20.8 C
Bangalore
Sunday, December 8, 2019

ಅಗಣಿತ ಗುಣದ ರಾಮನಾಮ

Latest News

ಪತಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಪತ್ನಿಯ ಸೆರೆ

ಕೆಜಿಎಫ್: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆಗೈದ ಪತ್ನಿ ಮತ್ತು ಪ್ರಿಯಕರನನ್ನು ಉರಿಗಾಂ...

ಅರಣ್ಯ ಸರ್ವೆಗೆ ಡ್ರೋನ್: ರಾಜ್ಯದಲ್ಲೇ ಮೊದಲ ಬಾರಿಗೆ ಹೊಸನಗರದಲ್ಲಿ ಪ್ರಾಯೋಗಿಕವಾಗಿ ಜಾರಿ

ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಪ್ರದೇಶ ಗುರುತಿಸಲು ಪ್ರಾಯೋಗಿಕವಾಗಿ ಹೊಸನಗರ ತಾಲೂಕಿನಲ್ಲಿ ಅರಣ್ಯ ಇಲಾಖೆ ಡ್ರೋನ್ (ಏರಿಯಲ್) ಸರ್ವೆ ನಡೆಸಿದ್ದು, ಯಶಸ್ವಿಯಾದರೆ ಇಲಾಖೆಯ...

ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆ

ಚಿತ್ರದುರ್ಗ: ಸಾಮಾಜಿಕ ಸಾಮರಸ್ಯ,ರಾಷ್ಟ್ರೀಯ ಏಕತೆಗೆ ತಿಂಗಳಿಗೂ ಹೆಚ್ಚು ಕಾಲ ಜಿಲ್ಲಾದ್ಯಂತ ನಡೆದ ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣೆಗೆ ಶನಿವಾರ ಚಿತ್ರದುರ್ಗದ ಹಳೇ...

ಭಗವದ್ಗೀತೆ ಪಠಣದಿಂದ ಅಜ್ಞಾನ ದೂರ

ಚಿಕ್ಕಬಳ್ಳಾಪುರ: ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಹಾತ್ಮಗಾಂಧಿ ಸೇವಾಟ್ರಸ್ಟ್ ಸಂಸ್ಥಾಪಕ ಶ್ರೀ ವಿನಯ್ ಗುರೂಜಿ ಅಭಿಪ್ರಾಯಪಟ್ಟರು. ತಾಲೂಕಿನ...

ನಾಯಿಂದ್ರಹಳ್ಳಿ ವಿವಾದಿತ ರಸ್ತೆ ಸರ್ವೇ

ಚಿಂತಾಮಣಿ: ತಾಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಿಂದ್ರಹಳ್ಳಿ ರಸ್ತೆ ವಿವಾದ ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳು ಸರ್ವೇ ನಂ.2 ವ್ಯಾಪ್ತಿಯ 5.04...

ಶ್ರೀರಾಮ ಎಂದರೆ ಒಬ್ಬ ವ್ಯಕ್ತಿಯೋ, ರಾಜನೋ ಅಥವಾ ಒಂದು ಪ್ರದೇಶಕ್ಕೆ ಸೀಮಿತವಾದ ಮಹಾತ್ಮನೋ ಅಲ್ಲ. ಶ್ರೀರಾಮ ಎಂದರೆ ನಾವು ಜೀವಿಸಬಹುದಾದ ಮೌಲ್ಯಗಳ ಸಾಕಾರಮೂರ್ತಿ. ಅದೇ ಕಾರಣಕ್ಕಾಗಿ ‘ರಾಮೋ ವಿಗ್ರಹವಾನ್ ಧರ್ಮಃ’ ಎಂಬ ಉಕ್ತಿ ಜನಮನದಲ್ಲಿ ನಲಿಯುತ್ತಲಿದೆ. ಇಂಥ ಶ್ರೀರಾಮನಾಮದ ಮಹಿಮೆಯನ್ನು ಬಣ್ಣಿಸುವ ಅಪರೂಪದ ಬರಹ ಇಲ್ಲಿದೆ.

| ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು

ರಾಮ ಎಂಬ ಹೆಸರಿನ ಅರ್ಥವೂ ಸರಿಯಾಗಿ ಗೊತ್ತಿಲ್ಲದೆ ಅನೇಕರು ರಾಮನಾಮವನ್ನು ಜಪಿಸುವದುಂಟು. ಭಾರತ ದೇಶದಲ್ಲಿ ರಾಮನಾಮವನ್ನು ಕೇಳದವರು ಸಿಕ್ಕುವದು ದುರ್ಲಭ. ರಾಮಭಕ್ತನಾದ ಹನುಮಂತನ ದೇವಾಲಯವನ್ನು ಕಾಣದ ಊರು ಸಿಕ್ಕುವದೂ ಕಷ್ಟ. ರಾಮನೆಂದರೆ ದಶರಥನ ಮಗನು, ಸೀತೆಯನ್ನು ರಾವಣನು ಕದ್ದೊಯ್ದಾಗ ಸುಗ್ರೀವ, ಹನುಮಂತ – ಮೊದಲಾದವರ ಸಹಾಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ರಾವಣನನ್ನು ಕೊಂದು ಸೀತೆಯನ್ನು ತಂದು ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾದನು – ಎಂಬಿಷ್ಟು ಕಥೆಯನ್ನಾದರೂ ಕೇಳದವರು ಈ ದೇಶದಲ್ಲಿ ಇಲ್ಲವೇ ಇಲ್ಲ. ಶ್ರೀರಾಮನು ದಶರಥನ ಮಗನೆಂದು ತಿಳಿದವರಿಗೆ ಕೂಡ ಆತನ ಆದರ್ಶವಾದ ಗುಣಗಳು ಮನಸ್ಸಿನಲ್ಲಿ ಮೂಡುವವು, ಧರ್ಮದಲ್ಲಿ ಪ್ರೇಮವು ಹೆಚ್ಚುವುದು. ಆದರೆ ರಾಮನು ಭಗವಂತನಾದ ವಿಷ್ಣುವಿನ ಅವತಾರವೇ ಎಂದು ತಿಳಿದವರಿಗೆ ರಾಮನಾಮಶ್ರವಣದಿಂದ ಮನಸ್ಸಿನಲ್ಲಿ ಆಗುವ ಪರಿಣಾಮವನ್ನು ಬೇರೆಯೇ. ವೇದವೇದ್ಯನಾದ ಪರಮಪುರುಷನೇ ದಶರಥನ ಮಗನಾಗಿ ಹುಟ್ಟಲು ವೇದವು ವಾಲ್ಮೀಕರಿಂದ ರಾಮಾಯಣದ ರೂಪವನ್ನು ಧರಿಸಿತು ಎಂಬರ್ಥದ ಒಂದು ಶ್ಲೋಕವುಂಟು:

ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ ||

ವೇದಃ ಪ್ರಾಚೇತಸಾದಾಸೀತ್ ಸಾಕ್ಷಾತ್ ರಾಮಾಯಣಾತ್ಮನಾ ||

ಈ ಶ್ಲೋಕವನ್ನು ಆಸ್ತಿಕರಾದ ಸನಾತನಧರ್ವಿುಗಳು ಅನೇಕರು ಕಂಠಪಾಠ ಮಾಡಿ ಕೊಂಡಾಡಿರುತ್ತಾರೆ. ತಮ್ಮ ಮಕ್ಕಳಿಗೆ ಇದನ್ನು ಮರೆಯದಂತೆ ಹೇಳಿಕೊಡಬೇಕು – ಇದೇ ಒಂದು ರಾಮಮಂತ್ರವಾಗುತ್ತದೆ. ರಾಮಾಯಣ, ವೇದ, ರಾಮ, ವೇದವೇದ್ಯನಾದ ಪರಮಪುರುಷನು – ಈ ಭಾವಗಳು ಮನಸ್ಸಿನಲ್ಲಿ ಹರಿದಾಡಿದರೇ ಮನಸ್ಸು ಪರಿಶುದ್ಧವಾಗುತ್ತದೆ.

