25.3 C
Bangalore
Friday, December 13, 2019

ಪ್ರಶ್ನೆ-ಪರಿಹಾರ: ವಿವಿಧ ಸಮಸ್ಯೆಗಳಿಗೆ ಜಾತಕ ಫಲದಲ್ಲಿದೆ ಸೂಕ್ತ ಪರಿಹಾರಗಳು!

Latest News

ಮಲ್ಲಾಪುರದಲ್ಲಿ ವಿಘ್ನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ: ಜಾತ್ರೆ ಕಣ್ತುಂಬಿಕೊಂಡ ಅಪಾರ ಭಕ್ತರು

ನೆಲಮಂಗಲ: ತಾಲೂಕಿನ ಮಲ್ಲಾಪುರದ ಪ್ರಸಿದ್ಧ ಶ್ರೀ ಬಯಲು ಉದ್ಭವ ವಿಘ್ನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪರಿಷೆ...

ಹೆದ್ದಾರಿ 4ರ ಜಾಸ್ ಟೋಲ್ ಬಳಿ ಲಾರಿ-ಬಸ್ ಡಿಕ್ಕಿಯಾಗಿ 16 ಮಂದಿಗೆ ಗಾಯ

ನೆಲಮಂಗಲ: ತುಮಕೂರು-ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 4ರ ಜಾಸ್ ಟೋಲ್ ಬಳಿ ಗುರುವಾರ ರಾಜ್ಯ ಸಾರಿಗೆ ಬಸ್ ಮತ್ತು ಲಾರಿ ನಡುವೆ ಸಂಭವಿಸಿರುವ ಅಪಘಾತದಲ್ಲಿ ಚಾಲಕ...

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ: ಈಕೆಯ ದಿಟ್ಟತನಕ್ಕೆ ನೆಟ್ಟಿಗರ ಶಹಬ್ಬಾಸ್​ ಗಿರಿ!

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ...

ಬೊಮ್ಮನಹಳ್ಳಿ ಅಭಿವೃದ್ಧಿಗೆ ಸರ್ಕಾರದಿಂದ 600 ಕೋಟಿ ರೂ. ಅನುದಾನ ಬಿಡುಗಡೆ

ಆನೇಕಲ್: ಗ್ರಾಮ ಪಂಚಾಯಿತಿಯಿಂದ ಕೇಂದ್ರ ಸರ್ಕಾರದವರೆಗೂ ಇಂದು ಬಿಜೆಪಿ ಆಡಳಿತದಲ್ಲಿದ್ದು, ದೇಶದ ಅಭಿವೃದ್ಧಿ ಹೊಂದುತ್ತಿದೆ ಎಂದು ಶಾಸಕ ಸತೀಶ್‌ರೆಡ್ಡಿ ಹೇಳಿದರು. ಬಿಬಿಎಂಪಿ ವಾರ್ಡ್‌ನ ಹೊಂಗಸಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ...

ಕೋಟ್ಪಾ ಕಾಯ್ದೆ ಕಠಿಣ ಅನುಷ್ಠಾನ ಅಗತ್ಯ

ದಾವಣಗೆರೆ: ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ನೂರು ಗಜದ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜಿ.ಪಂ. ಉಪ...

# ನಾನು ಮುಂಬೈಗೆ ಬಂದು ಜೀವನದ ಸ್ಥಿತಿಗತಿ ಬದಲಾಯಿಸಿಕೊಂಡೆ. ಊಹಿಸಲಾಗದ ಸಂಪತ್ತನ್ನು ಪಡೆದೆ. ಆದರೆ ಮಗನ ವಿಚಾರ ಅಲಕ್ಷಿಸಿದೆನೋ, ಪ್ರಾರಬ್ಧ ಕರ್ಮವೋ, ನಿಯಂತ್ರಿಸಲಾಗುತ್ತಿಲ್ಲ. ಎಲ್ಲಾ ಬಗೆಯ ಚಟಗಳಿವೆ. ಪರಿಹಾರ ಸಾಧ್ಯವೇ?

