18.1 C
Bangalore
Saturday, December 7, 2019

ಧರ್ಮಚಕ್ರ ಪ್ರವರ್ತನ ಸೂತ್ರ

Latest News

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಶ್ರೀಕೃಷ್ಣನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

ಬಾಗಲಕೋಟೆ: ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ನೀಡಿದ ಗೀತೋಪದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಉಡುಪಿ ಶ್ರೀಕೃಷ್ಣಮಠದ ಭಾವಿ ಪರ್ಯಾಯ ಪೀಠಾಧೀಶ, ಅದಮಾರು ಶ್ರೀ ಈಶಪ್ರಿಯತೀರ್ಥ...

ಭಗವಾನ್ ಬುದ್ಧ ತನ್ನ ಸಂಬೋಧಿಯ ಅನುಭವವನ್ನು ವಾರಾಣಸಿಯ ಋಷಿಪತ್ತನ (ಇಸಿಪತನ) ಎಂಬಲ್ಲಿ ಐವರು ಭಿಕ್ಷುಗಳಿಗೆ ಬೋಧಿಸಿದ. ಈ ಮೊಟ್ಟಮೊದಲ ಪ್ರವಚನವು ಧರ್ಮಚಕ್ರ ಪ್ರವರ್ತನ ಸೂತ್ರ (ಧಮ್ಮಚಕ್ಕ ಪವತ್ತನ ಸುತ್ತ)ಎಂದೇ ಪ್ರಸಿದ್ಧವಾಯಿತು. ಇಲ್ಲಿಂದಲೇ ಬುದ್ಧನ ಧರ್ಮದ ಚಕ್ರ ಉರುಳಲಾರಂಭಿಸಿದುದು. ಬುದ್ಧನ ಉಪದೇಶಮಾಲೆಯೂ ಈ ಸೂತ್ರದಿಂದಲೇ ಆರಂಭವಾಯಿತು. ಈ ಧರ್ಮಚಕ್ರ ಪ್ರವರ್ತನ ಸೂತ್ರದ ಪರಿಚಯಾತ್ಮಕ ಬರಹ ಇಲ್ಲಿದೆ.

ಪೂಜ್ಯ ಭಿಕ್ಖು ಆನಂದ

‘ಧರ್ಮಚಕ್ರ ಪ್ರವರ್ತನ ಸೂತ್ರ’ (ಧಮ್ಮಚಕ್ಕ ಪವತ್ತನ ಸುತ್ತ) ಎಂದು ಪ್ರಸಿದ್ಧವಾದ ಇದು ಜ್ಞಾನೋದಯವಾದ ಎರಡು ತಿಂಗಳ ನಂತರ ಆಷಾಢ ಪೂರ್ಣಿಮೆಯ ದಿನ ವಾರಾಣಸಿಯ ಋಷಿಪತ್ತನ (ಇಸಿಪತನ) ಎಂಬಲ್ಲಿ ಭಗವಾನ್ ಬುದ್ಧರು ಹೇಳಿದ ಮೊಟ್ಟಮೊದಲನೆಯ ಜ್ಞಾನೋಪದೇಶ. ಬೋಧಿವೃಕ್ಷದ ಕೆಳಗೆ ಭಗವಾನರ ಹೃದಯದಲ್ಲಿ ಮಿಂಚಿದ ಜ್ಞಾನದರ್ಶನಗಳೇ ಈ ಸೂತ್ರದ ಸಾರ. ಆದ್ದರಿಂದ ಈ ಸೂತ್ರವು ಧರ್ಮದ ತಿರುಳಾಗಿದೆ. ಈ ಸನ್ನಿವೇಶವನ್ನು ಬೌದ್ಧಶಿಲ್ಪದಲ್ಲಿ ಹನ್ನೆರಡು ಅರೆಗಳುಳ್ಳ ಚಕ್ರ, ಎರಡೂ ಕಡೆ ಜಿಂಕೆಗಳು ಇರುವ ಹಾಗೆ ಚಿತ್ರಿಸಿದ್ದಾರೆ, ಇದು ಜಗತ್ಪ್ರಸಿದ್ಧವಾಗಿದ್ದು, ಅಂದಿನ ಕಾಲದಿಂದಲೂ ಜನರು ಬಹಳ ಗೌರವದಿಂದ ಕಂಡಿದ್ದಾರೆ. ಭಾರತದಲ್ಲಿನ ರಾಜರು ಇದನ್ನು ಚಿನ್ನ, ಬೆಳ್ಳಿ, ತಾಮ್ರ ಮುಂತಾದ ಲೋಹಗಳ ಫಲಕಗಳ ಮೇಲೆ ಬರೆಸಿದರು. ಮಹಾಕಾರುಣ್ಯಮೂರ್ತಿ ಬುದ್ಧರ ಜ್ಞಾನದ ಬೆಳಕು ಜನರಲ್ಲಿ ಹರಡಿ, ಇದರಲ್ಲಿ ಹೇಳಿದ ಸತ್ಯಗಳ ಮೇಲೆ ಅವರು ತಮ್ಮ ಜೀವನವನ್ನು ನಡೆಸಲೆಂದು ಅನೇಕ ಕಡೆಗಳಲ್ಲಿ ಹಂಚಿದ್ದರು.

