23.2 C
Bangalore
Saturday, December 14, 2019

ಪರಿವ್ರಾಜಕ ಯತಿಗಳ ಚಾತುರ್ಮಾಸ್ಯ ವ್ರತ

Latest News

ಆರ್‌ಎಫ್‌ಐಡಿ ಸ್ಟಿಕರ್​ಗಳ ಕೊರತೆ: ಫಾಸ್ಟ್ಯಾಗ್​ ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರಿಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​ ಮೂಲಕ ಟೋಲ್​ ಶುಲ್ಕ ವಸೂಲಿ ಪ್ರಕ್ರಿಯೆ ಡಿ.1 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆದರೆ, ಎಲ್ಲ ವಾಹನ ಮಾಲೀಕರೂ ಫಾಸ್ಟ್ಯಾಗ್​...

ದಾವಣಗೆರೆ ಲೋಕ ಅದಾಲತ್‌ನಲ್ಲಿ 21 ನ್ಯಾಯಾಧೀಶರು ಭಾಗಿ, 678 ಕೇಸ್ ವಿಲೆ, 7.34 ಕೋಟಿ ಪರಿಹಾರ ಇತ್ಯರ್ಥ

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾದ್ಯಂತ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲೆಯ...

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡನೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡನೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

ಪರಿವ್ರಾಜಕರಾದ ಯತಿಗಳು ಸ್ವಧರ್ಮದಂತೆ ದೇಶಸಂಚಾರ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ತೇವಗೊಂಡ ಭೂಮಿಯ ಮೇಲೆ ಕ್ರಿಮಿಕೀಟಗಳ ಸಂತತಿ ವ್ಯಾಪಕವಾಗಿರುವುದರಿಂದ, ಅವುಗಳಿಗೆ ತೊಂದರೆಯಾಗಬಾರದೆಂದು ಯತಿಗಳು ಒಂದೇ ಸ್ಥಳದಲ್ಲಿರುತ್ತಾರೆ. ಸನ್ಯಾಸಿಗಳು ಅಹಿಂಸಾವ್ರತವನ್ನು ಕೈಗೊಂಡಿರುವುದರಿಂದ, ಈ ಅವಧಿಯಲ್ಲಿ ಸಂಚಾರ ನಿಲ್ಲಿಸಿ, ಒಂದೇ ಸ್ಥಳದಲ್ಲಿದ್ದು, ಬ್ರಹ್ಮವಿಚಾರ ತತ್ಪರರಾಗುವರು. ‘ಚಾತುರ್ವಸ್ಯ’ ಎಂಬ ಶಬ್ದವೇ ಸೂಚಿಸುವಂತೆ ನಾಲ್ಕು ತಿಂಗಳ ವ್ರತ ಎಂಬುದು ಸಾಮಾನ್ಯಾರ್ಥ. ಆದರೆ ‘ಪಕ್ಷೋ ವೈ ಮಾಸಃ’ ಎಂಬ ವೇದವಾಕ್ಯಕ್ಕನುಗುಣವಾಗಿ ಒಂದು ಪಕ್ಷವನ್ನೇ ಒಂದು ತಿಂಗಳೆಂದು ಭಾವಿಸಿದಾಗ ಇದು ನಾಲ್ಕು ಪಕ್ಷಗಳೆಂಬ ಅರ್ಥವನ್ನು ಕೊಡುತ್ತದೆ. ನಾಡಿನ ವಿವಿಧ ಯತಿಗಳ ಚಾತುರ್ವಸ್ಯ ವ್ರತಾಚರಣೆಯ ಮಾಹಿತಿ ಇಲ್ಲಿದೆ.