| ಅಶ್ವತ್ಥನಾರಾಯಣ ಶೆಟ್ಟಿ ಬಾಂದ್ರಾ, ಮುಂಬೈ

ನಿಮ್ಮ ಹತಾಶೆ ಅರ್ಥವಾಗುವಂಥದ್ದು. ವಿಶ್ರಾಂತಿ ಇರದೆ ದುಡಿದಿದ್ದೀರಿ. ಪ್ರತಿಫಲ ಸಿಕ್ಕಿದೆ ಎಂಬ ನೆಮ್ಮದಿ ನಿಮಗಿದೆ. ಹುಟ್ಟಿದ ಊರಿನಿಂದ ಹೊರಬಂದ ಮೇಲೆಯೇ ಸಮೃದ್ಧಿ ಎಂಬುದು ನಿಮ್ಮಜಾತಕ ಕುಂಡಲಿಯಲ್ಲಿ ಒಂದು ನೆಲೆಯಲ್ಲಿನ ಸತ್ಯವಾಗಿದೆ. ಊಹಿಸಲಾಗದ ಸಂಪತ್ತು ಎಂಬುದು ನಿಮ್ಮ ಮಾತಿನಿಂದಲೇ ವೇದ್ಯ. ಆದರೆ ಕಾಲಚಕ್ರವೆನ್ನಿ, ದುರದೃಷ್ಟ ಎನ್ನಿ. ಕರ್ಮ ಎಂಬ ಮಾತಿದೆ (ಇದು ಸ್ವಲ್ಪ ಕರ್ಕಶವಾಗಿ ಕೇಳಿಸುತ್ತದೆ), ಅದನ್ನೇ ಅನ್ನಿ. ಈಗ ರಾಹುದಶೆಯು ಭೀತ ಸ್ಥಿತಿಯನ್ನು ಉಂಟುಮಾಡುವ ಕಾಲ. ಸೂರ್ಯನೂ, ಶುಕ್ರನೂ ಒಗ್ಗೂಡಿ, ಕುಜದೋಷ ಆವರಿಸಿರುವ ಮೂಲ ಜಾತಕ ಕುಂಡಲಿ, ಈಗ ತಾರುಣ್ಯದ ಸಂದರ್ಭದಲ್ಲಿ ಅಸಮತೋಲನ ಹೊಂದಿರುವ ಶುಕ್ರನು ಸೂರ್ಯನ ಉರಿಯಿಂದಾಗಿ, ಮಗನಿಗೆ ವ್ಯಸನಗಳನ್ನು ಅಂಟಿಸುತ್ತಾನೆ. ಕೇತುವು ಭಾಗ್ಯವನ್ನು ಕಬಳಿಸುತ್ತಿರುವಾಗ, ಎಲ್ಲವೂ ಇದ್ದರೂ ಇಂಥ ಅಸಹಾಯಕತೆ ಉಂಟಾಗುತ್ತದೆ. ಪ್ರತಿದಿನ ಶುದ್ಧವಾಗಿರುವ ಹತ್ತಿಯಲ್ಲಿ ಹಸುವಿನ ತುಪ್ಪ, ಸಿಹಿತಿನಿಸಿಗೆ ಬೆರೆಸುವ ಕೇಸರಿ ದಳ ಹಾಗೂ ಸಕ್ಕರೆ ಸೇರಿಸಿ ಸೂರ್ಯೋದಯದ ಸಂದರ್ಭದಲ್ಲಿ ಈಶಾನ್ಯ ದಿಕ್ಕಿನಲ್ಲಿರುವ ಯಾವುದೇ ದೇವಸ್ಥಾನದ ಬಳಿ ಇರುವ, (ಯಾರೂ ತುಳಿಯದ ಜಾಗವಾಗಿದ್ದರೆ ಒಳಿತು. ಇಲ್ಲವೇ ಒಂದು ಮರದ ಕೆಳಗಡೆ) ಸ್ಥಳದಲ್ಲಿ ಇಟ್ಟು ಬರಲು ಮಗನಿಗೆ ತಿಳಿಸಿ. ಖೇಚರ ಸಮರ್ಪಣ ಖಾದ್ಯದಿಂದಾಗಿ ಸಂಕಷ್ಟ ದೂರವಾಗಬೇಕು. ವಿಷ್ಣು ಸಹಸ್ರನಾಮ ಓದಿಸಿ.

