16 C
Bangalore
Saturday, December 7, 2019

ಸದ್ಗುಣಗಳ ದೀಕ್ಷೆ ದುರ್ಗಣಗಳ ಭಿಕ್ಷೆ

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ಧಾರ್ವಿುಕ ಕ್ಷೇತ್ರಗಳು ಕೇವಲ ಆಚರಣೆಗಳು, ಪರಂಪರೆಯ ಪದ್ಧತಿಗಳನ್ನು ನಡೆಸುವುದಷ್ಟೇ ಅಲ್ಲದೆ ಸಾಮಾಜಿಕವಾದ ಬದಲಾವಣೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಸಮಾಜದಲ್ಲಿ ಧಾರ್ವಿುಕ ಮುಖಂಡರ ಮಾತಿಗೆ ಗೌರವ ಇರುವುದರಿಂದ ಅವರ ನಿಲುವು-ನಿರ್ಧಾರಗಳನ್ನು ಬಹುಬೇಗ ಸಾಮಾನ್ಯ ಜನ ಸ್ವೀಕರಿಸುತ್ತಾರೆ.

| ಪ್ರಶಾಂತ ರಿಪ್ಪನ್​ಪೇಟೆ

ಉತ್ತಮ ಸಮಾಜದ ನಿರ್ವಣಕ್ಕೆ ಆಡಳಿತ ನಡೆಸುವ ಸರ್ಕಾರ ಮೊದಲ್ಗೊಂಡು ಹಲವು ಸಂಘ ಸಂಸ್ಥೆಗಳ ತನಕ ಒಂದಿಲ್ಲೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತವೆ. ಅಂತೆಯೇ ಮಠಸಂಸ್ಕೃತಿಯ ಹೆಬ್ಬೀಡಾಗಿರುವ ಕರ್ನಾಟಕದ ಮಠ-ಮಂದಿರಗಳು ಕೂಡ ಇತ್ತೀಚೆಗೆ ಹಲವು ಜನೋಪಯೋಗಿ ಯೋಜನೆಗಳ ಮೂಲಕ ಸ್ವಸ್ಥಸಮಾಜ ನಿರ್ವಣಕ್ಕೆ ಆದ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಆ ನಿಟ್ಟಿನಲ್ಲಿ ರಾಯಚೂರು ಜಿಲ್ಲೆ ಸಿಂಧನೂರಿನ ಶ್ರೀಸೋಮನಾಥ ಶಿವಾಚಾರ್ಯ ಸ್ವಾಮಿಗಳು ವಿನೂತನ ಘೊಷಣೆಯೊಂದಿಗೆ ಸಮಾಜಕ್ಕೆ ಹೊಸ ಸಂದೇಶ ನೀಡಲು ಮುಂದಾಗಿದ್ದಾರೆ. ಈ ಕಾರಣಕ್ಕಾಗಿಯೇ ಸಿಂಧನೂರಿನಲ್ಲಿರುವ ಬಾಳೇಹೊನ್ನೂರು ಶ್ರೀರಂಭಾಪುರಿ ಖಾಸಾ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ತಮ್ಮ ದ್ವಾದಶ ಗುರುಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ‘ಸದ್ಗುಣಗಳ ದೀಕ್ಷೆ, ದುರ್ಗಣಗಳ ಭಿಕ್ಷೆ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆಧುನಿಕ ಸಮಾಜದಲ್ಲಿ ನೈತಿಕಮಟ್ಟ ದಿನೇದಿನೆ ಕುಸಿಯುತ್ತಿದೆ. ಇದರಿಂದ ದೇಶ, ಧರ್ಮ, ಪರಂಪರೆಯ ಬಗ್ಗೆ ನಂಬಿಕೆ ಕಳೆದುಕೊಂಡು ದುರಭ್ಯಾಸಗಳಿಗೆ ದಾಸರಾಗಿ ವೈಯಕ್ತಿಕ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಿಸುವುದು ಕಷ್ಟವಾದರೂ, ಪರಿವರ್ತಿಸಲು ಸಾಧ್ಯ ಎಂಬುದು ಸೋಮನಾಥ ಶಿವಾಚಾರ್ಯ ಸ್ವಾಮಿಗಳ ಲೆಕ್ಕಾಚಾರ. ಆದ್ದರಿಂದ ತಮ್ಮ ದ್ವಾದಶ ಗುರುಪಟ್ಟಾಧಿಕಾರ ಕಾರ್ಯಕ್ರಮದ ಆಹ್ವಾನವನ್ನು ವಿನೂತನವಾಗಿ ಮಾಡುವುದಕ್ಕೆ ನಿರ್ಣಯಿಸಿ ಅದಕ್ಕೊಂದು ಘೊಷವಾಕ್ಯವನ್ನು ನೀಡಿದರು. ಆ ಶೀರ್ಷಿಕೆಯಡಿಯಲ್ಲಿ ಸಿಂಧನೂರು ಪಟ್ಟಣದಲ್ಲಿ ದಿನಕ್ಕೆ ಐದು ವಾರ್ಡ್​ಗಳಂತೆ ಏಳು ದಿನಗಳ ಕಾಲ 35 ವಾರ್ಡ್​ಗಳಲ್ಲೂ ಸದ್ಭಾವನ ಪಾದಯಾತ್ರೆಯನ್ನು ನಡೆಸಿದ್ದಾರೆ.