ಈ ಸೂತ್ರದೊಂದಿಗೆ ಉರುಳಲು ಪ್ರಾರಂಭವಾದ ಭಗವಾನರ ಜ್ಞಾನಲಹರಿಯು 45 ವರ್ಷಗಳ ಕಾಲ ಹರಿಯಿತು. ಇದೆಲ್ಲದರ ಸಾರ ಈ ಸೂತ್ರದಲ್ಲಿ ತಿಳಿಸಿದ ನಾಲ್ಕು ಆರ್ಯ ಸತ್ಯಗಳೇ ಆಗಿವೆ. ಈ ಸತ್ಯಗಳನ್ನು ಭಗವಾನರು ಸರಳವಾಗಿ ಆನೆಯ ಪಾದದ ಉಪಮೆಯೊಂದಿಗೆ ವಿವರಿಸಿದ್ದಾರೆ. ಯಾವ ರೀತಿ ಎಲ್ಲ ಪ್ರಾಣಿಗಳ ಪಾದದ ಗುರುತುಗಳು ಆನೆ ಪಾದದೊಳಗೆ ಹೊಂದಿಕೆಯಾಗಿ ಅಡಕವಾಗುತ್ತವೆಯೋ, ಅದೇ ರೀತಿ ಇರಬಹುದಾದ ಎಲ್ಲ ಕುಶಲ ಧರ್ಮಸ್ಥಿತಿಗಳು ಈ ನಾಲ್ಕು ಆರ್ಯ ಸತ್ಯಗಳಲ್ಲಿ ಅಡಕವಾಗುತ್ತವೆ. ತಥಾಗತರು ಈ ಲೋಕದಲ್ಲಿ ಉದಯಿಸಲಿ ಅಥವಾ ಉದಯಿಸದಿರಲಿ, ಈ ಸತ್ಯಗಳು ಮಾತ್ರ ಇದ್ದೇ ಇವೆ. ಇಂಥ ಗಂಭೀರವಾದ ಧರ್ಮವನ್ನು ಎಲ್ಲರಿಗೂ ಅರ್ಥವಾಗುವಂತೆ ಆಗಿನ ಜನಸಾಮಾನ್ಯರ ಪಾಲಿ ಭಾಷೆಯಲ್ಲಿಯೇ ಭಗವಾನರು ಉಪದೇಶಿಸಿದರು. ಈ ಸೂತ್ರವನ್ನು ಬೋಧಿಸಿದಾಗ ಪಂಚವರ್ಗಿಯ ಭಿಕ್ಖುಗಳು ಮತ್ತು ಹದಿನೆಂಟು ಕೋಟಿ ದೇವತೆಗಳು ಬೋಧಿಯ ಜ್ಞಾನವನ್ನು ಪಡೆದರು.

ಬುದ್ಧಧರ್ಮವು ಬಿಡುಗಡೆಯ ಮಾರ್ಗವಾಗಿದೆ. ಆದ್ದರಿಂದಲೇ ಜೀವನದ ಕಲೆಯೂ ಆಗಿದೆ. ಆರ್ಯ ಅಷ್ಟಾಂಗಿಕ ಮಾರ್ಗದ ಮೇಲೆ ಸ್ಥಿರವಾದ ಈ ಉಪದೇಶವು ಇಲ್ಲಿಯೇ ಈಗಲೇ ಪರಮ ಸುಖವನ್ನು ಅನುಭವಿಸಲು ದಾರಿದೀಪವಾಗಿದೆ. ಯಾರಾದರೂ ಪಾಲಿಸಬಹುದಾದ ಈ ಮಾರ್ಗ ಒಂದು ಮತ ಅಥವಾ ಜಾತಿಯಲ್ಲ. ಸತ್ಯಾನ್ವೇಷಣೆಯ ಮಾರ್ಗ. ಈ ಧಮ್ಮವು ಭಗವಾನರ ನುಡಿಗಳಲ್ಲಿ, ‘ಬಹುಜನರ ಹಿತಕ್ಕಾಗಿ, ಬಹುಜನರ ಸುಖಕ್ಕಾಗಿ ಮತ್ತು ಲೋಕದ ಮೇಲಿನ ಅನುಕಂಪದಿಂದಾಗಿ’ ಉಪದೇಶಿಸಲ್ಪಟ್ಟಿದೆ. ಇದರಿಂದ ಅಸಂಖ್ಯಾತ ಜನರು ಸುಖ-ಹಿತಗಳನ್ನು ಪಡೆದರು. ಲೋಕದ ಈಗಿನ ಪರಿಸ್ಥಿತಿಯಲ್ಲಿ ಇದೊಂದು ಅಪೂರ್ವ ನಿಧಿಯಾಗಿದೆ.