# ಮಗಳ ಮದುವೆ ನಿಶ್ಚಯವಾಗಿದೆ. ನಿಶ್ಚಿತಾರ್ಥ ಆಗಿದೆ. ಮಗಳು ಸಂತೋಷದಿಂದಲೇ ಇದನ್ನು ಒಪ್ಪಿಕೊಂಡಿದ್ದಾಳೆ. ಆದರೆ ಹುಡುಗ ಒಂದು ದಿನ ಫೋನಿನಲ್ಲಿ ಮಾತನಾಡುವಾಗ; ತಾನು ಒತ್ತಡ ನಿಯಂತ್ರಿಸುವುದಕ್ಕಾಗಿ ಡ್ರಿಂಕ್ಸ್ ಪಾರ್ಟಿಗೆ ಶರಣಾಗಿದ್ದುಂಟು. ಮುಂದೆ ಇದನ್ನು ಯಾರೋ ನಿನಗೆ ತಿಳಿಸಿ ಅಥವಾ ಫೋಟೋ ತೋರಿಸಿ ತೊಂದರೆ ಬರಬಾರದು ಎಂದು ಪ್ರಾಮಾಣಿಕವಾಗಿ ತಿಳಿಸುತ್ತಿದ್ದೇನೆ ಎಂದ. ಆಗಿನಿಂದ ನನಗೂ, ಮಗಳಿಗೂ ಶಾಕ್ ಆಗಿದೆ. ಮುಂದೇನು ಮಾಡುವುದು?

| ಉಷಾ ಜೈಶಂಕರ್ ಉದಯಪುರ

ಹುಡುಗನ ಕುಂಡಲಿಯೂ ಇದ್ದಿದ್ದರೆ ಚೆನ್ನಾಗಿತ್ತು. ಪ್ರಾಮಾಣಿಕವಾದ ಮುಖ ತೆರೆದಿರಿಸಿದ್ದಾನೆ ಎಂಬುದು ಶ್ಲಾಘನೀಯ. ಆದರೆ ನಿಶ್ಚಿತಾರ್ಥಕ್ಕೂ ಮುಂಚೆ ಇದನ್ನು ಹೇಳಲು ಹಿಂಜರಿಕೆ ಯಾಕಿತ್ತೋ ತಿಳಿಯದು. ಸೂಕ್ಷ್ಮವಾದ ವಿಷಯವಾಗಿದೆ ಇದು. ಬದುಕಿನುದ್ದಕ್ಕೂ ಹೊತ್ತಿಕೊಂಡ ಅಥವಾ ಮುಂದೆ ಹೊತ್ತಿ ಉರಿದು ಬರಬಹುದಾದ ಬೆಂಕಿಯನ್ನು ಈಗಲೇ ಆರಿಸಿದ ವರ್ತಮಾನ ನಿರ್ವಣವಾಗಿದೆ. ನಿಮ್ಮ ಮಗಳಿಗೆ ಮದುವೆಯಾಗುತ್ತದೆ ಎನ್ನುವುದರಲ್ಲಿ ಅನ್ಯ ಮಾತಿಲ್ಲ. ಪೂರ್ವಪುಣ್ಯಭಾವದ ಮನೆಯ ಬುಧ ಶಕ್ತಿಯುತನಾಗಿದ್ದಾನೆ. ಬಾಳಸಂಗಾತಿಯ ಸ್ಥಳದಲ್ಲಿ ರಾಹುವಿನ ಹೆಡೆ ಇದೆ. ಗುರುವಿನ ದೃಷ್ಟಿಯೂ, ಚಂದ್ರನ ದೃಷ್ಟಿಯೂ ವಿಷಕ್ಕೆ ವಿಪ್ಲವ ತಾರದಂತೆ ಅಮೃತವನ್ನಾಗಿ ಪರಿವರ್ತಿಸುವ ಶಕ್ತಿ ಒದಗಿಸುತ್ತವೆ. ಈಗ ಈ ಹುಡುಗನೇ ಪಾಲಿಗೆ ಬಂದ ಪಂಚಾಮೃತವೇ ಎಂಬ ನಿರ್ಧಾರ ಹುಡುಗನ ಕುಂಡಲಿಯನ್ನು ಗಮನಿಸಿಯೇ ನಿರ್ಧರಿಸಬೇಕು. ಮಗಳು ಲಲಿತಾಷ್ಟಕವನ್ನು ಪಠಿಸಲಿ.

