮಂತ್ರಮುಗ್ಧರಾಗುತ್ತಿದ್ದರು. ಯಾವುದೇ ಟೂರ್ನಿ ಇರಲಿ, ಯಾವುದೇ ದೇಶವಿರಲಿ, ದೊಡ್ಡ ತಂಡಗಳ ವಿರುದ್ಧ ಮಹತ್ವದ ಪಂದ್ಯಗಳಲ್ಲಿ ಯುವರಾಜ್ ಆರ್ಭಟಿಸಲು ಸಿದ್ಧರಾಗಿರುತ್ತಿದ್ದರು. ಭಾರತದ ಸುವರ್ಣಯುಗದ ಪೀಳಿಗೆಯಲ್ಲಿ 19 ವಯೋಮಿತಿ ವಿಶ್ವಕಪ್, ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಗೆದ್ದ ಏಕೈಕ ಆಟಗಾರ ಯುವಿ. ಸವಾಲಿಗೆ ಸವಾಲೆಸೆಯುವ ಸಾಹಸಪ್ರವೃತ್ತಿಯೇ ಅವರ ವೃತ್ತಿಜೀವನದ ಎತ್ತರಗಳಿಗೆ ಏಣಿಯಾಯಿತು.

2007ರ ಟಿ20 ವಿಶ್ವಕಪ್ ಎನ್ನುವುದು ವಿಶ್ವದ ಎಲ್ಲ ತಂಡಗಳ ಪಾಲಿಗೆ ಹೊಸ ಪ್ರಯೋಗವಾಗಿತ್ತು, ಚೊಚ್ಚಲ ಅನುಭವವಾಗಿತ್ತು. ಭಾರತದ ದಿಗ್ಗಜ ಆಟಗಾರರಿಗೆ ಟಿ20 ಮಾದರಿ ಕ್ರಿಕೆಟ್ ಬಗ್ಗೆ ಆ ದಿನಗಳಲ್ಲಿ ಅಷ್ಟೇನೂ ಒಲವಿರಲಿಲ್ಲ. ಬಿಸಿಸಿಐ ಸಹ ಇದರ ಕಡುವಿರೋಧಿಯಾಗಿತ್ತು. ಇಂಗ್ಲೆಂಡ್ ಪ್ರವಾಸದ ಕಹಿಸೋಲಿನ ಬೆನ್ನಲ್ಲೇ ದಿಗ್ಗಜರಾದ ತೆಂಡುಲ್ಕರ್, ದ್ರಾವಿಡ್ ಗೈರಿನಲ್ಲಿ ಆಕಸ್ಮಿಕವಾಗಿ ನಾಯಕತ್ವದ ಜಾಕ್​ಪಾಟ್ ಹೊಡೆದಿದ್ದ ಮಹೇಂದ್ರ ಸಿಂಗ್ ಧೋನಿಯ ನೇತೃತ್ವದಲ್ಲಿ ಭಾರತ ಒಲ್ಲದ ಮನಸ್ಸಿನಿಂದ ಐಸಿಸಿ ವಿಶ್ವಕಪ್ ಎಂಬ ಕಾರಣಕ್ಕೆ ಆಡಲು ದಕ್ಷಿಣ ಆಫ್ರಿಕೆಗೆ ತೆರಳಿತ್ತು. ಯುವರಾಜ್ ಮತ್ತು ಸೆಹ್ವಾಗ್ ಆ ತಂಡದಲ್ಲಿದ್ದ ಸೀನಿಯರ್​ವೋಸ್ಟ್​ಗಳು. ಇಂಗ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಎಂಬ ಅತಿ-ಆತ್ಮವಿಶ್ವಾಸದ ವೇಗಿಯ ಓವರ್​ನ ಆರೂ ಎಸೆತಗಳನ್ನು ಸಿಕ್ಸರ್​ಗಟ್ಟುವ ಮೂಲಕ ಟಿ20 ಕ್ರಿಕೆಟ್​ಗೇ ರೋಚಕತೆಯ ಕಿರೀಟವನ್ನು ಯುವರಾಜ್ ತೊಡಿಸಿಬಿಟ್ಟಿದ್ದರು. ಯುವಿಯ ಈ ಸಿಡಿಲ ಸಿಕ್ಸರ್​ಗಳೇ ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್​ನ ಬೀಜಾಂಕುರಕ್ಕೆ ಪ್ರೇರಣೆ ಎನ್ನುವವರಿದ್ದಾರೆ. ಒಟ್ಟಿನಲ್ಲಿ ಟಿ20 ಕ್ರಿಕೆಟ್​ನ ಗಮ್ಮತ್ತನ್ನು ಮೊದಲ ಬಾರಿ ಜಗತ್ತಿಗೆ ಪರಿಚಯಿಸಿದ್ದು ಯುವಿ. ಇದೇ ಜೋಷ್​ನಲ್ಲಿ ಭಾರತ ಚೊಚ್ಚಲ ಟಿ20 ಚಾಂಪಿಯನ್ ಪಟ್ಟಕ್ಕೇರಿತು. ಯುವಿ ಮುಂದೆ 2011ರ ಏಕದಿನ ವಿಶ್ವಕಪ್​ನಲ್ಲೂ 362 ರನ್, 1 ಶತಕ, 4 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ, 15 ವಿಕೆಟ್​ಗಳ ಆಲ್ರೌಂಡ್ ಆಟವಾಡಿ ಟೂರ್ನಿಯ ಅತ್ಯುತ್ತಮ ಆಟಗಾರನೆನಿಸಿದರು. ಭಾರತ ಚಾಂಪಿಯನ್ ಪಟ್ಟಕ್ಕೇರಿತು. ಇಷ್ಟೆಲ್ಲ ಸಾಧನೆಗಳ ಪಯಣದಲ್ಲಿ ಯುವರಾಜ್ ವ್ಯಕ್ತಿಗತವಾಗಿ ಕಳೆದುಕೊಂಡಿದ್ದು ಬಹಳಷ್ಟಿತ್ತು. ಏಕದಿನ ಮಾದರಿಯಲ್ಲಿ ತಂಡದ ಅವಿಭಾಜ್ಯ ಭಾಗವಾಗಿದ್ದರೂ, ಟೆಸ್ಟ್ ತಂಡದಲ್ಲಿ ಅವಕಾಶವೇ ಸಿಗುತ್ತಿರಲಿಲ್ಲ. ಸೆಹ್ವಾಗ್, ತೆಂಡುಲ್ಕರ್, ಲಕ್ಷ್ಮಣ್, ದ್ರಾವಿಡ್, ಗಂಗೂಲಿ, ಧೋನಿ ಒಳಗೊಂಡ ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಸ್ಥಾನ ದುರ್ಲಭವಾಗಿತ್ತು. ದ್ರಾವಿಡ್ ನಾಯಕತ್ವ ತ್ಯಜಿಸಿದ ಸಂದರ್ಭದಲ್ಲಿ ಹೊಸ ನಾಯಕನ ಪಟ್ಟಕ್ಕೆ ಸೆಹ್ವಾಗ್ ಮತ್ತು ಯುವರಾಜ್ ಮುಂಚೂಣಿಯಲ್ಲಿದ್ದರಾದರೂ, ವಿಚಿತ್ರ ಸನ್ನಿವೇಶದಲ್ಲಿ ಧೋನಿಗೆ ಅವಕಾಶ ಒಲಿದಿತ್ತು. ಇನ್ನು ಐಪಿಎಲ್ ಕ್ರಿಕೆಟ್ ಎನ್ನುವುದಂತೂ ಯುವರಾಜ್ ವೃತ್ತಿಜೀವನಕ್ಕೆ ಶಾಪವಾಗಿ ಪರಿಣಮಿಸಿತು. ಅವರು ಎಷ್ಟು ಬಾರಿ ತಂಡ ಬದಲಾಯಿಸಿದರೂ, ಅದೃಷ್ಟ ಮಾತ್ರ ಬದಲಾಗಲಿಲ್ಲ. 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಹುಮ್ಮಸ್ಸಿನಲ್ಲಿರುವಾಗಲೇ ವಿರಳ ಶ್ವಾಸಕೋಶದ ಕ್ಯಾನ್ಸರ್ ಅವರ ವೃತ್ತಿಜೀವನದ ವೇಗಕ್ಕೆ ಬ್ರೇಕ್ ಹಾಕಿತು. ಮಾರಣಾಂತಿಕ ರೋಗವನ್ನು ಗೆದ್ದು ಮೃತ್ಯುಂಜಯನಾಗಿ ಆಟಕ್ಕೆ ಮರಳಿದರೂ, ಆ ಹೊತ್ತಿಗೆ ಕ್ರಿಕೆಟ್ ಅವರನ್ನು ಹಿಂದೆ ಬಿಟ್ಟು ಸಾಕಷ್ಟು ದೂರ ಸಾಗಿಬಿಟ್ಟಿತ್ತು. ಈ ಅಂತರವನ್ನು ಕ್ರಮಿಸುವುದು ಅವರ ಪಾಲಿಗೆ ದುರ್ಗಮವಾಯಿತು. 