26.8 C
Bangalore
Friday, December 13, 2019

ಅದ್ಭುತ ಶಿಲ್ಪಕಲೆಯ ಕೈದಾಳ ಚನ್ನಕೇಶವ

Latest News

ಶಬರಿಮಲೆ ವಿಚಾರದಲ್ಲಿ ಸದ್ಯ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಪೊಲೀಸ್​ ರಕ್ಷಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಮಹಿಳೆಯರು ಸುರಕ್ಷಿತವಾಗಿ ಪ್ರವೇಶಿಸಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ...

ತುಮಕೂರು ಸ್ಮಾರ್ಟ್‌ಸಿಟಿ ಜೆಎಂಡಿ ಎತ್ತಂಗಡಿ!

ತುಮಕೂರು: ಸ್ಮಾರ್ಟ್‌ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಅವರನ್ನು ಎತ್ತಂಗಡಿ ಮಾಡಲಾಗಿದೆ. 3 ತಿಂಗಳ ಹಿಂದೇ ಸ್ಮಾರ್ಟ್‌ಸಿಟಿ ಎಂಡಿ ಜವಾಬ್ದಾರಿ ಹೊಣೆ ಹೊತ್ತಿದ್ದ ಮಹಾನಗರ...

ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಜಾತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

ಚಿಕ್ಕನಾಯಕನಹಳ್ಳಿ: ಸುಕ್ಷೇತ್ರ ಕುಪ್ಪೂರು ಶ್ರೀಮರುಳಸಿದ್ದೇಶ್ವರ ಗದ್ದುಗೆ ಜಾತ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದರು. ಶ್ರೀಮಠದ ಆವರಣದಲ್ಲಿ ಗುರುವಾರ...

ಬಲರಾಮ್ ಕುಣಿಗಲ್ ಬಿಜೆಪಿ ಅಧ್ಯಕ್ಷ

ಕುಣಿಗಲ್: ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಬಲರಾಮ್ ಗುರುವಾರ ಅವಿರೋಧ ಆಯ್ಕೆಯಾದರು. ಪಟ್ಟಣದ ದಿಶಾ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಬಿಜೆಪಿ...

ಭಾರತದ ಪ್ರಗತಿಗೆ ಬೇಕು ವೈಜ್ಞಾನಿಕ ಶಿಕ್ಷಣ: ಡಾ.ಡಿ.ವಿ.ಗೋಪಿನಾಥ್

ದಾವಣಗೆರೆ: ಭಾರತದ ಪ್ರಗತಿಗೆ ವೈಜ್ಞಾನಿಕ ಶಿಕ್ಷಣ ಅತ್ಯವಶ್ಯ ಎಂದು ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದ ಜೀವ ವೈದ್ಯಕೀಯ ವಿಭಾಗದ ನಿವೃತ್ತ ನಿರ್ದೇಶಕ ಡಾ.ಡಿ.ವಿ.ಗೋಪಿನಾಥ್ ಹೇಳಿದರು. ಪಾರ್ವತಮ್ಮ...