ವೇದವೇದ್ಯನಾಗಿರುವ ಪರಮಪುರುಷನೆಂದರೆ ಯಾರು? ಆತನು ಸಾಕ್ಷಾನ್ನಾರಾಯಣನೇ. ಅವನು ಸಗುಣನೆಂದು ಕೆಲವರು, ನಿರ್ಗಣನೆಂದು ಕೆಲವರು, ಸಾಕಾರನೆಂದು ಕೆಲವರು, ನಿರಾಕಾರನೆಂದು ಕೆಲವರು – ಹೀಗೆ ರಾಮಭಕ್ತರಲ್ಲಿ ವಿವಾದವಿರುವದುಂಟು. ಆದರೆ ಒಂದೇ ತತ್ತ್ವವು ಸಾಕಾರವೂ ಆಗಿರಬಹುದು; ನಿರಾಕಾರವೂ ಆಗಿರಬಹುದು. ಇದನ್ನು ಮನದಂದುಕೊಂಡವರಿಗೆ ಯಾವ ವಿವಾದಕ್ಕೂ ಕಾರಣವಿರುವದಿಲ್ಲ. ಇದಕ್ಕೊಂದು ಉದಾಹರಣೆ: ಆವಿ, ನೀರು, ಮಂಜುಗಡ್ಡೆ – ಇವೆಲ್ಲವೂ ಒಂದೇ ವಸ್ತು ಆದರೂ ಅವುಗಳ ಸ್ವಭಾವವೂ ಕಾರ್ಯವೂ ಬೇರೆಬೇರೆಯಾಗಿ ಕಾಣುವುದರಿಂದ ವಿವೇಕವಿಲ್ಲದವರು ಅವು ಬೇರೆಬೇರೆಯ ವಸ್ತುಗಳೆಂದೇ ಭಾವಿಸುವ ಸಂಭವವಿದೆ. ಸಾಮಾನ್ಯಜನರ ಕಣ್ಣಿಗೆ ಗೊತ್ತಾಗುವಂತೆ ಈ ಮೂರು ಮಾರ್ಪಾಡುಗಳನ್ನೂ ಹೊಂದಬಹುದಾದ ನೀರಿನ ಭೌತಿಕವಿಜ್ಞಾನಿಗಳ ದೃಷ್ಟಿಯಿಂದ ನೋಡಿದಾಗ ಆಮ್ಲಜನಕ, ಜಲಜನಕ – ಎಂಬ ಎರಡು ಅನಿಲಗಳ ರೂಪವನ್ನು ತಳೆಯಬಹುದೆಂದು ಗೊತ್ತಾಗುತ್ತದೆ. ಒಂದಕ್ಕಿಂತ ಒಂದು ಅತ್ಯಂತವಾದ ಭಿನ್ನವಾದ ಈ ಅನಿಲಗಳು ರಾಸಾಯನಿಕಕ್ರಮದಿಂದ ಸಂಯೋಗವಾಗಿ ನೀರಾಗಿರುವದೆಂದು ಪ್ರಾಕೃತರು ಯಾರು ತಾನೆ ಕಲ್ಪಿಸುವದಕ್ಕಾದೀತು? ಹೀಗೆಯೇ ಮಹಾವಿಷ್ಣುವೂ ಆತನ ಮಾಯೆಯೂ ಸೇರಿಕೊಂಡು ಸೀತಾರಾಮನೆಂಬ ರೂಪದಿಂದ ಅಯೋಧ್ಯೆಯಲ್ಲಿ ಕಾಣಿಸಿಕೊಂಡನೆಂಬುದು ವಾಲ್ಮೀಕರಂಥ ಋಷಿಗಳು ಹೇಳಿದ ಹೊರತು ಸಾಮಾನ್ಯದೃಷ್ಟಿಯ ಜನರಿಗೆ ಹೇಗೆ ತಾನೆ ತಿಳಿಯಬೇಕು? ಲಕ್ಷಿ್ಮೕಸಮೇತನಾದ ನಾರಾಯಣನು ಮಹಾಮಾಯೆಯಾದ ಸೀತೆಯ ಸಹಾಯದಿಂದ ರಾಮರೂಪದಿಂದ ಅದ್ಭುತಲೀಲೆಗಳನ್ನು ತೋರಿಸಿದನು; ವೇದದಲ್ಲಿ ಹೇಳಿರುವ ಸತ್ಯಂ ವದ, ಧರ್ಮಂ ಚರ – ಎಂಬ ಉಪದೇಶಗಳಿಗೆ ತನ್ನ ಆದರ್ಶವಾದ ನಡತೆಯಿಂದಲೇ ವ್ಯಾಖ್ಯಾನ ಮಾಡಿದನು – ಹೀಗೆಂದು ನಂಬುವವರಿಗೆ ಶ್ರೀರಾಮ ಎಂಬ ನಾಮವು ಅರ್ಥಪೂರ್ಣವಾಗಿರುತ್ತದೆ.