ಮುಂಜಾನೆ ಆರು ಗಂಟೆಗೆ ಆರಂಭವಾಗುತ್ತಿದ್ದ ಪಾದಯಾತ್ರೆಯು ಒಂದು ನಿಗದಿತ ಸ್ಥಳದಲ್ಲಿ ಸಮಾವೇಶಗೊಳ್ಳುತ್ತಿತ್ತು. ಜನರಿಗೆ ಧರ್ಮ, ನೈತಿಕ ವಿಷಯಗಳನ್ನು ಬೋಧಿಸಿದ ಶ್ರೀಗಳು ಆಗಮಿಸಿದ ಸಾರ್ವಜನಿಕರಿಂದ ದುರ್ಗಣಗಳ ಭಿಕ್ಷೆಯನ್ನು ಪಡೆಯುತ್ತಿದ್ದರು. ಮದ್ಯಪಾನ, ಧೂಮಪಾನ, ಗುಟಕಾ ಇತ್ಯಾದಿ ದುರಭ್ಯಾಸಗಳನ್ನೇ ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಸ್ವಸ್ಥ ಸಮಾಜ ನಿರ್ವಣಕ್ಕೆ ಪ್ರೇರಣೆಯನ್ನು ನೀಡಿದ್ದಾರೆ. ಬರದ ನಾಡೆಂದು ಹೆಸರಾಗಿರುವ ರಾಯಚೂರು ಭಾಗದಲ್ಲಿ ಪರಿಸರ ಜಾಗೃತಿಗಾಗಿ ಶ್ರೀಗಳು ತಮ್ಮ ಗುರುಪಟ್ಟಾಧಿಕಾರದ ಆಹ್ವಾನ ಪತ್ರಿಕೆಯ ಜೊತೆಗೆ ಒಂದೊಂದು ಸಸಿಗಳನ್ನು ನೀಡಿದ್ದಾರೆ. ಜತೆಗೆ, ‘ಇವುಗಳನ್ನು ಅಗತ್ಯವಾಗಿ ಹೊಲ, ಗದ್ದೆ ಅಥವಾ ಮನೆಯ ಮುಂಭಾಗದಲ್ಲಿ ನೆಟ್ಟು ಪೋಷಿಸಬೇಕು. ಅದೇ ನಮಗೆ ನೀಡುವ ನಿಜವಾದ ಗುರುಕಾಣಿಕೆ’ ಎಂದು ಹೇಳಿದ್ದಾರೆ.

