18 C
Bangalore
Friday, December 6, 2019

ತತ್ವಜ್ಞಾನದ ಕಣಜ ಮಡಿವಾಳಪ್ಪ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

| ಪ್ರಶಾಂತ ರಿಪ್ಪನ್​ಪೇಟೆ

ತತ್ವಪದ ಸಾಹಿತ್ಯವು ಜನಸಾಮಾನ್ಯರ ನಡುವೆಯೇ ಹುಟ್ಟಿ ಜನಸಾಮಾನ್ಯರ ಮೇಲೆ ಗಾಢ ಪ್ರಭಾವವನ್ನು ಬೀರುವ ವಿಶೇಷ ಪ್ರಕಾರ. ಶಿಷ್ಟಸಾಹಿತ್ಯಕ್ಕಿಂತ ತೀರ ಭಿನ್ನವಾದ ತತ್ವಪದಗಳು ಜನಪದರನ್ನು ಬಹುಬೇಗ ಮುಟ್ಟುತ್ತವೆ. ಅಂತಹ ತತ್ವಪದಗಳ ಮೂಲಕ ಸಾಹಿತ್ಯ ಮತ್ತು ಅಧ್ಯಾತ್ಮ ಎರಡೂ ಕ್ಷೇತ್ರವನ್ನು ಗಮನಾರ್ಹವಾಗಿ ಸೆಳೆದ ತತ್ವಜ್ಞಾನದ ಕಣಜ ಕಡಕೋಳದ ಮಡಿವಾಳಪ್ಪ. 17ನೆಯ ಶತಮಾನದಲ್ಲಿ ಜೀವಿಸಿದ್ದ ಕಡಕೋಳ ಮಡಿವಾಳಪ್ಪನವರ ತತ್ವಪದಗಳು ನಿಜಗುಣ ಶಿವಯೋಗಿಗಳ ತತ್ವಪದಗಳನ್ನು ನೆನಪಿಸುತ್ತವೆ. ಸಾಮಾನ್ಯ ಜನರ ಬದುಕನ್ನು ತತ್ವಜ್ಞಾನದ ಜರಡಿಯಲ್ಲಿ ಸೋಯಿಸಿದ ಅವರ ಗೀತೆಗಳು ಇಂದಿಗೂ ಪ್ರಸ್ತುತ. ಹಲವು ಜಿಜ್ಞಾಸುಗಳು ದೂರದೂರದ ಊರುಗಳಿಂದ ಬಂದು ಮಡಿವಾಳಪ್ಪನವರೊಂದಿಗೆ ತಾತ್ವಿಕ ಚರ್ಚೆಯನ್ನು ಮಾಡುತ್ತಿದ್ದರು. ಎಲ್ಲ ಸಮುದಾಯದವರೂ ಮಡಿವಾಳಪ್ಪನವರ ಶಿಷ್ಯರಾಗಿದ್ದರು. ಸೂಫಿಸಂತ ಜಲಾಲ್ ಸಾಬ್, ಕೃಷ್ಣಪ್ಪ, ಸಿದ್ದಪ್ಪ, ರಾಮಪ್ಪ ಸೇರಿದಂತೆ ಮಡಿವಾಳಪ್ಪನವರ ನೂರಕ್ಕೂ ಹೆಚ್ಚು ಶಿಷ್ಯರು ತತ್ವಪದ ರಚನೆಕಾರರಾಗಿದ್ದಾರೆ.