ಇನ್ನೊಂದು ದೃಷ್ಟಿಯಿಂದ ನೋಡಿದಾಗ ರಾಮ ಎಂಬ ನಾಮದಲ್ಲಿ ಶಿವವಿಷ್ಣೆ ್ವ ೖಕ್ಯವು ಪ್ರಕಟವಾಗಿದೆ. ನಾರಾಯಣಾಷ್ಟಾಕ್ಷರೀಮಂತ್ರದಲ್ಲಿರುವ ‘ರಾ’ ಎಂಬುದು ಶಿವ ಪಂಚಾಕ್ಷರಿಯಲ್ಲಿರುವ ‘ಮ’ ಎಂಬುದೂ ಆ ಎರಡು ಮಂತ್ರಗಳ ಜೀವನಾಡಿಗಳೆಂದು ಮಂತ್ರಶಾಸ್ತ್ರಜ್ಞರು ಭಾವಿಸುತ್ತಾರೆ. ಆದ್ದರಿಂದ ‘ರಾಮ’ ಎಂಬ ಮಂತ್ರಭಾಗದಲ್ಲಿ ಶಿವವಿಷ್ಣುಗಳನ್ನು ಒಂದಾಗಿ ಭಾವಿಸುವದೆಂಬ ಪ್ರಯೋಜನವಿದೆ. ಬ್ರಹ್ಮನೆಂಬುದಕ್ಕೂ ಇದನ್ನು ಉಪಲಕ್ಷಣವಾಗಿ ಹಿಡಿದರೆ ತ್ರಿಮೂರ್ತಿಗಳ ಸಾರವೂ ರಾಮಮಂತ್ರದಲ್ಲಿ ಅಡಗಿದೆ ಎಂದಾಗುವದು.

ಪುರಾಣಗಳಲ್ಲಿ ಭಗವಂತನನ್ನು ಸ್ತೋತ್ರಮಾಡುವಾಗ ಜಗತ್ತನ್ನು ಬ್ರಹ್ಮರೂಪದಿಂದ ಸೃಷ್ಟಿಸಿ ವಿಷ್ಣುರೂಪದಿಂದ ಕಾಪಾಡಿ ರುದ್ರರೂಪದಿಂದ ಸಂಹರಿಸುವವನು ನೀನು – ಎಂದು ಮತ್ತೆ ಮತ್ತೆ ಹೊಗಳಿರುವದನ್ನು ಲಕ್ಷಿಸಬೇಕು. ಇದು ರಾಮನಾಮಸ್ಮರಣೆಯಿಂದ ಮನಸ್ಸಿನಲ್ಲಿ ನಿಲ್ಲುವದು.

ಇನ್ನು ಪರಮಾತ್ಮನು ಜಗತ್ತಿನ ಸೃಷ್ಟಿಸ್ಥಿತಿಲಯಗಳನ್ನು ಮಾಡುವವನು ಎಂದರೇನರ್ಥ? ಕುಂಬಾರನು ಮಡಕೆಕುಡಿಕೆಗಳನ್ನು ನಿರ್ವಣಮಾಡಿ ಮನೆಯಲ್ಲಿ ಕೆಲವು ಕಾಲದವರೆಗೆ ಇಟ್ಟಿದ್ದು ಅವು ನಿರರ್ಥಕವೆಂದು ತಿಳಿದಾಗ ಅವುಗಳನ್ನು ಒಡೆದು ಅತ್ತೆಸೆಯುವಂತೆ ಜಗತ್ತಿನ ಸೃಷ್ಟ್ಯಾದಿಗಳನ್ನು ಮಾಡುತ್ತಾನೆಂದು ಅರ್ಥವೆ? ಹಾಗಲ್ಲ. ಏಕೆಂದರೆ