ಶೃಂಗೇರಿ ಶ್ರೀ ಶಾರದಾಪೀಠ

ಸಹ್ಯಾದ್ರಿ ಶ್ರೇಣಿಯ ತಪ್ಪಲಿನ ರಮಣೀಯ ಪರಿಸರದಲ್ಲಿದೆ ಪವಿತ್ರ ಕ್ಷೇತ್ರ ಶೃಂಗೇರಿ. ಶ್ರೀ ವಿಭಾಂಡಕ ಹಾಗೂ ಶ್ರೀ ಋಷ್ಯಶೃಂಗರ ತಪೋಭೂಮಿಯಾದ ಈ ಸ್ಥಳದ ಮಹಿಮೆಯನ್ನರಿತ ಶ್ರೀ ಆದಿಶಂಕರಾಚಾರ್ಯರು ಶ್ರೀ ದಕ್ಷಿಣಾಮ್ನಾಯ ಶಾರದಾ ಪೀಠವನ್ನು ಸ್ಥಾಪಿಸಿದರು. ಶ್ರೀ ಸುರೇಶ್ವರಾಚಾರ್ಯರಿಂದ ಪ್ರಾರಂಭಗೊಂಡ ಅವಿಚ್ಛಿನ್ನ ಗುರುಪರಂಪರೆಯ 36ನೇ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು. 1989ರಲ್ಲಿ ಶ್ರೀಪೀಠದ 36ನೇ ಜಗದ್ಗುರುಗಳಾಗಿ ಪಟ್ಟಾಭಿಷಿಕ್ತರಾದರು. 2015ರ ಜ. 23ರಂದು ಸಂನ್ಯಾಸ ಸ್ವೀಕರಿಸಿದ ಶ್ರೀ ವಿಧುಶೇಖರ ಸ್ವಾಮಿಗಳು 37ನೇ ಜಗದ್ಗುರುಗಳು. ಶೃಂಗೇರಿಯಲ್ಲಿ ಈ ಯತಿದ್ವಯರು ಜು. 16ರಂದು ಚಾತುರ್ವಸ್ಯವ್ರತವನ್ನು ಆರಂಭಿಸಿದ್ದು, ಇದು ಭಾದ್ರಪದ ಹುಣ್ಣಿಮೆಯಂದು (ಸೆ. 14) ಸಮಾಪ್ತಿಗೊಳ್ಳುತ್ತದೆ.

ಚಾತುರ್ಮಾಸ್ಯ ಸ್ಥಳ: ಶೃಂಗೇರಿ ಮಠ

ಸೋಂದಾ ಶ್ರೀ ಸ್ವರ್ಣವಲ್ಲೀ ಮಠ

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ 29ನೇ ಚಾತುರ್ವಸ್ಯ ವ್ರತವು ಜು. 16ರಿಂದ ಆರಂಭವಾಗಿದೆ. ಚಾತುರ್ವಸ್ಯದ ನಿಮಿತ್ತ 16ರಿಂದ ಸೆ. 13ರ ತನಕ ಪ್ರತಿದಿನ ಸಂಜೆ ಮಹಾಭಾರತ ಪ್ರವಚನ ನಡೆಯಲಿದೆ. ಮಠದ ಭಕ್ತರು ಪ್ರತಿದಿನ ಒಂದೊಂದು ಸೀಮೆಯಂತೆ ಆಗಮಿಸಿ ಶ್ರೀಗಳ ಪಾದಪೂಜೆ ನೆರವೇರಿಸುವರು. ನಂತರ ಶ್ರೀಗಳ ಆಶೀರ್ವಚನ, ಮಹಿಳೆಯರಿಂದ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ, ಸಂಜೆ ಮಹಾಭಾರತ ಪ್ರವಚನ ನಡೆಯಲಿದೆ.

ಚಾತುರ್ಮಾಸ್ಯ ಸ್ಥಳ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಶಿರಸಿ, ಉತ್ತರ ಕನ್ನಡ

ಯಡತೊರೆ ಶ್ರೀಯೋಗಾನಂದೇಶ್ವರ ಸರಸ್ವತೀ ಮಠ

ಕೃಷ್ಣರಾಜನಗರ ತಾಲೂಕಿನ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಪ್ರಸಿದ್ಧ ಪುಣ್ಯಕ್ಷೇತ್ರ ಜಪದಕಟ್ಟೆಯಲ್ಲಿ ಜು. 16ರಿಂದ ಚಾತುರ್ವಸ್ಯ ವ್ರತಾನುಷ್ಠಾನ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿದಿನ ಆರಾಧ್ಯದೇವರ ಪೂಜೆ, ವ್ರತಗಳು ಮುಂತಾದ ಧಾರ್ವಿುಕ ಕಾರ್ಯಕ್ರಮಗಳು, ವಿದ್ವತ್ ಗೋಷ್ಠಿ, ಉಪನ್ಯಾಸ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 19ರಂದು ಶ್ರೀಗಳವರ ವರ್ಧಂತಿ ಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ನಾಡಿನ ಹಿರಿಯ ವಿದ್ವಾಂಸರಿಗೆ ಸನ್ಮಾನ, ಗ್ರಂಥಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಸೆ. 13ರಂದು ಸೀಮೋಲ್ಲಂಘನದೊಂದಿಗೆ ಚಾತುರ್ವಸ್ಯವ್ರತ ಸಮಾಪ್ತಿಯಾಗಲಿದೆ.