ಮಡಿವಾಳಪ್ಪನವರ ಪೂರ್ವಾಶ್ರಮ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಿದನೂರಿನಲ್ಲಿ 1780ರಲ್ಲಿ ಜನಿಸಿದ ಮಡಿವಾಳಪ್ಪನವರ ತಾಯಿ ಗಂಗಮ್ಮ ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗಠಾಣದವರು. ಗಂಡನಿಲ್ಲದ ಗಂಗಮ್ಮ ಜೀವನೋಪಾಯಕ್ಕಾಗಿ ಬಿದನೂರಿಗೆ ಬಂದು ವಾಸವಾಗಿರುತ್ತಾರೆ. ಗರ್ಭದಲ್ಲಿರುವಾಗಲೇ ಚಿಮಣಗೇರಿಯ ಮಹಾಂತಸ್ವಾಮಿಗಳಿಂದ ಲಿಂಗಸಂಸ್ಕಾರ ನೀಡಲಾಗಿರುತ್ತದೆ. ಆದರೆ ತಾಯಿ ವಿಧವೆ ಎಂಬ ಕಾರಣಕ್ಕಾಗಿ ಅಯ್ಯಾಚಾರ ದೀಕ್ಷೆ ಪಡೆಯಲು ಯೋಗ್ಯನಲ್ಲ ಎಂದು ಮಡಿವಾಳಪ್ಪ ಅಪಮಾನಕ್ಕೆ ಒಳಗಾದರು. ನಂತರ ಅರಳಗುಂಡಿಗೆಯಲ್ಲಿ ಶರಣಬಸವೇಶ್ವರರ ಸಮಕ್ಷಮದಲ್ಲಿ ಮರುಳಾರಾಧ್ಯರಿಂದ ದೀಕ್ಷೆ ಪಡೆದರೂ ಅಲ್ಲಿಯೂ ಅಪಮಾನಗಳಾದ ಹಿನ್ನೆಲೆಯಲ್ಲಿ ಬಿದನೂರಿಗೆ ಮರಳಿ ಬಂದರು. ಅಲ್ಲಿ ಕೆಲಕಾಲ ಇದ್ದು ನಂತರ ದೇಶಸಂಚಾರಕ್ಕೆ ಹೋದರು. ಚಿಮಣಗೇರಿ ಗುಡ್ಡದಲ್ಲಿ 12 ವರ್ಷ, ಶ್ರೀಶೈಲಪರ್ವತದಲ್ಲಿ 12 ವರ್ಷ – ಹೀಗೆ ವಿವಿಧ ಕಡೆಗಳಲ್ಲಿ ತಪೋನುಷ್ಠಾನ ಕೈಗೊಂಡು ವಿವಿಧ ಪ್ರಾಂತಗಳಲ್ಲಿ ಸಂಚರಿಸುತ್ತ ಕಕ್ಷಿಡಕೋಳಕ್ಕೆ ಬಂದು ಅಲ್ಲಿ ಮಠವನ್ನು ಸ್ಥಾಪಿಸಿ ಅಲ್ಲಿಯೇ ಜೀವಂತ ಸಮಾಧಿಯಾದರು. ಶ್ರೀರಂಭಾಪುರಿ ಪೀಠದ ಶಾಖಾಮಠವಾದ ಕಡಕೋಳವು ಶಿವಲಿಂಗಯ್ಯ ಸ್ವಾಮಿಗಳು, ವೀರೇಶ್ವರ ದೇಶಿಕರಿಂದ ಪರಂಪರೆ ಆರಂಭಗೊಂಡು; ಸದ್ಯದ ಮಠಾಧ್ಯಕ್ಷ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳಿಂದ ಮುನ್ನಡೆಯುತ್ತಿದೆ.

ಕಡಕೋಳ ಜಾತ್ರೆ

ಕಡಕೋಳ ಮಡಿವಾಳೇಶ್ವರರು ಜೀವಂತ ಸಮಾಧಿಯಾದ ಮಾರ್ಗಶಿರ ಬಹುಳ ಸಪ್ತಮಿ ಹಾಗೂ ಅಷ್ಟಮಿಯಂದು ಬೃಹತ್ ಜಾತ್ರೆ ನಡೆಯುತ್ತದೆ. ಕಲ್ಯಾಣ ಕರ್ನಾಟಕದ ಖಡಕ್ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಕಡಕೋಳ ಜಾತ್ರೆಯು ಇದೇ ಡಿ. 28, 29ರಂದು ನಡೆಯಲಿದೆ. 28ರಂದು ಪ್ರಸಿದ್ಧ ಖಾಂಡ ಕಾರ್ಯಕ್ರಮವಿದ್ದು, ಮಹಾಪ್ರಸಾದಕ್ಕಾಗಿ ಈಗಾಗಲೇ ಭಕ್ತರು ಲಕ್ಷಕ್ಕೂ ಹೆಚ್ಚಿನ ಖಡಕ್ ರೊಟ್ಟಿಗಳನ್ನು ಸಮರ್ಪಿಸಿದ್ದಾರೆ. ಅದೇ ದಿನ ಸಂಜೆ ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. 29ರಂದು ಶ್ರೀ ರುದ್ರಮುನಿ ಶಿವಾಚಾರ್ಯಸ್ವಾಮಿಗಳ ನೇತೃತ್ವದಲ್ಲಿ ಮಡಿವಾಳೇಶ್ವರರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪಲ್ಲಕ್ಕಿ ಮಹೋತ್ಸವ ಹಾಗೂ ಸಂಜೆ ರಥೋತ್ಸವ ನಡೆಯಲಿದೆ.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...