ಶ್ರುತಿಸ್ಮ ೃಪುರಾಣಗಳಲ್ಲಿ ಪರಮಾತ್ಮನೇ ಜಗದ್ರೂಪನಾಗಿ ಆಗಿರುತ್ತಾನೆ ಎಂದು ವರ್ಣಿಸಿರುವದನ್ನೂ ಅವರು ಲೀಲಾಮಾತ್ರದಿಂದ ಜಗತ್ತಿನ ಸೃಷ್ಟಿಸ್ಥಿತಿಲಯಗಳನ್ನು ಮಾಡುತ್ತಾನೆ ಎಂದು ವರ್ಣಿಸಿರುವದನ್ನೂ ಮನದಟ್ಟು ಮಾಡಿಕೊಂಡರೆ ಪರಮಾತ್ಮನೇ ಜಗದ್ರೂಪದಿಂದ ತೋರುತ್ತಿರುತ್ತಾನೆ, ತನ್ನ ರೂಪದಿಂದಲೂ ಇರುತ್ತಾನೆ ಎಂಬ ಘನವಾದ ವೇದಾಂತಾರ್ಥವು ಮನಸ್ಸಿಗೆ ಹೊಳೆಯುವದು. ‘ಧರ್ಮಂ ಖಲ್ವಿದಂ ಬ್ರಹ್ಮತಜ್ಜಲಾನ್’ ಎಂಬ ವಾಕ್ಯದ ಅಭಿಪ್ರಾಯವೇ ಇದು. ಸೃಷ್ಟಿಸ್ಥಿತಿಪ್ರಲಯಗಳೆಂಬ ಮೂರು ಕಾಲದಲ್ಲಿಯೂ ಪರಮಾತ್ಮನೇ ನಮಗೆ ಈ ಜಗದ್ರೂಪವಾಗಿ ತೋರುತ್ತಲೂ ತನ್ನ ಸ್ವರೂಪದಲ್ಲಿಯೇ ಅಡಗುತ್ತಲೂ ಇರುತ್ತಾನೆ ಎಂಬ ಘನತತ್ತ್ವವು ಯಾರ ಮನಸ್ಸಿನಲ್ಲಿ ಮಿಂಚುವದೋ ಅವರಿಗೆ ಶ್ರೀರಾಮಮಂತ್ರದಿಂದ ವೇದಾರ್ಥಶ್ರೀಯೆಲ್ಲವೂ ದೊರಕಿದಂತೆ, ಅವರು ಸಂಸಾರದ ಎಲ್ಲಾ ಎಡರುಗಳನ್ನೂ ಜಯಿಸಿದಂತೆ. ರಾಮ ಎಂದರೆ ಆನಂದಸ್ವರೂಪನಾದವನು ಎಂಬರ್ಥವಾಗುವದು. ಆದ್ದರಿಂದಲೇ ರಾಮ ಎಂಬುದು ಮಧುರವಾದ ನಾಮವೆಂದೂ ಅದನ್ನು ವಾಲ್ಮೀಕಿಯೆಂಬ ಕೋಗಿಲೆಯು ರಾಮ! ರಾಮ! ಎಂದು ಹಾಡುತ್ತಿರುವದೆಂದೂ ಬಲ್ಲವರು ಹೇಳುತ್ತಾರೆ.

ಕೂಜನ್ತಂ ರಾಮರಾಮೇತಿ ಮಧುರಂ ಮಧುರಾಕ್ಷರಂ |

ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್ ||

ನಿರಾಕಾರನಾದ ಪರಮಾತ್ಮನು ಶ್ರೀರಾಮನಾಗಿ ಅವತರಿಸಿದನೆಂದರೇನರ್ಥ? ರಾಮಾಯಣದಲ್ಲಿ ಹೇಳಿರುವಂತೆ ಬಂದು ಯುಗದಲ್ಲಿ ದಶರಥನ ಮಗನಾಗಿ ಜನಿಸಿದನು – ಎಂಬ ಅಕ್ಷರಾರ್ಥವನ್ನು ಹಿಡಿದರೆ, ಭಗವಂತನಿಗೂ ಕಾಮಕರ್ಮಗಳ ಉಪಟಳವಿದೆ ಎಂದಾದೀತು. ಆದರೆ ವಾಲ್ಮೀಕಿ ಋಷಿಗಳಿಗೆ ಈ ಅಭಿಪ್ರಾಯವಿರಲಿಲ್ಲ.