# ನನ್ನ ಮಗನಿಗೆ ಓದಿನಲ್ಲಿ ಆಸಕ್ತಿ ಬಲವಾದದ್ದೇ. ಏನನ್ನೇ ಓದಲಿ, ಓದಿರುವ ಸಂಗತಿಯನ್ನು ಕ್ಷಣಮಾತ್ರದಲ್ಲಿ ತನ್ನಲ್ಲಿ ಇಂಗಿಸಿಕೊಳ್ಳುತ್ತಾನೆ. ತನಗಿಂತ ಹಿರಿಯರಲ್ಲಿ ರ್ಚಚಿಸುತ್ತಾನೆ. ಅವರೂ (ಕೆಲವರಿಗೆ ಕಿರಿಕಿರಿಯೂ ಆಗುತ್ತಿರುತ್ತದೆ.) ಉತ್ತರಿಸಲಾಗದ ಪ್ರಶ್ನೆ ಮುಂದಿಡುತ್ತಾನೆ. ತಾನು ಬುದ್ಧಿವಂತ ಎಂಬ ಅಹಂ ಅಲ್ಲ. ಹಿರಿಯರು, ಅನೇಕರು ಪ್ರಶಂಸೆ ಮಾಡಿ, ಪ್ರಾಮಾಣಿಕವಾಗಿ ಬೆನ್ನು ತಟ್ಟುತ್ತಾರೆ. ಒಂದೇ ತೊಂದರೆ. ಪರೀಕ್ಷೆಯಲ್ಲಿ ವಿಫಲನಾಗುತ್ತಾನೆ. ಪರಿಹಾರ ಇದೆಯೇ?

| ಶಿವಕುಮಾರಿ ತೇಜಾನಿ ಬೀದರ್

ಸೂರ್ಯ ಬುಧ ಯೋಗ, ನೇರವಾಗಿ ಸಮಸಪ್ತಕ ದೃಷ್ಟಿಯ ಚಂದ್ರ ಮೇಧಾಶಕ್ತಿಯನ್ನು ಒದಗಿಸಿದ್ದಾರೆ. ಆದರೆ ಕುಜನೂ, ಶನಿಯೂ ಪಂಚಮದಲ್ಲಿದ್ದು, ಕೆಲವು ಸಲ ಶೂನ್ಯಕ್ಕೆ ಜಾರಿಸುತ್ತಾರೆ. ತಾನು ಒಂದು ಚೌಕಟ್ಟಿನಲ್ಲಿ ಬಂಧಿ ಎಂದು ಮನಸ್ಸಿಗೆ ಬಂದಾಗ ನಿಷ್ಕ್ರಿಯತೆ ಆವರಿಸುತ್ತದೆ. ಆಧುನಿಕತೆಯ ಈ ವರ್ತಮಾನದಲ್ಲಿ ಒಳ್ಳೆಯ ಮನೋವೈದ್ಯರ ಬಳಿ ರ್ಚಚಿಸಿ. ಉತ್ತಮವಾದ ಜ್ಯೋತಿಷಿಗಳನ್ನೂ (ಜ್ಯೋತಿಷಿ ಮನೋವೈದ್ಯನಾಗಬಲ್ಲ. ಆದರೆ ಆಯ್ಕೆ ನಿಮ್ಮದು) ಸಂಧಿಸಬಹುದು. ಮೇಧಾದಕ್ಷಿಣಾಮೂರ್ತಿಯ ಸ್ತೋತ್ರಗಳನ್ನು ಓದಲಿ. ಕೃಷ್ಣನಕ್ಷತ್ರ ಅಥವಾ ಪಿಂಗಳ ಮಣಿಧಾರಣೆ ಕೂಡ ಉತ್ತಮ.