ಶಿಲ್ಪಗಳನ್ನು ಕೆತ್ತುವುದರಲ್ಲಿ ಹೆಸರುವಾಸಿಯಾಗಿದ್ದವನು ಅಮರಶಿಲ್ಪಿ ಎಂಬ ಹೆಸರಿನಿಂದ ಪ್ರಖ್ಯಾತನಾದ ಜಕಣಾಚಾರಿ. ಆತ ಇನ್ನೂ ಹೆಚ್ಚಿನದನ್ನು ಕಲಿಯಬೇಕೆಂಬ ಉದ್ದೇಶದಿಂದ ಹೆಂಡತಿ ಮಗು ಮನೆಯನ್ನು ಬಿಟ್ಟು ಯೋಗ್ಯ ಗುರುವಿನ ಹುಡುಕಾಟದಲ್ಲಿ ಹೊರಟುಬಿಡುತ್ತಾನೆ. ಹೀಗೆ ತಿರುಗುತ್ತ ಅನೇಕ ದೇವಸ್ಥಾನಗಳನ್ನು, ಮೂರ್ತಿಗಳನ್ನು ನಿರ್ವಿುಸುತ್ತಾನೆ. ಅವುಗಳಲ್ಲಿ ಪ್ರಸಿದ್ಧ ಬೇಲೂರು ಹಳೇಬೀಡಿನ ದೇವಸ್ಥಾನಗಳೂ ಸೇರಿವೆ. ಅವನು ಕೆಲಸದಲ್ಲಿ ಎಷ್ಟು ತಲ್ಲೀನನಾಗಿ ಬಿಡುತ್ತಾನೆಂದರೆ ತನ್ನ ಹೆಂಡತಿ ಮಗುವನ್ನು ಮರೆತುಬಿಡುತ್ತಾನೆ.

ಇತ್ತ ಜಕಣಾಚಾರಿಯ ಮಗ ಡಕಣಾಚಾರಿಯೆಂಬ ಹೆಸರಿನಿಂದ ದೊಡ್ಡವನಾಗುತ್ತಾನಲ್ಲದೆ, ತಂದೆಯ ಶಿಲ್ಪಕಲೆಯನ್ನು ಮೈಗೂಡಿಸಿಕೊಂಡಿರುತ್ತಾನೆ. ತಂದೆಯನ್ನು ಹುಡುಕುತ್ತ ಬೇಲೂರಿಗೆ ಬಂದಾಗ ಅಲ್ಲಿ ಚನ್ನಕೇಶವನ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತ್ತಿರುತ್ತದೆ. ದೇವಸ್ಥಾನದ ಹತ್ತಿರ ಬಂದಾಗ ಜಕಣಾಚಾರಿ ಕೆತ್ತಿದ್ದ ಚನ್ನಕೇಶವನ ಮೂರ್ತಿಯಲ್ಲಿ ದೋಷವಿರುವುದಾಗಿ ಹೇಳುತ್ತಾನೆ. ಇದನ್ನು ಕೇಳಿದ ಜಕಣಾಚಾರಿ ಹಾಗೇನಾದರೂ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಘೋಷಿಸುತ್ತಾನೆ. ಮೂರ್ತಿಯನ್ನು ಪರೀಕ್ಷಿಸುವ ಸಲುವಾಗಿ ಗಂಧವನ್ನು ತೇಯ್ದು ಮೂರ್ತಿಯ ತುಂಬ ಹಚ್ಚಲಾಗುತ್ತದೆ. ಹೊಟ್ಟೆಯ ಭಾಗವನ್ನು ಬಿಟ್ಟು ಮೂರ್ತಿಯ ಉಳಿದ ಭಾಗದಲ್ಲಿ ಒಣಗುತ್ತದೆ. ಹೊಟ್ಟೆಯ ಭಾಗದಲ್ಲಿ ನೋಡಿದಾಗ ಅಲ್ಲಿ ಮರಳು, ಕಪ್ಪೆ, ನೀರು ಸಿಗುತ್ತದೆ. ತಪ್ಪನ್ನು ಒಪ್ಪಿದ ಜಕಣಾಚಾರಿ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುತ್ತಾನೆ.