ರಾಮಾಯಣಮಿದಂ ಕೃತ್ಸ ್ನ

ಕೃಣ್ವತಃ ಪಠತಃ ಸದಾ |

ಪ್ರೀಯತೇ ಸತತಂ ರಾಮಃ

ಸ ಹಿ ವಿಷ್ಣುಃ ಸನಾತನಃ ||

‘ಪೂರ್ಣವಾಗಿ ರಾಮಾಯಣವನ್ನು ಶ್ರವಣಮಾಡುವವನ ವಿಷಯದಲ್ಲಿಯೂ ಪಠನಮಾಡುವವನ ವಿಷಯದಲ್ಲಿಯೂ ರಾಮನು ಪ್ರೀತನಾಗುವನು. ಆ ರಾಮನು ಸನಾತನವಾದ ವಿಷ್ಣುವಲ್ಲವೇ?’ ಎಂದು ಅವರು ಕೊನೆಯಲ್ಲಿ ಬರೆದಿರುತ್ತಾರೆ. ಆದ್ದರಿಂದ ಶ್ರೀರಾಮನು ಸತತವಾಗಿಯೂ ಇರುವಂತೆ ಇದ್ದುಕೊಂಡೇ ರಾಮಾವತಾರದ ಲೀಲೆಯನ್ನು ನಡೆಯಿಸಿ ಜನರನ್ನು ಆನಂದಗೊಳಿಸಿದನು. ಈಗಲೂ ವಿರಾಡ್ರೂಪದಿಂದ ಆತನು ತನ್ನ ಲೀಲೆಯನ್ನು ತೋರಿಸುತ್ತಲೇ ಇರುತ್ತಾನೆ.

ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವನ್ತರಾಣಿ ಚ |

ವಂಶಾನುಚರಿತಂ ಚೇತಿ ಪುರಾಣಂ ಪಂಞ್ಚಲಕ್ಷಣಮ್ ||

ಎಂಬಂತೆ ಪುರಾಣಗಳಲ್ಲಿ ಹೇಳಿರುವ ಸೃಷ್ಟಾ ್ಯಗಳ ಕಥೆಗಳು ಬರಿಯ ಪುರಾ – ಹಳೆಯವು – ಎಂದು ತಿಳಿಯಬಾರದು. ಭಗವಂತನ ಲೀಲೆಯು ಸಂತತವಾಗಿ ನಡೆಯುತ್ತಲೇ ಇದೆ. ಶ್ರೀರಾಮನು ಅವತರಿಸುತ್ತಲೇ ಇರುತ್ತಾನೆ. ಜಗದ್ರೂಪದಿಂದಲೂ ಬಗೆಬಗೆಯ ವಿಭೂತಿಗಳ ರೂಪದಿಂದಲೂ ಕಾಣಿಸಿಕೊಳ್ಳುತ್ತಾ ಭಕ್ತರನ್ನು ಅನುಗ್ರಹಿಸುವದಕ್ಕೆ ಸಿದ್ಧನೇ ಆಗಿರುತ್ತಾನೆ. ಆಸ್ತಿಕರ ಕಣ್ಣುಗಳಿಗೆ ‘ಜ್ಯೋತೀಂಷಿ ವಿಷ್ಣುರ್ಭವನಾನಿ ವಿಷ್ಣುರ್ವನಾನಿ ವಿಷ್ಣುರ್ಗಿರಯಶ್ಚ ವಿಷ್ಣುಃ’ ಎಂಬಂತೆ ಸೂರ್ಯಚಂದ್ರನಕ್ಷತ್ರಾದಿಗಳೂ, ಚತುರ್ದಶಲೋಕಗಳೂ, ಪರ್ವತಗಳೂ, ನದಿಗಳೂ, ಸಮುದ್ರಗಳೂ – ಎಲ್ಲವೂ ಆತನ ವಿಭೂತಿಗಳೇ ಆಗಿರುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಪುರಾಣಗಳಲ್ಲಿ ಬರೆದಿರುವ ಸೃಷ್ಟಾ ್ಯಗಳೂ ವಂಶಾನುಚರಿತೆಯಾದ ಪರಮಾತ್ಮನ ಲೀಲೆಯನ್ನೇ ಪ್ರಕಟಿಸುವದಕ್ಕೆ ಬಂದಿರುತ್ತವೆ. ಈ ಜಗತ್ತೆಲ್ಲವೂ ಶ್ರೀರಾಮನ ಲೀಲಾಮೂರ್ತಿಯೇ, ಅವನು ತಾನು ಇದ್ದಂತೆ ಇದ್ದು ಎಲ್ಲದರ ರೂಪದಿಂದಲೂ ತೋರಿಕೊಳ್ಳುತ್ತಿದ್ದಾನೆ; ಭಕ್ತರಿಗಾಗಿ ಆಗಾಗ್ಗೆ ಸಾಕಾರನಾಗಿ ಅವತರಿಸುವದು ಹಾಗಿರಲಿ, ಚರಾಚರ ಜಗತ್ತೇ ಅವನ ಶರೀರವಾಗಿರುತ್ತದೆ ಎಂಬುದನ್ನು ಮನಸ್ಸಿನಲ್ಲಿ ಹೊರಳಾಡಿಸುವವರಿಗೆ ಶ್ರೀರಾಮನಾಮವು ತಂದುಕೊಡದೆ ಇರುವ ಸಂಪತ್ತಿಲ್ಲ; ಪರಿಹರಿಸದೆ ಇರುವ ಆಪತ್ತಿಲ್ಲ, ವಿನಾಶಮಾಡದ ಇರುವ ಶತ್ರುಗಳಿಲ್ಲ, ಅವನು ಶ್ರೀರಾಮನು, ಜಯರಾಮನು, ಜಯಜಯರಾಮನು!

