17 C
Bangalore
Wednesday, December 11, 2019

ವಿವೇಕ ದರ್ಶನ ಲೋಕಾರ್ಪಣೆ

Latest News

ಕ್ರಿಮ್್ಸ ನಿರ್ದೇಶಕ ಹುದ್ದೆಗಾಗಿ ಹುಬ್ಬಳ್ಳಿಯ ಇಬ್ಬರು ಹಿರಿಯ ವೈದ್ಯರ ಪೈಪೋಟಿ

ವಿಜಯವಾಣಿ ಸುದ್ದಿಜಾಲ ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್(ಕ್ರಿಮ್್ಸ) ನಿರ್ದೇಶಕ ಹುದ್ದೆಗಾಗಿ ಹುಬ್ಬಳ್ಳಿಯ ಕಿಮ್ಸ್​ನ ಇಬ್ಬರು ಹಿರಿಯ ವೈದ್ಯರ ನಡುವೆ ಪೈಪೋಟಿ ಇದೆ....

ವಾರಕ್ಕೊಮ್ಮೆ ಬ್ಯಾಗ್​ಲೆಸ್ ಡೇ ಯೋಜನೆ; ಶಿಕ್ಷಣ ಸಚಿವ ಸುರೇಶಕುಮಾರ

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ, ಉತ್ಸಾಹ ಹೆಚ್ಚಿಸಲು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂಬರುವ ಶೈಕ್ಷಣಿಕ ವರ್ಷದಿಂದ...

ಬುಡಮೇಲಾದ ಸಿದ್ದು ಭವಿಷ್ಯ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ನುಡಿದಿದ್ದ ಭವಿಷ್ಯವೆಲ್ಲ ಬುಡಮೇಲಾಗಿದೆ. ಅವರು ತಮ್ಮ ಜ್ಯೋತಿಷಾಲಯ ಮುಚ್ಚಿಕೊಂಡು ಹೋಗಿದ್ದಾರೆ. ಬುರುಡೆ ಬಿಡೋದೆ ಅವರ ಕೆಲಸ. ಬುರುಡೆ...

ಪಿಬಿ ರಸ್ತೆಯಲ್ಲಿ ಟಯರ್ ಅಂಗಡಿ!

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸಿಆರ್​ಎಫ್ ಅನುದಾನದಡಿ ನಿರ್ವಿುಸಲಾದ ಚನ್ನಮ್ಮ ವೃತ್ತ- ಬಂಕಾಪುರ ಚೌಕ ವೃತ್ತದ ಪಿಬಿ ರಸ್ತೆ ಈಗ ಅತಿಕ್ರಮಣಕಾರರ ಸ್ವರ್ಗವಾಗಿ ಮಾರ್ಪಟ್ಟಿದೆ....

ಹಳ್ಳಿಗರಿಗೆ ಅಶುದ್ಧ ನೀರೇ ಗತಿ!

ವೀರೇಶ ಹಾರೋಗೇರಿ ಕಲಘಟಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರ್ವಿುಸಿದ ಶುದ್ಧ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿವೆ. ಇದರಿಂದಾಗಿ...

ಭಾರತೀಯರಲ್ಲಿ ಹೊಸ ಸಂಚಲನ ಮೂಡಿಸಿ, ಸನಾತನಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಸ್ವಾಮಿ ವಿವೇಕಾನಂದರು. 126 ವರ್ಷಗಳ ಹಿಂದೆ ಅವರು ಭೇಟಿ ನೀಡಿದ್ದ ಬೆಳಗಾವಿಯ ನಿವಾಸವು ಮೂರು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಂಡಿದ್ದು ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ.