ನಂತರ ಅವನಿಗೆ ಡಕಣಾಚಾರಿ ತನ್ನ ಮಗನೆಂದು ಗೊತ್ತಾಗುತ್ತದೆ. ತನ್ನ ಸ್ವಂತ ಊರಾದ ಕ್ರೀಡಾಪುರದಲ್ಲೂ ಚನ್ನಕೇಶವಸ್ವಾಮಿಯ ದೇವಸ್ಥಾನವನ್ನು ನಿರ್ವಿುಸಬೇಕೆಂದು ಜಕಣಾಚಾರಿಗೆ ಮನಸ್ಸಾಗುತ್ತದೆ. ಅಂತೆಯೇ ತನ್ನ ಊರಿಗೆ ಬಂದ ಜಕಣಾಚಾರಿ ಬರಿ ಎಡಗೈಯಲ್ಲೇ ಮಗನ ಸಹಾಯದಿಂದ ದೇವಸ್ಥಾನ ಹಾಗೂ ಸುಂದರ ಚನ್ನಕೇಶವನ ಮೂರ್ತಿಯನ್ನು ನಿರ್ವಿುಸುತ್ತಾನೆ. ದೇವಸ್ಥಾನಕಾರ್ಯ ಮುಗಿಯುವಷ್ಟರಲ್ಲಿ ಚನ್ನಕೇಶವನ ಕೃಪೆಯಿಂದ ಜಕಣಾಚಾರಿಗೆ ಬಲಗೈ ಬರುತ್ತದೆ.

ಇದು ಸುಂದರ ಚನ್ನಕೇಶವಸ್ವಾಮಿ ದೇವಸ್ಥಾನ ಇರುವ ‘ಕೈದಾಳ’ ಊರಿನ ಹೆಸರಿನ ವೃತ್ತಾಂತ. ಇದಕ್ಕೆ ಮೊದಲು ಕ್ರೀಡಾಪುರವೆಂಬ ಹೆಸರಿತ್ತು. ತುಮಕೂರಿನಿಂದ ಕುಣಿಗಲ್​ಗೆ ಹೋಗುವ ಮಾರ್ಗದಲ್ಲಿ ಗೂಳೂರು ಎಂಬ ಊರಿನ ಬಳಿ ಬಲಕ್ಕೆ ತಿರುಗಿ ಅರ್ಧ ಕಿ.ಮೀ. ಹೋದರೆ ಕೈದಾಳ ಚನ್ನಕೇಶವಸ್ವಾಮಿ ದೇವಸ್ಥಾನ ಕಾಣುತ್ತದೆ. ದ್ರಾವಿಡಶೈಲಿಯಲ್ಲಿರುವ ಈ ದೇವಸ್ಥಾನವನ್ನು ನಿರ್ವಿುಸಿದವನು ಮಹಾಶಿಲ್ಪಿ ಜಕಣಾಚಾರಿ. ಇದೇ ಊರಿನವನಾಗಿದ್ದ ಅವನು ಈ ದೇವಸ್ಥಾನವನ್ನು 1150ರಲ್ಲಿ ನಿರ್ವಿುಸಿದ್ದನೆಂದು ಶಾಸನಗಳಲ್ಲಿ ಉಲ್ಲೇಖಗಳಿವೆ. ಇಲ್ಲಿ ಚನ್ನಕೇಶವಸ್ವಾಮಿ ದೇವಾಲಯದ ಜೊತೆ ಗಂಗಾಧರೇಶ್ವರ ದೇವಸ್ಥಾನವೂ ಇದೆ.