‘ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಜುನ ತಿಷ್ಠತಿ’ ‘ಅರ್ಜುನನೆ, ಈಶ್ವರನು ಸರ್ವಪ್ರಾಣಿಗಳ ಹೃದಯದಲ್ಲಿಯೂ ಇರುತ್ತಾನೆ. ಅವನನ್ನು ಶರಣುಹೊಂದು, ಅವನ ಪ್ರಸಾದದಿಂದ ಪರಮಶಾಂತಿಯನ್ನು ಪಡೆಯುವೆ’ ಎಂದು ಭಗವಂತನು ಉಪದೇಶಿಸಿರುತ್ತಾನೆ, ‘ರಾಮಃ ಶಸ್ತ್ರಭೃತಾಮಹಮ್, ‘ರಕ್ಕಸರನ್ನು ಸದೆಬಡಿದು ಧಮೋದ್ಧಾರವನ್ನು ಮಾಡಿದ ರಾಮನು ನಾನೇ’ – ಎಂದು ಭಗವಂತನು ಹೇಳಿಕೊಂಡಿರುತ್ತಾನೆ. ‘ಶ್ರೀರಾಮನು ಎಲ್ಲಾ ಭೂತಗಳ ಹೃದಯದಲ್ಲಿಯೂ ಇರುತ್ತಾನೆ, ನನ್ನ ಹೃದಯದಲ್ಲಿಯೂ ಆತನೇ ಆತ್ಮನಾಗಿರುತ್ತಾನೆ’ – ಎಂದು ಮನಸ್ಸಿಗೆ ತಂದುಕೊಳ್ಳುತ್ತಾ ಶ್ರೀರಾಮ, ಜಯರಾಮ, ಜಯಜಯರಾಮ ಎಂಬ ಮಂತ್ರವನ್ನು ಎಡೆಬಿಡದೆ ಜಪಿಸಿರಿ. ಸಮಸ್ತ ಕಲ್ಯಾಣವೂ ನಿಮ್ಮದಾಗುವುದು.

ಮಹಿಮಾನ್ವಿತ ಶ್ರೀರಾಮಮಂತ್ರ

| ಡಾ. ಪಾವಗಡ ಪ್ರಕಾಶ ರಾವ್

ಸಾಯುವುದಕ್ಕೇ ಜನರು ಎಲ್ಲಾದರೂ ಜಾಗವನ್ನು ಹುಡುಕಿ ಹೋಗುತ್ತಾರೆಂದರೆ ಅದು ಕಾಶಿಗೆ! ಮರಣಿಸುವ ತನಕ ಅಲ್ಲಿಯೇ ಇರುತ್ತೇವೆಂದು ಇಂದಿಗೂ ಸಾವಿರಾರು ಜನರು ವಾರಣಾಸಿಯಲ್ಲೇ ಉಳಿದುಬಿಟ್ಟಿದ್ದಾರೆ!! ಏಕೆ?