ಮಠದ ಇತಿಹಾಸ

ಸಾಮಾನ್ಯವಾಗಿ ಮಠಗಳೆಂದರೆ ಅವುಗಳಿಗೆ ಒಂದಿಷ್ಟು ಆಸ್ತಿಪಾಸ್ತಿ, ಪರಂಪರೆಯ ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಸಿಂಧನೂರು ಮಠಕ್ಕೆ ಭಕ್ತರೇ ಆಸ್ತಿ. ವಾಸ್ತವದಲ್ಲಿ ಮಠಗಳು ಧರ್ಮಪ್ರಚಾರ, ಸಮಾಜಕ್ಕೆ ಮಾರ್ಗದರ್ಶನ, ಉತ್ತಮ ಸಂಸ್ಕಾರಗಳ ಬೋಧನೆಗೆ ಹೆಚ್ಚು ಒತ್ತು ನೀಡಬೇಕು. ಈ ಮೂರು ಅಂಶಗಳ ಅಡಿಯಲ್ಲೇ ಸ್ಥಾಪನೆಯಾಗಿದ್ದು ಸಿಂಧನೂರು ಮಠ. ಎಲ್ಲಿ ಗುರುವಿನ ಆವಶ್ಯಕತೆ ಇರುತ್ತದೆಯೋ ಅಲ್ಲಿಗೆ ಸ್ವಾಮಿಗಳನ್ನು ನೇಮಕ ಮಾಡಬೇಕೇ ಹೊರತು ಮಠಕ್ಕಿರುವ ಆಸ್ತಿಪಾಸ್ತಿಯ ರಕ್ಷಣೆಗಲ್ಲ ಎಂಬ ಕಳಕಳಿಯನ್ನಿರಿಸಿಕೊಂಡ ಪ್ರಸ್ತುತ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು 12 ವರ್ಷಗಳ ಹಿಂದೆ ಶ್ರೀ ಸೋಮನಾಥ ಶಿವಚಾರ್ಯ ಸ್ವಾಮಿಗಳನ್ನು ನೇಮಕ ಮಾಡಿದರು. ವಿಜಯಪುರ ಜಿಲ್ಲೆ ಕನಮಡಿ ಗ್ರಾಮದ ಚಂದ್ರಶೇಖರಯ್ಯ ಮತ್ತು ಸಿದ್ದಮ್ಮ ದಂಪತಿಯ ಪುಣ್ಯಸಂಜಾತರಾಗಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಮಲ್ಲಿಕಾರ್ಜುನಯ್ಯ ಹಿರೇಮಠ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ ಕನಮಡಿ ಹಿರೇಮಠದ ಉತ್ತರಾಧಿಕಾರಿಯಾಗಿ ಆಯ್ಕೆಗೊಂಡ ನಂತರ ಉನ್ನತ ಸಂಸ್ಕೃತಾಭ್ಯಾಸಕ್ಕಾಗಿ ರಂಭಾಪುರಿ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲಕ್ಕೆ ತೆರಳಿದರು. ವೇದ, ಆಗಮ, ಉಪನಿಷತ್ತು ಹಾಗೂ ಜ್ಯೋತಿಷ್ಯಶಾಸ್ತ್ರವನ್ನು ವಿವಿಧ ವಿದ್ವಾಂಸರುಗಳಿಂದ ಕಲಿತು, ಮುಂದೆ ಸ್ನಾತಕೋತ್ತರ ಪದವಿಯನ್ನು ಪಡೆದರು. ತೊರವಿ, ಕಣ್ಣೂರು, ಹೂಲಿ, ಚಿಮ್ಮಲಗಿ ಶ್ರೀಗಳ ಆಶೀರ್ವಾದದಿಂದ ಬೆಳೆದು ಪರಿಪೂರ್ಣಗೊಂಡ ಮಲ್ಲಿಕಾರ್ಜುನ ದೇವರನ್ನು ಕನಮಡಿ ಹಿರೇಮಠಕ್ಕೆ ಪಟ್ಟಾಧಿಕಾರ ಮಾಡಬೇಕೆಂಬ ಮಹಾದಾಸೆ ಗ್ರಾಮಸ್ಥರದ್ದಾಗಿತ್ತು. ಆದರೆ ರಂಭಾಪುರಿ ಜಗದ್ಗುರುಗಳು ಕನಮಡಿ ಹಿರೇಮಠದ ಅಧಿಕಾರದ ಜೊತೆಗೆ ಸಿಂಧನೂರು ಶಾಖಾಮಠಕ್ಕೆ ನೇಮಕ ಮಾಡಿದರು. ಪಟ್ಟಾಧಿಕಾರದ ನಂತರ ಸದ್ಭಕ್ತರಾದ ಶ್ರೀ ಕರಬಸಯ್ಯನವರು ಧರ್ಮ-ಸಂಸ್ಕೃಯ ಪ್ರಸಾರಕ್ಕಾಗಿ ಸಿಂಧನೂರು ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ ನೀಡಿದ ಎರಡು ಎಕರೆ ಭೂಮಿಯಲ್ಲಿ ಪೂಜ್ಯರು ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರವನ್ನು ಸ್ಥಾಪಿಸಿದ್ದಾರೆ. ಪ್ರತಿ ಶ್ರಾವಣಮಾಸದಲ್ಲಿ ವಿಶೇಷ ಪೂಜಾನುಷ್ಠಾನವನ್ನು ಕೈಗೊಳ್ಳುವ ಶ್ರೀಗಳ ಅನುಷ್ಠಾನಕ್ಕಾಗಿ ಕುಟೀರವೊಂದು ನಿರ್ವಣವಾಗಿದೆ. ಮುಂದೆ ಸದ್ಭಕ್ತರ ನೆರವಿನೊಂದಿಗೆ ಗುರುಭವನ, ಸಂಸ್ಕೃತ ಪಾಠಶಾಲೆ, ಗೋಶಾಲೆ ಹಾಗೂ ವಿಭೂತಿ ತಯಾರಿಕಾ ಕೇಂದ್ರವನ್ನು ಸ್ಥಾಪಿಸುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ದ್ವಾದಶ ಗುರುಪಟ್ಟಾಧಿಕಾರ ಮಹೋತ್ಸವ