ಇಲ್ಲಿರುವ ಚನ್ನಕೇಶವಮೂರ್ತಿಯೇ ಜಕಣಾಚಾರಿ ನಿರ್ವಿುಸಿದ ಕೊನೆಯ ಮೂರ್ತಿ. ಅಲ್ಲದೆ ಇದೇ ಈ ದೇವಸ್ಥಾನದ ಪ್ರಮುಖ ಆಕರ್ಷಣೆ. ಕಪ್ಪು ಶಿಲೆಯಲ್ಲಿ ಕೆತ್ತಿರುವ ಮಂದಸ್ಮಿತ ಮುಖಾರವಿಂದವುಳ್ಳ ಎಂಟು ಅಡಿ ಎತ್ತರದ ಮೂರ್ತಿ ಜಕಣಾಚಾರಿಯ ಶಿಲ್ಪಕಲಾ ಚಾತುರ್ಯಕ್ಕೆ ಹಿಡಿದ ಕೈಗನ್ನಡಿ. ಕೃಷ್ಣಶಿಲೆಯಲ್ಲಿ ಕೆತ್ತಿರುವ ಆಳೆತ್ತರದ ಸುಂದರ ಮೂರ್ತಿ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಮೂರ್ತಿಯ ಹಿಂಭಾಗದಲ್ಲಿರುವ ಪ್ರಭಾವಳಿಯಲ್ಲಿ ದಶಾವತಾರದ ಸುಂದರ ಚಿತ್ರಗಳನ್ನು ಅತ್ಯಾಕರ್ಷಕವಾಗಿ ಕೆತ್ತಲಾಗಿದೆ. ಚನ್ನಕೇಶವಸ್ವಾಮಿಯ ಕೈಬೆರಳಿನಲ್ಲಿರುವ ಉಂಗುರದಲ್ಲಿ ಕಡ್ಡಿಯನ್ನು ತೂರಿಸಬಹುದಾಗಿದ್ದು, ಈಗಿನ ಗ್ರಿಲ್ ವರ್ಕ್ ಕೆಲಸದ ತಂತ್ರಜ್ಞಾನ ಅಗಲೇ ಬಳಕೆಯಲ್ಲಿತ್ತು ಎಂಬುದಕ್ಕೆ ಸಾಕ್ಷಿ. ಕೆಲಸದ ಬಗ್ಗೆ ಜಕಣಾಚಾರಿಗಿದ್ದ ಶ್ರದ್ಧೆ ಹಾಗೂ ಪರಿಪೂರ್ಣತೆಗೆ ನಿದರ್ಶನವೂ ಹೌದು. ಸ್ವಾಮಿಯು ಹಿಡಿದಿರುವ ಶಂಖ, ಚಕ್ರ, ಗದೆಯನ್ನು ಅತ್ಯಂತ ಸೂಕ್ಷವಾಗಿ ಕೆತ್ತಲಾಗಿದ್ದು ಉಡುಗೆ, ಆಭರಣಗಳನ್ನು ಕೂಡ ಅತ್ಯಂತ ಸೂಕ್ಷ್ಮವಾಗಿ ಕೆತ್ತಲಾಗಿದೆ. ಪ್ರಭಾವಳಿಯಲ್ಲಿರುವ ಸೂಕ್ಷ್ಮ ಕೆತ್ತನೆಯ ರಂಧ್ರಗಳನ್ನು ಬೆಳಕಿನ ಹಿನ್ನೆಲೆಯಲ್ಲಿ ನೋಡಬಹುದು.

ದೇವಾಲಯದ ಒಳಾಂಗಣ ಕೆತ್ತನೆ ಮನಸೂರೆಗೊಳ್ಳುತ್ತದೆ. ದೇಗುಲದ ಒಳಗಿರುವ ಕಲ್ಲಿನ ಕಂಬಗಳು ಅತ್ಯಂತ ಆಕರ್ಷಣೀಯವಾಗಿವೆ. ಆವರಣದಲ್ಲಿ ಅಲ್ಲಲ್ಲಿ ಮಂಟಪಗಳಿದೆ. ದೊಡ್ಡ ಕಲ್ಲಿನ ಗೋಡೆಯು ದೇಗುಲ ಸಮುಚ್ಚಯವನ್ನು ಆವರಿಸಿದ್ದು ಕೋಟೆಯಂತೆ ಕಾಣುತ್ತದೆ. ಹೊರಗೋಡೆಯ ಮೇಲೆ ದಂಪತಿಯ ಚಿತ್ರವಿದ್ದು ಅದು ಜಕಣಾಚಾರಿಯ ತಾಯಿ-ತಂದೆಯ ಚಿತ್ರವೆನ್ನಲಾಗುತ್ತದೆ. ದೇವಸ್ಥಾನದ ಪ್ರಶಾಂತ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....