ಚಾತುರ್ಮಾಸ್ಯ ಸ್ಥಳ: ಜಪದಕಟ್ಟೆ, ಕೃಷ್ಣರಾಜನಗರ ತಾಲೂಕು, ಮೈಸೂರು ಜಿಲ್ಲೆ

ಕೂಡಲಿ ಶೃಂಗೇರಿ ಪೀಠ

ತುಂಗಾ ಮತ್ತು ಭದ್ರಾನದಿಗಳ ಸಂಗಮಸ್ಥಳದಲ್ಲಿರುವ ಕೂಡಲಿ ಮಹಾಸಂಸ್ಥಾನದ 25ನೇ ಯತಿ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳು ಮೂರನೇ ವರ್ಷದ ಚಾತುರ್ವಸ್ಯ ವ್ರತವನ್ನು ಬೆಂಗಳೂರಿನಲ್ಲಿ ಕೈಗೊಂಡಿದ್ದಾರೆ. 2016ರಲ್ಲಿ ಪೀಠದ 24ನೇ ಗುರು ಶ್ರೀ ಸಚ್ಚಿದಾನಂದ ವಾಲುಕೇಶ್ವರ ಸ್ವಾಮಿಗಳು ಬ್ರಹ್ಮೈಕ್ಯರಾದ ಬಳಿಕ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಮಠದ ಧಾರ್ವಿುಕ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು. ಜು. 16ರಿಂದ ಆರಂಭವಾಗಿರುವ ಈ ಬಾರಿಯ ಚಾತುರ್ವಸ್ಯ ವ್ರತ ಸಂದರ್ಭದಲ್ಲಿ ವಿಶೇಷವಾಗಿ ಲೋಕಕಲ್ಯಾಣಾರ್ಥ ಶ್ರೀ ಸ್ವಾಮೀಜಿ ಜಪ, ತಪಗಳನ್ನು ಕೈಗೊಳ್ಳಲಿದ್ದಾರೆ. ದಿನವೂ ವಿಶೇಷ ಪೂಜೆ, ಧಾರ್ವಿುಕ ಪ್ರವಚನಗಳು ನಡೆಯಲಿವೆ. ಸೆ. 14ರಂದು ವ್ರತ ಕೊನೆಯಾಗಲಿದೆ.

ಚಾತುರ್ಮಾಸ್ಯ ಸ್ಥಳ: ಸಚ್ಚಿದಾನಂದ ಪ್ರಸಾದ, ಆರ್​ವಿ ರಸ್ತೆ, ವಿ.ವಿ. ಪುರಂ, ಬೆಂಗಳೂರು

ಶ್ರವಣಬೆಳಗೊಳ ಜೈನ ಮಠ

ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಚಾತುರ್ವಸ್ಯ ವ್ರತವು ಶ್ರವಣಬೆಳಗೊಳ ಜೈನ ಮಠದಲ್ಲಿಯೇ ಜುಲೈ 16ರಿಂದ ಆರಂಭವಾಗಿದ್ದು ನವೆಂಬರ್ 12ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಪೂಜೆ ಪುನಸ್ಕಾರಗಳು ನೆರವೇರಲಿವೆ. ಶ್ರವಣಬೆಳಗೊಳ ಜೈನಮಠವು ವಿಶ್ವದಾದ್ಯಂತ ಪರಿಚಿತವಾದ ಪವಿತ್ರ ಧಾರ್ವಿುಕ ಕ್ಷೇತ್ರವಾಗಿದೆ. 1969ರ ಡಿ. 12ರಂದು ಸಂನ್ಯಾಸದೀಕ್ಷೆ ಸ್ವೀಕರಿಸಿದ ಸ್ವಾಮೀಜಿ 1970ರ ಮಹಾವೀರ ಜಯಂತಿಯಂದು ಶ್ರವಣಬೆಳಗೊಳ ಮಠದ ಪೀಠಾಧಿಪತಿ ಆದರು. ಅವರ ಸಾನ್ನಿಧ್ಯದಲ್ಲಿ ಇದುವರೆಗೆ ನಾಲ್ಕು ಮಹಾಮಸ್ತಕಾಭಿಷೇಕಗಳು ನಡೆದಿವೆ.

