25.5 C
Bangalore
Monday, December 16, 2019

ವೇದಾಂತಪ್ರಪಂಚದ ತೇಜಸ್ವಿ ಶ್ರೀ ಜಯತೀರ್ಥರು

Latest News

ಮುಸ್ಲಿಂರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ

* ಸಾಮರಸ್ಯಕ್ಕೆ ಮುನ್ನುಡಿ ಬರೆದ ಕಾರ್ಯಕ್ರಮವಿಜಯವಾಣಿ ಸುದ್ದಿಜಾಲ ಬಳ್ಳಾರಿನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ...

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ಲಖನೌಗೆ ಕಾಲಿಟ್ಟ ಪೌರತ್ವ ಪ್ರತಿಭಟನೆ; ಕ್ಲಾಸ್​ ರೂಂನಿಂದ ಹೊರಗೆ ಬಂದು ಪೊಲೀಸರ ಮೇಲೆ ಕಲ್ಲು ಎಸೆದ ನಡ್ವಾ ಕಾಲೇಜು ವಿದ್ಯಾರ್ಥಿಗಳು

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಉತ್ತರ ಪ್ರದೇಶ ಮತ್ತು ದೆಹಲಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕೂಡ ಬೀದಿಗಿಳಿದಿದ್ದು ಪೊಲೀಸರು...

ಈ ಡಿಫರೆಂಟ್ ಮ್ಯಾಗಿ ರುಚಿಯನ್ನು ಬಲ್ಲವರೇ ಬಲ್ಲರು, ತಯಾರಿಸೋದೂ ತುಂಬ ಸಿಂಪಲ್!: ಕಲ್ಪನೆಗೂ ನಿಲುಕದ್ದು ಎಂದ್ರು ನೆಟ್ಟಿಗರು

ಸಾಮಾಜಿಕ ಜಾಲತಾಣಗಳಲ್ಲಿ ಏನೇನೆಲ್ಲ ವೈರಲ್​ ಆಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಅಡುಗೆ, ಫ್ಯಾಷನ್​ನಿಂದ ಹಿಡಿದು ಪ್ರತಿಯೊಂದೂ ಏನೇನೋ ವಿಭಿನ್ನ, ವಿಶಿಷ್ಟ ಸಂಗತಿಗಳೆಲ್ಲ ಶೇರ್​ ಆಗುತ್ತ ಟ್ರೆಂಡ್...

ದ್ವೈತವೇದಾಂತದಲ್ಲಿ ಮಧ್ವರ ಬಳಿಕ ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವವನ್ನು ಪ್ರದರ್ಶಿಸಿದವರೆಂದರೆ ಶ್ರೀ ಜಯತೀರ್ಥರು. ಬ್ರಹ್ಮಸೂತ್ರಗಳಿಗೆ ಮಧ್ವರು ಬರೆದ ಮಹಾಭಾಷ್ಯವನ್ನು ಸಮಂಜಸವಾಗಿ ಅರ್ಥೈಸಿಕೊಳ್ಳಲು ಅವರು ಬರೆದ ತತ್ತ್ವಪ್ರಕಾಶಿಕಾದಿ ವ್ಯಾಖ್ಯಾನಗಳಿಗೇ ಮೊರೆಹೋಗಬೇಕು. ಹೀಗಾಗಿ ಅವರು ಟೀಕಾಚಾರ್ಯ ಎಂಬ ಹೆಸರಿನಿಂದಲೇ ಜನಪ್ರಿಯರಾಗಿದ್ದಾರೆ. ಅವರ ಜೀವನ-ಸಾಧನೆ, ಬೋಧನೆಗಳ ಸಂಕ್ಷಿಪ್ತ ನೋಟವಿದು.