| ರಾಜೇಶ ವೈದ್ಯ ಬೆಳಗಾವಿ

ಸ್ವಾಮಿ ವಿವೇಕಾನಂದರು 126 ವರ್ಷಗಳ ಹಿಂದೆ ಭೇಟಿ ನೀಡಿ ಮೂರು ದಿನಗಳ ಕಾಲ ತಂಗಿದ್ದ ಬೆಳಗಾವಿಯಲ್ಲಿನ ಮನೆಯೊಂದು, ಅಂದು ಇದ್ದ ರೀತಿಯಲ್ಲೇ ಮರುನಿರ್ವಣಗೊಂಡಿದೆ. ಮರುಜೀವ ಪಡೆದು ಜನತೆಗೆ ಐತಿಹಾಸಿಕ ಕ್ಷಣಗಳನ್ನು ನೆನಪಿಸುವ ಸುವರ್ಣ ಅವಕಾಶವನ್ನು ತೆರೆದಿಟ್ಟಿರುವ ಈ ಸ್ವಾಮಿ ವಿವೇಕಾನಂದರ ಸ್ಮಾರಕ ಫೆ. 1ರಂದು ಲೋಕಾರ್ಪಣೆಯಾಗಲಿದೆ.

ಸ್ವಾಮಿ ವಿವೇಕಾನಂದರ ವೀರವಾಣಿ ಇಂದಿಗೂ ಮೈಮನ ರೋಮಾಂಚನಗೊಳಿಸುತ್ತದೆ. ಅವರ ವಿಚಾರಧಾರೆಗಳು ಎಷ್ಟು ಪ್ರಸ್ತುತವಾಗಿವೆಯೆಂದರೆ, ಇಂದಿಗೂ ಅವರು ನಮ್ಮ ಜತೆಗೇ ಇದ್ದಾರೇನೋ ಎನಿಸುತ್ತದೆ. ಇಂತಹ ಆಪ್ತಭಾವದ ನಿದರ್ಶನ ಎನ್ನುವಂತೆ ಶ್ರೀ ರಾಮಕೃಷ್ಣ ಮಿಷನ್​ನವರು ಈ ಸ್ಮಾರಕ ಮರುನಿರ್ವಣಕಾರ್ಯವನ್ನು ಬಹು ಕೌಶಲದಿಂದ ಮಾಡಿದ್ದಾರೆ. 126 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಭೇಟಿ ನೀಡಿದ್ದ ಮನೆಯನ್ನು ವಿವೇಕಾನಂದರ ಸ್ಮಾರಕ ಹಾಗೂ ಪ್ರದರ್ಶನಾಲಯವನ್ನಾಗಿ ರೂಪಿಸಲಾಗಿದೆ.