# ನನ್ನ ಮನೆಯಲ್ಲಿ ನಾನು, ಪತ್ನಿ, ಮಗ ಇದ್ದೇವೆ. ಮೂವರ ಜಾತಕಗಳನ್ನೂ ಕಳಿಸಿದ್ದೇನೆ. ಮೂಢನಂಬಿಕೆಗಳನ್ನು ನಾನು ಚಿಕ್ಕಂದಿನಿಂದಲೂ ವಿರೋಧಿಸಿದವನು. ಆದರೆ ಈಗ ಸುಮಾರು ಎರಡು ವರ್ಷಗಳಿಂದ (ಹೊಸ ಮನೆಗೆ ಬಂದ ಮೇಲೆ) ‘ನನ್ನನ್ನು ಬಿಡುಗಡೆಗೊಳಿಸಿ’ ಎಂಬ ಸುಮಾರು 8,9 ವರ್ಷದ ಒಂದು ಮಗುವಿನ ಮುಖ (ಹೆಣ್ಣೋ ಗಂಡೋ ತಿಳಿಯದು) ಮತ್ತು ಧ್ವನಿ, ಅಳಲಿನ ಕನಸು ಮೂವರಿಗೂ ಬೀಳುತ್ತದೆ. ಇದೇನು, ಏಕೆ, ಹೇಗೆ ಅರ್ಥವಾಗುತ್ತಿಲ್ಲ. ಬೇರೆ ಬೇರೆ ಸಮಯದ ಕನಸುಗಳು. ಆದರೆ ಇದರಲ್ಲಿ ಏನು ವಿಸ್ಮಯ ಇದೆ?

| ಅನಂತಕುಮಾರ ಕತಾಕಲ್ ಸಿಡ್ನಿ (ಆಸ್ಟ್ರೇಲಿಯಾ)

ಸಾಕಷ್ಟು ಕುತೂಹಲಕಾರಕ ಸಮಸ್ಯೆ. ಕೇವಲ ಕನಸು ಎಂದುಕೊಂಡು ಉಪೇಕ್ಷಿಸಬಹುದು. ಮೂವರಿಗೂ ಒಂದೇ ಕನಸು ಎಂಬುದು ಉಪೇಕ್ಷಿಸಲು ಸಾಧ್ಯವಾಗದ ವಿಚಾರವೂ ಹೌದು. ಕ್ಷೀಣಚಂದ್ರ, ರಾಹು ವಿಹ್ವಲತೆಗಳು ಮೂವರ ಜಾತಕದಲ್ಲೀಗ ಏಕಕಾಲದ ಘಟಕಗಳಾಗಿ ಪ್ರಸ್ತುತದಲ್ಲಿ (ಶನಿಕಾಟ, ರಾಹುದಶಾ, ರಾಹುಭುಕ್ತಿಗಳ ರೂಪದಲ್ಲಿ) ಕಾಣುತ್ತಿವೆ. ಇನ್ನೂ ಒಂದು ಅಂದರೆ ಇತಿಹಾಸದ ನೆರಳು (ಭೂತಕಾಲ ಅನ್ನಿ) ನೀವಿರುವ ಮನೆಯಲ್ಲಿನ ಸ್ಪಂದನೆಗಳನ್ನು ಅರಿತೇ ಕೆಲವು ವಿಚಾರಗಳು ಸ್ಪಷ್ಟವಾಗಬೇಕು. ವಾಸ್ತುವಿಚಾರ ನೂರಕ್ಕೆ ನೂರು ಪಕ್ಕಾ ಆಗಿ ಕಟ್ಟಿಸಿದ ಮನೆಗಳಲ್ಲಿ (ಬೆಂಗಳೂರಿನ ಕೆಲವು ಬಡಾವಣೆಗಳು, ಶ್ರೀಮಂತರ, ಸರ್ವ ಸಮೃದ್ಧಿಯ ಹೊರತಾಗಿಯೂ) ಯಾಕೆ ಅಶಾಂತಿ, ಏನೋ ಭ್ರಾಂತಿ ಎಂದು ಚಡಪಡಿಕೆಯೊಂದಿಗೆ ಬಂದು ಕೇಳುತ್ತಾರೆ. ಕಿಂಕತ್ಸ, ಶಾಂಘ, ಇಕ್ಷ್ವಾಕು ಧಾತುಗಳು ಏರುಪೇರಾದಾಗ ಮನೆಯಲ್ಲಿ ಅಶಾಂತಿ ಸಾಧ್ಯ. ವಿಸõತವಾಗಿರುವ ಕ್ಷತ, ಪಾತ ಅಂಶಗಳು, ಮೂಢನಂಬಿಕೆಯೆಂಬ (ವಾಸ್ತವ ಬೇರೆ ಇದ್ದಾಗಲೂ) ಉಪೇಕ್ಷೆಗಳು ತಪ್ಪೇನಲ್ಲ. ಏನೇ ಇರಲಿ, ಶಕ್ತಿದುರ್ಗಾಳನ್ನು, ದತ್ತಾತ್ರೇಯನನ್ನು ಆರಾಧಿಸಿ, ಸ್ತುತಿಸಿ. ಏಕಾಗ್ರತೆ, ಚಿತ್ತದಾರ್ಢ್ಯತೆ ಹಲವನ್ನು ಪುಡಿಗಟ್ಟುತ್ತವೆ.