- Advertisement -

| ಶ್ಯಾಮಸುಂದರ ಕುಲಕರ್ಣಿ ಕಲಬುರಗಿ

ಶ್ರೀ ಮಧ್ವಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟಿರುವ ದ್ವೈತಸಿದ್ಧಾಂತ ಮತ್ತು ಉತ್ತರಾದಿಮಠದ ಯತಿಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿದವರು ಶ್ರೀ ಜಯತೀರ್ಥರು. ಮಧ್ವಾಚಾರ್ಯರ ವಿಚಾರಧಾರೆಗಳನ್ನು ಎಳೆಎಳೆಯಾಗಿ ಬಿಡಿಸಿ ಜನಸಾಮಾನ್ಯರಿಗೆ ಅರ್ಥೈಸಿದ ದಾರ್ಶನಿಕರು.

ಜಯತೀರ್ಥರು ಮಹಾರಾಷ್ಟ್ರದ ಮಂಗಳವೇಡೆ ಗ್ರಾಮದಲ್ಲಿ ಜನಿಸಿದರು. ಸಿರಿವಂತಿಕೆಯಲ್ಲಿ ಮೆರೆದು ಜನಾನುರಾಗಿ ಆಗಿದ್ದರು. ಅಪರೋಕ್ಷ ಜ್ಞಾನಿಯಾಗಿದ್ದ ಉತ್ತರಾದಿ ಮಠಾಧೀಶ ಶ್ರೀ ಅಕ್ಷೋಭ್ಯತೀರ್ಥರು ತಮ್ಮ ಯೋಗ್ಯ ಉತ್ತರಾಧಿಕಾರಿ ಅನ್ವೇಷಣೆಯಲ್ಲಿ ಇರುವಾಗ ಸ್ವತಃ ಮೂಲರಾಮದೇವರೇ ಸ್ವಪ್ನದಲ್ಲಿ ಬಂದು, ‘ಅತಿ ತೇಜಸ್ವಿಯಾದ ವ್ಯಕ್ತಿಯೊಬ್ಬ ಅಶ್ವಾರೂಢನಾಗಿ ಭೀಮಾನದಿ ದಾಟುತ್ತಿರುವಾಗ ಕೆಳಗಿಳಿಯದೆ ನೀರು ಕುಡಿಯುತ್ತಾನೆ. ಆತನೇ ಈ ಪೀಠದ ಮುಂದಿನ ಯತಿ’ ಎಂದರಂತೆ.

ಒಂದು ದಿನ ಅಕ್ಷೋಭ್ಯತೀರ್ಥರು ಧ್ಯಾನಿಸುತ್ತಿರುವಾಗ ಸ್ವಪ್ನದಲ್ಲಿ ಶ್ರೀರಾಮ ಹೇಳಿದ ಸಂಗತಿ ಸಾಕ್ಷಾತ್ಕರಿಸಿತು. ಇದನ್ನು ಕಂಡ ಶ್ರೀಗಳು ನೇರವಾಗಿ ಅವರ ಪಾಲಕರ ಬಳಿ ತೆರಳಿ ತಮ್ಮ ಸಂಕಲ್ಪವನ್ನು ತಿಳಿಸಿದರು. ಇದ್ದ ಒಬ್ಬ ಮಗನನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ದೇಶಪಾಂಡೆ ದಂಪತಿ ದೊಂಡೋಪಂತನಿಗೆ (ಜಯತೀರ್ಥರ ಪೂರ್ವಾಶ್ರಮದ ಹೆಸರು) ತರಾತುರಿಯಲ್ಲಿ ವಿವಾಹ ಮಾಡಿದರು. ಆದರೆ ವಿಧಿ ಅಪೇಕ್ಷೆಯಂತೆ ದೊಂಡೋಪಂತ ಸಂಸಾರ ತ್ಯಜಿಸಿ 1365ರಲ್ಲಿ ಅಕ್ಷೋಭ್ಯತೀರ್ಥರಿಂದ ಸಂನ್ಯಾಸ ಸ್ವೀಕರಿಸಿ ಉತ್ತರಾದಿ ಮಠದ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ.