126 ವರ್ಷಗಳ ಹಿಂದಿನ ಪಡಿಯಚ್ಚು: ಬೆಳಗಾವಿಯ ರಿಸಾಲ್ದಾರ್ ಗಲ್ಲಿಯರುವ ಈ ಕಟ್ಟಡವನ್ನು ಸಿಮೆಂಟ್, ಮರಳು, ಕಬ್ಬಿಣ ಬಳಸದೆ ಪುನಃ ಸ್ಥಾಪನೆ ಮಾಡಲಾಗಿದೆ. 1892ರ ಅಕ್ಟೋಬರ್ 16ರಂದು ಸ್ವಾಮಿ ವಿವೇಕಾನಂದರು ಭೇಟಿ ನೀಡಿದಾಗ, ಈ ಮನೆ ಯಾವ ಸ್ಥಿತಿಯಲ್ಲಿತ್ತೋ ಅದೇ ರೀತಿ ಪುನಃ ನಿರ್ಮಾಣ ಮಾಡಲಾಗಿದೆ. ಮನೆಯನ್ನು ನಿರ್ವಿುಸುವಾಗ ಚಿರೇಕಲ್ಲು, ಕಪ್ಪು ಕಲ್ಲು ಹಾಗೂ ಸುಣ್ಣ ಬಳಸಲಾಗಿದೆ. ಅಂದು ಸುಣ್ಣದಿಂದಲೇ ಗಿಲಾಯಿ ಮಾಡಲಾಗಿತ್ತು. ಈಗಲೂ ಇದೇ ವಸ್ತುಗಳನ್ನು ಬಳಸಿ ಪುನಃ ಸ್ಥಾಪನೆ ಮಾಡಲಾಗಿದೆ. ಮನೆಯ ಮರುಸ್ಥಾಪನೆಯ ಸಂದರ್ಭದಲ್ಲಿ ಪರಿಣತ ಆರ್ಕಿಟೆಕ್ಟ್ ಮೈಸೂರಿನ ಗುಂಡೂರಾವ್ ಮಾರ್ಗದರ್ಶನದಲ್ಲಿ ಸೂಕ್ಷ್ಮ ಕುಸುರಿ ಕೆಲಸದಂತೆ ಕಾರ್ಯ ನಿರ್ವಹಿಸಲಾಗಿತ್ತು. ಕಟ್ಟಿಗೆಯ ಸೀಲಿಂಗ್, ಬಾಗಿಲು, ಕಿಟಕಿ, ಪೀಠೋಪಕರಣಗಳನ್ನು ಎಷ್ಟೊಂದು ಚೆನ್ನಾಗಿ ಹಾಗೂ ಸೂಕ್ಷ್ಮವಾಗಿ ಪಾಲಿಶ್ ಮಾಡಲಾಗಿದೆಯೆಂದರೆ, ಇವು ಈಗಷ್ಟೇ ನಿರ್ವಣಗೊಂಡಿವೆಯೇನೋ ಎಂಬ ಭಾವನೆ ಬರುತ್ತದೆ. ಅಂದು ಬಳಕೆಯಾಗಿದ್ದ ಕಟ್ಟಿಗೆಯ ಬಾಗಿಲು, ಕಿಟಕಿ, ಪೀಠೋಪಕರಣಗಳು ಹೊಸದೇನೋ ಎಂಬಂತೆ ಕಂಗೊಳಿಸುತ್ತಿವೆ.

ಸ್ಮಾರಕ ಹಾಗೂ ಪ್ರದರ್ಶನಾಲಯ: ಸ್ವಾಮಿ ವಿವೇಕಾನಂದರು ಭೇಟಿ ನೀಡಿದ್ದ ಈ ಮನೆಯನ್ನು ಕೇವಲ ಮರುನಿರ್ವಣ ಮಾಡದೆ ಸ್ಮಾರಕ ಹಾಗೂ ಪ್ರದರ್ಶನಾಲಯವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಸ್ವಾಮಿ ವಿವೇಕಾನಂದರ ಕೊಠಡಿಯಲ್ಲಿ ಅವರು ಬಳಸಿದ್ದ ವಿಶಾಲವಾದ ಮಂಚ, ಹಾಸಿಗೆ, ದೊಡ್ಡದಾದ ಕನ್ನಡಿಯನ್ನು ಹೊಸದರಂತೆ ಕಾದುಕೊಂಡು ಬರಲಾಗಿದೆ. ಸ್ವಾಮಿ ವಿವೇಕಾನಂದರು ಬಳಸಿದ್ದ ವಸ್ತುಗಳ (ಪ್ರಸ್ತುತ ಕೋಲ್ಕತದ ಬೇಲೂರು ಮಠದಲ್ಲಿರುವ) ಪ್ರತಿಕೃತಿಯನ್ನು ತಯಾರಿಸಿ ಇಲ್ಲಿ ಇರಿಸಲಾಗಿದೆ. ಸ್ವಾಮಿ ವಿವೇಕಾನಂದರ ಜೀವನ ಹಾಗೂ ಅವರ ಸಂದೇಶಗಳನ್ನು ಸಾರುವ ದೊಡ್ಡ ದೊಡ್ಡ ಕಲಾಕೃತಿಗಳನ್ನು ಅಳವಡಿಸಲಾಗಿದೆ. ವೀಕ್ಷಕರಿಗಾಗಿ ಹೋಮ್ ಥಿಯೇಟರ್ ಮಾದರಿಯಲ್ಲಿ ಪ್ರತ್ಯೇಕ ಆಡಿಯೋ ವಿಷ್ಯುವಲ್ ರೂಂ ಸಿದ್ಧಪಡಿಸಲಾಗಿದೆ. ಇಲ್ಲಿ ಕೂಡ ವಿವೇಕಾನಂದರ ಸಂದೇಶ, ಜೀವನಚರಿತ್ರೆಯನ್ನು ಆಲಿಸಿ, ವೀಕ್ಷಿಸಬಹುದು. ಧ್ಯಾನಕ್ಕಾಗಿ ಪ್ರತ್ಯೇಕ ಧ್ಯಾನಮಂದಿರ ನಿರ್ವಿುತವಾಗಿದೆ. ಡಿಜಿಟಲ್ ಗೇಮ್ ವ್ಯವಸ್ಥೆ ಅಳವಡಿಸಿದ್ದು, ಆಟವಾಡುತ್ತಲೇ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಿಳಿದುಕೊಳ್ಳುವ ವಿನೂತನ ವ್ಯವಸ್ಥೆ ರೂಪುಗೊಂಡಿದೆ.