ಚಾತುರ್ಮಾಸ್ಯ ಸ್ಥಳ: ಶ್ರವಣಬೆಳಗೊಳ ಜೈನ ಮಠ

ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಲಕ್ಷ್ಮೀನೃಸಿಂಹ ಪೀಠ

ಚಿಕ್ಕಮಗಳೂರು ಜಿಲ್ಲೆ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠ ಪುರಾತನ ಧಾರ್ವಿುಕ ಕೇಂದ್ರಗಳಲ್ಲೊಂದು. ದಕ್ಷಯಜ್ಞ ಹಾಗೂ ಸ್ಕಂದ ಪುರಾಣದಲ್ಲೂ ಈ ಕ್ಷೇತ್ರದ ಉಲ್ಲೇಖವಿದೆ. ಶ್ರೀಮಠದ ಈಗಿನ ಪೀಠಾಧಿಪತಿಗಳಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳು ಬೆಂಗಳೂರಿನ ಶ್ರೀ ವಾಸವಿ ಕನ್ಯಕಾ ಪರಮೇಶ್ವರೀ ದೇವಸ್ಥಾನದಲ್ಲಿ ಜು. 17ರಂದು ಚಾತುರ್ವಸ್ಯ ವ್ರತ ಕೈಗೊಂಡಿದ್ದಾರೆ. ಸೆ. 13ರವರೆಗೆ ವ್ರತ ನಡೆಯಲಿದೆ. ಈ ಅವಧಿಯಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಚಾತುರ್ಮಾಸ್ಯ ಸ್ಥಳ: ಶ್ರೀ ವಾಸವಿ ಕನ್ಯಕಾ ಪರಮೇಶ್ವರೀ ದೇವಸ್ಥಾನ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು

ಶಿರಾಲಿ ಶ್ರೀ ಚಿತ್ರಾಪುರ ಮಠ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಚಿತ್ರಾಪುರ ಮಠದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮಿಗಳ ಚಾತುರ್ವಸ್ಯ ವ್ರತವು ಜುಲೈ 16ರಿಂದ ಆರಂಭವಾಗಿದೆ. ಸೆ. 13ರವರೆಗೆ ಈ ವ್ರತ ನಡೆಯಲಿದ್ದು, ಪ್ರತಿದಿನ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕ್ರಿ.ಶ. 1708ರಲ್ಲಿ ಪೂರ್ವ ಕುರುಕ್ಷೇತ್ರದಲ್ಲಿ ಶ್ರೀ ಪರಿಜ್ಞಾನಾಶ್ರಮ ಸ್ವಾಮಿಗಳಿಂದ ಈ ಮಠದ ಯತಿಪರಂಪರೆ ಪ್ರಾರಂಭ ವಾಯಿತು.

ಚಾತುರ್ಮಾಸ್ಯ ಸ್ಥಳ: ಶ್ರೀ ಗುರು ಮಠ, ಮಲ್ಲಾಪುರ, ಹೊನ್ನಾವರ, ಉತ್ತರ ಕನ್ನಡ

ಶಕಟಪುರ ಮಠ

ಶ್ರೀ ವಿದ್ಯಾಭಿನವ ಶ್ರೀಕೃಷ್ಣಾನಂದ ತೀರ್ಥ ಸ್ವಾಮಿಗಳು ಕೊಪ್ಪ ತಾಲೂಕು ಶಕಟಪುರ ಬದರಿ ಶಂಕರಾಚಾರ್ಯ ಜಗದ್ಗುರು ಪೀಠದ 33ನೇ ಯತಿಗಳು. ಸಂಸ್ಕೃತ, ಕನ್ನಡ ಹಾಗೂ ವೇದಾಂತದಲ್ಲಿ ಸ್ವಾಮೀಜಿ ನಿಷ್ಣಾತರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಪೀಠವೇರಿದ ಶ್ರೀಗಳು ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ನೆರೆಯ ರಾಜ್ಯಗಳಲ್ಲೂ ಈ ಪೀಠಕ್ಕೆ ನಡೆದುಕೊಳ್ಳುವ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಅವರ ಚಾತುರ್ವಸ್ಯ ವ್ರತವು ಜು. 16ರಿಂದ ತಮಿಳುನಾಡಿನಲ್ಲಿ ಆರಂಭವಾಗಿದ್ದು ಸೆ.16ರಂದು ಮುಕ್ತಾಯವಾಗಲಿದೆ.