# ನಾನು ಒಂದಿಷ್ಟನ್ನು ಓದಿಕೊಂಡು ಒಳ್ಳೆಯ ಕೆಲಸದಲ್ಲಿದ್ದೇನೆ. ಮೊದಲನೆಯ ಮದುವೆಯಾದೆ. ಆತ ನಿಜಕ್ಕೂ ಮದುವೆಯಾದದ್ದು ನನ್ನ ಹಣಕ್ಕೆ. ಡಿವೋರ್ಸ್ ನಂತರ ಎರಡನೆಯವನನ್ನು ಯಾಕೆ ಮದುವೆಯಾದೆ ಎಂದು ನನಗೆ ತಿಳಿಯದು. ಹಣಕ್ಕಾಗಿನ ವ್ಯಾಮೋಹವಿಲ್ಲ. ಮನದ ಬಯಕೆಗಳು ನನ್ನಲ್ಲಿನ ವಾಸ್ತವ. ಆದರೆ ಎಂದೂ ಈ ಪುರುಷನೂ ಆರ್ದ್ರವಾಗಿ ಹಸ್ತ ಇರಲಿ, ಬೆರಳನ್ನೂ ರ್ಸ³ಸಲಿಲ್ಲ. ಎರಡು ಮದುವೆ ಆದರೂ ಈಗಲೂ ನಾನು ಕುಮಾರಿಯೇ. ಯಾಕೆ ವಿಧಿ ನನ್ನನ್ನು ಕಾಡಿತು? ಕಾಡುತ್ತಿದೆ? ಇನ್ನು ಬಯಕೆಗಳಿಲ್ಲ. ಆದರೆ ನೋವು ಕಾಡುತ್ತದೆ. ಪರಿಹಾರ ಇದೆಯೇ?

| ಕೃಷ್ಣರೂಪಾ ಮಿಸ್ಕಿನ್ ಬೆಳಗಾವಿ

ಇನ್ನು ಬಯಕೆಗಳಿಲ್ಲ. ಆದರೆ ನೋವು ಕಾಡುತ್ತದೆ. ಪರಿಹಾರ ಇದೆಯೇ? ಇವು ನಿಮ್ಮ ಅನಿಸಿಕೆಗಳು. ನಿರಾಸೆಗಳು. ಹಾಗೆಯೇ ಮತ್ತೆ ಆಶಾವಾದದೊಂದಿಗಿನ ನಿರೀಕ್ಷೆಗಳು. ಬದುಕು ನಾನಾ ಕಾರಣಗಳಿಗಾಗಿ ಅರಳಿ ಸಂಭ್ರಮಿಸುತ್ತದೆ. ಮುದುಡಿ ನರಳುತ್ತದೆ. ಕೆಲವರಿಗೆ ಸಂಭ್ರಮಗಳಿಲ್ಲ. ಕೆಲವರಿಗೆ, ಹೌದು ಏನಾದಂತಾಯ್ತು ಎಂಬ ಒಣಗಿದ ವರ್ತಮಾನದಲ್ಲಿ ಎದ್ದೇಳುವ ಪ್ರಶ್ನೆಗಳು. ಶಿವನನ್ನು ಸ್ತುತಿಸಿ. ಚಂಡಿಕಾಳನ್ನು ಆರಾಧಿಸಿ. ಏಕಾಂಗಿತನ ಕಾಡದಂತೆ ನಿಮಗೆ ನೀವೇ ನಿಮ್ಮ ಸ್ನೇಹಿತರಾಗಿ. ಋಣಾನುಬಂಧ ರೂಪೇಣ ಪಶು ಪತ್ನಿ (ಪತಿ ಎಂದೂ ಸ್ತ್ರೀಯರು ಸೇರಿಸಿಕೊಳ್ಳಬೇಕು), ಸುತ (ಮಕ್ಕಳು), ಆಲಯ (ವಾಸದ ಸೌಧಗಳು). ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ. ಸಂತೋಷ ಶಿವನಿಚ್ಛೆ. ಆನಂದವೆಂಬುದು ಹರಿಚಿತ್ತ. ಶಕ್ತಿ (ಕಾಮಾಕ್ಷಿ), ಪ್ರಜನನ (ಸಂತಾನಕ್ಕಾಗಿನ ವಿಚಾರ), ಚಲನೆ (ಬೆಳವಣಿಗೆ) ಇವುಗಳ ವ್ಯಾಖ್ಯಾನ ನಿಮಗೂ ಗೊತ್ತು. ಕಾಣಲಾಗದ್ದು ಅದೃಷ್ಟ. ದುಡಿದು ಗಳಿಸಿ, ಗೆಲ್ಲುತ್ತೀರಿ. ಇದು ಅಬಾಧಿತ.