ಸೇವೆಯ ಬಗ್ಗೆ ಸ್ವಾಮಿ ವಿವೇಕಾನಂದರಿಗೆ ವಿಚಾರಧಾರೆಗಳು ಹೇಗಿದ್ದವು, ಅವರ ಜೀವನಸಂದೇಶ ಏನಿತ್ತು ಎನ್ನುವುದನ್ನು ಸೊಗಸಾಗಿ ಚಿತ್ರಿಸುವ ಫೈಬರ್ ಕಲಾಕೃತಿಯನ್ನು ಗೋಡೆಯ ಮೇಲೆ ರೂಪಿಸಲಾಗಿದೆ. ಇದಕ್ಕೆ ಮೆಟಲ್ ಫಿನಿಷಿಂಗ್ ಮಾಡಲಾಗಿದೆ. 2012ರ ಅಕ್ಟೋಬರ್ 11ರಂದು ಬೆಳಗಾವಿಗೆ ಆಗಮಿಸಿದ್ದ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸುವರ್ಣಸೌಧವನ್ನು ಉದ್ಘಾಟಿಸಿದ್ದರಲ್ಲದೆ, ಅದೇ ದಿನ ಸಂಜೆ ಸ್ವಾಮಿ ವಿವೇಕಾನಂದರು ತಂಗಿದ್ದ ಮನೆಯನ್ನು ಸ್ಮಾರಕವನ್ನಾಗಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಲೋಕಾರ್ಪಣೆ ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸಲಾಗಿದೆ.

ಮನೆ ಪಡೆಯಲು ಕಠಿಣ ಸವಾಲು: ರಿಸಾಲ್ದಾರ್ ಗಲ್ಲಿಯಲ್ಲಿರುವ ಸ್ವಾಮಿ ವಿವೇಕಾನಂದರ ಮನೆಯನ್ನು ವಿವೇಕಾನಂದರ ಸ್ಮಾರಕವನ್ನಾಗಿ ನಿರ್ವಿುಸಲು ಶ್ರೀರಾಮಕೃಷ್ಣ ಮಿಷನ್​ನವರು ದೊಡ್ಡ ಸಾಹಸ ಮಾಡಬೇಕಾಗಿ ಬಂದಿತ್ತು. ಈ ಕಾರ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ದೊಡ್ಡ ಮಟ್ಟದ ನೆರವು ನೀಡಿ ಯಶಸ್ವಿಗೊಳಿಸಿವೆ. ಮನೆಯ ಮೂಲ ಮಾಲೀಕರಾದ ಸದಾಶಿವ ಭಾಟೆ 1913ರಲ್ಲಿ ಈ ಮನೆಯನ್ನು ದತ್ತೋಪಂತ ಬೆಳವಿ ಎಂಬುವರಿಗೆ ಮಾರಾಟ ಮಾಡಿದ್ದರು. 1916ರಲ್ಲಿ ಈ ಮನೆ ವಿಭಾಗವಾಗಿತ್ತು. ಮನೆಯ ಒಂದು ಭಾಗದ ಮಾಲೀಕ ಬಲವಂತ ದಳವಿ (ದತ್ತೋಪಂತರ ಮಗ) ಮುಂಬೈನಲ್ಲಿ ನ್ಯಾಯಾಧೀಶರಾಗಿದ್ದರು. 1980ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ವಿವೇಕ ಕುಲಕರ್ಣಿ ಈ ಮನೆಯನ್ನು ಸರ್ಕಾರಕ್ಕೆ ನೀಡುವಂತೆ ಬಲವಂತ ದಳವಿ ಅವರಿಗೆ ಮನವಿ ಮಾಡಿದ್ದರು. ಆದರೆ ಸರ್ಕಾರಕ್ಕೆ ನೀಡಲು ಒಪ್ಪದ ದಳವಿ, ಶ್ರೀರಾಮಕೃಷ್ಣ ಆಶ್ರಮಕ್ಕೆ ಈ ಮನೆಯನ್ನು ನೀಡುವುದಾಗಿ ಘೊಷಿಸಿದರು.