ನಾಲ್ಕು ಆರ್ಯ ಸತ್ಯಗಳು

ಈ ಸೂತ್ರದಲ್ಲಿ ಭಗವಾನರು ಎಲ್ಲ ಅತಿರೇಕಗಳನ್ನು ಬಿಟ್ಟು ಮಧ್ಯಮಮಾರ್ಗ ಅನುಸರಿಸಲು ತಿಳಿಸಿದ್ದಾರೆ. ಅವರು ಬೋಧಿಸಿದ ಆ ನಾಲ್ಕು ಶ್ರೇಷ್ಠ ಸತ್ಯಗಳೆಂದರೆ – 1. ದುಃಖ ಸತ್ಯ, 2.ದುಃಖದ ಕಾರಣ ಸತ್ಯ, 3. ದುಃಖದ ಅಂತ್ಯ ಪರಮಸುಖ ಸತ್ಯ 4. ದುಃಖವನ್ನು ಅಂತ್ಯಗೊಳಿಸಲು ಆರ್ಯ ಅಷ್ಟಾಂಗಿಕ ಮಾರ್ಗ.

ಆರ್ಯ ಅಷ್ಟಾಂಗಿಕ ಮಾರ್ಗ ಎಂದರೆ – 1. ಸರಿಯಾದ ದೃಷ್ಟಿ, 2. ಸರಿಯಾದ ಯೋಚನೆ, 3. ಸರಿಯಾದ ಮಾತು, 4. ಸರಿಯಾದ ಕೃತ್ಯ, 5. ಸರಿಯಾದ ಜೀವನೋದ್ಯೋಗ, 6. ಸರಿಯಾದ ಪ್ರಯತ್ನ, 7. ಸರಿಯಾದ ಜಾಗ್ರತೆ, 8. ಸರಿಯಾದ ಚಿತ್ತ-ಏಕಾಗ್ರತೆ ಇವುಗಳಿಂದ ಕೂಡಿರುವುದು ಎಂಟು ಅಂಗಗಳ ಮಾರ್ಗ. ಈ ನಾಲ್ಕು ಆರ್ಯ ಸತ್ಯಗಳ ವಿಶ್ಲೇಷಣೆಯನ್ನು ಮಾಡಿದಾಗ 24 ಅಂಶಗಳು ಕಂಡುಬರುತ್ತವೆ. ಆದ್ದರಿಂದ ಭಗವಾನ ಬುದ್ಧರು ಈ ಸೂತ್ರವನ್ನು ಬೋಧಿಸಿದ ಸ್ಥಳದಲ್ಲಿ ಸಾಮ್ರಾಟ್ ಅಶೋಕರು ಸ್ತಂಭವನ್ನು ಸ್ಥಾಪಿಸಿದರು. ಅದರ ಮೇಲೆ ನಾಲ್ಕು ದಿಕ್ಕುಗಳಲ್ಲಿ ಈ ಸತ್ಯಸಂದೇಶ ಸಿಂಹಗರ್ಜನೆಯಂತೆ ಹರಡಲಿ ಎಂದು ನಾಲ್ಕು ಸಿಂಹಗಳನ್ನು ಮತ್ತು 24 ಅರೆಗಳ ಧಮ್ಮಚಕ್ರವನ್ನು ಕೆತ್ತಿಸಿದರು. ಅವೇ ಇಂದು ನಮ್ಮ ದೇಶದ ಲಾಂಛನ.

ಸತ್ಕರ್ಮ ಹಾಗೂ ದುಷ್ಕರ್ಮಗಳು ಯಾವಾಗಲೂ ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತವೆ.

| ಭಗವಾನ್ ಬುದ್ಧ

(ಲೇಖಕರು ಬೆಂಗಳೂರು ಮಹಾಬೋಧಿ ಬುದ್ಧ ವಿಹಾರದ ಮುಖ್ಯಸ್ಥರು)

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...