ಟೀಕಾಚಾರ್ಯರು ಹಿಂದಿನ ಜನ್ಮದಲ್ಲಿ ವೃಷಭಾವತಾರದಲ್ಲಿ ಮಧ್ವಾಚಾರ್ಯರ ಗ್ರಂಥಗಳನ್ನು ಕೇಳಿ, ಮುಂದೆ ಜಯತೀರ್ಥರಾಗಿ ವ್ಯಾಖ್ಯಾನ ಬರೆದಿದ್ದಾರೆ ಎಂಬ ಪ್ರತೀತಿ ಇದೆ. ಅವರು ರಚಿಸಿದ ಗ್ರಂಥಗಳಿಗೆ ಯಾರೂ ಟೀಕೆ ಮಾಡಲಿಲ್ಲ. ಅಂತಲೇ ಜಯತೀರ್ಥರಿಗೆ ಟೀಕಾಚಾರ್ಯ ಎಂಬ ಇನ್ನೊಂದು ಹೆಸರು. ಜಯತೀರ್ಥರು 18 ಗ್ರಂಥಗಳಿಗೆ ಟೀಕೆ ಬರೆದಿದ್ದಾರೆ. ‘ಪ್ರತ್ಯಕ್ಷಕಂ ಪ್ರತಿಪದಂ ಅನೇಕಾಕೂತಿಗರ್ಭಿತಃ’ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಇವರನ್ನು ಕೊಂಡಾಡಿದ್ದಾರೆ. ಶ್ರೀಮನ್ಯಾಯ ಸುಧಾ, ತತ್ವ ಪ್ರಕಾಶಿಕ – ಹೀಗೆ 21 ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀಮನ್ಯಾಯಸುಧಾ ಅದ್ವಿತೀಯ ಕೃತಿ. ಚಿಕ್ಕ ವಾಕ್ಯ, ಸುಲಭ ಶಬ್ದಗಳು, ತುಲನಾತ್ಮಕ ವಿಶ್ಲೇಷಣೆ, ತರ್ಕ, ವ್ಯಾಕರಣ, ಮೀಮಾಂಸೆ ಅದ್ಭುತವಾಗಿ ಮೂಡಿ ಬಂದಿದೆ. ಜಗತ್ತಿನ ತತ್ವಜ್ಞಾನ ಕ್ಷೇತ್ರದಲ್ಲಿ ಅಂತರ್ಭಾವ, ಬಹಿರ್ಭಾವ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಗ್ರಂಥವೂ ಇದಾಗಿದೆ.

ಯಾದಗಿರಿ ಜಿಲ್ಲೆ ಯರಗೋಳದ ಗುಹೆಯಲ್ಲಿ ತಪಸ್ಸು ಮಾಡಿದ ಜಯತೀರ್ಥರು, ದೇಶ ಸಂಚರಿಸಿ ಮಧ್ವಮತದ ಪ್ರಚಾರ ಮಾಡಿದವರು. 22 ವರ್ಷ ಶ್ರೀ ಮೂಲ ರಾಮದೇವರ ಪೂಜೆ ಮಾಡಿ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿ ತೀರದಲ್ಲಿ 1388ರಂದು ಆಷಾಢ ಬಹುಳ ಪಂಚಮಿಯಂದು ತಮ್ಮ ಗುರುಗಳಾದ ಅಕ್ಷೋಭ್ಯತೀರ್ಥರ ಸನ್ನಿಧಾನದಲ್ಲಿ ವೃಂದಾವನಸ್ಥರಾದರು.