ಬಲವಂತ ದಳವಿ ಅವರು ಪುಣೆಯ ಶ್ರೀರಾಮಕೃಷ್ಣಾಶ್ರಮದ ಸ್ವಾಮೀಜಿಯವರ ಮೂಲಕ ಕಾರವಾರ ಶ್ರೀರಾಮಕೃಷ್ಣಾಶ್ರಮದಲ್ಲಿದ್ದ ಅಂಬಿಕಾನಂದ ಸ್ವಾಮೀಜಿ ಅವರಿಗೆ 1987ರಲ್ಲಿ ಮನೆಯ ಒಂದು ಭಾಗವನ್ನು ನೀಡಿದ್ದರು. ಆದರೆ ಈ ಮನೆಯ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ದೀರ್ಘ ಹೋರಾಟದ ನಂತರ 2006ರಲ್ಲಿ ಪ್ರಕರಣ ಇತ್ಯರ್ಥವಾಗಿತ್ತು. 2014ರಲ್ಲಿ ಮನೆಯ ಇನ್ನೊಂದು ಪಾರ್ಶ್ವವನ್ನು ಕೂಡ ಶ್ರೀರಾಮಕೃಷ್ಣ ಮಿಷನ್​ನವರು ಖರೀದಿಸಿದ್ದರು. ಈ ಖರೀದಿಗೆ 150ನೇ ವಿವೇಕಾನಂದ ಜಯಂತಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿತ್ತು. ಮನೆಯ ಮರುನಿರ್ವಣ ಕಾಮಗಾರಿಗೆ ರಾಜ್ಯ ಸರ್ಕಾರ ನೆರವು ನೀಡಿತ್ತು. ಖರೀದಿ, ಮರುನಿರ್ವಣ, ಸ್ಮಾರಕ ಹಾಗೂ ಪ್ರದರ್ಶನಾಲಯವಾಗಿ ಅಭಿವೃದ್ಧಿಗೊಳಿಸಲು ಒಟ್ಟಾರೆ ಮೂರು ಕೋಟಿ ರೂ. ವೆಚ್ಚವಾಗಿದೆ. ಸ್ವಾಮಿ ವಿವೇಕಾನಂದರು ಭೇಟಿ ನೀಡಿದ ಸ್ಮಾರಕವೊಂದನ್ನು ಈ ರೀತಿ ವ್ಯವಸ್ಥಿತ ರೂಪದಲ್ಲಿ ನೋಡಲು ದೊರಕುವುದು ಕರ್ನಾಟಕದಲ್ಲಿ ಇದೊಂದೇ ಎನ್ನುವುದು ಬೆಳಗಾವಿ ಜನತೆಯ ಪಾಲಿನ ಹೆಮ್ಮೆ.