# ಬ್ಯಾಂಕೊಂದರಲ್ಲಿ ಅಧಿಕಾರಿ. ನನ್ನ ಮೇಲೆ ಇರುವುದು ಕಾರ್ಯನಿರ್ವಾಹಕ ಮೇಲಧಿಕಾರಿ. ಚೇಲಾಗಳು ಹೊಗಳುತ್ತಾರೆ. ಅವರ ಬಳಿ ಉತ್ತಮ ಸಂಬಂಧ ಅವರದು. ನನಗೆ ಹೊಗಳಲು ಬಾರದು. ಯೋಗ್ಯತೆ ಇದ್ದರೆ ಕಾಲು ಮುಟ್ಟಿ ನಮಸ್ಕರಿಸುತ್ತೇನೆ ಕೆಲಸ ಬಿಡುವಾ ಎಂದೇ ಅನಿಸುತ್ತಿದೆ. ಪರಿಹಾರವಿದೆಯೇ?

| ವಿಶ್ವೇಶ್ವರಪ್ಪ ಕಾಗಲಗಿ ಮಹಾಲಿಂಗಪುರ

ಚಿನ್ನ ಚಿನ್ನವೇ. ಆದರೆ ಅದು ಬಗ್ಗುತ್ತದೆ. ನುಗ್ಗುವುದರಲ್ಲಿ ಆನಂದಪಡುವವರು ಕತ್ತೆ ಕಾಲು ಎಂದು ಮುಟ್ಟದೆ ಇರಲಾರದು. ನಿಮ್ಮ ಜಾತಕದ ಗುರುಗ್ರಹ, ರಾಹು, ಕೇತು, ಶುಕ್ರ, ಶನಿ, ಕುಜರು ಜೀವನದ ಮುಖ್ಯ ಭಾಗವನ್ನು ರಸಹೀನಗೊಳಿಸುತ್ತಿರುತ್ತಾರೆ. ರವಿ ಬುಧರು ಮಂಕಾಗಲು ಬಿಡಲಾರರು. ಚಂದ್ರನು ಒಮ್ಮೆ ಶಿಖರವನ್ನೂ, ಮಗದೊಮ್ಮೆ ಕಂದಕವನ್ನೂ ಏರಿಳಿಸುತ್ತಲೇ ಇರುವ ಗುಣಧರ್ಮ ಹೊಂದಿದ್ದಾನೆ. ನಿಮ್ಮ ಚಿನ್ನದ ಗುಣ ಸ್ವಭಾವಕ್ಕೆ ತುಸು ತಾಟ್ಟು ಸೇರಿಸಿ ಕಾಲಭೈರವ, ಖಡ್ಗಮಾಲಿನಿ ಸ್ತೋತ್ರಾವಳಿ ಜಪಿಸಿ. ಅಂತರಂಗದ ತಳಮಳ ದೂರ. ಶತ್ರುಬಾಧೆಗೆ ಕೊಂಚ ವಿರಾಮ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

(ಪ್ರತಿಕ್ರಿಯಿಸಿ: [email protected], [email protected])

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....