ಮಳಖೇಡ ಇತಿಹಾಸ

ಮಳಖೇಡವು ಧಾರ್ವಿುಕ ಹಾಗೂ ರಾಜಕೀಯವಾಗಿ ಇತಿಹಾಸಪ್ರಸಿದ್ಧ ಗ್ರಾಮ. ಶ್ರೀರಾಮನ ಪುತ್ರ ಕುಶರಾಜ ತಪಸ್ಸು ಮಾಡಿದ ಪುಣ್ಯಭೂಮಿ. ಜಯತೀರ್ಥರ ಗುರುಗಳಾದ ಅಕ್ಷೋಭ್ಯತೀರ್ಥರು ವೃಂದಾವಸ್ಥರಾದ ಪವಿತ್ರ ಸ್ಥಳ. ಕಾವೇರಿಯಿಂದ ಗೋದಾವರಿವರೆಗೆ ರಾಜ್ಯವನ್ನು ವಿಸ್ತರಿಸಿದ ರಾಷ್ಟ್ರಕೂಟರ ರಾಜ್ಯಧಾನಿಯೂ ಹೌದು. ಅಂದಿನ ಮಾನ್ಯಖೇಟವೇ ಇಂದಿನ ಮಳಖೇಡ. ರಾಷ್ಟ್ರಕೂಟರ ಕುಲದೇವತೆ ಮಲೆಯಾದ್ರಿ ಮಾಧವ ದೇವಸ್ಥಾನ, ಸಂತಾನಗೋಪಾಲಕೃಷ್ಣ ಮಂದಿರ, ಕೊತ್ತಲ ಪ್ರಾಣದೇವರ ಹಾಗೂ ವೆಂಕಟೇಶ್ವರ ಮಂದಿರ ಇಲ್ಲಿನ ಪ್ರಸಿದ್ಧ ತಾಣಗಳು. ಮಂತ್ರಾಲಯದ ಶ್ರೀ ರಾಘವೇಂದ್ರತೀರ್ಥರು, ವಾದಿರಾಜರು, ವ್ಯಾಸರಾಜರು, ಜಗನ್ನಾಥದಾಸರು, ವಿಜಯದಾಸರು ಸೇರಿ ಅನೇಕ ಯತಿವರೇಣ್ಯರು, ದಾಸರು ಮಳಖೇಡಕ್ಕೆ ಆಗಮಿಸಿ ಜಯತೀರ್ಥರ ದರ್ಶನ ಪಡೆದಿದ್ದಾರೆ.

ಜು. 22ರಂದು ಮಧ್ಯಾರಾಧನೆ

ಉತ್ತರಾದಿಮಠದ ಪ್ರಸ್ತುತ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ ಮಳಖೇಡದಲ್ಲಿ ಜು. 21-22-23ರಂದು ಶ್ರೀ ಜಯತೀರ್ಥ ಆರಾಧನಾ ಮಹೋತ್ಸವ ವೈಭವದಿಂದ ನಡೆಯಲಿದ್ದು, ಹತ್ತು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದಾರೆ. 22ರಂದು ಮಧ್ಯಾರಾಧನೆ ನಿಮಿತ್ತ ಶ್ರೀಗಳಿಂದ ಶ್ರೀಸುಧಾ ಪಾಠ, ಜಯತೀರ್ಥರ ಮೂಲ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಮುದ್ರಾಧಾರಣೆ, ರಥಾಂಗ ಹೋಮ, ಜೋಡು ರಥೋತ್ಸವ, ಮೂಲಸಂಸ್ಥಾನ ಪೂಜೆ, ಪಂಡಿತರಿಂದ ಪ್ರವಚನ ನಂತರ ಶ್ರೀಗಳ ಆಶೀರ್ವಚನ ಜರುಗಲಿದೆ. 23ರಂದು ಉತ್ತರಾರಾಧನೆ ನಿಮಿತ್ತ ತಪ್ತ ಮುದ್ರಾಧಾರಣೆ, ಗಜವಾಹನೋತ್ಸವ, ಮೂಲಸಂಸ್ಥಾನ ಪೂಜೆ ಸೇರಿ ನಾನಾ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿವೆ.

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...