ವಿವೇಕಾನಂದರ ಭೇಟಿಯ ಹಿನ್ನೆಲೆ

ಭಾರತವನ್ನು ಮೇಲೆತ್ತಬೇಕು. ಸನಾತನಧರ್ಮವನ್ನು ಪುನರುತ್ಥಾನಗೊಳಿಸಬೇಕು, ಸಮಸ್ತ ಜನತೆಯನ್ನು ಜಾಗೃತಗೊಳಿಸಿ ದಿವ್ಯತೆಯತ್ತ ಮುನ್ನಡೆಸಬೇಕು ಎಂದು 1890ರಲ್ಲಿ ಏಕಾಂಗಿಯಾಗಿ ಅಖಿಲ ಭಾರತ ಪರ್ಯಟನೆ ಆರಂಭಿಸಿದ್ದ ಸ್ವಾಮಿ ವಿವೇಕಾನಂದರು ಕೋಲ್ಕತದಿಂದ ಹೊರಟು ಹಿಮಾಲಯ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ ಸಂಚರಿಸಿದ್ದರು. ಕೊಲ್ಲಾಪುರದಲ್ಲಿ ಕೆಲವು ಕಾಲ ತಂಗಿದ್ದ ಅವರು 1892ರ ಅಕ್ಟೋಬರ್ 16ರಂದು ಬೆಳಗಾವಿ ತಲುಪಿದ್ದರು. ಕೊಲ್ಲಾಪುರದ ಮಹಾರಾಜರ ಆಪ್ತಕಾರ್ಯದರ್ಶಿ ರಾವ್​ಸಾಹೇಬ್ ಗೊಲ್ವಾಲ್ಕರ್ ಬೆಳಗಾವಿಯ ರಿಸಾಲ್ದಾರ ಗಲ್ಲಿಯಲ್ಲಿರುವ ತಮ್ಮ ಸ್ನೇಹಿತ ಸದಾಶಿವ ಬಾಲಕೃಷ್ಣ ಭಾಟೆ ಅವರ ಸಂಪರ್ಕ ನೀಡಿದ್ದರು. ಬೆಳಗಾವಿಗೆ ಆಗಮಿಸಿದ ವಿವೇಕಾನಂದರು ಭಾಟೆ ಅವರ ಮನೆಯಲ್ಲಿ ಮೂರು ದಿನ ಉಳಿದುಕೊಂಡಿದ್ದರು.

ಭವಿಷ್ಯದ ಯೋಜನೆಗಳು

ಸ್ವಾಮಿ ವಿವೇಕಾನಂದರ ಸ್ಮಾರಕದ ಹಿಂಭಾಗದಲ್ಲಿ ವಿಶಾಲ ಜಾಗವಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎನ್ನುತ್ತಾರೆ ಈ ಸ್ಮಾರಕದ ಜವಾಬ್ದಾರಿ ನಿರ್ವಹಿಸುತ್ತಿರುವ ಶ್ರೀರಾಮಕೃಷ್ಣ ಮಿಷನ್​ನ ಸ್ವಾಮಿ ಮೋಕ್ಷಾತ್ಮಾನಂದ. ಸಂನ್ಯಾಸಿಗಳು ಇಲ್ಲಿ ಖಾಯಂ ಅಲ್ಲ. ಈ ಕೇಂದ್ರ ಇಲ್ಲಿನ ನಿವಾಸಿಗಳಿಗಾಗಿ ಇದೆ. ಈ ಕೇಂದ್ರದ ಮೂಲಕ ಸ್ವಾಮಿ ವಿವೇಕಾನಂದರ ಸಂದೇಶ ಜನತೆಗೆ ತಲುಪಬೇಕು, ಯುವಜನತೆಯಲ್ಲಿ ಮೌಲ್ಯ ತುಂಬಬೇಕು ಎನ್ನುವುದು ನಮ್ಮ ಬಯಕೆ ಎನ್ನುತ್ತಾರೆ ಅವರು.

Stay connected

278,739FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...