2014ರ ಟಿ20 ವಿಶ್ವಕಪ್ ಫೈನಲ್​ನಲ್ಲಿ 21 ಎಸೆತಗಳ 11 ರನ್ ಆಟ ಯುವಿಯನ್ನು ಕಂಗೆಡಿಸುವ ಮಟ್ಟಿಗೆ ಹಿನ್ನಡೆಯಾಗಿ ಪರಿಣಮಿಸಿತು. ಇಷ್ಟಾದರೂ ಛಲ ಬಿಡದ ಯುವರಾಜ್ ಬದಲಾದ ಕ್ರಿಕೆಟ್, ತಂಡ, ವಾತಾವರಣ, ಆಟಗಾರರು, ಆಯ್ಕೆಗಾರರು, ಆಡಳಿತ ಮಂಡಳಿ ಹಾಗೂ ಮನೋಭಾವದ ವಿರುದ್ಧ ಹೋರಾಡಿದರು. ದೊರೆತ ಅವಕಾಶಗಳಲ್ಲೇ ಮತ್ತೆಮತ್ತೆ ತಮ್ಮ ಮೌಲ್ಯ ನಿರೂಪಿಸುತ್ತಲೇ ಹೋದರು. ವೃತ್ತಿಜೀವನದಲ್ಲಿ ಕೊನೆಯ ಬಾರಿ ಇಂಗ್ಲೆಂಡ್​ನಲ್ಲಿ ವಿಶ್ವಕಪ್ ಆಡುವ ಕನಸು ಈಡೇರದ ಅತೃಪ್ತಿಯೊಂದಿಗೆ ಮೊನ್ನೆ ನಿವೃತ್ತಿ ಘೊಷಿಸಿದರು. 100 ಟೆಸ್ಟ್ ಆಡುವ, ಏಕದಿನಗಳಲ್ಲಿ 10,000 ರನ್ ಗಳಿಸುವ ಪ್ರತಿಭೆ, ಯೋಗ್ಯತೆ ಯುವರಾಜ್​ಗಿತ್ತಾದರೂ, ವಿಧಿಲಿಖಿತ ಬೇರೆಯೇ ಇತ್ತು. 19 ವರ್ಷಗಳ ವೃತ್ತಿಜೀವನದಲ್ಲಿ ಕೇವಲ 40 ಟೆಸ್ಟ್, 304 ಏಕದಿನ, 58 ಟಿ20 ಪಂದ್ಯಗಳಿಗೇ ಅವರ ವೃತ್ತಿಪಯಣ ಮುಗಿದುಹೋಯಿತು. ಅತೃಪ್ತಿ ಉಳಿದುಬಿಟ್ಟಿತು.

ಯುವರಾಜ್​ರಂಥ ಪ್ರತಿಭಾವಂತ ಬಹುಶಃ ಬೇರೆ ಕಾಲಘಟ್ಟದಲ್ಲಿ ಅಥವಾ ಬೇರಾವುದೇ ತಂಡದಲ್ಲಿದ್ದಿದ್ದರೆ ಅಥವಾ ಕ್ಯಾನ್ಸರ್ ಕಾಡದೇ ಇದ್ದಿದ್ದರೆ ಇನ್ನಷ್ಟು ಅದ್ಭುತ ಸಾಧನೆಗಳನ್ನು ಮಾಡಬಹುದಿತ್ತೇನೋ ಎನ್ನುವುದು ಮನುಷ್ಯ ಕಲ್ಪನೆ. ಆದರೆ, ಇಂಥ ವೈರುಧ್ಯಗಳ ಪ್ರವಾಹದ ವಿರುದ್ಧ ದಿಟ್ಟವಾಗಿ ಈಜಿ ದಡ ಮುಟ್ಟಿದ್ದೇ, ತಲೆ ಎತ್ತಿ ನಿಂತಿದ್ದೇ ಯುವರಾಜ್​ರ ಸಿಂಹವ್ಯಕ್ತಿತ್ವ ಬೆಳಗಿಸಿತೆನ್ನಬೇಕು. ಕೆಲವು ಅತೃಪ್ತಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ಜೀವನ. ಯುವರಾಜ್ ವೃತ್ತಿಜೀವನ ಸಹ ಅದರಿಂದ ಹೊರತಲ್ಲ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...