ಮೇಲ್ನೋಟದ ಕಾರಣವೆಂದರೆ ತಮ್ಮ ನಿರ್ಜೀವ ದೇಹವನ್ನು ಗಂಗೆಯಲ್ಲಿ ಬಿಟ್ಟರೆ ಸಿಗುವ ಪುಣ್ಯ. ಆದರೆ ನಿಜವಾದ ಕಾರಣ ಬೇರೆಯದೇ ಇದೆ! ಅದೇ ಸಾಯುವ ಕ್ಷಣದಲ್ಲಿ ವಿಶ್ವೇಶ್ವರ / ಕಾಶೀನಾಥ ಪ್ರತ್ಯಕ್ಷನಾಗಿ ಕಿವಿ ಬಳಿ ಸಾರಿ, ಮೃತ್ಯುಮಂಟಪದ ದಾರಿಯಲ್ಲಿರುವ ಜೀವಕ್ಕೆ ಉಪದೇಶ ಮಾಡುತ್ತಾನೆ. ಏನೆಂದು? ಯಾವ ಮಂತ್ರವನ್ನು? ಷಡಕ್ಷರ ಮಂತ್ರವನ್ನು. ಎಂದರೆ ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನೆ? ಅಲ್ಲಲ್ಲ! ಹಾಗಾದರೆ? ರಾಮಮಂತ್ರವನ್ನು!! ಈಶ್ವರ ಸದಾ ಜಪಿಸುವ ಮಂತ್ರವೇ ಈ ರಾಮಮಂತ್ರ! ರಾಮತಾರಕ ಮಂತ್ರವೆಂದರೆ ‘‘ರಾಮ ರಾಮ ರಾಮ’’. ಇದನ್ನೇ ಪರಮೇಶ್ವರ ತನ್ನ ಭಕ್ತರ ಕಿವಿಯಲ್ಲಿ ಉಸುರುವನಂತೆ! ಶ್ರೀ ಶ್ರೀ ಶಂಕರ ಭಗವತ್ಪಾದಾಚಾರ್ಯರು ಹೀಗೆಂದು ಕೊಂಡಾಡುತ್ತಾರೆ:

ಯದಾ ವರ್ಣ ಯತ್ಕರ್ಣ ಮೂಲೇಂತ ಕಾಲೇ |

ಶಿವೋ ರಾಮ ರಾಮೇತಿ ರಾಮೇತಿ ಕಾಶ್ಯಾಂ ||

ಅಂತಹ ಮಹಿಮಾನ್ವಿತ ಮಂತ್ರ ರಾಮಮಂತ್ರ! ಶ್ರೀಮದ್ರಾಮಾಯಣದ ಕೊನೆಯಲ್ಲಿ ಬ್ರಮ್ಹಾ, ಶ್ರೀರಾಮರಿಗೇ ಆಶ್ವಾಸನೆ ಕೊಡುತ್ತಾನೆ; ‘‘ರಾಮಭಕ್ತ ರಾಮಧ್ಯಾನದಲ್ಲಿ ಪ್ರಾಣ ಬಿಟ್ಟರೆ, ಆತನಿಗೆ ತಾನು ಪ್ರತ್ಯೇಕವಾಗಿ ಸೃಷ್ಟಿಸಿರುವ ಸಾಂತಾನಿಕವೆಂಬ ಸ್ವರ್ಗಲೋಕ ಸಿಗುತ್ತದೆ.’’ (ಲೋಕಾನ್ ಸಾಂತಾನೀಕಾನ್ನಾಮಾ ಯಸ್ಯಾಂತೀ ಮೇ ಸಮಾಗತಃ | ಪ್ರಾಣಾಂಸ್ತ್ಯ್ಯತಿ ಭಕ್ತ್ಯಾವೈ ತತ್ ಸಂತಾನೇ ನಿವತ್ಸ್ಯ ||)

ಶ್ರೀರಾಮರಿಗೇ ಅಯೋಧ್ಯೆಯ ಜಾಗವನ್ನು ನಿರ್ಣಯಿಸಿರುವ ಸವೋಚ್ಚ ನ್ಯಾಯಾಲಯದ ತೀರ್ಪಿನ

ಈ ಶುಭಾವಸರದಲ್ಲಿ ರಾಮನಾಮದ ಮಹಿಮೆಯನ್ನು ನೆನಪಿಸಿಕೊಳ್ಳುವುದೂ, ಭಾವಿಸುವುದೂ, ಅನುಷ್ಠಿಸುವುದೂ ಪುಣ್ಯವಲ್ಲವೆ?

(ಸೌಜನ್ಯ: ಅಧ್ಯಾತ್ಮ ಪ್ರಕಾಶ)

Stay connected

278,744FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...