2007ರಲ್ಲಿ ಶ್ರೀಸೋಮನಾಥ ಶಿವಾಚಾರ್ಯರೆಂಬ ನೂತನ ಅಭಿನಾಮದೊಂದಿಗೆ ಸಿಂಧನೂರು ಮಠಕ್ಕೆ ಪಟ್ಟಾಧಿಕಾರಗೊಂಡ ನಂತರ ಮಠವನ್ನು ಸಾರ್ವಜನಿಕ ಸೇವಾಕೇಂದ್ರವಾಗಿಸಿದ್ದಾರೆ. ಶ್ರೀಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವವನ್ನು ಸದ್ಭಕ್ತರು ಜು. 17ರಿಂದ 19ರವರೆಗೆ ಹಮ್ಮಿಕೊಂಡಿದ್ದಾರೆ. 18ರಂದು ಶ್ರೀ ರಂಭಾಪುರಿ ಜಗದ್ಗುರುಗಳ ದಿವ್ಯಸಾನ್ನಿಧ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ ಕೋಟಿ ಪಂಚಾಕ್ಷರಿ ಮಂತ್ರ ಜಪಯಜ್ಞ, ಮಾತೆಯರಿಗೆ ಉಡಿ ತುಂಬುವ ಮಾತೃಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 19ರಂದು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಮಹಾರುದ್ರಾಭಿಷೇಕ, ಜಗದ್ಗುರುಗಳ ಪಾದಸಾನ್ನಿಧ್ಯದಲ್ಲಿ ಶ್ರೀ ಸೋಮನಾಥ ಶಿವಾಚಾರ್ಯರಿಗೆ ಮಂಗಲಸ್ನಾನ ಹಾಗೂ ಜಂಗಮಾರಾಧನೆ, ಅಯ್ಯಾಚಾರ ದೀಕ್ಷೆ ನಡೆಯಲಿದೆ. ನಂತರ ನಡೆಯುವ ಗುರುವಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದ 12 ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಶ್ರೀ ರಂಭಾಪುರಿ ಜಗದ್ಗುರು ಗಳು ನೆರೆದವರಿಗೆ ಪರಿಸರ ಜಾಗೃತಿ ವಿಧಿಯನ್ನು ಬೋಧಿಸಲಿದ್ದಾರೆ.

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...