ಚಾತುರ್ಮಾಸ್ಯ ಸ್ಥಳ: ಅಲ್ಲಂಗುಂಡಿ ಆಂಜನೇಯ ಸ್ವಾಮಿ ದೇವಾಲಯ, ನಾಗನಲ್ಲೂರು, ಕುಂಭದ್ರೋಣ, ತಮಿಳುನಾಡು

ಹಂಪಿ ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ

ಹಂಪಿಯಲ್ಲಿ ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರ ಚಾತುರ್ವಸ್ಯ ವ್ರತ ಜು. 16ರಿಂದ ಆರಂಭವಾಗಿದೆ. ಶ್ರೀಗಳು ನಾಲ್ಕು ತಿಂಗಳ ಕಾಲ ಪೂಜಾ ವಿಧಿವಿಧಾನಗಳನ್ನು ಕೈಗೊಳ್ಳುವರು. ಪ್ರತಿನಿತ್ಯ ಶಂಕರಾಚಾರ್ಯರ ಮೂರ್ತಿಗೆ ಅಭಿಷೇಕ, ಭುವನೇಶ್ವರಿ ಅಮ್ಮನವರಿಗೆ ಕುಂಕುಮಾರ್ಚನೆ ಸೇರಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸುವರು. ಚಾತುರ್ವಸ್ಯ ವ್ರತ ನ. 12ರಂದು ಸಂಪನ್ನಗೊಳ್ಳಲಿದೆ. ಜಗದ್ಗುರು ಶ್ರೀ ಶಂಕರಾಚಾರ್ಯರ ಪರಂಪರೆಯಿಂದ ನಡೆದು ಬಂದ

ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಪೀಠಕ್ಕೆ ಶ್ರೀ ವಿದ್ಯಾರಣ್ಯ ಗುರುಗಳು ಸೇರಿ ಈವರೆಗೆ 45 ಪೀಠಾಧಿಪತಿಗಳಾಗಿದ್ದು, ಈಗಿರುವ ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರು 46ನೆಯವರಾಗಿದ್ದಾರೆ.

ಚಾತುರ್ಮಾಸ್ಯ ಸ್ಥಳ: ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ, ಹಂಪಿ

ಹೊಸನಗರ ರಾಮಚಂದ್ರಾಪುರ ಮಠ ಶಿವಮೊಗ್ಗ ಹೊಸನಗರ

ಶ್ರೀ ರಾಮಚಂದ್ರಾಪುರ ಮಠದ 36ನೇ ಪೀಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 26ನೇ ಚಾತುರ್ವಸ್ಯ ವ್ರತವು ಬೆಂಗಳೂರಿನ ಗಿರಿನಗರದಲ್ಲಿರುವ ರಾಮಾಶ್ರಮದಲ್ಲಿ ಜರುಗಲಿದೆ. ಈ ಬಾರಿಯ ಚಾತುರ್ವಸ್ಯಕ್ಕೆ ರಾಮಾಯಣ ಚಾತುರ್ವಸ್ಯ ಎಂದು ಹೆಸರಿಸಲಾಗಿದ್ದು, ಸೆಪ್ಟೆಂಬರ್ 14ರಂದು ಸಂಪನ್ನವಾಗಲಿದೆ. ಚಾತುರ್ವಸ್ಯದ ಅವಧಿಯಲ್ಲಿ ಜು. 19ರಂದು ಶ್ರೀಗಳ ವರ್ಧಂತಿ, 23ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 2ರಂದು ಗಣೇಶ ಚತುರ್ಥಿ ಉತ್ಸವಗಳು ನಡೆಯಲಿವೆ. 14ರಂದು ಸೀಮೋಲ್ಲಂಘನೆಯ ದಿನ ಚಾತುರ್ವಸ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಚಾತುರ್ಮಾಸ್ಯ ಸ್ಥಳ: ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು

ಮೈಸೂರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ

ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಚಾತುರ್ವಸ್ಯ ವ್ರತ ದೀಕ್ಷಾ ಕಾರ್ಯಕ್ರಮ ಜು. 16ರಿಂದ ಆರಂಭವಾಗಿದೆ. 17ರಿಂದ ಸೆ. 13ರವರೆಗೆ ನಿತ್ಯ ಬೆಳಗ್ಗೆ ಶ್ರೀಗಳಿಂದ ಯೋಗವಾಸಿಷ್ಠ ಪ್ರವಚನ, ಚಕ್ರಾರ್ಚನೆ, ವೇದ ಪಾರಾಯಣ, ಮಹಾ ಗಣಪತಿ ಹೋಮ, ಸಂಜೆ ಸತ್ಸಂಗ, ಪ್ರವಚನ, ಪಾರಾಯಣ, ಶ್ರೀ ದತ್ತಾತ್ರೇಯರಿಗೆ ಕಾಕಡ ಆರತಿ ನೆರವೇರಲಿದೆ. ಸೆಪ್ಟೆಂಬರ್ 14ರಂದು ಪವಮಾನ ಹೋಮ, ವಿಶ್ವ ವಿಜಯ ಯಾತ್ರೆ, ಸೀಮೋಲ್ಲಂಘನದೊಂದಿಗೆ ಚಾತುರ್ವಸ್ಯ ವ್ರತ ಪರಿಸಮಾಪ್ತಿಗೊಳ್ಳಲಿದೆ.

ಚಾತುರ್ಮಾಸ್ಯ ಸ್ಥಳ: ಗಣಪತಿ ಸಚ್ಚಿದಾನಂದ ಆಶ್ರಮ, ಮೈಸೂರು

ಹಳದೀಪುರ ಶ್ರೀ ಶಾಂತಾಶ್ರಮ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದ ಶಾಂತಾಶ್ರಮವು ವೈಶ್ಯ ಸಮುದಾಯದ ಶಿಷ್ಯವೃಂದವನ್ನು ಹೊಂದಿದೆ. ಈ ಮಠದ ಆರಾಧ್ಯ ದೈವ ಚಂದ್ರಮೌಳೇಶ್ವರ. ಈ ಮಠದ ಶ್ರೀ ವಾಮನಾಶ್ರಮ ಸ್ವಾಮಿಗಳು ಗೋವಾದ ವೆರ್ಣಾದಲ್ಲಿ ತಮ್ಮ 16ನೇ ಚಾತುರ್ವಸ್ಯ ವ್ರತವನ್ನು ಕೈಗೊಂಡಿದ್ದಾರೆ. ಸೆ. 13ರವರೆಗೆ ವ್ರತಾಚರಣೆ ಜರುಗಲಿದೆ.

ಚಾತುರ್ಮಾಸ್ಯ ಸ್ಥಳ: ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ, ಶ್ರೀ ಕ್ಷೇತ್ರ ವರೇಣ್ಯಪುರಿ, ವೆರ್ಣಾ, ಗೋವಾ

ಆನೆಗುಂದಿ ಮಹಾಸಂಸ್ಥಾನ

ಕಟಪಾಡಿ ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರ 15ನೇ ವರ್ಷದ ಚಾತುರ್ವಸ್ಯ ವ್ರತಾಚರಣೆ ಜುಲೈ 16ರಿಂದ ಆರಂಭವಾಗಿದೆ.

ಚಾತುರ್ಮಾಸ್ಯ ಸ್ಥಳ: ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ, ಪಡುಕುತ್ಯಾರು

ಉಡುಪಿ ಶ್ರೀಕೃಷ್ಣ ಮಠ

ಉಡುಪಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಜುಲೈ 16ರಿಂದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಚಾತುರ್ವಸ್ಯ ವ್ರತಾಚರಣೆ ಪ್ರಾರಂಭಿಸಿದ್ದಾರೆ.

ಚಾತುರ್ಮಾಸ್ಯ ಸ್ಥಳ: ಉಡುಪಿ ಶ್ರೀಕೃಷ್ಣ ಮಠ

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...